‘ನಂಗೆ ಮರ್ಯಾದೆ ಕೊಡಲ್ಲ, ಸೆಲೆಬ್ರಿಟಿಗಳೇ ಕೆಟ್ಟ ಕಮೆಂಟ್​​ ಮಾಡ್ತಾರೆ’: ಎಲ್ಲವನ್ನೂ ಹೇಳಿಕೊಂಡ ಉರ್ಫಿ ಜಾವೇದ್​

‘ನಂಗೆ ಮರ್ಯಾದೆ ಕೊಡಲ್ಲ, ಸೆಲೆಬ್ರಿಟಿಗಳೇ ಕೆಟ್ಟ ಕಮೆಂಟ್​​ ಮಾಡ್ತಾರೆ’: ಎಲ್ಲವನ್ನೂ ಹೇಳಿಕೊಂಡ ಉರ್ಫಿ ಜಾವೇದ್​
ಉರ್ಫಿ ಜಾವೇದ್

Urfi Javed: ಇತ್ತೀಚೆಗಿನ ಸಂದರ್ಶನದಲ್ಲಿ ಉರ್ಫಿ ಜಾವೇದ್​ ಅವರು ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಕಿರುತೆರೆಯಲ್ಲಿ ತಮಗೆ ಆದ ಕಹಿ ಅನುಭವವನ್ನು ಅವರು ತೆರೆದಿಟ್ಟಿದ್ದಾರೆ.

TV9kannada Web Team

| Edited By: Madan Kumar

Apr 07, 2022 | 9:05 AM

ನಟಿ ಉರ್ಫಿ ಜಾವೇದ್​ (Urfi Javed) ಅವರು ಹತ್ತು ಹಲವು ಕಾರಣಗಳಿಂದಾಗಿ ಸುದ್ದಿ ಆಗುತ್ತಿದ್ದಾರೆ. ಅವರು ಧರಿಸುವ ಬಟ್ಟೆಗಳು ಚಿತ್ರ-ವಿಚಿತ್ರವಾಗಿ ಇರುತ್ತವೆ. ತಾವೇ ಡಿಸೈನ್ ಮಾಡಿದ ಕಾಸ್ಟ್ಯೂಮ್​ಗಳನ್ನು ಅವರು ಧರಿಸುತ್ತಾರೆ. ಅವರ ಡ್ರೆಸ್​ (Urfi Javed Dress) ಕಂಡು ನೆಟ್ಟಿಗರು ಹಿಗ್ಗಾಮುಗ್ಗಾ ಕಮೆಂಟ್​ ಮಾಡುತ್ತಾರೆ. ಈ ನೆಗೆಟಿವ್ ಕಮೆಂಟ್​ಗಳಿಗೆ ಅವರು ತಲೆ ಕೆಡಿಸಿಕೊಂಡಿಲ್ಲ. ಬಿಗ್​ ಬಾಸ್​ ಒಟಿಟಿ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ ಬಳಿಕ ಉರ್ಫಿ ಜಾವೇದ್​ ಅವರ ಖ್ಯಾತಿ ಹೆಚ್ಚಿತು. ದೊಡ್ಮನೆಯಲ್ಲಿ ಇದ್ದಾಗ ಅವರು ಕಸದ ಚೀಲವನ್ನೇ ಬಳಸಿ ವಸ್ತ್ರ ವಿನ್ಯಾಸ ಮಾಡಿದ್ದರು. ಬಿಗ್​ ಬಾಸ್​ನಿಂದ ಹೊರಬಂದ ಬಳಿಕ ಪ್ರತಿ ದಿನವೂ ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಳ್ಳುವ ಉರ್ಫಿ ಜಾವೇದ್​ ಅವರು ಅನೇಕ ಕಿರಿಕ್​ಗಳನ್ನು ಮಾಡಿಕೊಂಡಿದ್ದುಂಟು. ಅವರು ಫೋಟೋಗಳು (Urfi Javed Photos) ಸಖತ್​ ವೈರಲ್​ ಆಗುತ್ತವೆ. ಈಗ ಅವರು ನೇರವಾಗಿ ಕಿರುತೆರೆ ಮಂದಿಯ ಬಗ್ಗೆ ಕೆಂಡ ಕಾರಿದ್ದಾರೆ. ತಮ್ಮನ್ನು ಟಿವಿ ಇಂಡಸ್ಟ್ರೀ ಹೇಗೆ ನಡೆಸಿಕೊಂಡಿದೆ ಎಂಬುದನ್ನು ಅವರು ವಿವರಿಸಿದ್ದಾರೆ. ಕಿರುತೆರೆ ಕಲಾವಿದರ ಬಗ್ಗೆಯೂ ಉರ್ಫಿ ಜಾವೇದ್​ ಅವರು ಗರಂ ಆಗಿದ್ದಾರೆ. ಅಷ್ಟಕ್ಕೂ ಅವರ ಗೋಳು ಏನು? ಆ ಬಗ್ಗೆ ಇಲ್ಲಿದೆ ವಿವರ..

