1,000 ಕೋಟಿ ರೂಪಾಯಿ ದಾಟಿದ ‘ಕೆಜಿಎಫ್ 2’ ಕಲೆಕ್ಷನ್; ಹೊಸ ದಾಖಲೆ ಬರೆದ ಕನ್ನಡ ಸಿನಿಮಾ
ಬಾಲಿವುಡ್ನಲ್ಲಿ ಈ ಸಿನಿಮಾ ಅಬ್ಬರಿಸಿದೆ. ಈವರೆಗೆ 350+ ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಹಿಂದಿಯಲ್ಲಿ ಕಳೆದ ವಾರ ಹಾಗೂ ಈ ವಾರ ತೆರೆಗೆ ಬಂದ ಸಿನಿಮಾಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿಲ್ಲ. ಇದು ಸಹಜವಾಗಿಯೇ ಯಶ್ ಚಿತ್ರಕ್ಕೆ ಸಹಕಾರಿ ಆಗಿದೆ.
‘ಕೆಜಿಎಫ್: ಚಾಪ್ಟರ್ 2’ (KGF Chapter 2) ಬಗ್ಗೆ ಇದ್ದ ಕ್ರೇಜ್ ನೋಡಿ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಬಂಗಾರದ ಬೆಳೆ ತೆಗೆಯಲಿದೆ ಎಂದು ಸಿನಿ ಪಂಡಿತರು ಮೊದಲೇ ಊಹಿಸಿದ್ದರು. ಈ ಊಹೆ ನಿಜವಾಗಿದೆ. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 1,000 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ. ಭಾರತೀಯ ಸಿನಿಮಾ ಇತಿಹಾಸದಲ್ಲಿ ಈವರೆಗೆ ಇಷ್ಟು ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಿದ್ದು ಮೂರು ಚಿತ್ರಗಳು ಮಾತ್ರ. ಕನ್ನಡದ ಸಿನಿಮಾ (Kannada Cinema) ಒಂದು ಈ ದಾಖಲೆ ಬರೆದಿದ್ದು ಇದೇ ಮೊದಲು ಅನ್ನೋದು ವಿಶೇಷ.
‘ಕೆಜಿಎಫ್ 2’ ಏಪ್ರಿಲ್ 14ರಂದು ರಿಲೀಸ್ ಆಯಿತು. ಕೊವಿಡ್ ಸಂಪೂರ್ಣವಾಗಿ ಇಳಿಮುಖ ಆದ್ದರಿಂದ ಜನರು ಹುಚ್ಚೆದ್ದು ಸಿನಿಮಾ ವೀಕ್ಷಿಸಿದರು. ‘ಕೆಜಿಎಫ್ 2’ ಜತೆ ತೆರೆಗೆ ಬಂದ ವಿಜಯ್ ನಟನೆಯ ‘ಬೀಸ್ಟ್’ ಸಿನಿಮಾ ಮಕಾಡೆ ಮಲಗಿದ್ದರಿಂದ ತಮಿಳುನಾಡಿನಲ್ಲಿ ‘ಕೆಜಿಎಫ್ 2’ಗೆ ಹೆಚ್ಚು ಚಿತ್ರಮಂದಿರಗಳು ಸಿಕ್ಕವು. ಇನ್ನು, ಹಾಲಿವುಡ್ನ ಯಾವುದೇ ಸಿನಿಮಾ ಈ ಸಂದರ್ಭದಲ್ಲಿ ತೆರೆಗೆ ಬಂದಿಲ್ಲ. ಹೀಗಾಗಿ, ಹೊರ ದೇಶಗಳಲ್ಲೂ ಜನರು ಈ ಸಿನಿಮಾ ವೀಕ್ಷಿಸಿದರು.
ಬಾಲಿವುಡ್ನಲ್ಲಿ ಈ ಸಿನಿಮಾ ಅಬ್ಬರಿಸಿದೆ. ಈವರೆಗೆ 350+ ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಹಿಂದಿಯಲ್ಲಿ ಕಳೆದ ವಾರ ಹಾಗೂ ಈ ವಾರ ತೆರೆಗೆ ಬಂದ ಸಿನಿಮಾಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿಲ್ಲ. ಇದು ಸಹಜವಾಗಿಯೇ ಯಶ್ ಚಿತ್ರಕ್ಕೆ ಸಹಕಾರಿ ಆಗಿದೆ. ಮುಂದಿನ ದಿನಗಳಲ್ಲಿ ಚಿತ್ರದ ಕಲೆಕ್ಷನ್ ಮತ್ತಷ್ಟು ಹೆಚ್ಚಲಿದೆ. ಬಾಲಿವುಡ್ ಒಂದರಲ್ಲೇ ಈ ಸಿನಿಮಾ 400 ಕೋಟಿ ರೂಪಾಯಿ ಬಾಚಿಕೊಂಡರೂ ಅಚ್ಚರಿ ಏನಿಲ್ಲ ಎನ್ನಲಾಗುತ್ತಿದೆ.
#KGFChapter2 has crossed ₹ 1,000 Crs Gross Mark at the WW Box Office..
Only the 4th Indian Movie to do so after #Dangal , #Baahubali2 and #RRRMovie
— Ramesh Bala (@rameshlaus) April 30, 2022
ವಿಶ್ವ ಮಟ್ಟದ ಕಲೆಕ್ಷನ್ ಬಗ್ಗೆ ಬಾಕ್ಸ್ ಆಫೀಸ್ ಪಂಡಿತ ರಮೇಶ್ ಬಾಲ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ‘ಕೆಜಿಎಫ್ 2 ವಿಶ್ವ ಬಾಕ್ಸ್ ಆಫೀಸ್ನಲ್ಲಿ 1000 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ದಂಗಲ್, ಬಾಹುಬಲಿ 2 ಹಾಗೂ ‘ಆರ್ಆರ್ಆರ್’ ಬಳಿಕ 1000 ಕೋಟಿ ಕ್ಲಬ್ ಸೇರಿದ ನಾಲ್ಕನೇ ಸಿನಿಮಾ ಇದಾಗಿದೆ’ ಎಂದು ಅವರು ಬರೆದುಕೊಂಡಿದ್ದಾರೆ.
ಇತರೆ ಮನರಂಜನೆಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: ಬಾಲಿವುಡ್ನಲ್ಲಿ ಹಾಸಿಗೆಯನ್ನೇ ಉದ್ದ ಮಾಡಿ ಕಾಲು ಚಾಚಿದ ರಾಕಿ; ‘ಟೈಗರ್..’, ‘ಪಿಕೆ’ ಕಲೆಕ್ಷನ್ ಹಿಂದಿಕ್ಕಿದ ‘ಕೆಜಿಎಫ್ 2’
‘ಕೆಜಿಎಫ್ 2’, ‘ಆರ್ಆರ್ಆರ್’ ಗೆಲುವಿನ ಬಗ್ಗೆ ಅಭಿಷೇಕ್ ಬಚ್ಚನ್ ಹೇಳೋದೇ ಬೇರೆ; ಏನದು?