Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೃತಿಕ್​ ಕುಟುಂಬದ ಜತೆ ಕಾಣಿಸಿಕೊಂಡ ಸಬಾ; ಮದುವೆ ಸೂಚನೆ?

ಹೃತಿಕ್​ ಮನೆಯಲ್ಲಿ ಸಬಾ ಸಮಯ ಕಳೆದಿದ್ದಾರೆ. ಹೃತಿಕ್​ ಕುಟುಂಬದ ಜತೆಗೆ ಅವರು  ಕಳೆದ ಫೋಟೋಗಳು ವೈರಲ್​ ಆಗುತ್ತಿವೆ. ಕಳೆದ ಭಾನುವಾರ ಸಬಾ ಅವರು ಹೃತಿಕ್​ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಅವರು ಅಲ್ಲಿಯೇ ಊಟ ಸವಿದಿದ್ದಾರೆ.

ಹೃತಿಕ್​ ಕುಟುಂಬದ ಜತೆ ಕಾಣಿಸಿಕೊಂಡ ಸಬಾ; ಮದುವೆ ಸೂಚನೆ?
ಸಬಾ ಆಜದ್​-ಹೃತಿಕ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Feb 24, 2022 | 5:10 PM

ಬಾಲಿವುಡ್​ನ ಖ್ಯಾತ ಹೃತಿಕ್​ ರೋಷನ್ (Hrithik Roshan)​ ಹಾಗೂ ನಟಿ ಸಬಾ ಆಜಾದ್ (Saba Azad)​ ಬಗ್ಗೆ ಕೇಳಿ ಬರುತ್ತಿರುವ ಸುದ್ದಿಗಳು ಒಂದೆರಡಲ್ಲ. ಇತ್ತೀಚೆಗೆ ಇಬ್ಬರೂ ಸುತ್ತಾಡುತ್ತಿರುವ ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿತ್ತು. ಆಗಲೇ ಹೃತಿಕ್​ ಮತ್ತು ಸಬಾ ಮಧ್ಯೆ (Hrithik Roshan And Saba Azad Dating) ಏನೋ ನಡೆಯುತ್ತಿದೆ ಎನ್ನುವ ಸುದ್ದಿ ಹುಟ್ಟಿಕೊಂಡಿತ್ತು. ಇವರ ಸಂಬಂಧ ತುಂಬಾನೇ ಮುಂದುವರಿದಿದೆ ಎನ್ನುವ ಮಾತು ಈಗ ಕೇಳಿ ಬರುತ್ತಿದೆ. ಇವರ ಬಗ್ಗೆ ಈಗ ಹೊಸ ಅಪ್​ಡೇಟ್​ ಒಂದು ಸಿಕ್ಕಿದೆ. ಈ ವಿಚಾರ ಕೇಳಿ ಅನೇಕ ಅಭಿಮಾನಿಗಳು ಅಚ್ಚರಿ ಹೊರ ಹಾಕಿದ್ದಾರೆ. ಇತ್ತೀಚೆಗೆ ಹೃತಿಕ್​ ಕುಟುಂಬವನ್ನು ಸಬಾ ಭೇಟಿ ಮಾಡಿದ್ದಾರೆ. ಈ ಫೋಟೋಗಳು ವೈರಲ್​ ಆಗುತ್ತಿವೆ.

ಸುಸಾನೆ ಖಾನ್ ಹಾಗೂ ಹೃತಿಕ್​ ರೋಷನ್​ ಮದುವೆ ಆಗಿದ್ದರು. ಇವರಿಗೆ ಇಬ್ಬರು ಮಕ್ಕಳು. 2000ರಲ್ಲಿ ಮದುವೆ ಆಗಿದ್ದ ಈ ಜೋಡಿ 2014ರಲ್ಲಿ ವಿಚ್ಛೇದನ ಪಡೆದಿತ್ತು. ಆ ಬಳಿಕ ಇಬ್ಬರೂ ಅನೇಕ ಬಾರಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಮಕ್ಕಳನ್ನು ಟ್ರಿಪ್​ಗೆ ಕರೆದುಕೊಂಡು ಹೋಗಿದ್ದಿದೆ. ಆದರೆ, ಹೃತಿಕ್​ ಸಂಪೂರ್ಣವಾಗಿ ಮೂವ್​ಆನ್​ ಆಗಿದ್ದಾರೆ. ಹಾಗಂತ ಹೃತಿಕ್ ಅವರು ರಿಲೇಷನ್​ಶಿಪ್​ ವಿಚಾರದಲ್ಲಿ ಸುಮ್ಮನೆ ಕೂತಿಲ್ಲ. ಅವರು ಸಬಾ ಜತೆ ಡೇಟಿಂಗ್​ ಮಾಡುತ್ತಿದ್ದಾರೆ.

