‘ಕೆಜಿಎಫ್​ 2’ ಹಿಟ್​ ಆಗಿದ್ದಕ್ಕೆ ಕಬ್ಬಿನ ಹಾಲು ಟ್ರೀಟ್​ ಕೇಳಿದ ‘ಗೂಗ್ಲಿ’ ನಟಿ ಕೃತಿ ಕರಬಂಧ: ಯಶ್​ ಏನಂದ್ರು?

Kriti Kharbanda | Yash: ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಸೂಪರ್​ ಹಿಟ್​ ಆಗಿದ್ದಕ್ಕೆ ನಟಿ ಕೃತಿ ಕರಬಂಧ ಅವರು ಯಶ್​ಗೆ ಅಭಿನಂದನೆ ತಿಳಿಸಿದ್ದಾರೆ. ಅದು ಕೂಡ ‘ಗೂಗ್ಲಿ’ ಸಿನಿಮಾದ ಶೈಲಿಯಲ್ಲಿ.

‘ಕೆಜಿಎಫ್​ 2’ ಹಿಟ್​ ಆಗಿದ್ದಕ್ಕೆ ಕಬ್ಬಿನ ಹಾಲು ಟ್ರೀಟ್​ ಕೇಳಿದ ‘ಗೂಗ್ಲಿ’ ನಟಿ ಕೃತಿ ಕರಬಂಧ: ಯಶ್​ ಏನಂದ್ರು?
ಕೃತಿ ಕರಬಂಧ, ಯಶ್
Follow us
TV9 Web
| Updated By: ಮದನ್​ ಕುಮಾರ್​

Updated on: Apr 17, 2022 | 2:21 PM

ಎಲ್ಲ ಭಾಷೆಯ ಚಿತ್ರರಂಗದವರೂ ಈಗ ‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಸಿನಿಮಾ ಬಗ್ಗೆಯೇ ಮಾತನಾಡುತ್ತಿದ್ದಾರೆ. ಇಡೀ ಕನ್ನಡ ಚಿತ್ರರಂಗಕ್ಕೆ ಈ ಸಿನಿಮಾ ಹೆಮ್ಮೆ ತಂದಿದೆ. ನಿರ್ದೇಶಕ ಪ್ರಶಾಂತ್​ ನೀಲ್​, ನಿರ್ಮಾಪಕ ವಿಜಯ್​ ಕಿರಗಂದೂರು ಮತ್ತು ನಟ ಯಶ್ (Yash)​ ಅವರ ಕಾಂಬಿನೇಷನ್​ನಲ್ಲಿ ಮೂಡಿಬಂದಿರುವ ಈ ಸಿನಿಮಾ ವಿಶ್ವಾದ್ಯಂತ ಅಬ್ಬರಿಸುತ್ತಿದೆ. ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಗಲ್ಲಾಪೆಟ್ಟಿಗೆ ಕಲೆಕ್ಷನ್​ ನೋಡಿ ಎಲ್ಲರೂ ಅಚ್ಚರಿ ಪಟ್ಟಿದ್ದಾರೆ. ಯಶ್​ ಅವರ ಸಾಧನೆಗೆ ಪರಭಾಷೆ ಮಂದಿ ಕೂಡ ಭೇಷ್​ ಎನ್ನುತ್ತಿದ್ದಾರೆ. ಅದೇ ರೀತಿ, ನಟಿ ಕೃತಿ ಕರಬಂಧ (Kriti Kharbanda) ಅವರು ಕೊಂಚ ಡಿಫರೆಂಟ್​ ಆಗಿ ಅಭಿನಂದನೆ ಸಲ್ಲಿಸಿದ್ದಾರೆ. ಯಶ್​ ಜೊತೆ ಅವರು ಈ ಹಿಂದೆ ‘ಗೂಗ್ಲಿ’ ಸಿನಿಮಾದಲ್ಲಿ ನಟಿಸಿದ್ದರು. ಆ ಚಿತ್ರದ ಒಂದು ದೃಶ್ಯವನ್ನು ಅವರೀಗ ಮತ್ತೆ ನೆನಪಿಸಿದ್ದಾರೆ. ‘ಕಬ್ಬಿನ ಹಾಲಿನ’ ಟ್ರೀಟ್​ ಬೇಕು ಎಂದು ಅವರು ಯಶ್​ ಬಳಿ ಕೇಳಿದ್ದಾರೆ.

ಮೊದಲ ದಿನವೇ ಭಾರತೀಯ ಬಾಕ್ಸ್​ ಆಫೀಸ್​ನಲ್ಲಿ ಬರೋಬ್ಬರಿ 134.5 ಕೋಟಿ ರೂಪಾಯಿ ಗಳಿಸಿರುವುದು ‘ಕೆಜಿಎಫ್​: ಚಾಪ್ಟರ್​ 2’ ಚಿತ್ರದ ಸಾಧನೆ. ಎರಡನೇ ದಿನಕ್ಕೆ ಒಟ್ಟು ಗಳಿಕೆ 240 ಕೋಟಿ ರೂಪಾಯಿ ಆಯಿತು. ಮೂರು ಮತ್ತು ನಾಲ್ಕನೇ ದಿನವೂ ಈ ಚಿತ್ರದ ನಾಗಾಲೋಟ ಮುಂದುವರಿದಿದೆ. ಈ ಬೃಹತ್​ ಗೆಲುವಿನಿಂದ ಚಿತ್ರತಂಡ ಖುಷ್​ ಆಗಿದೆ. ಇಡೀ ಟೀಮ್​ಗೆ ಕೃತಿ ಕರಬಂಧ ಕಂಗ್ರಾಜ್ಯುಲೇಷನ್​ ತಿಳಿಸಿದ್ದಾರೆ.

‘ಯಶ್​ ಇದು ಕಬ್ಬಿನ ಹಾಲು ಟ್ರೇಟ್​ ಕೊಡಿಸುವ ಸಮಯ. ಕೆಜಿಎಫ್​ 2 ಸಿನಿಮಾದ ದೊಡ್ಡ ಗೆಲುವಿಗೆ ಅಭಿನಂದನೆಗಳು’ ಎಂದು ಕೃತಿ ಕರಬಂಧ ಟ್ವೀಟ್​ ಮಾಡಿದ್ದಾರೆ. ಇದಕ್ಕೆ ಕಮೆಂಟ್​ ಮಾಡಿರುವ ಯಶ್​ ಅವರು ‘ಧನ್ಯವಾದಗಳು’ ಎಂದು ಪ್ರತಿಕ್ರಿಯಿಸಿದ್ದಾರೆ. ಈ ಟ್ವೀಟ್​ ನೋಡಿದ ಬಳಿಕ ಅಭಿಮಾನಿಗಳು ‘ಗೂಗ್ಲಿ’ ಸಿನಿಮಾವನ್ನು ನೆನಪಿಸಿಕೊಂಡಿದ್ದಾರೆ. ಆ ಸಿನಿಮಾ 2013ರಲ್ಲಿ ತೆರೆಕಂಡಿತ್ತು. ಪವನ್​ ಒಡೆಯರ್​ ಅವರು ನಿರ್ದೇಶನ ಮಾಡಿದ್ದರು.

‘ಗೂಗ್ಲಿ’ ಸಿನಿಮಾದಲ್ಲಿ ನಾಯಕ-ನಾಯಕಿ ಭೇಟಿ ಆದಾಗ ರಸ್ತೆ ಬದಿಯಲ್ಲಿ ಕಬ್ಬಿನ ಹಾಲು ಕುಡಿಯುವ ದೃಶ್ಯ ಇದೆ. ‘ಕಬ್ಬಿನ ಹಾಲು ಕಾಫಿಗಿಂತಲೂ ಹೆಚ್ಚು ಹೀಟ್​’ ಎಂದು ಕೃತಿ ಕರಬಂಧ ಡೈಲಾಗ್​ ಹೊಡೆದಾಗ, ‘ಇರಲಿ ಬಿಡಿ, ಯುವಕರು ಯಾವಾಗಲೂ ಹೀಟಲ್ಲೇ ಇರಬೇಕು’ ಅಂತ ಯಶ್​ ಹೇಳಿದ ಡೈಲಾಗ್​ ಸಖತ್​ ವೈರಲ್​ ಆಗಿತ್ತು. ಈಗ ‘ಕೆಜಿಎಫ್​ 2’ ಗೆಲುವು ಕಂಡಿರುವ ಈ ಸಂದರ್ಭದಲ್ಲಿ ಕೃತಿ ಕರಬಂಧ ಅವರು ಈ ಟ್ವೀಟ್​ ಮೂಲಕ ಆ ದೃಶ್ಯವನ್ನು ಮತ್ತೆ ನೆನಪಿಸಿದ್ದಾರೆ.

‘ಗೂಗ್ಲಿ’ ಸಿನಿಮಾ ನಿರ್ದೇಶಕ ಪವನ್​ ಒಡೆಯವರ್​ ಅವರು ಕೂಡ ‘ಕೆಜಿಎಫ್​ 2’ ತಂಡದ ಗೆಲುವಿಗೆ ಅಭಿನಂದನೆ ತಿಳಿಸಿದ್ದಾರೆ. ‘ರಾಕಿಂಗ್​ ಸ್ಟಾರ್​ ಯಶ್​. ಹೌದು, ಇಡೀ ಪ್ರಪಂಚವೇ ನಿಮ್ಮ ಟೆರಿಟರಿ. ನಿಮ್ಮ ಬಗ್ಗೆ ಹೆಮ್ಮೆ ಆಗುತ್ತದೆ’ ಎಂದು ಅವರು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ:

‘ಕೆಜಿಎಫ್​ 2’ಗೆ ಕೆಟ್ಟ ವಿಮರ್ಶೆ ಮಾಡಿ, ಯಶ್​ ಬಗ್ಗೆ ವ್ಯಂಗ್ಯದ ಮಾತಾಡಿದ ‘ದೇಶದ್ರೋಹಿ’ ನಟ:​ ಸಿಡಿದೆದ್ದ ಫ್ಯಾನ್ಸ್​

‘ಕೆಜಿಎಫ್​ 2’ ಬ್ಲಾಕ್​ ಬಸ್ಟರ್​ ಗೆಲುವು ಕಂಡ ಬಳಿಕ ‘ಪುಷ್ಪ 2’ ಚಿತ್ರತಂಡಕ್ಕೆ ಚಿಂತೆ ಶುರು; ಏನಿದು ಟಾಕ್​?

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