‘ಇದು ಬರೀ ಸಿನಿಮಾ ಅಲ್ಲ, ಮ್ಯಾಜಿಕ್​’: ‘ಗಂಗೂಬಾಯಿ ಕಾಠಿಯಾವಾಡಿ’ ನೋಡಿದ ಸೆಲೆಬ್ರಿಟಿಗಳ ವಿಮರ್ಶೆ

ಬಾಲಿವುಡ್​ ಸೆಲೆಬ್ರಿಟಿಗಳಾದ ರಿತೇಶ್​ ದೇಶಮುಖ್​, ವಿಕ್ಕಿ ಕೌಶಲ್​, ಶಶಾಂತ್​ ಕೈತಾನ್​, ರಿದ್ಧಿಮಾ ಕಪೂರ್​ ಮುಂತಾದವರು ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ವೀಕ್ಷಿಸಿದ್ದಾರೆ. ಎಲ್ಲರಿಗೂ ಈ ಚಿತ್ರ ಇಷ್ಟ ಆಗಿದೆ.

‘ಇದು ಬರೀ ಸಿನಿಮಾ ಅಲ್ಲ, ಮ್ಯಾಜಿಕ್​’: ‘ಗಂಗೂಬಾಯಿ ಕಾಠಿಯಾವಾಡಿ’ ನೋಡಿದ ಸೆಲೆಬ್ರಿಟಿಗಳ ವಿಮರ್ಶೆ
ಆಲಿಯಾ ಭಟ್
Follow us
TV9 Web
| Updated By: ಮದನ್​ ಕುಮಾರ್​

Updated on:Feb 25, 2022 | 8:51 AM

ಖ್ಯಾತ ನಟಿ ಆಲಿಯಾ ಭಟ್​ ಅಭಿನಯದ ‘ಗಂಗೂಬಾಯಿ ಕಾಠಿಯಾವಾಡಿ’ (Gangubai Kathiawadi) ಸಿನಿಮಾ ಬಿಡುಗಡೆ ಆಗಿದೆ. ಫೆ.25ರಂದು ಅದ್ದೂರಿಯಾಗಿ ತೆರೆಕಂಡಿರುವ ಈ ಚಿತ್ರವನ್ನು ಬಾಲಿವುಡ್​ ಸೆಲೆಬ್ರಿಟಿಗಳು ಎರಡು ದಿನ ಮೊದಲೇ ಕಣ್ತುಂಬಿಕೊಂಡಿದ್ದಾರೆ. ಈ ಚಿತ್ರಕ್ಕೆ ಸಂಜಯ್​ ಲೀಲಾ ಬನ್ಸಾಲಿ ನಿರ್ದೇಶನ ಮಾಡಿದ್ದು, ಆಲಿಯಾ ಭಟ್​ (Alia Bhatt) ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಹುಮಾ ಖುರೇಶಿ, ಅಜಯ್​ ದೇವಗನ್​, ವಿಜಯ್​ ರಾಝ್​ ಕೂಡ ಅಭಿನಯಿಸಿದ್ದಾರೆ. ಟ್ರೇಲರ್​ ಮತ್ತು ಹಾಡುಗಳ ಮೂಲಕ ಸದ್ದು ಮಾಡಿದ್ದ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾಗೆ ಚಿತ್ರಮಂದಿರದಲ್ಲಿ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಈ ಸಿನಿಮಾ ಬಿಡುಗಡೆ ಆಗುವುದಕ್ಕೂ ಮುನ್ನವೇ ಸೆಲೆಬ್ರಿಟಿಗಳಿಗಾಗಿ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಸಿನಿಮಾ ಕಣ್ತುಂಬಿಕೊಂಡ ಬಾಲಿವುಡ್​ ಸೆಲೆಬ್ರಿಟಿಗಳು ಮನಸಾರೆ ಹೊಗಳಿದ್ದಾರೆ. ಇದರಿಂದ ಚಿತ್ರತಂಡಕ್ಕೆ ದೊಡ್ಡ ಬಲ ಸಿಕ್ಕಂತಾಗಿದೆ. ಆಲಿಯಾ ನಟನೆ ಹೇಗಿದೆ? ನಿರ್ದೇಶಕ ಸಂಜಯ್​ ಲೀಲಾ ಬನ್ಸಾಲಿ (Sanjay Leela Bhansali) ಅವರು ಈ ಬಾರಿ ಏನು ಮೋಡಿ ಮಾಡಿದ್ದಾರೆ? ಈ ಕುರಿತು ಬಾಲಿವುಡ್​ ಸೆಲೆಬ್ರಿಟಿಗಳು ಮಾತನಾಡಿದ್ದಾರೆ. ರಿಲೀಸ್​ಗೂ ಮುನ್ನ ಹಲವು ವಿವಾದಗಳಿಗೆ ಕಾರಣವಾಗಿದ್ದ ಈ ಚಿತ್ರಕ್ಕೆ ಈಗ ಉತ್ತಮ ವಿಮರ್ಶೆ ಸಿಕ್ಕಿದೆ.

