ಚಿತ್ರರಂಗದಲ್ಲಿ ಅವಕಾಶ ಸಿಗಲು ವಶೀಕರಣ ಮಾಡಿಸಿದ್ದ ಪಾಯಲ್; ‘ನನ್ನ ಮೇಲೂ ಇಂಥದ್ದೇ ಆರೋಪ ಬಂದಿತ್ತು’ ಎಂದ ಕಂಗನಾ!

Kangana Ranaut | Payal Rohatgi: ಬಾಲಿವುಡ್​ನಲ್ಲಿ ಅವಕಾಶ ಪಡೆಯಲು ನಟಿಯೋರ್ವರು ‘ವಶೀಕರಣ ತಂತ್ರ’ದ ಮೊರೆ ಹೋಗಿದ್ದನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೇ ಈ ಬಗ್ಗೆ ಮಾತನಾಡುತ್ತಾ ಕಂಗನಾ ತಮ್ಮ ಜೀವನದ ಘಟನೆಯನ್ನು, ತಮ್ಮ ಮೇಲಿನ ಆರೋಪಗಳನ್ನು ಸ್ಮರಿಸಿಕೊಂಡಿದ್ದಾರೆ. ಇದನ್ನು ವೀಕ್ಷಿಸಿದ ಪ್ರೇಕ್ಷಕರು, ಬಾಲಿವುಡ್​ನಲ್ಲೂ ಇಂಥದ್ದೆಲ್ಲಾ ನಡೆಯುತ್ತದೆಯೇ ಎಂದು ಹುಬ್ಬೇರಿಸಿದ್ದಾರೆ.

ಚಿತ್ರರಂಗದಲ್ಲಿ ಅವಕಾಶ ಸಿಗಲು ವಶೀಕರಣ ಮಾಡಿಸಿದ್ದ ಪಾಯಲ್; ‘ನನ್ನ ಮೇಲೂ ಇಂಥದ್ದೇ ಆರೋಪ ಬಂದಿತ್ತು’ ಎಂದ ಕಂಗನಾ!
ಪಾಯಲ್ ರೋಹಟ್ಗಿ, ಕಂಗನಾ ರಣಾವತ್
Follow us
| Updated By: shivaprasad.hs

Updated on:Mar 29, 2022 | 8:40 AM

Lock Upp | ಕಂಗನಾ ರಣಾವತ್ ಒಟಿಟಿ ಪ್ರವೇಶ ಭರ್ಜರಿಯಾಗಿಯೇ ಸಾಗುತ್ತಿದೆ. ಆಲ್ಟ್​ ಬಾಲಾಜಿ ಹಾಗೂ ಎಂಎಕ್ಸ್ ಪ್ಲೇಯರ್​ನಲ್ಲಿ ಪ್ರಸಾರವಾಗುತ್ತಿರುವ ‘ಲಾಕ್ ಅಪ್’ ಶೋಗೆ ಕಂಗನಾ (Kangana Ranaut) ನಿರೂಪಕಿ ಹಾಗೂ ನಿರ್ಣಾಯಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಶೋ ವಿವಾದವನ್ನು ಸೃಷ್ಟಿಸಲಿದೆ ಎಂದು ನಟಿ ಮೊದಲೇ ಹೇಳಿಕೊಂಡಿದ್ದರು. ಅದಕ್ಕೆ ತಕ್ಕಂತೆ ಪ್ರತಿ ದಿನವೂ ‘ಲಾಕ್ ಅಪ್’ನಿಂದ ಶಾಕಿಂಗ್ ವಿಚಾರಗಳು ಹೊರಬರುತ್ತಿವೆ. ಒಟಿಟಿಯಲ್ಲಿ ಪ್ರಸಾರವಾಗುತ್ತಿರುವುದರಿಂದ ಮಾತುಗಳಿಗೆಲ್ಲ ಯಾವುದೇ ಅಡೆತಡೆಯಿರುವುದಿಲ್ಲ. ಹೀಗಾಗಿ ‘ಲಾಕ್ ಅಪ್’ ಅತ್ಯಂತ ಬೋಲ್ಡ್ ಆಗಿ ಮೂಡಿಬರುತ್ತಿದೆ. ಈ ನಡುವೆ ಶೋನ ಇತ್ತೀಚಿನ ಎಪಿಸೋಡ್​ನಲ್ಲಿ ಅಚ್ಚರಿಯ ಮಾಹಿತಿ ಹೊರಬಿದ್ದಿದೆ. ಬಾಲಿವುಡ್​ನಲ್ಲಿ ಅವಕಾಶ ಪಡೆಯಲು ನಟಿಯೋರ್ವರು ‘ವಶೀಕರಣ ತಂತ್ರ’ದ ಮೊರೆ ಹೋಗಿದ್ದನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೇ ಈ ಬಗ್ಗೆ ಮಾತನಾಡುತ್ತಾ ಕಂಗನಾ ತಮ್ಮ ಜೀವನದ ಘಟನೆಯನ್ನು, ತಮ್ಮ ಮೇಲಿನ ಆರೋಪಗಳನ್ನು ಸ್ಮರಿಸಿಕೊಂಡಿದ್ದಾರೆ. ಇದನ್ನು ವೀಕ್ಷಿಸಿದ ಪ್ರೇಕ್ಷಕರು, ಬಾಲಿವುಡ್​ನಲ್ಲೂ ಇಂಥದ್ದೆಲ್ಲಾ ನಡೆಯುತ್ತದೆಯೇ ಎಂದು ಹುಬ್ಬೇರಿಸಿದ್ದಾರೆ. ಅಷ್ಟಕ್ಕೂ ‘ಲಾಕ್ ಅಪ್​’ನಲ್ಲಿ ಹೊರಬಿದ್ದ ವಿಚಾರಗಳೇನು? ಇಲ್ಲಿದೆ ನೋಡಿ.

