Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡೈರೆಕ್ಟರ್ ಜತೆ ಖ್ಯಾತ ನಟಿಯ ಸೀಕ್ರೆಟ್​ ಅಫೇರ್ ಬಯಲು​; ಪ್ರೆಗ್ನೆನ್ಸಿ ವಿಷಯ ಕೇಳಿ ಕಣ್ಣೀರು ಹಾಕಿದ ಕಂಗನಾ

ಖ್ಯಾತ ನಿರ್ದೇಶಕನ ಜೊತೆಗೆ ನಟಿ ಮಂದನಾ ಕರಿಮಿ ಅವರು ಗುಟ್ಟಾಗಿ ಸಂಬಂಧ ಹೊಂದಿದ್ದರು. ಆ ವಿಚಾರವನ್ನು ಅವರೀಗ ಬಾಯಿ ಬಿಟ್ಟಿದ್ದಾರೆ.

ಡೈರೆಕ್ಟರ್ ಜತೆ ಖ್ಯಾತ ನಟಿಯ ಸೀಕ್ರೆಟ್​ ಅಫೇರ್ ಬಯಲು​; ಪ್ರೆಗ್ನೆನ್ಸಿ ವಿಷಯ ಕೇಳಿ ಕಣ್ಣೀರು ಹಾಕಿದ ಕಂಗನಾ
ಮಂದನಾ ಕರಿಮಿ, ಕಂಗನಾ ರಣಾವತ್
Follow us
TV9 Web
| Updated By: ಮದನ್​ ಕುಮಾರ್​

Updated on: Apr 11, 2022 | 8:14 AM

ನಟಿ ಕಂಗನಾ ರಣಾವತ್​ (Kangana Ranaut) ಅವರು ನಿರೂಪಕಿ ಆಗಿಯೂ ಈಗ ಬ್ಯುಸಿ ಆಗಿದ್ದಾರೆ. ಸದಾ ಕಾಲ ಕಿರಿಕ್​ ಮಾಡಿಕೊಳ್ಳುತ್ತ ಕಾಲ ಕಳೆಯುತ್ತಿದ್ದ ಅವರು ‘ಲಾಕಪ್​’ ರಿಯಾಲಿಟಿ ಶೋ ನಡೆಸಿಕೊಡುವುದರಲ್ಲಿ ಮಗ್ನರಾಗಿದ್ದಾರೆ. ಜೊತೆಗೆ ಸಿನಿಮಾ ಕೆಲಸಗಳನ್ನೂ ನಿಭಾಯಿಸುತ್ತಿದ್ದಾರೆ. ಹತ್ತು ಹಲವು ಕಾರಣಗಳಿಂದಾಗಿ ‘ಲಾಕಪ್​’ (Lock Upp) ಕಾರ್ಯಕ್ರಮ ಸುದ್ದಿ ಆಗುತ್ತಿದೆ. ಬಿಗ್​ ಬಾಸ್​ ರೀತಿಯೇ ಇರುವ ಈ ಶೋನಲ್ಲಿ ಅನೇಕ ವಿವಾದಾತ್ಮಕ ಸೆಲೆಬ್ರಿಟಿಗಳು ಭಾಗವಹಿಸಿದ್ದಾರೆ. ಒಬ್ಬೊಬ್ಬರ ಜೀವನದ ಹಿನ್ನೆಲೆ ಒಂದೊಂದು ರೀತಿ ಇದೆ. ಇಂಥ ರಿಯಾಲಿಟಿ ಶೋಗಳಲ್ಲಿ ತಮ್ಮ ಬದುಕಿನ ಸೀಕ್ರೆಟ್​​ ಬಗ್ಗೆ ಮಾತನಾಡುವ ಮೂಲಕ ಸಿಂಪತಿ ಗಿಟ್ಟಿಸಲು ಸ್ಪರ್ಧಿಗಳು ಪ್ರಯತ್ನಿಸುತ್ತಾರೆ. ‘ಲಾಕಪ್​’ ಕಾರ್ಯಕ್ರಮದಲ್ಲೂ ಅದೇ ರೀತಿ ಆಗುತ್ತಿದೆ. ನಟಿ ಮಂದನಾ ಕರಿಮಿ (Mandana Karimi) ಅವರು ಕೂಡ ಈ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ತಮ್ಮ ಜೀವನದ ಕಷ್ಟದ ದಿನಗಳ ಬಗ್ಗೆ ಅವರು ಬಾಯಿ ಬಿಟ್ಟಿದ್ದಾರೆ. ತಮಗೆ ನಿರ್ದೇಶಕರೊಬ್ಬರ ಜೊತೆ ಅಫೇರ್ ಇತ್ತು ಎಂಬುದನ್ನು ಸಹ ಅವರು ಒಪ್ಪಿಕೊಂಡಿದ್ದಾರೆ. ಅವರು ಹೇಳಿದ ವಿಷಯ ಕೇಳಿ ಕಂಗನಾ ರಣಾವತ್​ ಕೂಡ ಕಣ್ಣೀರು ಹಾಕಿದ್ದಾರೆ.

