ಆಸ್ಕರ್​ ಮತ್ತು ಗ್ರ್ಯಾಮಿ ಪ್ರಶಸ್ತಿ ಬಹಿಷ್ಕಾರ ಮಾಡುವಂತೆ ಕಂಗನಾ ಒತ್ತಾಯ; ಗಂಭೀರ ಆರೋಪ ಮಾಡಿದ ನಟಿ

Boycott Grammy Awards: ಆಸ್ಕರ್​ ಮತ್ತು ಗ್ರ್ಯಾಮಿ ಪ್ರಶಸ್ತಿ ಪ್ರದಾನ ಸಮಾರಂಭದ ಆಯೋಜಕರ ಮೇಲೆ ಕಂಗನಾ ರಣಾವತ್​ ಅವರು ಕಿಡಿಕಾಡಿದ್ದಾರೆ. ಲೆಜೆಂಡರಿ ಕಲಾವಿದರನ್ನು ಬೇಕಂತಲೇ ಕಡೆಗಣಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಆಸ್ಕರ್​ ಮತ್ತು ಗ್ರ್ಯಾಮಿ ಪ್ರಶಸ್ತಿ ಬಹಿಷ್ಕಾರ ಮಾಡುವಂತೆ ಕಂಗನಾ ಒತ್ತಾಯ; ಗಂಭೀರ ಆರೋಪ ಮಾಡಿದ ನಟಿ
ಕಂಗನಾ ರಣಾವತ್
Follow us
| Updated By: ಮದನ್​ ಕುಮಾರ್​

Updated on: Apr 06, 2022 | 9:25 AM

ನಟಿ ಕಂಗನಾ ರಣಾವತ್​ ಅವರು ಹಲವು ವಿಚಾರಗಳ ಬಗ್ಗೆ ಆಗಾಗ ತಕರಾರು ತೆಗೆಯುತ್ತಾರೆ. ಈಗ ಅವರು ಗ್ರ್ಯಾಮಿ ಅವಾರ್ಡ್ಸ್​ ಮತ್ತು ಆಸ್ಕರ್​​ ಅವಾರ್ಡ್ಸ್​ ಬಗ್ಗೆ ಕಿಡಿ ಕಾರಿದ್ದಾರೆ. ಅಲ್ಲದೇ ಈ ಎರಡೂ ಪ್ರಶಸ್ತಿಗಳ ಬಗ್ಗೆ ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ಕುರಿತಂತೆ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಅಷ್ಟಕ್ಕೂ ಕಂಗನಾ ರಣಾವತ್​ (Kangana Ranaut) ಅವರು ಈ ಪ್ರತಿಷ್ಠಿತ ಪ್ರಶಸ್ತಿಗಳ ಬಗ್ಗೆ ಗರಂ ಆಗಲು ಕಾರಣ ಏನು? ಇತ್ತೀಚಿಗೆ ಆಸ್ಕರ್​ ಮತ್ತು ಗ್ರ್ಯಾಮಿ ಪ್ರಶಸ್ತಿ ಪ್ರದಾನ ಸಮಾರಂಭಗಳು ನಡೆದವು. ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅನೇಕರಿಗೆ ಗ್ರ್ಯಾಮಿ​ ಪ್ರಶಸ್ತಿ (Grammy Awards) ನೀಡಿ ಗೌರವಿಸಲಾಯಿತು. ಆದರೆ ಆ ಸಮಾರಂಭದಲ್ಲಿ ಲೆಜೆಂಡರಿ ಗಾಯಕಿ ಲತಾ ಮಂಗೇಶ್ಕರ್​ (Lata Mangeshkar) ಅವರನ್ನು ನಿರ್ಲಕ್ಷ್ಯ ಮಾಡಲಾಗಿದೆ. ಆ ಕಾರಣಕ್ಕಾಗಿ ಅನೇಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಟಿ ಕಂಗನಾ ರಣಾವತ್​ ಅವರು ಕೂಡ ಗ್ರ್ಯಾಮಿ ಅವಾರ್ಡ್ಸ್​ ಕಾರ್ಯಕ್ರಮದ ಆಯೋಜಕರನ್ನು ಟೀಕಿಸಿದ್ದಾರೆ. ಅಷ್ಟೇ ಅಲ್ಲದೇ, ಇಂಥ ಪ್ರಶಸ್ತಿಗಳನ್ನು ನಾವು ಬಹಿಷ್ಕಾರ ಮಾಡಬೇಕು ಎಂದು ಅವರು ಹೇಳಿದ್ದಾರೆ.

ಸಂಗೀತ ಕ್ಷೇತ್ರಕ್ಕೆ ಲತಾ ಮಂಗೇಶ್ಕರ್​ ಅವರು ನೀಡಿದ ಕೊಡುಗೆ ಅಪಾರ. ಆದರೆ ಅಂಥ ಸಾಧಕಿಯನ್ನು ಗ್ರ್ಯಾಮಿ ಅವಾರ್ಡ್ಸ್​ ಮತ್ತು ಆಸ್ಕರ್​ ಅವಾರ್ಡ್ಸ್​ ಕಾರ್ಯಕ್ರಮದಲ್ಲಿ ಕಡೆಗಣಿಸಲಾಗಿದೆ. ಆಯಾ ವರ್ಷದಲ್ಲಿ ಅಗಲಿದ ಸಾಧಕರಿಗೆ ಈ ರೀತಿಯ ಸಮಾರಂಭಗಳಲ್ಲಿ ಗೌರವ ಸೂಚಿಸಲಾಗುತ್ತದೆ. ಸಿನಿಮಾ ಮತ್ತು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿ, ಇಹಲೋಕ ತ್ಯಜಿಸಿದ ಗಣ್ಯರನ್ನು ಆಸ್ಕರ್​ ಮತ್ತು ಗ್ರ್ಯಾಮಿ ಅವಾರ್ಡ್ಸ್​ ಸಮಾರಂಭದಲ್ಲಿ ಸ್ಮರಿಸಿಕೊಳ್ಳಲಾಯಿತು. ಆದರೆ ಇದರಲ್ಲಿ ಲತಾ ಮಂಗೇಶ್ಕರ್​ ಅವರ ಹೆಸರು ಇರಲಿಲ್ಲ ಎಂಬ ಕಾರಣಕ್ಕೆ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಗರಂ ಆಗಿದ್ದಾರೆ. ಕಂಗನಾ ರಣಾವತ್​ ಕೂಡ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಅಂತಾರಾಷ್ಟ್ರೀಯ ಪ್ರಶಸ್ತಿ ಎಂದು ಹೇಳಿಕೊಳ್ಳುವ ಇಂಥ ಎಲ್ಲ ಲೋಕಲ್​ ಪ್ರಶಸ್ತಿಗಳ ಬಗ್ಗೆ ನಾವು ಗಟ್ಟಿ ನಿಲುವು ತೆಗೆದುಕೊಳ್ಳಬೇಕು. ಜನಾಂಗ ಮತ್ತು ಸಿದ್ಧಾಂತದ ಕಾರಣದಿಂದ ಲೆಜೆಂಡರಿ ಕಲಾವಿದರನ್ನು ಉದ್ದೇಶಪೂರ್ವಕವಾಗಿಯೇ ಕಡೆಗಣಿಸಲಾಗಿದೆ. ಭಾರತ ರತ್ನ ಲತಾ ಮಂಗೇಶ್ಕರ್​ ಅವರಿಗೆ ಗೌರವ ಸಲ್ಲಿಸಲು ಗ್ರ್ಯಾಮಿ ಮತ್ತು ಆಸ್ಕರ್​ ಪ್ರಶಸ್ತಿ ಸಮಾರಂಭಗಳು ವಿಫಲವಾಗಿವೆ. ಜಾಗತಿಕ ಪ್ರಶಸ್ತಿ ಎಂದು ಹೇಳಿಕೊಳ್ಳುವ ಈ ಲೋಕಲ್​ ಪ್ರಶಸ್ತಿಗಳನ್ನು ನಮ್ಮ ಮಾಧ್ಯಮಗಳು ಬಹಿಷ್ಕಾರ ಮಾಡಬೇಕು. ಬೇರೆಯವರ ಬಗ್ಗೆ ತಾರತಮ್ಯ ಮಾಡುವ ಪಾಶ್ಚಿಮಾತ್ಯ ಪ್ರಶಸ್ತಿಗಳಿವು’ ಎಂದು ಕಂಗನಾ ಅವರು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಪೋಸ್ಟ್​ ಮಾಡಿದ್ದಾರೆ.

ಬೆಂಗಳೂರಿನ ರಿಕ್ಕಿ ಕೇಜ್​ಗೆ ಗ್ರ್ಯಾಮಿ ಪ್ರಶಸ್ತಿ:

64ನೇ ಗ್ರ್ಯಾಮಿ ಅವಾರ್ಡ್​ ಕಾರ್ಯಕ್ರಮ ಇತ್ತೀಚೆಗೆ ಲಾಸ್​ ವೇಗಸ್​ನಲ್ಲಿ ಅದ್ದೂರಿಯಾಗಿ ನೆರವೇರಿತು. ಈ ಕಾರ್ಯಕ್ರಮದಲ್ಲಿ ಭಾರತದ ಮ್ಯೂಸಿಕ್​ ಕಂಪೋಸರ್​ ರಿಕ್ಕಿ ಕೇಜ್​ ಅವರಿಗೆ ಪ್ರಶಸ್ತಿ ದೊರೆತಿದೆ. ರಿಕ್ಕಿ ಕೇಜ್​ ಹುಟ್ಟಿದ್ದು ಅಮೆರಿಕದಲ್ಲಿ. ಸದ್ಯ, ಅವರು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ರಿಕ್ಕಿ ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಅವರು 100ಕ್ಕೂ ಅಧಿಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 2015ರಲ್ಲಿ ‘ವಿಂಡ್ಸ್​ ಆಫ್​ ಸಂಸಾರ’ ಆಲ್ಬಂಗೆ ಗ್ರ್ಯಾಮಿ ಪ್ರಶಸ್ತಿ ದೊರೆತಿತ್ತು. ಈ ಬಾರಿ ‘ಡಿವೈನ್​ ಟೈಡ್ಸ್​’ ಆಲ್ಬಂಗೆ ಸ್ಟೀವರ್ಟ್ ಕೋಪ್​​ಲ್ಯಾಂಡ್​ ಹಾಗೂ ರಿಕ್ಕಿ ಕೇಜ್​ಗೆ ಒಟ್ಟಾಗಿ ಗ್ರ್ಯಾಮಿ ಪ್ರಶಸ್ತಿ ದೊರೆತಿದೆ. ಈ ಮೂಲಕ ಅವರು ಜಾಗತಿಕ ಮಟ್ಟದಲ್ಲಿ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ.

ಇದನ್ನೂ ಓದಿ:

ಚಿತ್ರರಂಗದಲ್ಲಿ ಅವಕಾಶ ಸಿಗಲು ವಶೀಕರಣ ಮಾಡಿಸಿದ್ದ ಪಾಯಲ್; ‘ನನ್ನ ಮೇಲೂ ಇಂಥದ್ದೇ ಆರೋಪ ಬಂದಿತ್ತು’ ಎಂದ ಕಂಗನಾ!

ಬೋಲ್ಡ್ ಲುಕ್​ನಲ್ಲಿ ಮಿಂಚುತ್ತಿದ್ದಾರೆ ಕಂಗನಾ; ಇಲ್ಲಿದೆ ಅವರ ಹಾಟ್​ ಫೋಟೋಗಳು

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