‘ಮಿಸ್​ ಮಾಲಿನಿ’ ವೆಬ್​ಸೈಟ್​ಗೆ ನೀಡಿದ ಸಂದರ್ಶನದಲ್ಲಿ ಉರ್ಫಿ ಜಾವೇದ್​ ಅವರು ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಕಿರುತೆರೆಯಲ್ಲಿ ತಮಗೆ ಆದ ಕಹಿ ಅನುಭವವನ್ನು ಅವರು ತೆರೆದಿಟ್ಟಿದ್ದಾರೆ. ಧಾರಾವಾಹಿಗಳಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬುದು ಉರ್ಫಿ ಜಾವೇದ್​ ಅವರ ಆಸೆ ಆಗಿತ್ತು. ಆದರೆ ಅಲ್ಲಿ ಅವರಿಗೆ ಸಿಕ್ಕಿದ್ದು ಕೇವಲ ಸಣ್ಣ-ಪುಟ್ಟ ಪಾತ್ರಗಳು. ಆ ಬಗ್ಗೆ ಅವರಿಗೆ ಅಸಮಾಧಾನ ಇದೆ.

ಕಿರುತೆರೆಯ ಹಲವು ಶೋಗಳಲ್ಲಿ ಭಾಗವಹಿಸಿದ್ದರೂ ಕೂಡ ಟಿವಿ ಇಂಡಸ್ಟ್ರೀ ಅವರು ತಮಗೆ ಮರ್ಯಾದೆ ಕೊಡಲಿಲ್ಲ ಎಂಬುದು ಉರ್ಫಿ ಜಾವೇದ್​ ತಕರಾರು. ಇಷ್ಟಬಂದ ರೀತಿಯಲ್ಲಿ ಉರ್ಫಿ ಬಟ್ಟೆ ಧರಿಸಿದ್ದಕ್ಕಾಗಿ ಕಿರಿತೆರೆಯ ಸೆಲೆಬ್ರಿಟಿಗಳೇ ಕೆಟ್ಟದಾಗಿ ಕಮೆಂಟ್​ ಮಾಡಿದ್ದಾರೆ. ಅದು ಕೂಡ ಅವರ ಬೇಸರಕ್ಕೆ ಕಾರಣ ಆಗಿದೆ. ‘ನನ್ನ ಫೋಟೋಗಳು ಅಪ್​ಲೋಡ್​ ಆದಾಗ ಅಥವಾ ವೈರಲ್​ ಆದಾಗ ಬ್ಲೂ ಟಿಕ್​ ಇರುವ ಕಿರುತೆರೆಯ ಸೆಲೆಬ್ರಿಟಿಗಳು ಕೆಟ್ಟದಾಗಿ ಕಮೆಂಟ್​ ಮಾಡುತ್ತಾರೆ. ಇವರಿಗೆಲ್ಲ ನಾನೇನು ಅನ್ಯಾಯ ಮಾಡಿದ್ದೇನೆ? ಯಾಕೆ ಈ ರೀತಿಯಾಗಿ ಕೆಟ್ಟ ಕಮೆಂಟ್​ ಮಾಡ್ತಾರೆ’ ಎಂದು ಉರ್ಫಿ ಜಾವೇದ್​ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಎಲ್ಲ ಕಾರಣದಿಂದಾಗಿ ಟಿವಿ ಇಂಡಸ್ಟ್ರೀ ಜೊತೆ ಉರ್ಫಿ ಜಾವೇದ್​ ಅವರಿಗೆ ಸಂಬಂಧ ಕೆಟ್ಟಿದೆ. ಸದ್ಯಕ್ಕಂತೂ ಅವರು ಯಾವುದೇ ಟಿವಿ ಕಾರ್ಯಕ್ರಮದಲ್ಲೂ ಭಾಗಿ ಆಗುತ್ತಿಲ್ಲ. ಇತ್ತೀಚೆಗೆ ‘ಬೇಫಿಕ್ರಾ’ ಮ್ಯೂಸಿಕ್​ ವಿಡಿಯೋದಲ್ಲಿ ಅವರು ಕಾಣಿಸಿಕೊಂಡರು.