ಮೂಲತಃ ಮಾಡೆಲ್​ ಆಗಿರುವ ಮಂದನಾ ಕರಿಮಿ ಅವರು ಬಾಲಿವುಡ್​ನಲ್ಲಿ ಬೆರಳೆಣಿಕೆಯಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ‘ಬಿಗ್​ ಬಾಸ್​ 9’ ರಿಯಾಲಿಟಿ ಶೋನಲ್ಲಿ ಭಾಗವಹಿಸಿ 2ನೇ ರನ್ನರ್​ ಅಪ್ ಆಗಿದ್ದರು. ಬಳಿಕ ‘ಬಿಗ್​ ಬಾಸ್​ 10’ರಲ್ಲಿ ಅತಿಥಿ ಆಗಿದ್ದರು. ಈಗ ಸ್ಪರ್ಧೆಯಾಗಿ ‘ಲಾಕಪ್​’ ಸೇರಿಕೊಂಡಿದ್ದಾರೆ. ಮಂದನಾ ಕರಿಮಿ ಅವರು ಖಾಸಗಿ ಜೀವನ ಅಷ್ಟು ಚೆನ್ನಾಗಿಲ್ಲ. ಉದ್ಯಮಿ ಗೌರವ್​ ಗುಪ್ತಾ ಜೊತೆ ಮದುವೆ ಆಗಿ ಕೆಲವೇ ತಿಂಗಳು ಕಳೆಯುವುದರೊಳಗೆ ಅವರ ಸಂಸಾರದಲ್ಲಿ ಬಿರುಕು ಮೂಡಿತು. ಆ ಸಂದರ್ಭದಲ್ಲಿ ಅವರು ಎದುರಿಸಿದ ಕಷ್ಟವನ್ನು ಈಗ ‘ಲಾಕಪ್​’ ಶೋನಲ್ಲಿ ಹೇಳಿಕೊಂಡಿದ್ದಾರೆ.