‘ಲಾಕ್​ ಅಪ್​’ನ ಸ್ಪರ್ಧಿಗಳಲ್ಲಿ ಓರ್ವರು ಪಾಯಲ್ ರೋಹಟ್ಗಿ. ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅವರು, ಮೊದಮೊದಲು ಹಿನ್ನಡೆ ಅನುಭವಿಸಿದ್ದರಂತೆ. ಆ ಸಂದರ್ಭದಲ್ಲಿ ವಶೀಕರಣದ ಮೊರೆ ಹೋಗಿದ್ದೆ ಎಂದು ಬಹಿರಂಗಪಡಿಸಿದ್ದಾರೆ. ‘ತಾಯಿಗೆ ತಿಳಿಯದೇ ಇರುವ ಒಂದು ರಹಸ್ಯ ವಿಚಾರ’ವನ್ನು ಹೇಳುವಂತೆ ಪಾಯಲ್​ಗೆ ಟಾಸ್ಕ್ ನೀಡಲಾಗಿತ್ತು. ಈ ವೇಳೆ ನಟಿ ಅಚ್ಚರಿಯ ಮಾಹಿತಿ ಹೊರಹಾಕಿದ್ಧಾರೆ.

‘‘ಚಿತ್ರರಂಗಕ್ಕೆ ಬಂದು 15 ವರ್ಷಗಳಾಗಿವೆ. ಆದರೆ ಅದೊಂದು ಕಾಲವಿತ್ತು, ನನಗೆ ಹಚ್ಚು ಯಶಸ್ಸು ಲಭಿಸುತ್ತಿರಲಿಲ್ಲ. ಅಚ್ಚರಿಯಾದರೂ, ಆಗದೇ ಇದ್ದರೂ ನಾನಾಗ ತಾಂತ್ರಿಕ ಪೂಜೆಯ ಮೊರೆ ಹೋಗಿದ್ದೆ’’ ಎಂದಿದ್ದಾರೆ ಪಾಯಲ್. ‘‘ಯಶಸ್ಸು ಸಿಗದಿರುವ ಕಾರಣ ಯಾರೋ ಮಾಟಮಂತ್ರ ಮಾಡಿಸುವಂತೆ ಹೇಳಿದರು. ಯಾವುದೇ ಶಿಕ್ಷಿತ ಮಹಿಳೆ ಅಥವಾ ವ್ಯಕ್ತಿ ಇಂತಹ ಕೆಲಸ ಮಾಡುತ್ತಾರೆಯೇ ಎಂದು ಗೊತ್ತಿಲ್ಲ. ಆದರೆ ನಾನಾಗ ದೆಹಲಿಯಲ್ಲಿ ಈ ಪೂಜೆ ಮಾಡಿಸಿದ್ದೆ’’

‘‘ಅದು ವಶೀಕರಣ ಪೂಜೆಯಾಗಿತ್ತು. ನನ್ನ ವೃತ್ತಿಜೀವನವನ್ನು ಉಳಿಸಿಕೊಳ್ಳುವ ಸಲುವಾಗಿ ಈ ನಿರ್ಧಾರ ಕೈಗೊಂಡೆ’’ ಎಂದು ಹೇಳಿದ್ದಾರೆ ಪಾಯಲ್. ಆದರೆ ಇದೇ ವೇಳೆ ಅವರು ಮತ್ತೊಂದು ಅಚ್ಚರಿಯ ವಿಚಾರವನ್ನೂ ಹೇಳಿಕೊಂಡಿದ್ದಾರೆ. ‘‘ಈ ಪೂಜೆಯಿಂದ ಯಾವುದೇ ರೀತಿಯ ಸಹಾಯವಾಗಲಿಲ್ಲ. ನಾನು ನಿರ್ಮಾಪಕರೊಬ್ಬರೊಂದಿಗೆ ಕೆಲಸ ಮಾಡಲು ಹೀಗೆ ಮಾಡಿದೆ. ಆದರೆ ಅದು ಪ್ರಯೋಜನವಾಗಲಿಲ್ಲ. ಈ ಬಗ್ಗೆ ನಾನು ಅಮ್ಮನಲ್ಲೂ ಹೇಳಿಲ್ಲ’’ ಎಂದು ಹೇಳಿದ್ದಾರೆ ಪಾಯಲ್ ರೋಹಟ್ಗಿ.

ಈ ವೇಳೆ ಕಂಗನಾ ಪಾಯಲ್​ಗೆ ತಮಾಷೆ ಮಾಡುತ್ತಾ, ನಿಮ್ಮ ಹೊಸ ಗೆಳೆಯ ಕೂಡ ವಶೀಕರಣದ ಪ್ರಭಾವವೇ ಎಂದಿದ್ದಾರೆ. ಇದನ್ನು ಪಾಯಲ್ ನಿರಾಕರಿಸಿದ್ದಾರೆ. ಪಾಯಲ್​ಗೆ ಸಲಹೆ ನೀಡಿದ ಕಂಗನಾ, ‘‘ನೀವು ಸುಂದರವಾಗಿದ್ದೀರಿ ಮತ್ತು ಪ್ರತಿಭಾವಂತರಾಗಿದ್ದೀರಿ. ಜನರನ್ನು ಪ್ರಭಾವಿಸಲು ನಿಮಗೆ ತಾಂತ್ರಿಕ ಪೂಜೆಗಳು ಬೇಕಾಗಿಲ್ಲ. ನೀವು ಹಾಗೆಯೇ ಜನರನ್ನು ಪ್ರಭಾವಿಸಬಲ್ಲಿರಿ’’ ಎಂದಿದ್ದಾರೆ.

ಇತ್ತೀಚೆಗಷ್ಟೇ ಪಾಯಲ್ ಹಾಗೂ ಅವರ ಗೆಳೆಯ ಸಂಗ್ರಾಮ್ ಸಿಂಗ್ ಈರ್ವರೂ ಜುಲೈ ವೇಳೆಯಲ್ಲಿ ವಿವಾಹವಾಗುತ್ತಿರುವುದಾಗಿ ಘೋಷಿಸಿದ್ದರು.

ಪಾಯಲ್ ವಶೀಕರಣ ಕುರಿತ ವಿಚಾರಕ್ಕೆ ತಮ್ಮದೇ ಜೀವನದ ಘಟನೆ ನೆನಪಿಸಿಕೊಂಡ ಕಂಗನಾ:

ಕಂಗನಾ ರಣಾವತ್ ಬಗ್ಗೆಯೂ ಚಿತ್ರರಂಗದಲ್ಲಿ ಮಾಟ-ಮಂತ್ರ ಮಾಡಿಸುತ್ತಾರೆ ಎಂಬ ಆರೋಪ ಎದುರಾಗಿತ್ತು. ಈ ಬಗ್ಗೆ ನೆನಪಿಸಿಕೊಂಡ ಕಂಗನಾ, ‘‘ನನ್ನ ಮೇಲೂ ಮಾಟ-ಮಂತ್ರ ಮಾಡಿಸುತ್ತಾರೆ ಎನ್ನುವ ಆರೋಪ ಎದುರಾಗಿತ್ತು. ಚಿತ್ರರಂಗದಲ್ಲಿ ಬಹಳಷ್ಟು ಪೂರ್ವಗ್ರಹಗಳಿವೆ. ಒಂದು ಹುಡುಗಿ/ ಮಹಿಳೆ ಯಶಸ್ಸು ಕಂಡರೆ ಜನರು ಆಕೆಯ ಸಾಮರ್ಥ್ಯವನ್ನು ಅನುಮಾನಿಸುತ್ತಾರೆ. ಆಕೆಯ ಬಳಿ ಏನೋ ವಿಶೇಷ ಶಕ್ತಿ ಇದೆ. ಇಲ್ಲದಿದ್ದರೆ ಇದೆಲ್ಲಾ ಹೇಗೆ ಸಾಧ್ಯವಾಗುತ್ತಿತ್ತು? ಎಂದು ಆಡಿಕೊಳ್ಳುತ್ತಾರೆ. ಇದನ್ನು ಎದುರಿಸಲು ಸಾಮರ್ಥ್ಯ ಬೇಕು’’ ಎಂದಿದ್ದಾರೆ.

2016ರಲ್ಲಿ ಕಂಗನಾ ಮಾಜಿ ಪ್ರಿಯಕರ ಅಧ್ಯಯನ್ ಸುಮನ್ ‘ಡಿಎನ್​ಎ’ ಮಾಧ್ಯಮದೊಂದಿಗೆ ಮಾತನಾಡುತ್ತಾ, ಕಂಗನಾ ತಮ್ಮ ಮೇಲೆ ಮಾಟ-ಮಂತ್ರ ಮಾಡಿಸಿದ್ದಾರೆ ಎಂದು ಆರೋಪಿಸಿದ್ದರು. ‘‘ಒಂದು ದಿನ, ಕಂಗನಾ ಮನೆಗೆ ಪೂಜೆ ಮಾಡಿಸಲು ಕರೆದಿದ್ದರು. ರಾತ್ರಿ 11.30ರ ಸುಮಾರಿಗೆ ಮನೆಗೆ ಹೋಗಿದ್ದೆ, ಪೂಜೆ 12ಕ್ಕೆ ಪ್ರಾರಂಭವಾಯಿತು. ಅವರ ಅಪಾರ್ಟ್​ಮೆಂಟ್​​ನ ಕಿಟಕಿಗಳು ಕಪ್ಪು ಬಣ್ಣದ ಕರ್ಟೈನ್ ಹಾಗೂ ಮನೆಯನ್ನು ಕಪ್ಪು ಬಣ್ಣದಿಂದ ತುಂಬಿಸಿದ್ದರು’’ ಎಂದಿದ್ದರು ಅಧ್ಯಯನ್.

ಇದನ್ನು ಕಂಗನಾ ‘ಲಾಕ್​ ಅಪ್​’ನಲ್ಲಿ ನೇರವಾಗಿ ಪ್ರಸ್ತಾಪಿಸದೇ ತಮ್ಮ ಬಗ್ಗೆಯೂ ಇಂಥದ್ದೇ ಆರೋಪ ಬಂದಿತ್ತು ಎಂದು ಉಲ್ಲೇಖಿಸಿದ್ದಾರೆ. ಅಲ್ಲದೇ ಮಹಿಳೆಯ ಯಶಸ್ಸಿಗೆ ಪ್ರತಿಭೆ ಕಾರಣ ಎನ್ನುವ ಮೂಲಕ ವಶೀಕರಣದ ವಿಚಾರವನ್ನು ನಿರಾಕರಿಸಿದ್ದಾರೆ.

ಇದನ್ನೂ ಓದಿ:

ಕಂಗನಾ ರಣಾವತ್ ವಿವಾದಿತ ಹೇಳಿಕೆಗಳು ಒಂದೆರಡಲ್ಲ!

ರಶ್ಮಿಕಾ ಮಂದಣ್ಣ ಹೊಸ ವಿಡಿಯೋ ವೈರಲ್​; ಎನರ್ಜಿ ಕಂಡು ವಾವ್​ ಎಂದ ಅಭಿಮಾನಿಗಳು

Published On - 8:37 am, Tue, 29 March 22

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