Urfi Javed: ರಾಮ್ ಚರಣ್ ನೆಚ್ಚಿನ ನಟ ಎಂದ ಉರ್ಫಿ ‘ಕೆಜಿಎಫ್’ ಬಗ್ಗೆ ಹೇಳಿದ್ದೇನು? ಇಲ್ಲಿದೆ ನೋಡಿ

Urfi Javed: ರಾಮ್ ಚರಣ್ ನೆಚ್ಚಿನ ನಟ ಎಂದ ಉರ್ಫಿ ‘ಕೆಜಿಎಫ್’ ಬಗ್ಗೆ ಹೇಳಿದ್ದೇನು? ಇಲ್ಲಿದೆ ನೋಡಿ
ಉರ್ಫಿ ಜಾವೇದ್, ಯಶ್, ರಾಮ್ ಚರಣ್ (ಸಾಂದರ್ಭಿಕ ಚಿತ್ರ)

KGF Chapter 2 | Yash: ದೇಶಾದ್ಯಂತ ‘ಕೆಜಿಎಫ್ 2’ ಜ್ವರ ಜೋರಾಗಿದೆ. ಇದಕ್ಕೆ ಉರ್ಫಿ ಕೂಡ ಹೊರತಾಗಿಲ್ಲ. ಛಾಯಾಗ್ರಾಹಕರೋರ್ವರು ಕೇಳಿದ ಪ್ರಶ್ನೆಗೆ ಉರ್ಫಿ ಉತ್ತರಿಸಿದ್ದಾರೆ. ಈ ವೇಳೆ ಅವರು ಕೆಜಿಎಫ್ 2 ಹಾಗೂ ರಾಮ್​ ಚರಣ್ ಬಗ್ಗೆ ಕುತೂಹಲಕರ ವಿಚಾರಗಳನ್ನೂ ಹಂಚಿಕೊಂಡಿದ್ದಾರೆ.

TV9kannada Web Team

| Edited By: shivaprasad.hs

Apr 07, 2022 | 11:38 AM

ಉರ್ಫಿ ಜಾವೇದ್ (Urfi Javed) ಸದ್ಯ ಫ್ಯಾಶನ್ ಸೆನ್ಸೇಶನ್ ಎಂದರೆ ತಪ್ಪಿಲ್ಲ. ಹಾಗಂತ ಅವರ ವಿಭಿನ್ನ ಗೆಟಪ್​ಗಳು ಬಹಳಷ್ಟು ಸುದ್ದಿಯಾದಷ್ಟೇ ಟ್ರೋಲ್ ಕೂಡ ಆಗುತ್ತವೆ. ಇದರಿಂದ ಒಂದಲ್ಲ ಒಂದು ಕಾರಣಕ್ಕೆ ಉರ್ಫಿ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ದೇಶಾದ್ಯಂತ ‘ಕೆಜಿಎಫ್ 2’ (KGF Chapter 2) ಜ್ವರ ಜೋರಾಗಿದೆ. ಇದಕ್ಕೆ ಉರ್ಫಿ ಕೂಡ ಹೊರತಾಗಿಲ್ಲ. ಛಾಯಾಗ್ರಾಹಕರೋರ್ವರು ಕೇಳಿದ ಪ್ರಶ್ನೆಗೆ ಉರ್ಫಿ ಉತ್ತರಿಸಿದ್ದಾರೆ. ಈ ವೇಳೆ ಅವರು ಕೆಜಿಎಫ್ 2 ಹಾಗೂ ರಾಮ್​ ಚರಣ್ (Ram Charan) ಬಗ್ಗೆ ಕುತೂಹಲಕರ ವಿಚಾರಗಳನ್ನೂ ಹಂಚಿಕೊಂಡಿದ್ದಾರೆ. ಇದೀಗ ಉರ್ಫಿ ‘ಕೆಜಿಎಫ್’ ಕುರಿತು ನೀಡಿದ ಉತ್ತರ ಸಖತ್ ಚರ್ಚೆಯಾಗುತ್ತಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ‘ಕೆಜಿಎಫ್ 2’ ಟ್ರೇಲರ್ ವೀಕ್ಷಿಸಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ‘‘ಟ್ರೇಲರ್ ಕೂಡ ನೋಡಿಲ್ಲ. ‘ಕೆಜಿಎಫ್ 1’ ಕೂಡ ನೋಡಿಲ್ಲ. ಇದರಿಂದ ಬೇಸರವಾಗಿದೆ’’ ಎಂದಿದ್ದಾರೆ ಉರ್ಫಿ ಜಾವೇದ್!

ಮುಂಬೈ ಏರ್​ಪೋರ್ಟ್​​ನಲ್ಲಿ ಕಾಣಿಸಿಕೊಂಡಿದ್ದ ಉರ್ಫಿ ಜಾವೇದ್, ನೀಲಿ ವರ್ಣದ ದಿರಿಸಿನಲ್ಲಿ ಮಿಂಚುತ್ತಿದ್ದರು. ಪಾಪರಾಜಿಗಳೊಂದಿಗೆ ಮಾತನಾಡಲು, ಫೋಟೋಗೆ ಪೋಸ್ ನೀಡಲು ಉರ್ಫಿ ಹಿಂದೆಸರಿಯುವವರಲ್ಲ. ಹಾಗೆಯೇ ಈ ಬಾರಿಯೂ ಛಾಯಾಗ್ರಾಹಕರೋರ್ವರೊಡನೆ ಮಾತನಾಡಿದ್ದಾರೆ. ಈ ವೇಳೆ ದಕ್ಷಿಣ ಭಾರತೀಯ ಚಿತ್ರರಂಗ, ಕೆಜಿಎಫ್ ಬಗ್ಗೆ ಮಾತು ಬಂದಿದೆ.