ಹೃತಿಕ್​ಗೆ ಗೆಳೆಯರೊಬ್ಬರ ಮೂಲಕ ಸಬಾ ಪರಿಚಯ ಆಗಿದೆ. ಇಬ್ಬರ ಟೇಸ್ಟ್​ ಒಂದೇ ರೀತಿ ಇದ್ದಿದ್ದರಿಂದ ಬೇಗ ಹತ್ತಿರವಾಗಿದ್ದಾರೆ. ಆ ಬಳಿಕ ಅನೇಕ ಬಾರಿ ಇವರು ಭೇಟಿ ಆಗಿದ್ದಾರೆ. ಆ ಬಳಿಕ ಇವರು ಡೇಟಿಂಗ್​ ಶುರುಹಚ್ಚಿಕೊಂಡಿದ್ದಾರೆ. ಈಗ ಹೃತಿಕ್​ ಮನೆಯಲ್ಲಿ ಸಬಾ ಸಮಯ ಕಳೆದಿದ್ದಾರೆ. ಹೃತಿಕ್​ ಕುಟುಂಬದ ಜತೆಗೆ ಅವರು  ಕಳೆದ ಫೋಟೋಗಳು ವೈರಲ್​ ಆಗುತ್ತಿವೆ. ಕಳೆದ ಭಾನುವಾರ ಸಬಾ ಅವರು ಹೃತಿಕ್​ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಅವರು ಅಲ್ಲಿಯೇ ಊಟ ಸವಿದಿದ್ದಾರೆ. ಇದು ಮದುವೆಯ ಸೂಚನೆಯೇ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ.

ನಟ ಹೃತಿಕ್​ ರೋಷನ್​ ಅವರು ವೈಯಕ್ತಿಕ ವಿಚಾರವನ್ನು ಹೆಚ್ಚು ಗುಟ್ಟಾಗಿ ಇಡೋಕೆ ನೋಡುತ್ತಾರೆ. ಏನೇ ಇದ್ದರೂ ಅವರು ಮಾಧ್ಯಮದ ಮುಂದೆ ಬಾಯ್ಬಿಡುವುದಿಲ್ಲ. ಇದು ಇಂದು ನಿನ್ನೆಯ ವಿಚಾರ ಅಲ್ಲ. ಹೃತಿಕ್​ ಈ ಮೊದಲಿನಿಂದಲೂ ಇದೇ ನಿಯಮ ಪಾಲಿಸಿಕೊಂಡು ಬಂದಿದ್ದಾರೆ. ಆದರೆ, ಅವರು ದೊಡ್ಡ ಸೆಲೆಬ್ರಿಟಿ. ಎಲ್ಲಾ ವಿಚಾರವನ್ನು ಗುಟ್ಟಾಗಿ ಇಡೋಕೆ ಸಾಧ್ಯವಿಲ್ಲ. ಕೆಲ ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ಲೀಕ್​ ಆಗಿ ಬಿಡುತ್ತವೆ. ಈಗ ಹೃತಿಕ್​ ವಿಚಾರದಲ್ಲೂ ಅದೇ ಆಗಿದೆ.

ಇದನ್ನೂ ಓದಿ: Vikram Vedha: ‘ವಿಕ್ರಮ್ ವೇದ’ ಚಿತ್ರದ ಹೃತಿಕ್​ ರೋಷನ್​ ಲುಕ್​ ರಿವೀಲ್​; ಫ್ಯಾನ್ಸ್​ ಫಿದಾ

‘ಹೃತಿಕ್​ ರೋಷನ್​ ಜತೆ ನೀವು ಡೇಟಿಂಗ್​ ಮಾಡ್ತಾ ಇದ್ದೀರಾ?’; ನೇರ ಪ್ರಶ್ನೆಗೆ ಸಬಾ ಉತ್ತರ ಏನಿತ್ತು?

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು