AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶ್ ಅವರನ್ನು ಆ್ಯಂಗ್ರಿ ಯಂಗ್ ಮ್ಯಾನ್ ಅಮಿತಾಭ್​ ಬಚ್ಚನ್​ಗೆ ಹೋಲಿಸಿದ ಕಂಗನಾ ರಣಾವತ್

1970-80ರ ಸಂದರ್ಭದಲ್ಲಿ ಅಮಿತಾಭ್ ಬಚ್ಚನ್ ಅವರು ಆ್ಯಂಗ್ರಿ ಲುಕ್​ನಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ‘ಡಾನ್​’, ‘ದೀವಾರ್’, ‘ಶಕ್ತಿ’, ‘ಅಗ್ನೀಪತ್’ ಸಿನಿಮಾಗಳಲ್ಲಿ ಅಮಿತಾಭ್ ಅವರು ಸಖತ್​ ರಗಡ್ ಆಗಿ ಮಿಂಚಿದ್ದರು.

ಯಶ್ ಅವರನ್ನು ಆ್ಯಂಗ್ರಿ ಯಂಗ್ ಮ್ಯಾನ್ ಅಮಿತಾಭ್​ ಬಚ್ಚನ್​ಗೆ ಹೋಲಿಸಿದ ಕಂಗನಾ ರಣಾವತ್
ಅಮಿತಾಭ್​-ಕಂಗನಾ-ಯಶ್
TV9 Web
| Edited By: |

Updated on: Apr 17, 2022 | 3:30 PM

Share

ಕಂಗನಾ ರಣಾವತ್ (Kangana Ranaut) ಬಾಯಲ್ಲಿ ಮೆಚ್ಚುಗೆ ಪಡೆಯಬೇಕು ಎಂದರೆ ಅದಕ್ಕೆ ಸಣ್ಣಪುಟ್ಟ ಸಾಧನೆ ಮಾಡಿದರೆ ಸಾಲುವುದಿಲ್ಲ. ಸುಖಾಸುಮ್ಮನೆ ಹೊಗಳುವ ಜಾಯಮಾನ ಅವರದ್ದಲ್ಲ. ಸದಾ ವಿವಾದ ಮಾಡಿಕೊಳ್ಳುವ ಅವರು, ಕೆಲವೊಮ್ಮೆ ಒಳ್ಳೆಯ ವಿಚಾರಗಳನ್ನು ಹೊಗಳುತ್ತಾರೆ. ಈಗ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ‘ಕೆಜಿಎಫ್ ಚಾಪ್ಟರ್​ 2’ ಸಿನಿಮಾವನ್ನು (KGF Chapter 2) ಬಾಯ್ತುಂಬ ಹೊಗಳಿದ್ದಾರೆ ಕಂಗನಾ. ಅಷ್ಟೇ ಅಲ್ಲ ಆ್ಯಂಗ್ರಿ ಯಂಗ್ ಮ್ಯಾನ್ ಎಂದೇ ಖ್ಯಾತಿ ಪಡೆದಿದ್ದ ಅಮಿತಾಭ್ ಬಚ್ಚನ್​ಗೆ (Amitabh Bachchan) ಯಶ್ ಅವರನ್ನು ಹೋಲಿಕೆ ಮಾಡಿದ್ದಾರೆ.

‘ಕೆಜಿಎಫ್ 2’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಕಮಾಯಿ ಮಾಡುತ್ತಿದೆ. ಬಾಲಿವುಡ್​ನಲ್ಲಿ ಮೂರೇ ದಿನಕ್ಕೆ ಈ ಸಿನಿಮಾ 143 ಕೋಟಿ ಗಳಿಕೆ ಮಾಡಿದೆ. ಮೂರೇ ದಿನಕ್ಕೆ ಒಂದು ಸಿನಿಮಾ ಇಷ್ಟು ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಿದ್ದು ಬಾಲಿವುಡ್​ ಇತಿಹಾಸದಲ್ಲಿ ಇದೇ ಮೊದಲು. ಈ ಚಿತ್ರದಲ್ಲಿ ಯಶ್ ಆ್ಯಂಗ್ರಿ ಯಂಗ್ ಮ್ಯಾನ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರ ಅನೇಕರಿಗೆ ಇಷ್ಟವಾಗಿದೆ. ರಾಕಿ ನರಾಚಿಯನ್ನು ಆಳುವ ಕಥೆ ಸಿನಿಮಾದಲ್ಲಿದೆ. ಈ ಸಿನಿಮಾ ಕಂಗನಾಗೆ ಇಷ್ಟವಾಗಿದೆ. ಅವರು ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

ಇನ್​​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಯಶ್ ಫೋಟೋ ಹಾಕಿ ಅವರು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ‘ಯಶ್ ಅವರು ಆ್ಯಂಗ್ರಿ ಯಂಗ್​ ಮ್ಯಾನ್. ಹಲವು ದಶಕಗಳಿಂದ ಭಾರತ ಇದನ್ನು ಮಿಸ್ ಮಾಡಿಕೊಳ್ಳುತ್ತಿತ್ತು. ಅಮಿತಾಭ್ ಅವರು 70ರ ದಶಕದಲ್ಲಿ ಹೀಗೆಯೇ ಇದ್ದರು. ಆ ಜಾಗವನ್ನು ಯಶ್​ ತುಂಬಿದ್ದಾರೆ’ ಎಂದಿದ್ದಾರೆ ಕಂಗನಾ.

1970-80ರ ಸಂದರ್ಭದಲ್ಲಿ ಅಮಿತಾಭ್ ಬಚ್ಚನ್ ಅವರು ಆ್ಯಂಗ್ರಿ ಲುಕ್​ನಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ‘ಡಾನ್​’, ‘ದೀವಾರ್’, ‘ಶಕ್ತಿ’, ‘ಅಗ್ನೀಪತ್’ ಸಿನಿಮಾಗಳಲ್ಲಿ ಅಮಿತಾಭ್ ಅವರು ಸಖತ್​ ರಗಡ್ ಆಗಿ ಮಿಂಚಿದ್ದರು. ಈ ಸಿನಿಮಾಗಳೂ ಈಗಲೂ ಎಪಿಕ್​ ಚಿತ್ರಗಳು ಎಂದೇ ಪರಿಗಣಿಸಲ್ಪಟ್ಟಿವೆ.  ಅವರಿಗೆ ‘ಆ್ಯಂಗ್ರಿ ಯಂಗ್ ಮ್ಯಾನ್’ ಎನ್ನುವ ಬಿರುದನ್ನೇ ನೀಡಲಾಗಿತ್ತು.

ಯಶ್, ರಾಮ್​ ಚರಣ್, ಜ್ಯೂ.ಎನ್​ಟಿಆರ್​ ಹಾಗೂ ಅಲ್ಲು ಅರ್ಜುನ್ ಅವರ ಕೊಲ್ಯಾಜ್ ಫೋಟೋ ಹಂಚಿಕೊಂಡಿರುವ ಕಂಗನಾ, ‘ದಕ್ಷಿಣದ ಸೂಪರ್ ಸ್ಟಾರ್‌ಗಳು ತಮ್ಮ ಸಂಸ್ಕೃತಿಯಲ್ಲಿ ನೆಲೆಗೊಂಡಿದ್ದಾರೆ ಮತ್ತು ಆಳವಾಗಿ ಅದರಲ್ಲೇ ಬೇರೂರಿದ್ದಾರೆ’ ಎಂದಿದ್ದಾರೆ ಕಂಗನಾ.

ಇತ್ತೀಚೆಗೆ ಬಾಲಿವುಡ್ ಹಂಗಾಮಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಯಶ್​ಗೆ ಪ್ರಶ್ನೆ ಒಂದು ಎದುರಾಗಿತ್ತು. ಅಮಿತಾಭ್​ ಬಚ್ಚನ್ ಸಿನಿಮಾಗಳನ್ನು ರಿಮೇಕ್ ಮಾಡುವ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ್ದ ಅವರು, ‘ನನಗೆ ರಿಮೇಕ್​ ಸಿನಿಮಾ ಎಂದರೆ ಇಷ್ಟವಿಲ್ಲ. ಅದರಲ್ಲೂ ಅಮಿತಾಭ್ ಬಚ್ಚನ್ ಸಿನಿಮಾ ರಿಮೇಕ್ ಮಾಡುವ ವಿಚಾರಕ್ಕೆ ಹೋಗದೆ ಇರುವುದೇ ಉತ್ತಮ. ಅವುಗಳು ಕ್ಲಾಸಿಕ್ ಸಿನಿಮಾಗಳು’ ಎಂದಿದ್ದರು ಯಶ್.

ಇದನ್ನೂ ಓದಿ:  ‘ಆರ್​ಆರ್​ಆರ್’ ಚಿತ್ರವನ್ನೇ ಹಿಂದಿಕ್ಕಿದ ‘ಕೆಜಿಎಫ್​ 2’; ಯಶ್ ಸಿನಿಮಾ ನಡೆದಿದ್ದೇ ಹಾದಿ

‘ಕೆಜಿಎಫ್​ 2’ ಹಿಟ್​ ಆಗಿದ್ದಕ್ಕೆ ಕಬ್ಬಿನ ಹಾಲು ಟ್ರೀಟ್​ ಕೇಳಿದ ‘ಗೂಗ್ಲಿ’ ನಟಿ ಕೃತಿ ಕರಬಂಧ: ಯಶ್​ ಏನಂದ್ರು?

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?