Virat Kohli Catch: ವಿರಾಟ್ ಕೊಹ್ಲಿಯ ಸ್ಟನ್ನಿಂಗ್ ಕ್ಯಾಚ್ ಕಂಡು ಗ್ಯಾಲರಿಯಲ್ಲಿ ಶಾಕ್ ಆದ ಅನುಷ್ಕಾ ಶರ್ಮಾ

DC vs RCB IPL 2022: ವಿರಾಟ್ ಈ ಕ್ಯಾಚ್ ಹಿಡಿದ ನಂತರ ಪ್ರೇಕ್ಷಕರು ಖುಷಿಯ ಅಲೆಯಲ್ಲಿ ತೇಲಿದರು. ಸ್ಟೇಡಿಯಂನಲ್ಲಿ ಕೊಹ್ಲಿಯ ಹೆಂಡತಿ ಅನುಷ್ಕಾ ಶರ್ಮಾ ಕೂಡ ಹಾಜರಿದ್ದರು. ಕೊಹ್ಲಿ ಕ್ಯಾಚ್ ಹಿಡಿದ ಸಂದರ್ಭ ಕ್ಯಾಮೆರಾ ನೇರವಾಗಿ ಅನುಷ್ಕಾ ಕಡೆ ಮುಖ ಮಾಡಿತು. ಈ ಸಂದರ್ಭ ಅವರು ಶಾಕ್ ನಡುವೆ ಖುಷಿಯಲ್ಲಿ ಸಂಭ್ರಮಿಸುತ್ತಿದ್ದರು.

Vinay Bhat
|

Updated on:Apr 17, 2022 | 12:20 PM

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ ನಿಂದ ದೊಡ್ಡ ಮೊತ್ತ ಬರಲಿಲ್ಲ. ಬೇಗನೆ ರನೌಟ್ ಗೆ ಬಲಿಯಾಗಬೇಕಾಯಿತು. ಆದರೆ, ಪಂದ್ಯ ಗೆಲ್ಲುವಲ್ಲಿ ಕೊಹ್ಲಿಯ ಪಾತ್ರ ಬಹುಮುಖ್ಯ ಆಯಿತು ಎಂದರೆ ನಂಬಲೇ ಬೇಕು. ಅದಕ್ಕೆ ಕಾರಣ ಆಗಿದ್ದು ಆ ಒಂದು ಕ್ಯಾಚ್.

1 / 5
ಹೌದು, ನಿರ್ಣಾಯಕ ಹಂತದಲ್ಲಿ ವಿರಾಟ್ ಕೊಹ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್ ಅವರನ್ನು ಔಟ್ ಮಾಡುವಲ್ಲಿ ಯಶಸ್ವಿಯಾದರು. ಡೆಲ್ಲಿ ಗೆಲುವಿಗೆ ಹೋರಾಟ ನಡೆಸುತ್ತಿದ್ದ ನಾಯಕ ರಿಷಭ್ ಪಂತ್ ವಿಕೆಟ್ ಆರ್ ಸಿಬಿ ತಂಡಕ್ಕೆ ಅಗತ್ಯವಿತ್ತು.

2 / 5
ಇದೇವೇಳೆ ಮೊಹಮ್ಮದ್ ಸಿರಾಜ್ ಅವರ ಬೌಲಿಂಗ್ ಗೆ ರಿಷಭ್ ಕವರ್ ನಲ್ಲಿ ಹೊಡೆದರು. ಚೆಂಡು ವಿರಾಟ್ ತಲೆಯ ಮೇಲೆ ಹೋಗುತ್ತಿತ್ತು. ಆದರೆ ಅವರು ಸೂಪರ್ ಮ್ಯಾನ್ ನಂತೆ ಅದ್ಭುತ ಡೈವ್ ಮಾಡಿ ಒಂದು ಕೈಯಿಂದ ಚೆಂಡನ್ನು ಹಿಡಿದು ಪಂತ್ ಗೆ ಪೆವಿಲಿಯನ್ ಹಾದಿ ತೋರಿದರು.

3 / 5
ವಿರಾಟ್ ಈ ಕ್ಯಾಚ್ ಹಿಡಿದ ನಂತರ ಪ್ರೇಕ್ಷಕರು ಖುಷಿಯ ಅಲೆಯಲ್ಲಿ ತೇಲಿದರು. ಸ್ಟೇಡಿಯಂನಲ್ಲಿ ಕೊಹ್ಲಿಯ ಹೆಂಡತಿ ಅನುಷ್ಕಾ ಶರ್ಮಾ ಕೂಡ ಹಾಜರಿದ್ದರು. ಕೊಹ್ಲಿ ಕ್ಯಾಚ್ ಹಿಡಿದ ಸಂದರ್ಭ ಕ್ಯಾಮೆರಾ ನೇರವಾಗಿ ಅನುಷ್ಕಾ ಕಡೆ ಮುಖ ಮಾಡಿತು. ಈ ಸಂದರ್ಭ ಅವರು ಶಾಕ್ ನಡುವೆ ಖುಷಿಯಲ್ಲಿ  ಸಂಭ್ರಮಿಸುತ್ತಿದ್ದರು.

4 / 5
ವಿರಾಟ್ ಕೂಡ ಕ್ಯಾಚ್ ಹಿಡಿದ ನಂತರ ಸ್ಟ್ಯಾಂಡ್ ನಲ್ಲಿದ್ದ ಪತ್ನಿ ಅನುಷ್ಕಾ ಶರ್ಮಾ ಕಡೆಗೆ ನೋಡಿದರು. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ.

5 / 5

Published On - 12:01 pm, Sun, 17 April 22

Follow us