ನಟಿ ಮಂದನಾ ಕರಿಮಿ ಅವರು ಗಂಡನಿಂದ ದೂರಾಗುವ ಸಮಯದಲ್ಲಿ ಖ್ಯಾತ ನಿರ್ದೇಶಕನ ಜೊತೆಗೆ ಗುಟ್ಟಾಗಿ ಸಂಬಂಧ ಹೊಂದಿದ್ದರು. ಆ ವಿಚಾರವನ್ನು ಅವರೀಗ ಬಾಯಿ ಬಿಟ್ಟಿದ್ದಾರೆ. ಅದನ್ನು ಕೇಳಿ ಎಲ್ಲರಿಗೂ ಅಚ್ಚರಿ ಆಗಿದೆ. ‘ನನ್ನ ಆ ಪರಿಸ್ಥಿತಿಯಲ್ಲಿ ನಾನು ತುಂಬ ಕಷ್ಟಪಡುತ್ತಿರುವಾಗ ನಾನು ಗುಟ್ಟಾಗಿ ಒಂದು ಸಂಬಂಧ ಇಟ್ಟುಕೊಂಡಿದ್ದೆ. ನಾನು ಸಂಬಂಧ ಇಟ್ಟುಕೊಂಡಿದ್ದು ಓರ್ವ ಪ್ರಸಿದ್ಧ ನಿರ್ದೇಶಕನ ಜೊತೆ. ಆತ ಮಹಿಳೆಯರ ಹಕ್ಕುಗಳ ಬಗ್ಗೆ ಮಾತನಾಡುತ್ತಾನೆ. ಅನೇಕ ಜನರಿಗೆ ಅವನೇ ಸ್ಫೂರ್ತಿ. ನಾವಿಬ್ಬರೂ ಪ್ರೆಗ್ನೆನ್ಸಿ ಪ್ಲಾನ್​ ಮಾಡಿದೆವು. ಪ್ರೆಗ್ನೆಂಟ್​ ಆದಾಗ…’ ಎಂದು ಹೇಳಿ ಮಂದನಾ ಕರಿಮಿ ಕಣ್ಣೀರು ಹಾಕಿದ್ದಾರೆ. ಬಿಡುಗಡೆ ಆಗಿರುವ ಪ್ರೋಮೋನಲ್ಲಿ ಇಷ್ಟು ಮಾತ್ರ ರಿವೀಲ್​ ಆಗಿದೆ. ಮಂದನಾ ಹೇಳಿದ ವಿಷಯ ಕೇಳಿ ಕಂಗನಾ ರಣಾವತ್​ ಅವರು ಕೂಡ ಕಣ್ಣೀರು ಹಾಕಿದ್ದಾರೆ. ಇನ್ನುಳಿದ ಸ್ಪರ್ಧಿಗಳು ಸಹ ಎಮೋಷನಲ್​ ಆಗಿದ್ದಾರೆ. ಇಂಥ ಅನೇಕ ಘಟನೆಗಳಿಗೆ ‘ಲಾಕಪ್​’ ಶೋ ಸಾಕ್ಷಿ ಆಗುತ್ತಿದೆ.

View this post on Instagram

A post shared by ALTBalaji (@altbalaji)

ವಿವೇಕ್​ ಅಗ್ನಿಹೋತ್ರಿ ಜತೆ ಕಂಗನಾ ಸಿನಿಮಾ?

‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಗೆಲುವಿನ ಬೆನ್ನಲ್ಲೇ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮುಂದಿನ ಸಿನಿಮಾ ಬಗ್ಗೆ ಕುತೂಹಲ ಮೂಡಿದೆ. ಈ ನಡುವೆ ಬಿಟೌನ್‌ನಲ್ಲಿ ಹೊಸ ಸುದ್ದಿಯೊಂದು ಓಡಾಡುತ್ತಿದೆ. ವರದಿಗಳ ಪ್ರಕಾರ ಕಂಗನಾ ರಣಾವತ್ ಹಾಗೂ ವಿವೇಕ್ ಅಗ್ನಿಹೋತ್ರಿ ಮುಂದಿನ ಚಿತ್ರಕ್ಕೆ ಮಾತುಕತೆ ನಡೆಸುತ್ತಿದ್ದಾರೆ. ಈ ಕುರಿತು ‘ಬಾಲಿವುಡ್ ಹಂಗಾಮಾ‌’ ವರದಿ ಮಾಡಿದ್ದು, ವಿವೇಕ್-ಕಂಗನಾ ನಡುವೆ ಕೆಲವು ಸುತ್ತಿನ ಮಾತುಕತೆಗಳೂ ನಡೆದಿವೆ ಎಂದು ಹೇಳಲಾಗಿದೆ. ವಿವೇಕ್ ಅಗ್ನಿಹೋತ್ರಿ ಮುಂದಿನ ಚಿತ್ರದ ಸಿದ್ಧತೆಯಲ್ಲಿದ್ದಾರೆ. ಅದಕ್ಕಾಗಿ ಕೆಲವು ಸ್ಕ್ರಿಪ್ಟ್​ಗಳನ್ನು ತಯಾರಿಸಿದ್ದಾರೆ. ಅವುಗಳಲ್ಲಿ ಒಂದನ್ನು ಕಂಗನಾ ಜತೆ ಚರ್ಚಿಸಿದ್ದಾರೆ. ಕಂಗನಾ ಕೂಡ ವಿವೇಕ್​ ಜತೆ ಕೆಲಸ ಮಾಡಲು ಆಸಕ್ತಿ ತೋರಿಸಿದ್ದಾರೆ. ಇಬ್ಬರೂ ಸಮಾನ ಮನಸ್ಕರಾದ್ದರಿಂದ ಶೀಘ್ರದಲ್ಲೇ ಆ ಸಿನಿಮಾ ಸೆಟ್ಟೇರಬಹುದು ಎಂದು ಇತ್ತೀಚೆಗೆ ವರದಿ ಪ್ರಕಟ ಆಗಿತ್ತು.

ಇದನ್ನೂ ಓದಿ:

ಆಸ್ಕರ್​ ಮತ್ತು ಗ್ರ್ಯಾಮಿ ಪ್ರಶಸ್ತಿ ಬಹಿಷ್ಕಾರ ಮಾಡುವಂತೆ ಕಂಗನಾ ಒತ್ತಾಯ; ಗಂಭೀರ ಆರೋಪ ಮಾಡಿದ ನಟಿ

ಚಿತ್ರರಂಗದಲ್ಲಿ ಅವಕಾಶ ಸಿಗಲು ವಶೀಕರಣ ಮಾಡಿಸಿದ್ದ ಪಾಯಲ್; ‘ನನ್ನ ಮೇಲೂ ಇಂಥದ್ದೇ ಆರೋಪ ಬಂದಿತ್ತು’ ಎಂದ ಕಂಗನಾ!

ಸಣ್ಣ ವಯಸ್ಸಲ್ಲಿ ಮಾಡಿದ್ದ ಆಣೆ: ಕೊಟ್ಟ ಮಾತು ನಡೆಸಿಕೊಟ್ಟ ಧ್ರುವ ಸರ್ಜಾ
ಸಣ್ಣ ವಯಸ್ಸಲ್ಲಿ ಮಾಡಿದ್ದ ಆಣೆ: ಕೊಟ್ಟ ಮಾತು ನಡೆಸಿಕೊಟ್ಟ ಧ್ರುವ ಸರ್ಜಾ
ಹೋಳಿ ಹಬ್ಬದಂದೇ ಹರಿಯಾಣದ ಬಿಜೆಪಿ ನಾಯಕನ ಹತ್ಯೆ; ಸಿಸಿಟಿವಿ ವಿಡಿಯೋ ವೈರಲ್
ಹೋಳಿ ಹಬ್ಬದಂದೇ ಹರಿಯಾಣದ ಬಿಜೆಪಿ ನಾಯಕನ ಹತ್ಯೆ; ಸಿಸಿಟಿವಿ ವಿಡಿಯೋ ವೈರಲ್
ಅಮೃತಸರ ದೇವಾಲಯದ ಮೇಲಿನ ಗ್ರೆನೇಡ್ ದಾಳಿ ಸಿಸಿಟಿವಿಯಲ್ಲಿ ಸೆರೆ
ಅಮೃತಸರ ದೇವಾಲಯದ ಮೇಲಿನ ಗ್ರೆನೇಡ್ ದಾಳಿ ಸಿಸಿಟಿವಿಯಲ್ಲಿ ಸೆರೆ
ರಸ್ತೆಯಲ್ಲಿ ಮಹಿಳೆ, ಮಗುವಿನ ಮೇಲೆ ಬೀದಿ ಹಸು ಅಟ್ಯಾಕ್; ವಿಡಿಯೋ ಇಲ್ಲಿದೆ
ರಸ್ತೆಯಲ್ಲಿ ಮಹಿಳೆ, ಮಗುವಿನ ಮೇಲೆ ಬೀದಿ ಹಸು ಅಟ್ಯಾಕ್; ವಿಡಿಯೋ ಇಲ್ಲಿದೆ
ಯುವತಿಯರೊಂದಿಗೆ ಮಕ್ಕಳನ್ನು ಹೆಗಲ ಮೇಲೆ ಹೊತ್ತು ಕುಣಿದ ಗೃಹಿಣಿಯರು
ಯುವತಿಯರೊಂದಿಗೆ ಮಕ್ಕಳನ್ನು ಹೆಗಲ ಮೇಲೆ ಹೊತ್ತು ಕುಣಿದ ಗೃಹಿಣಿಯರು
ಕುಂಭಮೇಳ ಎಫೆಕ್ಟ್: ನಾಗಾಸಾಧು ವೇಷ ಹಾಕಿಕೊಂಡು ಹೋಳಿ ಆಚರಣೆ
ಕುಂಭಮೇಳ ಎಫೆಕ್ಟ್: ನಾಗಾಸಾಧು ವೇಷ ಹಾಕಿಕೊಂಡು ಹೋಳಿ ಆಚರಣೆ
ಸಾಯುವ ಮುನ್ನ ದಿವ್ಯಾ ಕುಮಾರ್ 4 ಬಾಲ್​ನಲ್ಲಿ 20 ರನ್ ಬಾರಿಸಿದ ವಿಡಿಯೋ
ಸಾಯುವ ಮುನ್ನ ದಿವ್ಯಾ ಕುಮಾರ್ 4 ಬಾಲ್​ನಲ್ಲಿ 20 ರನ್ ಬಾರಿಸಿದ ವಿಡಿಯೋ
ಮಾರ್ಚ್ 8ರಂದು ನಾನು ಮತ್ತು ಸಿಎಂ ಇಬ್ಬರೂ ಲಭ್ಯರಿರಲಿಲ್ಲ: ಶಿವಕುಮಾರ್
ಮಾರ್ಚ್ 8ರಂದು ನಾನು ಮತ್ತು ಸಿಎಂ ಇಬ್ಬರೂ ಲಭ್ಯರಿರಲಿಲ್ಲ: ಶಿವಕುಮಾರ್
ಬೆಂಗಳೂರಿನಲ್ಲಿ ಕಸ ವಿಲೇವಾರಿ ಸಮಸ್ಯೆ ಒಪ್ಪಿಕೊಂಡ ಬಿಬಿಎಂಪಿ ಕಮಿಷನರ್
ಬೆಂಗಳೂರಿನಲ್ಲಿ ಕಸ ವಿಲೇವಾರಿ ಸಮಸ್ಯೆ ಒಪ್ಪಿಕೊಂಡ ಬಿಬಿಎಂಪಿ ಕಮಿಷನರ್
ಹೋಳಿ ವೇಳೆ ಪೊಲೀಸ್ ಅಧಿಕಾರಿಗೆ ಡ್ಯಾನ್ಸ್ ಮಾಡಲು ತೇಜ್ ಪ್ರತಾಪ್ ಒತ್ತಾಯ
ಹೋಳಿ ವೇಳೆ ಪೊಲೀಸ್ ಅಧಿಕಾರಿಗೆ ಡ್ಯಾನ್ಸ್ ಮಾಡಲು ತೇಜ್ ಪ್ರತಾಪ್ ಒತ್ತಾಯ