AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: ದಾಖಲೆ ಬರೆದ ಐಪಿಎಲ್

IPL 2022: ಐಪಿಎಲ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ವೆಸ್ಟ್ ಇಂಡೀಸ್ ನ ದಿಗ್ಗಜ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಹೆಸರಿನಲ್ಲಿದೆ. ವಿಂಡೀಸ್ ಸೂಪರ್ ಸ್ಟಾರ್ 141 ಇನ್ನಿಂಗ್ಸ್ ಗಳಲ್ಲಿ 357 ಸಿಕ್ಸರ್ ಬಾರಿಸಿ ದಾಖಲೆ ಬರೆದಿದ್ದಾರೆ.

TV9 Web
| Updated By: ಝಾಹಿರ್ ಯೂಸುಫ್|

Updated on: Apr 17, 2022 | 6:39 PM

Share
ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ಪ್ರಸಿದ್ಧ ಕ್ರಿಕೆಟ್ ಲೀಗ್ ಐಪಿಎಲ್​ನ ಸೀಸನ್ 15 ಭರದಿಂದ ಸಾಗುತ್ತಿದೆ. ಕಳೆದ 14 ಸೀಸನ್​ಗಳಿಂದ ರಂಜಿಸುತ್ತಾ ಬಂದಿರುವ ಟೂರ್ನಿಯಲ್ಲಿ ಈ ಬಾರಿ 10 ತಂಡಗಳು ಸೆಣಸಾಡುತ್ತಿದೆ. ಹೀಗಾಗಿ ದಿನದಿಂದ ದಿನಕ್ಕೆ ಪಂದ್ಯಗಳು ರೋಚಕತೆಯಿಂದ ಮೂಡಿ ಬರುತ್ತಿದೆ. ಇನ್ನು ಐಪಿಎಲ್​ನಲ್ಲಿ ಈ ಬಾರಿ ಕೂಡ ಸಿಕ್ಸ್​ಗಳ ಸುರಿಮಳೆಯಾಗುತ್ತಿದೆ.

1 / 5
 ವಿಶೇಷ ಎಂದರೆ ಈ ಬಾರಿ ಈಗಾಗಲೇ ಒಟ್ಟು 400+ ಸಿಕ್ಸ್​ಗಳು ಮೂಡಿಬಂದಿವೆ. ಇದರೊಂದಿಗೆ ಐಪಿಎಲ್​ನಲ್ಲಿ 10 ಸಾವಿರ ಸಿಕ್ಸ್​ಗಳು ಪೂರ್ಣಗೊಂಡಿವೆ. ಅಂದರೆ ಕಳೆದ 14 ಸೀಸನ್​ ಐಪಿಎಲ್​ನಲ್ಲಿ 10 ಸಾವಿರಕ್ಕೂ ಅಧಿಕ ಸಿಕ್ಸ್​ಗಳು ಮೂಡಿಬಂದಿವೆ. ವಿಶ್ವದ ಯಾವುದೇ ಕ್ರಿಕೆಟ್ ಲೀಗ್​ನಲ್ಲಿ ಇಷ್ಟೊಂದು ಸಿಕ್ಸ್​ಗಳು ಮೂಡಿಬಂದಿಲ್ಲ. ಹೀಗಾಗಿ ಸಿಕ್ಸ್​ಗಳ ಮೂಲಕ ಐಪಿಎಲ್​ ಕೂಡ ಒಂದು ದಾಖಲೆ ಬರೆದಿರುವುದು ವಿಶೇಷ.

2 / 5
ಭಾನುವಾರದ ನಡೆದ ಐಪಿಎಲ್​ 28ನೇ ಪಂದ್ಯವು ಪಂಜಾಬ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವೆ ನಡೆಯಿತು. ಈ ವೇಳೆ  ಪಂಜಾಬ್‌ ಕಿಂಗ್ಸ್​ ಬ್ಯಾಟ್ಸ್‌ಮನ್‌ಗಳು ಒಟ್ಟು 7 ಸಿಕ್ಸರ್‌ಗಳನ್ನು ಬಾರಿಸಿದ್ದರು. ಇದರೊಂದಿಗೆ ಐಪಿಎಲ್​ನಲ್ಲಿ 10 ಸಾವಿರ ಸಿಕ್ಸರ್‌ಗಳು ಮೂಡಿಬಂದಂತಾಗಿದೆ. ಈ ಪೈಕಿ ಪ್ರಸಕ್ತ ಋತುವಿನಲ್ಲಿಯೇ 421ಕ್ಕೂ ಹೆಚ್ಚು ಸಿಕ್ಸರ್‌ಗಳು ದಾಖಲಾಗಿವೆ.

3 / 5
ಇನ್ನು ಐಪಿಎಲ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ವೆಸ್ಟ್ ಇಂಡೀಸ್ ನ ದಿಗ್ಗಜ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಹೆಸರಿನಲ್ಲಿದೆ. ವಿಂಡೀಸ್ ಸೂಪರ್ ಸ್ಟಾರ್ 141 ಇನ್ನಿಂಗ್ಸ್ ಗಳಲ್ಲಿ 357 ಸಿಕ್ಸರ್ ಬಾರಿಸಿ ದಾಖಲೆ ಬರೆದಿದ್ದಾರೆ. ನಂತರದ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಇದ್ದು, ಎಬಿಡಿ 157 ಇನ್ನಿಂಗ್ಸ್‌ಗಳಲ್ಲಿ 239 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

4 / 5
 ಪ್ರಸಕ್ತ ಸೀಸನ್​ ಬಗ್ಗೆ ಹೇಳುವುದಾದರೆ, ರಾಜಸ್ಥಾನ ರಾಯಲ್ಸ್‌ನ ಆರಂಭಿಕ ಆಟಗಾರ ಜೋಸ್ ಬಟ್ಲರ್ 18 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಹಾಗೆಯೇ ಐಪಿಎಲ್​ ಇತಿಹಾಸದಲ್ಲಿ ಒಂದು ಸೀಸನ್​ನಲ್ಲಿ ಅತಿ ಹೆಚ್ಚು ಸಿಕ್ಸ್ ಬಾರಿಸಿದ ದಾಖಲೆ ಕೂಡ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಗೇಲ್  2012 ರಲ್ಲಿ 14 ಇನ್ನಿಂಗ್ಸ್‌ಗಳಲ್ಲಿ 59 ಸಿಕ್ಸರ್‌ಗಳನ್ನು ಬಾರಿಸಿ ಈ ವಿಶೇಷ ದಾಖಲೆ ಬರೆದಿದ್ದಾರೆ.

5 / 5