ತಾವು ಮುಸ್ಲಿಂ ಧರ್ಮಕ್ಕೆ ಸೇರಿದವರಾಗಿದ್ದರೂ ಕೂಡ ಆ ಧರ್ಮದಲ್ಲಿ ತಮಗೆ ನಂಬಿಕೆ ಉಳಿದಿಲ್ಲ ಎಂದು ಈ ಹಿಂದೆ ಉರ್ಫಿ ಜಾವೇದ್​ ಹೇಳಿಕೆ ನೀಡಿದ್ದರು. ಅಲ್ಲದೇ ತಾವು ಭಗವದ್ಗೀತೆ ಓದುತ್ತಿರುವುದಾಗಿಯೂ ಅವರು ಹೇಳಿದ್ದರು. ಅದರಂತೆಯೇ ಒಂದು ದಿನ ಅವರು ಭಗವದ್ಗೀತೆ ಹಿಡಿದು ಓಡಾಡಿದ ವಿಡಿಯೋ ಸಖತ್​ ವೈರಲ್​ ಆಗಿತ್ತು.

ಚಿತ್ರಸಾಹಿತಿ ಜಾವೇದ್ ಅಖ್ತರ್​ ಅವರಿಗೂ ಉರ್ಫಿ ಜಾವೇದ್​ ಅವರಿಗೂ ಯಾವುದೇ ಸಂಬಂಧ ಇಲ್ಲ. ಇಬ್ಬರ ಹೆಸರಿನಲ್ಲೂ ‘ಜಾವೇದ್​’ ಇದೆ ಅಷ್ಟೇ. ಆ ಕಾರಣಕ್ಕಾಗಿ ಉರ್ಫಿಯನ್ನು ಜಾವೇದ್​ ಅಖ್ತರ್​ ಅವರ ಮೊಮ್ಮಗಳು ಎಂದು ಅನೇಕರು ಭಾವಿಸಿದ್ದಾರೆ. ‘ನಾನು ಜಾವೇದ್​ ಅಖ್ತರ್ ಮೊಮ್ಮಗಳಲ್ಲ’ ಎಂದು ಅವರು ಅನೇಕ ಬಾರಿ ಸ್ಪಷ್ಟಪಡಿಸಿದ್ದಾರೆ. ಒಮ್ಮೆಯಂತೂ ಊರಿಗೆಲ್ಲ ತಿಳಿಯಲಿ ಎಂದು ತಾವು ಧರಿಸಿದ ಟಿ-ಶರ್ಟ್​​ ಮೇಲೆ ‘ನಾನು ಜಾವೇದ್​ ಅಖ್ತರ್ ಮೊಮ್ಮಗಳಲ್ಲ’ ಎಂದು ಪ್ರಿಂಟ್​ ಹಾಕಿಸಿಕೊಂಡು ಬಂದು ಅವರು ಪೋಸ್​ ನೀಡಿದ್ದರು.

ಇದನ್ನೂ ಓದಿ:

‘ಮುಸ್ಲಿಂ ಹುಡುಗನನ್ನು ಮದುವೆ ಆಗಲ್ಲ’: ಬಲವಾದ ಕಾರಣ ನೀಡಿದ ಮುಸ್ಲಿಂ ನಟಿ ಉರ್ಫಿ ಜಾವೇದ್​

ಬ್ಯಾಕ್​ಲೆಸ್​ ಫೋಟೋದಲ್ಲಿ ಮಿಂಚಿದ ಊರ್ಫಿ ಜಾವೇದ್​; ವೈರಲ್​ ಆಗುತ್ತಿದೆ ಫೋಟೋ

Follow us on

Related Stories

Most Read Stories

Click on your DTH Provider to Add TV9 Kannada