ಹರ್ಷ-ಭುವಿ ಎಂಗೇಜ್​ಮೆಂಟ್​ನಲ್ಲಿ ಕಾಣಿಸಿಕೊಂಡ ಸುಪಾರಿ ಕಿಲ್ಲರ್; ಸಾನಿಯಾಗೆ ಶುರುವಾಯ್ತು ಟೆನ್ಷನ್

ಹರ್ಷ-ಭುವಿ ಎಂಗೇಜ್​ಮೆಂಟ್​ನಲ್ಲಿ ಕಾಣಿಸಿಕೊಂಡ ಸುಪಾರಿ ಕಿಲ್ಲರ್; ಸಾನಿಯಾಗೆ ಶುರುವಾಯ್ತು ಟೆನ್ಷನ್
ಭುವಿ-ಹರ್ಷ

ಸುಚಿ ವಿಡಿಯೋ ಮಾಡುತ್ತಿರುವಾಗ ಸುಪಾರಿ ಕಿಲ್ಲರ್​ ಹಾಗೂ ಸಾನಿಯಾ ಮಾತನಾಡುತ್ತಿರುವುದು ಕಂಡಿದೆ. ಇದನ್ನು ವಿಡಿಯೋದಲ್ಲಿ ರೆಕಾರ್ಡ್​ ಮಾಡಿದ್ದಾಳೆ ಸುಚಿ.

TV9kannada Web Team

| Edited By: Rajesh Duggumane

Apr 07, 2022 | 4:13 PM

‘ಕನ್ನಡತಿ’ ಧಾರಾವಾಹಿ (Kannadathi Serial) ವೀಕ್ಷಕರಿಗೆ ಖುಷಿಯ ಕ್ಷಣ ಬಂದಿದೆ. ಹರ್ಷ ಹಾಗೂ ಭುವಿ ನಿಶ್ಚಿತಾರ್ಥ ನೆರವೇರುತ್ತಿದೆ. ಇದಕ್ಕೆ ಹಸಿರುಪೇಟೆಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹರ್ಷ (Harsha) ಹಾಗೂ ಭುವಿ ಹೊಸ ಬಟ್ಟೆ ಹಾಕಿ ಮಿಂಚುತ್ತಿದ್ದಾರೆ. ಇನ್ನು, ರತ್ನಮಾಲಾ ಕುಟುಂಬದ ಎಲ್ಲ ಸದಸ್ಯರು ಹಸಿರುಪೇಟೆಗೆ ಬಂದಿದ್ದಾರೆ. ಈ ಮಧ್ಯೆ, ಸಾನಿಯಾ ಅಸಮಾಧಾನಗೊಳ್ಳುವ ರೀತಿಯ ಘಟನೆಯೊಂದು ನಡೆದಿದೆ. ಭುವಿಯನ್ನು ಸಾಯಿಸೋಕೆ ಸಾನಿಯಾ ಸುಪಾರಿ ನೀಡಿದ್ದಳು. ಸುಪಾರಿ ತೆಗೆದುಕೊಂಡ ವ್ಯಕ್ತಿ ನಿಶ್ಚಿತಾರ್ಥಕ್ಕೆ (Engagement) ಬಂದಿದ್ದಾನೆ. ಇದನ್ನು ನೋಡಿದ ಸಾನಿಯಾ ಅಸಮಾಧಾನಗೊಂಡಿದ್ದಾಳೆ.

