‘ಕೆಜಿಎಫ್ 2’, ‘ಆರ್​ಆರ್​ಆರ್’ ಗೆಲುವಿನ ಬಗ್ಗೆ ಅಭಿಷೇಕ್ ಬಚ್ಚನ್ ಹೇಳೋದೇ ಬೇರೆ; ಏನದು?

ದಕ್ಷಿಣ ಭಾರತದ ಸಿನಿಮಾಗಳು ಯಶಸ್ಸು ಕಾಣುತ್ತಿರುವುದಕ್ಕೆ ಕಾರಣಗಳೇನು ಎನ್ನುವ ಬಗ್ಗೆ ಕೆಲ ಬಾಲಿವುಡ್ ಮಂದಿ ಮಾತನಾಡಿದ್ದಿದೆ. ಆದರೆ, ಅಭಿಷೇಕ್ ಬಚ್ಚನ್ ಈ ವಿಚಾರದಲ್ಲಿ ಹೇಳೋದೇ ಬೇರೆ.

‘ಕೆಜಿಎಫ್ 2’, ‘ಆರ್​ಆರ್​ಆರ್’ ಗೆಲುವಿನ ಬಗ್ಗೆ ಅಭಿಷೇಕ್ ಬಚ್ಚನ್ ಹೇಳೋದೇ ಬೇರೆ; ಏನದು?
ಅಭಿಷೇಕ್​-ಯಶ್
Follow us
| Updated By: ರಾಜೇಶ್ ದುಗ್ಗುಮನೆ

Updated on: Apr 29, 2022 | 1:51 PM

ದಕ್ಷಿಣ ಭಾರತದ ಸಿನಿಮಾಗಳು (South Indian Movies) ಬಾಲಿವುಡ್​ನಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಯಶಸ್ಸು ಕಾಣುತ್ತಿವೆ. ‘ಪುಷ್ಪ’, ‘ಆರ್​ಆರ್​ಆರ್’ ಹಾಗೂ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾಗಳು (KGF Chapter 2) ಬಾಲಿವುಡ್ ಅಂಗಳದಲ್ಲಿ ದೊಡ್ಡ ಗೆಲುವು ಕಂಡಿದೆ. ಈ ವಿಚಾರ ದಕ್ಷಿಣ ಮಂದಿಯ ಖುಷಿಯನ್ನು ಹೆಚ್ಚಿಸಿದರೆ, ಬಾಲಿವುಡ್​ನವರಿಗೆ ಚಿಂತೆ ತಂದಿಟ್ಟಿದೆ. ಬಾಲಿವುಡ್ ಸಿನಿಮಾಗಳು ಗೆಲ್ಲಲು ಒದ್ದಾಡುತ್ತಿರುವ ಈ ಪರಿಸ್ಥಿತಿಯಲ್ಲಿ ದಕ್ಷಿಣದ ಸಿನಿಮಾಗಳು ಗೆದ್ದು ಬೀಗುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರ. ಈ ಬಗ್ಗೆ ಅನೇಕ ಸ್ಟಾರ್​ಗಳು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸಂಜಯ್ ದತ್ ಮೊದಲಾದ ನಟರು ಇದಕ್ಕೆ ಕಾರಣ ಹುಡುಕಿದ್ದಾರೆ. ಅಭಿಷೇಕ್​ ಬಚ್ಚನ್ (Abhishek Bachchan) ಕೂಡ ಈ ಬಗ್ಗೆ ಮಾತನಾಡಿದ್ದಾರೆ.

ಇಂಡಿಯನ್ ಎಕ್ಸ್​ಪ್ರೆಸ್​ಗೆ ನೀಡಿದ ಸಂದರ್ಶನದಲ್ಲಿ ಅಭಿಷೇಕ್​ ಬಚ್ಚನ್ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಹಲವು ದಕ್ಷಿಣದ ಸಿನಿಮಾಗಳು ಬಾಲಿವುಡ್​ಗೆ ರಿಮೇಕ್ ಆಗುತ್ತಿವೆ. ಈ ಬಗ್ಗೆ ಮಾತನಾಡಿರುವ ಅವರು, ‘ಯಾವುದೇ ಸಿನಿಮಾ ಇಂಡಸ್ಟ್ರಿಗೆ ಹಣೆಪಟ್ಟಿ ಕಟ್ಟುವುದು ಸರಿಯಲ್ಲ. ಹಿಂದಿ ಅಥವಾ ಯಾವುದೇ ಭಾಷೆಯ ಸಿನಿಮಾಗಳು ಮೊದಲಿನಿಂದಲೂ ರೀಮೇಕ್ ಆಗುತ್ತಾ ಬಂದಿವೆ. ಇದು ಹೊಸ ಬೆಳವಣಿಗೆ ಅಲ್ಲ. ಇದು ಯಾವಾಗಲೂ ಇರುತ್ತದೆ. ಅದರಲ್ಲಿ ತಪ್ಪೇನೂ ಇಲ್ಲ. ರೀಮೇಕ್ ಮಾಡುವುದು ಅವರವರ ಆಯ್ಕೆ’ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ ಅವರು.

ಬಾಲಿವುಡ್ ಸಿನಿಮಾಗಳು ಯಶಸ್ಸು ಕಾಣುತ್ತಿಲ್ಲ ಎನ್ನುವ ಮಾತಿಗೆ ಅಭಿಷೇಕ್​ ಬಚ್ಚನ್ ವಿರೋಧ ವ್ಯಕ್ತಪಡಿಸಿದ್ದಾರೆ. ಅಕ್ಷಯ್ ಕುಮಾರ್ ನಟನೆಯ ‘ಸೂರ್ಯವಂಶಿ’, ಆಲಿಯಾ ಭಟ್ ನಟನೆಯ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಕಮಾಯಿ ಮಾಡಿದ್ದವು. ಈ ವಿಚಾರವನ್ನು ಅಭಿಷೇಕ್ ಬಚ್ಚನ್ ಉಲ್ಲೇಖಿಸಿದ್ದಾರೆ.

ದಕ್ಷಿಣ ಭಾರತದ ಸಿನಿಮಾಗಳು ಯಶಸ್ಸು ಕಾಣುತ್ತಿರುವುದಕ್ಕೆ ಕಾರಣಗಳೇನು ಎನ್ನುವ ಬಗ್ಗೆ ಕೆಲ ಬಾಲಿವುಡ್ ಮಂದಿ ಮಾತನಾಡಿದ್ದಿದೆ. ಆದರೆ, ಅಭಿಷೇಕ್ ಬಚ್ಚನ್ ಈ ವಿಚಾರದಲ್ಲಿ ಹೇಳೋದೇ ಬೇರೆ. ಅವರ ಅಭಿಪ್ರಾಯ ಈ ವಿಚಾರದಲ್ಲಿ ಭಿನ್ನವಾಗಿದೆ. ‘ಒಳ್ಳೆಯ ಸಿನಿಮಾಗಳು ಗೆಲ್ಲುತ್ತವೆ. ಕೆಟ್ಟ ಸಿನಿಮಾಗಳು ಸೋಲುತ್ತವೆ’ ಎಂದು ಹೇಳಿದ್ದಾರೆ. ಈ ಮೂಲಕ ಬಾಲಿವುಡ್​ನಲ್ಲಿ ಒಳ್ಳೆಯ ಚಿತ್ರ ಕೊಟ್ಟರೆ ಅದು ಗೆದ್ದೇ ಗೆಲ್ಲುತ್ತದೆ ಎನ್ನುವ ಅಭಿಪ್ರಾಯವನ್ನು ಅವರು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಸಂಪೂರ್ಣವಾಗಿ ಬದಲಾಯ್ತು ಅಭಿಷೇಕ್​ ಬಚ್ಚನ್​ ಚಹರೆ; ಇವರು ಅಮಿತಾಭ್​ ಮಗನಾ ಎಂದು ಪ್ರಶ್ನಿಸಿದ ಫ್ಯಾನ್ಸ್​ 

‘ದೇಶದ್ರೋಹಿ’ ಸಿನಿಮಾ ಮಾಡಿದ ನಟನಿಗೆ ಖಡಕ್​ ಉತ್ತರ ಕೊಟ್ಟ ಅಭಿಷೇಕ್​ ಬಚ್ಚನ್​; ಭೇಷ್​ ಎಂದ ನೆಟ್ಟಿಗರು 

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