ಬಾಲಿವುಡ್​ ಸೆಲೆಬ್ರಿಟಿಗಳಾದ ರಿತೇಶ್​ ದೇಶಮುಖ್​, ವಿಕ್ಕಿ ಕೌಶಲ್​, ಶಶಾಂತ್​ ಕೈತಾನ್​, ರಿದ್ಧಿಮಾ ಕಪೂರ್​ ಮುಂತಾದವರು ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ವೀಕ್ಷಿಸಿದ್ದಾರೆ. ಎಲ್ಲರಿಗೂ ಈ ಚಿತ್ರ ಇಷ್ಟ ಆಗಿದೆ. ‘ಈ ಸಿನಿಮಾವನ್ನು ಕಟ್ಟಿಕೊಡುವಲ್ಲಿ ತೋರಿದ ಬುದ್ಧಿವಂತಿಕೆ ಕಂಡು ನಾನು ಬೆರಗಾದೆ. ಸಂಜಯ್​ ಲೀನಾ ಬನ್ಸಾಲಿ ಸರ್​.. ನೀವು ಮಾಸ್ಟರ್​! ಆಲಿಯಾ ಭಟ್​ ಬಗ್ಗೆ ಏನು ಹೇಳಬೇಕು ಎಂಬುದೇ ತಿಳಿಯುತ್ತಿಲ್ಲ. ಗಂಗೂಬಾಯಿ ಪಾತ್ರದಲ್ಲಿ ಆಲಿಯಾ ನಟನೆ ಅಮೇಜಿಂಗ್​. ನಿಮಗೆ ಹ್ಯಾಟ್ಸ್​ಆಫ್​. ದೊಡ್ಡ ಪರದೆಯ ಮ್ಯಾಜಿಕ್​ ಇದು. ಈ ಸಿನಿಮಾವನ್ನು ಯಾರೂ ಮಿಸ್​ ಮಾಡಿಕೊಳ್ಳಬೇಡಿ’ ಎಂದು ವಿಕ್ಕಿ ಕೌಶಲ್​ ಅವರು ತಮ್ಮ ವಿಮರ್ಶೆ ಹಂಚಿಕೊಂಡಿದ್ದಾರೆ.

ಈ ಸಿನಿಮಾದ ವಿಶೇಷ ಪ್ರದರ್ಶನಕ್ಕೆ ಆಲಿಯಾ ಭಟ್​ ಪ್ರಿಯಕರ ರಣಬೀರ್​ ಕಪೂರ್​ ಬಂದಿರಲಿಲ್ಲ. ರಣಬೀರ್​ ಕಪೂರ್ ಅವರ ಸಹೋದರಿ ರಿದ್ಧಿಮಾ ಕಪೂರ್​ ಅವರು ಸಿನಿಮಾ ನೋಡಿ ಖುಷಿಪಟ್ಟಿದ್ದಾರೆ. ‘ಆಲಿಯಾ ಭಟ್​ ಮತ್ತು ಸಂಜಯ್​ ಲೀಲಾ ಬನ್ಸಾಲಿ ಅವರು ಇಬ್ಬರು ಲೆಜೆಂಡ್​ಗಳು. ಅವರಿಬ್ಬರು ಜೊತೆಯಾಗಿ ಈ ಮ್ಯಾಜಿಕ್​ ಅನ್ನು ಕಟ್ಟಿಕೊಟ್ಟಿದ್ದಾರೆ. ಎಂಥಾ ಫೆಂಟಾಸ್ಟಿಕ್​ ಸಿನಿಮಾ! ಆಲಿಯಾ ನಟನೆ ಅತ್ಯುತ್ಯಮವಾಗಿದೆ’ ಎಂದು ರಿದ್ಧಿಮಾ ಕಪೂರ್​ ಹೇಳಿದ್ದಾರೆ.

ಖ್ಯಾತ ನಿರ್ದೇಶಕ ಶಶಾಂಕ್​ ಕೈತಾನ್​ ಅವರು ಆಲಿಯಾ ಭಟ್​ ಅಭಿನಯವನ್ನು ಕೊಂಡಾಡಿದ್ದಾರೆ. ಈ ಸಿನಿಮಾದಲ್ಲಿ ಬರುವ ಒಂದು ಫೇಮಸ್​ ಡೈಲಾಗ್​ ರೀತಿಯೇ ಅವರು ಆಲಿಯಾರನ್ನು ಹೊಗಳಿದ್ದಾರೆ. ‘ಶಕ್ತಿ, ಸಂಪತ್ತು, ಸದ್ಬುದ್ಧಿ ಮತ್ತು ಪ್ರತಿಭೆ ಈ ಹುಡುಗಿಯ ಬಳಿ ಇದೆ’ ಎಂದು ಅವರು ಹೇಳಿದ್ದಾರೆ.

ನಟ ರಿತೇಶ್​ ದೇಶಮುಖ್​ ಅವರಿಗೂ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ತುಂಬ ಇಷ್ಟ ಆಗಿದೆ. ‘ಕಳೆದ ರಾತ್ರಿ ಈ ಸಿನಿಮಾವನ್ನು ನೋಡಿದೆ. ಇದೊಂದು ಮ್ಯಾಜಿಕಲ್​ ಅನುಭವ. ಸಿನಿಮಾ ಕಟ್ಟಿಕೊಡುವುದರಲ್ಲಿ ಸಂಜಯ್​ ಲೀಲಾ ಬನ್ಸಾಲಿ ಅವರು ನಿಜವಾದ ಮಾಸ್ಟರ್​. ಸಿನಿಮಾದ ಪ್ರತಿ ಫ್ರೇಮ್​ ಕೂಡ ಪರ್ಫೆಕ್ಟ್​ ಆಗಿದೆ. ಆಲಿಯಾ ಭಟ್​ ನೀವು ಬಂಗಾರ. ಗಂಗೂಬಾಯಿ ಪಾತ್ರದಲ್ಲಿ ನಿಮ್ಮ ನಟನೆ ಅದ್ಭುತ’ ಎಂದು ರಿತೇಶ್​ ದೇಶಮುಖ್​ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ:

ಬ್ರೇಕಪ್​ಗಳ ರಾಜ ರಣಬೀರ್​ ಜತೆ ಆಲಿಯಾ ಮದುವೆ ಆಗ್ತಿರೋದು ಯಾಕೆ? ಕೊನೆಗೂ ಬಯಲಾಯ್ತು ಸತ್ಯ

ಕಂಗನಾ ಮಾಡಿದ ಟೀಕೆಗೆ ಒಂದೇ ಮಾತಲ್ಲಿ ತಿರುಗೇಟು ನೀಡಿದ ಆಲಿಯಾ; ಶುಕ್ರವಾರವೇ ಭವಿಷ್ಯ ನಿರ್ಧಾರ

Published On - 8:50 am, Fri, 25 February 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