- Kannada News Photo gallery Rana Daggubati Vishal and others congratulate Yash and Prashanth Neel for KGF Chapter 2 success
‘ಕೆಜಿಎಫ್: ಚಾಪ್ಟರ್ 2’ ಚಿತ್ರದ ವಿಜಯ ಪತಾಕೆ: ಪರಭಾಷೆ ಸೆಲೆಬ್ರಿಟಿಗಳ ಪ್ರತಿಕ್ರಿಯೆ ಏನು?
ಯಶ್ ಹವಾ ಏನೆಂಬುದು ಪರಭಾಷೆ ಸೆಲೆಬ್ರಿಟಿಗಳಿಗೂ ಅರ್ಥ ಆಗಿದೆ. ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದ ಗೆಲುವಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.
Updated on: Apr 17, 2022 | 3:46 PM

Rana Daggubati Vishal and others congratulate Yash and Prashanth Neel for KGF Chapter 2 success

Rana Daggubati Vishal and others congratulate Yash and Prashanth Neel for KGF Chapter 2 success

‘ನನ್ನ ಸ್ನೇಹಿತ ಯಶ್ ಬಗ್ಗೆ ನನಗೆ ಹೆಮ್ಮೆ ಆಗುತ್ತದೆ. ಕನ್ನಡ ಸಿನಿಮಾವನ್ನು ಅವರು ವಿಶ್ವಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ’ ಎಂದು ನಟ ವಿಶಾಲ್ ಟ್ವೀಟ್ ಮಾಡಿದ್ದಾರೆ. ‘ಕೆಜಿಎಫ್ 2’ ತಂಡಕ್ಕೆ ಅವರು ಅಭಿನಂದನೆ ತಿಳಿಸಿದ್ದಾರೆ.

ನಟಿ ಕೃತಿ ಕರಬಂಧ ಅವರು ಕೊಂಚ ಡಿಫರೆಂಟ್ ಆಗಿ ಅಭಿನಂದನೆ ಸಲ್ಲಿಸಿದ್ದಾರೆ. ‘ಗೂಗ್ಲಿ’ ಸಿನಿಮಾದ ಕಬ್ಬಿನ ಹಾಲಿನ ದೃಶ್ಯವನ್ನು ಅವರೀಗ ಮತ್ತೆ ನೆನಪಿಸಿದ್ದಾರೆ. ‘ಕೆಜಿಎಫ್: ಚಾಪ್ಟರ್ 2 ಸಿನಿಮಾ ಗೆದಿದ್ದಕ್ಕೆ ಕಬ್ಬಿನ ಹಾಲಿನ ಟ್ರೀಟ್ ಬೇಕು’ ಎಂದು ಅವರು ಯಶ್ ಬಳಿ ಕೇಳಿದ್ದಾರೆ.

ಕನ್ನಡದ ‘ಕೆಜಿಎಫ್ 2’ ಸಿನಿಮಾ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗೆ ಡಬ್ ಆಗಿ ಬಿಡುಗಡೆ ಆಗಿದೆ. ಎಲ್ಲ ರಾಜ್ಯಗಳಲ್ಲೂ ಈ ಚಿತ್ರ ಧೂಳೆಬ್ಬಿಸುತ್ತಿದೆ. ತಮಿಳುನಾಡಿನ ಪ್ರೇಕ್ಷಕರು ಫಿದಾ ಆಗಿದ್ದಾರೆ. ಕಾಲಿವುಡ್ ನಟ ಕಾರ್ತಿ ಅವರು ‘ಕೆಜಿಎಫ್ 2’ ಕುರಿತು ಟ್ವೀಟ್ ಮಾಡಿದ್ದಾರೆ.

ಬಹುಭಾಷಾ ನಟ ಜಗಪತಿ ಬಾಬು ಅವರು ಕೂಡ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದ ಸಾಧನೆಯನ್ನು ಕೊಂಡಾಡಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ಮೇಲೆ ಇದ್ದ ಗೌರವ ಇನ್ನಷ್ಟು ಹೆಚ್ಚಿದೆ ಎಂದು ಅವರು ಹೇಳಿದ್ದಾರೆ.



