ಸದ್ಯ ಎಲ್ಲೆಡೆ ಹವಾ ಸೃಷ್ಟಿಸಿರುವ ‘ಕೆಜಿಎಫ್ 2’ ಚಿತ್ರದ ಟ್ರೇಲರ್ ವೀಕ್ಷಿಸಿದ್ದಾರಾ ಎಂದು ಪಾಪರಾಜಿ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಉರ್ಫಿ, ‘ಇಲ್ಲ, ನಾನಿನ್ನೂ ಕೆಜಿಎಫ್ 1 ನೋಡಿಲ್ಲ. ನನಗೆ ಇದರಿಂದ ಬೇಸರವಾಗಿದೆ. ಹೀಗಾಗಿ ಎಲ್ಲವನ್ನೂ ಒಟ್ಟಿಗೇ ನೋಡಲಿದ್ದೇನೆ’’ ಎಂದಿದ್ದಾರೆ.

ದಕ್ಷಿಣ ಭಾರತದ ತಾರೆಯರು ದೇಶದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಹೀಗಾಗಿ ಉರ್ಫಿಗೆ ನಿಮ್ಮ ನೆಚ್ಚಿನ ನಟ ಯಾರು ಎಂಬ ಪ್ರಶ್ನೆಯನ್ನು ಪಾಪರಾಜಿಗಳು ಕೇಳಿದ್ದರು. ಇದಕ್ಕೆ ಉತ್ತರಿಸುತ್ತಾ ರಾಮ್​ ಚರಣ್ ಎಂದು ಹೇಳಿದ್ದಾರೆ ಉರ್ಫಿ. ಸದ್ಯ ಬಿಗ್ ಬಾಸ್ ಒಟಿಟಿ ಸ್ಪರ್ಧಿಯಾಗಿದ್ದ ಉರ್ಫಿ ಮಾತುಕತೆಯ ವಿಡಿಯೋಗಳು ವೈರಲ್ ಆಗಿವೆ.

ಉರ್ಫಿ ಕೆಜಿಎಫ್ ಬಗ್ಗೆ ಮಾತನಾಡಿರುವ ವಿಡಿಯೋ ಇಲ್ಲಿದೆ:

ಹಿಂದಿ ಕಿರುತೆರೆಯಲ್ಲಿ ಹಾಗೂ ಬಿಗ್​ ಬಾಸ್ ಮೂಲಕ ಖ್ಯಾತಿ ಗಳಿಸಿದ ಉರ್ಫಿ ಜಾವೇದ್, ನಟಿಯಾಗಿ ಇನ್ನಷ್ಟೇ ದೊಡ್ಡ ಗೆಲುವನ್ನು ಕಾಣಬೇಕಿದೆ. ತಮ್ಮ ಬೋಲ್ಡ್ ಅವತಾರಕ್ಕೆ ಖ್ಯಾತ ನಟಿಯರೇ ಮೂಗು ಮುರಿಯುತ್ತಾರೆ ಎಂದು ಇತ್ತೀಚೆಗೆ ನಟಿ ನೋವು ತೋಡಿಕೊಂಡಿದ್ದರು. ನಟನೆಯಲ್ಲಿ ಇನ್ನಷದಟೇ ಹೆಸರು ಮಾಡಬೇಕಿದ್ದರೂ ಕೂಡ ಫ್ಯಾಶನ್ ವಿಚಾರದಲ್ಲಿ ಉರ್ಫಿಗೆ ಈಗಾಗಲೇ ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗವಿದೆ. ಚಿತ್ರವಿಚಿತ್ರ ದಿರಿಸಿನ ಮೂಲಕ ನಟಿ ಸದಾ ಸುದ್ದಿಯಲ್ಲಿರುತ್ತಾರೆ.

ಇದನ್ನೂ ಓದಿ: ‘ನಂಗೆ ಮರ್ಯಾದೆ ಕೊಡಲ್ಲ, ಸೆಲೆಬ್ರಿಟಿಗಳೇ ಕೆಟ್ಟ ಕಮೆಂಟ್​​ ಮಾಡ್ತಾರೆ’: ಎಲ್ಲವನ್ನೂ ಹೇಳಿಕೊಂಡ ಉರ್ಫಿ ಜಾವೇದ್

‘ಮುಸ್ಲಿಂ ಹುಡುಗನನ್ನು ಮದುವೆ ಆಗಲ್ಲ’: ಬಲವಾದ ಕಾರಣ ನೀಡಿದ ಮುಸ್ಲಿಂ ನಟಿ ಉರ್ಫಿ ಜಾವೇದ್​

Follow us on

Related Stories

Most Read Stories

Click on your DTH Provider to Add TV9 Kannada