AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನಗೆ ಎಲ್ಲವೂ ಗೊತ್ತಿದೆ’ ಎಂದು ಮೆರೆಯುತ್ತಿದ್ದ ರಣವೀರ್​ ಸಿಂಗ್​; ನಟನ ಸೊಕ್ಕು ಮುರಿದ ನಿರ್ದೇಶಕ

ಸಂಜಯ್​ ಲೀಲಾ ಬನ್ಸಾಲಿ ಮೊದಲ ಬಾರಿಗೆ ಒಟ್ಟಾಗಿ ಕೆಲಸ ಮಾಡುವುದಕ್ಕೂ ಮೊದಲು ಮೂರು ಸಿನಿಮಾಗಳಲ್ಲಿ ರಣವೀರ್​ ನಟಿಸಿದ್ದರು. ತಮಗೆ ಎಲ್ಲವೂ ಗೊತ್ತಿದೆ ಎಂಬ ರೀತಿಯಲ್ಲಿ ರಣವೀರ್ ಇದ್ದರು.

‘ನನಗೆ ಎಲ್ಲವೂ ಗೊತ್ತಿದೆ’ ಎಂದು ಮೆರೆಯುತ್ತಿದ್ದ ರಣವೀರ್​ ಸಿಂಗ್​; ನಟನ ಸೊಕ್ಕು ಮುರಿದ ನಿರ್ದೇಶಕ
ಬನ್ಸಾಲಿ-ರಣವೀರ್​
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Feb 26, 2022 | 12:46 PM

Share

ಒಂದೆರಡು ಸಿನಿಮಾ ಮಾಡಿದ ಬಳಿಕ ಕೆಲ ನಟ/ನಟಿಯರಿಗೆ ಸೊಕ್ಕು ಬಂದು ಬಿಡುತ್ತದೆ. ನನಗೆ ಎಲ್ಲವೂ ಗೊತ್ತಿದೆ ಎಂಬ ಗುಂಗನ್ನು ತಲೆಗೆ ಹತ್ತಿಸಿಕೊಂಡು ತಿರುಗಾಡುತ್ತಾರೆ. ಧಿಮಾಕಿನ ಮಾತುಗಳನ್ನು ಆಡುತ್ತಾರೆ. ಇದಕ್ಕೆ ರಣವೀರ್​ ಸಿಂಗ್ (Ranveer Singh)​ ಕೂಡ ಹೊರತಾಗಿರಲಿಲ್ಲ. ಈ ವಿಚಾರವನ್ನು ನಾವು ಹೇಳುತ್ತಿಲ್ಲ. ಸ್ವತಃ ರಣವೀರ್​ ಸಿಂಗ್​ ಅವರೇ ಹೇಳಿಕೊಂಡಿದ್ದಾರೆ. ಖ್ಯಾತ ನಿರ್ದೇಶಕ ಸಂಜಯ್​ ಲೀಲಾ ಬನ್ಸಾಲಿ (Sanjay Leela Bhansali) ಅವರು ರಣವೀರ್​ ಅವರ ಸೊಕ್ಕನ್ನು ಮುರಿದಿದ್ದರು. ಈ ಬಗ್ಗೆ ರಣವೀರ್ ಅವರು ಹೇಳಿಕೊಂಡಿದ್ದಾರೆ. ರಣವೀರ್ ಸಿಂಗ್​ ಹಾಗೂ ಸಂಜಯ್​ ಲೀಲಾ ಬನ್ಸಾಲಿ ಮೂರು ಸಿನಿಮಾದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಬನ್ಸಾಲಿ ನಿರ್ದೇಶನದ ‘ರಾಮ್​ ಲೀಲಾ’, ‘ಬಾಜಿರಾವ್​ ಮಸ್ತಾನಿ’ ಹಾಗೂ ‘ಪದ್ಮಾವತ್​’ ಸಿನಿಮಾಗಳಲ್ಲಿ (Padmavat Movie) ಮುಖ್ಯಭೂಮಿಕೆ ನಿರ್ವಹಿಸಿದ್ದರು ರಣವೀರ್. ಈ ಚಿತ್ರಗಳಲ್ಲಿ ಅವರು ಅದ್ಭುತ ನಟನೆ ಮಾಡಿದ್ದಾರೆ. ಈ ಮೂರು ಸಿನಿಮಾಗಳು ಸೂಪರ್ ಹಿಟ್​ ಆಗಿವೆ. ಬನ್ಸಾಲಿ ಸಿಗುವುದಕ್ಕೂ ಮೊದಲು ರಣವೀರ್​ ಸಿಂಗ್​ ಬೇರೆಯದೇ ಲೋಕದಲ್ಲಿದ್ದರು.

ಸಂಜಯ್​ ಲೀಲಾ ಬನ್ಸಾಲಿ ಮೊದಲ ಬಾರಿಗೆ ಒಟ್ಟಾಗಿ ಕೆಲಸ ಮಾಡುವುದಕ್ಕೂ ಮೊದಲು ಮೂರು ಸಿನಿಮಾಗಳಲ್ಲಿ ರಣವೀರ್​ ನಟಿಸಿದ್ದರು. ತಮಗೆ ಎಲ್ಲವೂ ಗೊತ್ತಿದೆ ಎಂಬ ರೀತಿಯಲ್ಲಿ ರಣವೀರ್ ಇದ್ದರು. ರಣವೀರ್​ ಅವರನ್ನು ಓರ್ವ ಕಲಾವಿದನನ್ನಾಗಿ ಮಾಡಿದ್ದು ಬನ್ಸಾಲಿ ಎಂದು ಹೆಮ್ಮೆಯಿಂದ ಅವರು ಹೇಳಿಕೊಳ್ಳುತ್ತಾರೆ.

