Kangana Ranaut Photos: ಕಂಗನಾ ರಣಾವತ್ ಹಾಟ್ ಅವತಾರ ನೋಡಿ ಅಭಿಮಾನಿಗಳೇ ದಂಗು

Kangana Ranaut Photos: ಕಂಗನಾ ರಣಾವತ್ ಹಾಟ್ ಅವತಾರ ನೋಡಿ ಅಭಿಮಾನಿಗಳೇ ದಂಗು
ಕಂಗನಾ

ಕಂಗನಾ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ಫೋಟೋ ಸಖತ್ ವೈರಲ್ ಆಗುತ್ತಿದೆ. ಈ ಫೋಟೋಗೆ ಅಭಿಮಾನಿಗಳಿಂದ ನಾನಾ ರೀತಿಯ ಕಮೆಂಟ್​ಗಳು ಬರುತ್ತಿವೆ.

TV9kannada Web Team

| Edited By: Rajesh Duggumane

Apr 29, 2022 | 5:45 PM

ಕಂಗನಾ ರಣಾವತ್ ಅವರು (Kangana Ranaut) ಸದಾ ವಿವಾದದ ಮೂಲಕ ಸುದ್ದಿಯಲ್ಲಿರುತ್ತಾರೆ. ಅವರಿಗೂ ವಿವಾದಕ್ಕೂ ಸಖತ್ ನಂಟು. ತಮಗೆ ಸಂಬಂಧ ಇಲ್ಲದೆ ಇರುವ ವಿಚಾರಗಳಲ್ಲಿ ಮೂಗು ತೂರಿಸುವ ಮೂಲಕ ಅವರ ಸುದ್ದಿ ಆಗುತ್ತಾರೆ. ಒಟ್ಟಿನಲ್ಲಿ ಸದಾ ಚರ್ಚೆಯಲ್ಲಿ ಇರಲು ಆದ್ಯತೆ ನೀಡುತ್ತಾರೆ. ಕೆಲ ತಿಂಗಳ ಹಿಂದೆ ಕಂಗನಾ ಹಾಟ್ ಫೋಟೋಶೂಟ್ (Photoshoot) ಮಾಡಿಸಿ ಸುದ್ದಿ ಆಗಿದ್ದರು. ಈಗ ಇದೇ ವಿಚಾರಕ್ಕೆ ಮತ್ತೆ ಚರ್ಚೆ ಆಗುತ್ತಿದ್ದಾರೆ. ಅವರ ಹಾಟ್ ಅವತಾರ ನೋಡಿ ಫ್ಯಾನ್ಸ್ ಶಾಕ್ ಆಗಿದ್ದಾರೆ.

ಕಂಗನಾ ರಣಾವತ್ ಅವರಿಗೆ ಬಾಲಿವುಡ್​ನಲ್ಲಿ ಸಖತ್​ ಬೇಡಿಕೆ ಇದೆ. ಸಣ್ಣ ಹಳ್ಳಿಯಿಂದ ಬಂದ ಅವರು, ಬಾಲಿವುಡ್​ನಲ್ಲಿ ನೆಲೆ ಕಂಡುಕೊಂಡಿದ್ದಾರೆ. ನಟನೆಯ ಜತೆಗೆ ನಿರ್ದೇಶನ ಮಾಡಿಯೂ ಭೇಷ್ ಎನಿಸಿಕೊಂಡಿದ್ದಾರೆ. ಈಗ ಕಂಗನಾ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ಫೋಟೋ ಸಖತ್ ವೈರಲ್ ಆಗುತ್ತಿದೆ. ಈ ಫೋಟೋಗೆ ಅಭಿಮಾನಿಗಳಿಂದ ನಾನಾ ರೀತಿಯ ಕಮೆಂಟ್​ಗಳು ಬರುತ್ತಿವೆ.

ಕಂಗನಾ ರಣಾವತ್ ಅವರ ನಟನೆಯ ‘ಧಾಕಡ್​’ ಸಿನಿಮಾದ ಟ್ರೇಲರ್ ಇಂದು (ಏಪ್ರಿಲ್ 29) ರಿಲೀಸ್ ಆಗಿದೆ. ಈ ವಿಶೇಷ ದಿನದ ಹಿನ್ನೆಲೆಯಲ್ಲಿ ಅವರು ಈ ರೀತಿಯ ಬಟ್ಟೆ ಧರಿಸಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗೆ ‘ದಾಕಡ್ ದಿನ’ ಎನ್ನುವ ಕ್ಯಾಪ್ಶನ್ ನೀಡಿದ್ದಾರೆ. ಕಂಗನಾ ಬಟ್ಟೆಗೆ ಕೆಲವರು ನೆಗೆಟಿವ್ ಕಮೆಂಟ್ ಕೂಡ ಮಾಡಿದ್ದಾರೆ. ‘ಇದು ಭಾರತೀಯ ಸಂಸ್ಕೃತಿಯೇ’ ಎಂದು ಪ್ರಶ್ನೆ ಮಾಡಿದ್ದಾರೆ.

ಕಹಿ ಅನುಭವದ ಬಗ್ಗೆ ಮಾತನಾಡಿದ್ದ ಕಂಗನಾ 

ಕಂಗನಾ ಇತ್ತೀಚೆಗೆ ಬಾಲ್ಯದಲ್ಲಾದ ಅನುಭವದ ಬಗ್ಗೆ ಮಾತನಾಡಿದ್ದರು. ‘ಪ್ರತಿ ವರ್ಷ ಹಲವಾರು ಮಕ್ಕಳು ಈ ರೀತಿಯ ಕಿರುಕುಳಕ್ಕೆ ಒಳಗಾಗುತ್ತಾರೆ. ಆದರೆ ಅದನ್ನು ಸಾರ್ವಜನಿಕವಾಗಿ ಮಾತನಾಡಲು ಹಿಂಜರಿಯುತ್ತಾರೆ. ನಾನೂ ಇದನ್ನು ಎದುರಿಸಿದ್ದೇನೆ. ನಾನು ಚಿಕ್ಕವನಾಗಿದ್ದೆ. ನಮ್ಮ ಊರಿನ ಒಬ್ಬ ಹುಡುಗ ನನ್ನನ್ನು ಕೆಟ್ಟ ರೀತಿಯಲ್ಲಿ ಸ್ಪರ್ಶಿಸುತ್ತಿದ್ದ. ನನ್ನನ್ನು ಮುಟ್ಟುತ್ತಿದ್ದ ಬಾಲಕ ನನಗಿಂತ ಮೂರರಿಂದ ನಾಲ್ಕು ವರ್ಷ ದೊಡ್ಡವನಾಗಿದ್ದ. ಅವನು ಲೈಂಗಿಕ ಆಸಕ್ತನಾಗಿದ್ದ ಅನಿಸುತ್ತದೆ. ನಮ್ಮನ್ನು ಕರೆದು ಬಟ್ಟೆ ಬಿಚ್ಚಿಸಿ, ತಪಾಸಣೆ ಮಾಡುತ್ತಿದ್ದ. ಆ ಸಮಯದಲ್ಲಿ ಇದರ ಅರ್ಥವೇನೆಂದು ನನಗೆ ತಿಳಿದಿರಲಿಲ್ಲ. ನಿಮ್ಮ ಕುಟುಂಬವು ಎಷ್ಟೇ ಎಚ್ಚರಿಕೆ ತೆಗೆದುಕೊಳ್ಳುತ್ತದೆ ಎಂದರೂ ಈ ರೀತಿಯ ಅನುಭವ ಆಗುತ್ತದೆ’ ಎಂದಿದ್ದರು ಕಂಗನಾ.

ಇದನ್ನೂ ಓದಿ: ಡೈರೆಕ್ಟರ್ ಜತೆ ಖ್ಯಾತ ನಟಿಯ ಸೀಕ್ರೆಟ್​ ಅಫೇರ್ ಬಯಲು​; ಪ್ರೆಗ್ನೆನ್ಸಿ ವಿಷಯ ಕೇಳಿ ಕಣ್ಣೀರು ಹಾಕಿದ ಕಂಗನಾ

ಯಶ್ ಅವರನ್ನು ಆ್ಯಂಗ್ರಿ ಯಂಗ್ ಮ್ಯಾನ್ ಅಮಿತಾಭ್​ ಬಚ್ಚನ್​ಗೆ ಹೋಲಿಸಿದ ಕಂಗನಾ ರಣಾವತ್

 

Follow us on

Related Stories

Most Read Stories

Click on your DTH Provider to Add TV9 Kannada