Hrithik Roshan: ಮಾಜಿ ಪತ್ನಿ ನೀಡಿದ ಪಾರ್ಟಿಯಲ್ಲಿ ಹೊಸ ಗೆಳತಿಯೊಂದಿಗೆ ಹಾಜರಾದ ಹೃತಿಕ್; ಫೋಟೋಗಳು ವೈರಲ್

Hrithik Roshan: ಮಾಜಿ ಪತ್ನಿ ನೀಡಿದ ಪಾರ್ಟಿಯಲ್ಲಿ ಹೊಸ ಗೆಳತಿಯೊಂದಿಗೆ ಹಾಜರಾದ ಹೃತಿಕ್; ಫೋಟೋಗಳು ವೈರಲ್
ಪಾರ್ಟಿಯಲ್ಲಿ ಪೂಜಾ ಬೇಡಿಯೊಂದಿಗೆ ಹೃತಿಕ್ ರೋಷನ್, ಸಬಾ ಅಜಾದ್, ಸುಸಾನೆ ಖಾನ್ ಹಾಗೂ ಅರ್ಸ್ಲಾನ್ ಗೋನಿ

Sussanne Khan | Saba Azad: ಇತ್ತೀಚೆಗೆ ಹೃತಿಕ್ ಮತ್ತು ಸಬಾ ಆಜಾದ್ ಪಾರ್ಟಿಯಲ್ಲಿ ಕಾಣಿಸಿಕೊಂಡಿರುವ ಫೋಟೋಗಳು ವೈರಲ್ ಆಗಿವೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಇದೇ ಮೊದಲ ಬಾರಿಗೆ ಹೃತಿಕ್ ಮಾಜಿ ಪತ್ನಿ ಸುಸಾನೆ ಖಾನ್ ಜತೆ ಹೃತಿಕ್- ಸಬಾ ಪಾರ್ಟಿಯಲ್ಲಿ ಪಾಲ್ಗೊಂಡಿದ್ದಾರೆ!

TV9kannada Web Team

| Edited By: shivaprasad.hs

Apr 06, 2022 | 3:11 PM

ಇತ್ತೀಚೆಗೆ ಬಾಲಿವುಡ್​ನಲ್ಲಿ ಹೆಚ್ಚು ಚರ್ಚೆಯಾಗುತ್ತಿರುವ ಜೋಡಿಗಳಲ್ಲಿ ಹೃತಿಕ್ ರೋಷನ್ (Hrithik Roshan) ಹಾಗೂ ಸಬಾ ಆಜಾದ್ (Saba Azad) ಪ್ರಮುಖರು. ಮೊದಮೊದಲು ಕದ್ದುಮುಚ್ಚಿ ಓಡಾಡಿ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದ ಈ ಜೋಡಿ, ಈಗ ಸಾರ್ವಜನಿಕವಾಗಿ ಸುತ್ತಾಡುತ್ತಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲೂ ಈರ್ವರು ಜತೆಯಿರುವ ಹಲವು ಫೋಟೋಗಳು ಕಾಣಸಿಗುತ್ತವೆ. ಬಹಿರಂಗವಾಗಿ ಈರ್ವರು ತಮ್ಮ ಸಂಬಂಧದ ಬಗ್ಗೆ ಮಾತನಾಡದಿದ್ದರೂ ಕೂಡ ಹೃತಿಕ್ ಕುಟುಂಬದ ಜತೆ ಹಾಗೂ ಇತರರ ಜತೆ ಸಬಾ ಆಪ್ತತೆ ನೋಡಿದ ಅಭಿಮಾನಿಗಳು ಈರ್ವರ ನಡುವೆ ಗೆಳೆತನಕ್ಕೂ ಮೀರಿದ್ದು ಏನೋ ಇದು ಎಂದು ಊಹಿಸುತ್ತಿದ್ದಾರೆ. ಇತ್ತೀಚೆಗೆ ಹೃತಿಕ್ ಮತ್ತು ಸಬಾ ಆಜಾದ್ ಪಾರ್ಟಿಯಲ್ಲಿ ಕಾಣಿಸಿಕೊಂಡಿರುವ ಫೋಟೋಗಳು ವೈರಲ್ ಆಗಿವೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಮೊದಲ ಬಾರಿಗೆ ಹೃತಿಕ್ ಮಾಜಿ ಪತ್ನಿ ಸುಸಾನೆ ಖಾನ್ ಜತೆ ಹೃತಿಕ್- ಸಬಾ ಪಾರ್ಟಿಯಲ್ಲಿ ಪಾಲ್ಗೊಂಡಿದ್ದಾರೆ! ಸುಸಾನೆ ಖಾನ್ (Sussanne Khan) ಅವರ ಹೊಸ ರೆಸ್ಟೋರೆಂಟ್ ‘ವೆಡ್ರೋ’ ಗೋವಾದಲ್ಲಿ ಉದ್ಘಾಟನೆಯಾಗಿದೆ. ಇದರ ಹಿನ್ನೆಲೆಯಲ್ಲಿ ಸುಸಾನೆ ಆಯೋಜಿಸಿದ್ದ ಪಾರ್ಟಿಯಲ್ಲಿ ಹೊಸ ಗೆಳತಿಯೊಂದಿಗೆ ಹೃತಿಕ್ ಭಾಗಿಯಾಗಿದ್ದಾರೆ.

ಹೃತಿಕ್ ಮಾಜಿ ಪತ್ನಿ ಸುಸಾನೆ ಹಾಗೂ ಗೆಳತಿ ಸಬಾ ಆಜಾದ್ ಜತೆ ಪಾರ್ಟಿಯಲ್ಲಿ ಭಾಗಿಯಾಗಿರುವ ಫೋಟೋಗಳನ್ನು ಪೂಜಾ ಬೇಡಿ ಹಾಗೂ ಸುಸಾನೆ ಖಾನ್ ಸಹೋದರಿ ಫರಾಹ್ ಖಾನ್ ಹಂಚಿಕೊಂಡಿದ್ದಾರೆ. ಗೋವಾದಲ್ಲಿ ಎಲ್ಲರೂ ಭರ್ಜರಿ ಪಾರ್ಟಿ ಮಾಡಿ, ಮುಂಬೈಗೆ ಮರಳಿದ್ದಾರೆ.

ಪಾರ್ಟಿಯಲ್ಲಿ ಸುಸಾನೆ ಖಾನ್ ತಮ್ಮ ಹಾಲಿ ಗೆಳೆಯ ಅರ್ಸ್ಲಾನ್ ಗೋನಿ ಜತೆ ಕಾಣಿಸಿಕೊಂಡಿದ್ದಾರೆ. ಮಾಜಿ ಪತ್ನಿಯೊಂದಿಗೆ ಹೃತಿಕ್ ಉತ್ತಮ ಸ್ನೇಹ ಸಂಬಂಧವನ್ನು ಹೃತಿಕ್ ಇಟ್ಟುಕೊಂಡಿದ್ದಾರೆ. ಇದರಿಂದಲೇ ಹೃತಿಕ್ ತಮ್ಮ ಗೆಳತಿಯೊಂದಿಗೆ ಒಟ್ಟಾಗಿ ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ. ಹೃತಿಕ್- ಸುಸಾನೆ ವೈವಾಹಿಕ ಸಂಬಂಧದಿಂದ ಬೇರ್ಪಟ್ಟಿದ್ದರೂ ಕೂಡ ತಮ್ಮ ಮಕ್ಕಳಿಗಾಗಿ ಸಮಯ ಮೀಸಲಿಡುತ್ತಾರೆ. ಒಟ್ಟಿನಲ್ಲಿ ತಮ್ಮ ಈಗಿನ ಕುಟುಂಬಗಳೊಂದಿಗೆ ಈರ್ವರೂ ಪರಸ್ಪರ ಆಪ್ತ ಬಾಂಧವ್ಯ ಹೊಂದಿದ್ದು, ಪಾರ್ಟಿಯಿಂದ ಸಾಬೀತಾಗಿದೆ.

Pooja Bedi shares pics with Sussane Khan and Hrithik

ಪೂಜಾ ಬೇಡಿ ಹಂಚಿಕೊಂಡ ಚಿತ್ರದಲ್ಲಿ ಸುಸಾನೆ ಖಾನ್ ಹಾಗೂ ಅರ್ಸ್ಲಾನ್ ಗೋನಿ (ಎಡ ಚಿತ್ರ), ಹೃತಿಕ್- ಸಬಾ (ಬಲ ಚಿತ್ರ)

ಸುಸಾನೆ ಖಾನ್ ಹಾಗೂ ಹೃತಿಕ್ ರೋಷನ್ ಬೇರ್ಪಟ್ಟ ಬಳಿಕ ಈರ್ವರೂ ತಮ್ಮತಮ್ಮ ವೈಯಕ್ತಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಸುಸಾನೆ ಖಾನ್ ಪ್ರಸ್ತುತ ಅರ್ಸ್ಲಾನ್ ಗೋನಿಯೊಂದಿಗೆ ಸುತ್ತಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಸುಸಾನೆ- ಅರ್ಸ್ಲಾನ್ ಜತೆಗಿನ ಪಾರ್ಟಿಯಲ್ಲಿ ಹೃತಿಕ್- ಸಬಾ ಭಾಗಿಯಾಗಿದ್ದಾರೆ. ಈ ಕಾರಣದಿಂದಲೇ ಫೋಟೋಗಳು ವೈರಲ್ ಆಗಿವೆ.

ಸುಸಾನೆ ಖಾನ್ ಸಹೋದರಿ ಫರಾಹ್ ಪೋಸ್ಟ್ ಇಲ್ಲಿದೆ:

ಸುಸಾನೆ ಖಾನ್ ಹಾಗೂ ಹೃತಿಕ್​ ರೋಷನ್​ 2000ರಲ್ಲಿ ಮದುವೆ ಆಗಿದ್ದರು. ಈ ಜೋಡಿಗೆ ಈರ್ವರು ಮಕ್ಕಳಿದ್ದಾರೆ. 2014ರಲ್ಲಿ ಈರ್ವರೂ ವಿಚ್ಛೇದನ ಪಡೆದಿದ್ದರು.

ಇದನ್ನೂ ಓದಿ: ಹೃತಿಕ್​ ಕುಟುಂಬದ ಜತೆ ಕಾಣಿಸಿಕೊಂಡ ಸಬಾ; ಮದುವೆ ಸೂಚನೆ?

Hrithik Roshan: ತಲೆಗೂದಲಿನಿಂದ ಮುಖ ಮುಚ್ಚಿಕೊಂಡ ಸಬಾ; ಕೈಹಿಡಿದು ಕರೆದೊಯ್ದ ಹೃತಿಕ್- ರೂಮರ್ ಜೋಡಿಯ ಫೋಟೋ ವೈರಲ್

Follow us on

Related Stories

Most Read Stories

Click on your DTH Provider to Add TV9 Kannada