‘ನನಗೆ ಎಲ್ಲವೂ ಗೊತ್ತಿದೆ ಎನ್ನುವ ಭಾವನೆಯಲ್ಲೇ ನಾನು ಇರುತ್ತಿದೆ. ಆದರೆ, ಇದನ್ನು ಬನ್ಸಾಲಿ ಹುಸಿ ಮಾಡಿದರು. ನನ್ನನ್ನು ಹಿಂಡಿ ತೊಪ್ಪೆ ಮಾಡಿದರು. ನಾನು ಅದರಿಂದ ಕಲಾವಿದನಾಗಿ ಬದಲಾದೆ. ಈ ವಿಚಾರದಲ್ಲಿ ನಾನು ಅವರಿಗೆ ಸದಾ ಋಣಿಯಾಗಿರುತ್ತೇನೆ’ ಎಂದಿದ್ದಾರೆ ರಣವೀರ್​ ಸಿಂಗ್​.

‘ಕಲಾವಿದನಾಗಿ ನನ್ನ ವ್ಯಾಪ್ತಿ ನಿಜವಾಗಿಯೂ ವಿಸ್ತರಿಸಿದೆ. ನನ್ನಲ್ಲಿರುವ ನಟನಾ ಕಲೆಗೆ ಒಂದು ರೂಪ ನೀಡುವಲ್ಲಿ ಅವರ ಪಾತ್ರ ದೊಡ್ಡದಿದೆ. ಅದಕ್ಕೆ ನಾನು ಅವರಿಗೆ ಕೃತಜ್ಞನಾಗಿದ್ದೇನೆ. ನಿರ್ದೇಶಕರಾಗಿ ಅವರು ಅದ್ಭುತ ಆಲೋಚನೆಗಳನ್ನು ಹೊಂದಿದ್ದಾರೆ’ ಎಂಬುದು ರಣವೀರ್​ ಸಿಂಗ್​ ಅಭಿಪ್ರಾಯ.

ಗಂಗೂಬಾಯಿ ಕಾಠಿಯಾವಾಡಿಗೆ ಮೆಚ್ಚುಗೆ:

ಬಾಲಿವುಡ್​ ಸೆಲೆಬ್ರಿಟಿಗಳಾದ ರಿತೇಶ್​ ದೇಶಮುಖ್​, ವಿಕ್ಕಿ ಕೌಶಲ್​, ಶಶಾಂತ್​ ಕೈತಾನ್​, ರಿದ್ಧಿಮಾ ಕಪೂರ್​ ಮುಂತಾದವರು ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ವೀಕ್ಷಿಸಿದ್ದಾರೆ. ಎಲ್ಲರಿಗೂ ಈ ಚಿತ್ರ ಇಷ್ಟ ಆಗಿದೆ. ‘ಈ ಸಿನಿಮಾವನ್ನು ಕಟ್ಟಿಕೊಡುವಲ್ಲಿ ತೋರಿದ ಬುದ್ಧಿವಂತಿಕೆ ಕಂಡು ನಾನು ಬೆರಗಾದೆ. ಸಂಜಯ್​ ಲೀನಾ ಬನ್ಸಾಲಿ ಸರ್​.. ನೀವು ಮಾಸ್ಟರ್​! ಆಲಿಯಾ ಭಟ್​ ಬಗ್ಗೆ ಏನು ಹೇಳಬೇಕು ಎಂಬುದೇ ತಿಳಿಯುತ್ತಿಲ್ಲ. ಗಂಗೂಬಾಯಿ ಪಾತ್ರದಲ್ಲಿ ಆಲಿಯಾ ನಟನೆ ಅಮೇಜಿಂಗ್​. ನಿಮಗೆ ಹ್ಯಾಟ್ಸ್​ಆಫ್​. ದೊಡ್ಡ ಪರದೆಯ ಮ್ಯಾಜಿಕ್​ ಇದು. ಈ ಸಿನಿಮಾವನ್ನು ಯಾರೂ ಮಿಸ್​ ಮಾಡಿಕೊಳ್ಳಬೇಡಿ’ ಎಂದು ವಿಕ್ಕಿ ಕೌಶಲ್​ ಅವರು ತಮ್ಮ ವಿಮರ್ಶೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಇನ್ನೂ ಐದು ಬಯೋಪಿಕ್​ನಲ್ಲಿ ನಟಿಸಲಿದ್ದಾರೆ ರಣವೀರ್​ ಸಿಂಗ್​? ‘83’ ಚಿತ್ರದಿಂದ ಬದಲಾಯ್ತು ಅದೃಷ್ಟ

‘ಇದು ರಣವೀರ್​ ಸಿಂಗ್​ ಡ್ರೆಸ್​’; ಬಟ್ಟೆ ವಿಚಾರದಲ್ಲಿ ಟ್ರೋಲ್​ ಆದ ದೀಪಿಕಾ ಪಡುಕೋಣೆ

Published On - 6:00 am, Sat, 26 February 22

ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು