‘ಆರ್ಆರ್ಆರ್’ ಚಿತ್ರವನ್ನೇ ಹಿಂದಿಕ್ಕಿದ ‘ಕೆಜಿಎಫ್ 2’; ಯಶ್ ಸಿನಿಮಾ ನಡೆದಿದ್ದೇ ಹಾದಿ
ವಿಶೇಷ ಎಂದರೆ ‘ಕೆಜಿಎಫ್ 2’ ಇಷ್ಟೊಂದು ರೇಟಿಂಗ್ ಪಡೆಯೋಕೆ ಕೇವಲ ನಾಲ್ಕೈದು ಮಂದಿ ವೋಟ್ ಮಾಡಿಲ್ಲ. ಬರೋಬ್ಬರಿ 45 ಸಾವಿರ ಜನರು ರೇಟಿಂಗ್ ನೀಡಿದ್ದಾರೆ. ಇಷ್ಟು ಜನರು ರೇಟಿಂಗ್ ನೀಡಿದ ನಂತರವೂ 9.7 ರೇಟಿಂಗ್ ಉಳಿಸಿಕೊಳ್ಳೋದು ಸುಲಭದ ಮಾತಲ್ಲ.
ಕಳೆದ ಕೆಲ ದಿನಗಳಿಂದ ಎಲ್ಲೆಲ್ಲೂ ‘ಕೆಜಿಎಫ್ 2’ (KGF Chapter 2)ಚಿತ್ರದ್ದೇ ಸದ್ದು. ಸಾಮಾನ್ಯರು, ಸೆಲೆಬ್ರಿಟಿಗಳು ಈ ಸಿನಿಮಾ ಬಗ್ಗೆಯೇ ಮಾತನಾಡುತ್ತಿದ್ದಾರೆ. ಯಶ್ (Yash) ನಟನೆಯ, ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೊಸ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಹಿಂದಿಯಲ್ಲಿ ಎರಡೇ ದಿನಕ್ಕೆ 100 ಕೋಟಿ ಗಳಿಕೆ ಮಾಡಿದ್ದು ಈ ಸಿನಿಮಾದ ಹೆಚ್ಚುಗಾರಿಕೆ. ಶನಿವಾರ (ಏಪ್ರಿಲ್ 16) ಈ ಸಿನಿಮಾ ಎಷ್ಟು ಗಳಿಕೆ ಮಾಡಲಿದೆ ಎಂಬುದು ಸದ್ಯದ ಕುತೂಹಲ. ಒಟ್ಟಿನಲ್ಲಿ ಈ ಚಿತ್ರ ಹಲವು ದಾಖಲೆಗಳನ್ನು ಬದಿಗೊತ್ತುತ್ತಿದೆ. ಈಗ ಐಎಂಡಿಬಿಯಲ್ಲಿ (ಇಂಟರ್ನೆಟ್ ಮೂವಿ ಡಾಟಾಬೇಸ್) 10ಕ್ಕೆ 9.7 ರೇಟಿಂಗ್ ಪಡೆದುಕೊಂಡು, ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
ಐಎಂಡಿಬಿಯಲ್ಲಿ ಯಾರು ಬೇಕಾದರೂ ಸಿನಿಮಾಗೆ ರೇಟಿಂಗ್ ನೀಡಬಹುದು. ಜನರು ನೀಡುವ ಅಂಕದ ಆಧಾರದ ಮೇಲೆ ಸಿನಿಮಾದ ರೇಟಿಂಗ್ ನಿರ್ಧಾರ ಆಗುತ್ತದೆ. ಅತಿ ಕೆಟ್ಟ ಸಿನಿಮಾಗಳು ಐಎಂಡಿಬಿಯಲ್ಲಿ 2-3 ಸ್ಟಾರ್ ಪಡೆದುಕೊಂಡಿವೆ. ಅತೀ ಉತ್ತಮ ಸಿನಿಮಾಗಳು 8-9 ಸ್ಟಾರ್ ಪಡೆದುಕೊಂಡಿವೆ. ಭಾರತದ ಹಲವು ಚಿತ್ರಗಳು 9ಕ್ಕಿಂತ ಹೆಚ್ಚು ಪಾಯಿಂಟ್ಸ್ ಪಡೆದುಕೊಂಡಿದೆ. ಈ ಎಲ್ಲಾ ಚಿತ್ರಗಳನ್ನು ‘ಕೆಜಿಎಫ್ 2’ ಹಿಂದಿಕ್ಕಿದೆ.
ಪುನೀತ್ ರಾಜ್ಕುಮಾರ್ ನಟನೆಯ ‘ಜೇಮ್ಸ್’ ಸಿನಿಮಾ ಬಗ್ಗೆ ಅಭಿಮಾನಿಗಳು ಭಾವನಾತ್ಮಕವಾಗಿ ಕನೆಕ್ಟ್ ಆಗಿದ್ದರು. ಈ ಚಿತ್ರಕ್ಕೆ ಆರಂಭದಲ್ಲಿ 9.9 ರೇಟಿಂಗ್ ಕೊಡಲಾಗಿತ್ತು. ಈಗ ಅದು ಕೊಂಚ ಕಡಿಮೆ ಆಗಿದೆ. ಈ ಚಿತ್ರದ ರೇಟಿಂಗ್ 9.4 ಆಗಿದೆ. ಸುಕುಮಾರ್ ನಿರ್ದೇಶನದ, ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಚಿತ್ರ ಐಎಂಡಿಬಿಯಲ್ಲಿ 7.9 ರೇಟಿಂಗ್ ಪಡೆದುಕೊಂಡಿದೆ. ಬಾಕ್ಸ್ ಆಫೀಸ್ನಲ್ಲಿ ಸಾವಿರ ಕೋಟಿ ಬಾಚಿರುವ ‘ಆರ್ಆರ್ಆರ್’ ಚಿತ್ರದ ರೇಟಿಂಗ್ 8.9 ಇದೆ. ಸಾಕಷ್ಟು ಸದ್ದು ಮಾಡಿದ, ಸಾಕಷ್ಟು ಚರ್ಚೆಗೆ ಒಳಗಾದ ಸೂರ್ಯ ನಟನೆಯ ‘ಜೈ ಭೀಮ್’ ಚಿತ್ರ 9.4 ಅಂಕ ಪಡೆದುಕೊಂಡಿದೆ. ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ 8.3 ರೇಟಿಂಗ್ ಹೊಂದಿದೆ.
ವಿಶೇಷ ಎಂದರೆ ‘ಕೆಜಿಎಫ್ 2’ ಇಷ್ಟೊಂದು ರೇಟಿಂಗ್ ಪಡೆಯೋಕೆ ಕೇವಲ ನಾಲ್ಕೈದು ಮಂದಿ ವೋಟ್ ಮಾಡಿಲ್ಲ. ಬರೋಬ್ಬರಿ 45 ಸಾವಿರ ಜನರು ರೇಟಿಂಗ್ ನೀಡಿದ್ದಾರೆ. ಇಷ್ಟು ಜನರು ರೇಟಿಂಗ್ ನೀಡಿದ ನಂತರವೂ 9.7 ರೇಟಿಂಗ್ ಉಳಿಸಿಕೊಳ್ಳೋದು ಸುಲಭದ ಮಾತಲ್ಲ. ಈ ರೀತಿಯ ಸಾಧನೆಯನ್ನು ಮಾಡಿ ತೋರಿಸಿದೆ ‘ಕೆಜಿಎಫ್ 2’ ಸಿನಿಮಾ.
ಸಖತ್ ಆ್ಯಕ್ಷನ್ ಹಾಗೂ ಮಾಸ್ ಡೈಲಾಗ್ಗಳ ಮೂಲಕ ‘ಕೆಜಿಎಫ್ 2’ ಸಿನಿಮಾ ಗಮನ ಸೆಳೆದಿದೆ. ಈ ಚಿತ್ರ ಭಾರತದ ಬಾಕ್ಸ್ ಆಫೀಸ್ನಲ್ಲಿ ಎರಡನೇ ದಿನಕ್ಕೆ 240 ಕೋಟಿ ರೂಪಾಯಿ ಬಾಚಿಕೊಂಡಿದೆ. ಹಿಂದಿ ಬಾಕ್ಸ್ ಆಫೀಸ್ನಲ್ಲಿ ಚಿತ್ರದ ಕಲೆಕ್ಷನ್ 100 ಕೋಟಿ ರೂಪಾಯಿ ದಾಟಿದೆ. ಈ ಮೂಲಕ ಸಿನಿಮಾ ಹೊಸಹೊಸ ದಾಖಲೆ ಬರೆಯುತ್ತಿದೆ.
ಇದನ್ನೂ ಓದಿ: ‘ಕೆಜಿಎಫ್ 2’ ಎದುರು ‘ಬೀಸ್ಟ್’ ಚಿತ್ರ ಕಡೆಗಣಿಸಿದ ತಮಿಳು ಮಂದಿ; ವೈರಲ್ ಆಯ್ತು ವಿಡಿಯೋ
‘ಕೆಜಿಎಫ್ 2’ ಅಬ್ಬರದಿಂದ ಮಲ್ಟಿಪ್ಲೆಕ್ಸ್ಗಳಲ್ಲಿ ‘ಬೀಸ್ಟ್’ಗೆ ಸಿಗಲಿಲ್ಲ ಸ್ಕ್ರೀನ್; ನಿರ್ಮಾಪಕನ ಅಸಮಾಧಾನ?
Published On - 7:42 am, Sun, 17 April 22