ಸುಪಾರಿ ನೀಡಿದ್ದ ಸಾನಿಯಾ

ಭುವಿಯನ್ನು ಹತ್ಯೆ ಮಾಡಲು ಸಾನಿಯಾ ಸುಪಾರಿ ನೀಡಿದ್ದಾಳೆ. ರತ್ನಮಾಲಾ ಬಳಿಯೇ ಹಣ ಕೇಳಿ ಪಡೆದಿದ್ದಳು ಸಾನಿಯಾ. ‘ನನಗೆ ಐದು ಲಕ್ಷ ರೂಪಾಯಿ ಹಣ ಬೇಕು. ಏಕೆ ಎಂದು ಪ್ರಶ್ನೆ ಮಾಡಬೇಡಿ. ನಾನು ಈ ಹಣವನ್ನು ಒಳ್ಳೆಯ ಕೆಲಸಕ್ಕೆ ಬಳಕೆ ಮಾಡಿಕೊಳ್ಳುತ್ತೇನೆ. ಮುಂದೆ ಅದು ನಿಮಗೇ ತಿಳಿಯುತ್ತದೆ’ ಎಂದು ಸಾನಿಯಾ ಹಣ ಪಡೆದಿದ್ದಳು. ಈ ಹಣವನ್ನು ತೆಗೆದುಕೊಂಡು ಸಾನಿಯಾ ನೇರವಾಗಿ ಸುಪಾರಿ ಕಿಲ್ಲರ್​ ಬಳಿ ತೆರಳಿದ್ದಳು. ಐದು ಲಕ್ಷ ರೂಪಾಯಿ ಹಣವನ್ನು ಆತನಿಗೆ ನೀಡಿ ಭುವಿಯ ಫೋಟೋ ತೋರಿಸಿದ್ದಳು.

ಹರ್ಷ-ಭುವಿ ಎಂಗೇಜ್​ಮೆಂಟ್​

ಹಸಿರುಪೇಟೆಯಲ್ಲಿ ಹರ್ಷ ಹಾಗೂ ಭುವಿ ಎಂಗೇಜ್​ಮೆಂಟ್​ ನಡೆಯುತ್ತಿದೆ. ನಿಶ್ಚಿತಾರ್ಥದ ದಿನ ಸಾನಿಯಾ ಕೊಂಕು ತೆಗೆದಿದ್ದಾಳೆ. ನನ್ನನ್ನು ಎಂಡಿ ಪಟ್ಟದಿಂದ ಈಗಾಗಲೇ ಇಳಿಸುವ ಪ್ರಯತ್ನ ನಡೆದಿದೆ ಎಂದು ಕೂಗಾಡಿದ್ದಾಳೆ. ಇದಕ್ಕೆ ರತ್ನಮಾಲಾ ತಕ್ಕ ಉತ್ತರವನ್ನೂ ನೀಡಿದ್ದಾಳೆ.

ಸುಪಾರಿ ಕಿಲ್ಲರ್​ಗೆ ನೀರು ಕೊಟ್ಟ ಭುವಿ

ಹರ್ಷ ಹಾಗೂ ಭುವಿ ಎಂಗೇಜ್​ಮೆಂಟ್​ ನಡೆಯುತ್ತಿರುವ ಜಾಗದ ಬಳಿಯೇ ಸುಪಾರಿ ಕಿಲ್ಲರ್​ ಕಾಣಿಸಿಕೊಂಡಿದ್ದಾನೆ. ಆತ ಕೆಮ್ಮುತ್ತಿರುವುದನ್ನು ಕಂಡ ಭುವಿ, ನೀರು ತೆಗೆದುಕೊಂಡು ಹೋಗಿ ಕೊಟ್ಟಿದ್ದಾಳೆ. ಆತ ಯಾರು? ಆತನ ಹೆಸರೇನು ಎಂದು ವಿಚಾರಿಸಿದ್ದಾಳೆ. ಆದರೆ, ಆತ ಯಾವ ವಿಚಾರವನ್ನೂ ಹೇಳಿಲ್ಲ.

ಕಿಲ್ಲರ್​ನ ನೋಡಿ ಸಾನಿಯಾ ಅಸಮಾಧಾನ

ಕಿಲ್ಲರ್​ನ ನೋಡಿ ಸಾನಿಯಾ ಅಸಮಾಧಾನಗೊಂಡಿದ್ದಾಳೆ. ಹೀಗೆಲ್ಲ ಓಪನ್ ಆಗಿ ಕಾಣಿಸಿಕೊಂಡರೆ ಮುಂದೆ ತೊಂದರೆ ಆಗುತ್ತದೆ ಎಂಬುದು ಅವಳ ವಾದ. ‘ಎಲ್ಲವನ್ನೂ ಗಮನಿಸುತ್ತಿರಬೇಕು. ಚಲನ-ವಲನ ನೋಡಿಕೊಂಡು ಸ್ಕೆಚ್ ಹಾಕಬೇಕು’ ಎಂದು ಸುಪಾರಿ ಕಿಲ್ಲರ್​ ಹೇಳಿದ್ದಾನೆ.

ಸುಚಿಗೆ ಬಂದಿದೆ ಅನುಮಾನ

ಸುಚಿ ವಿಡಿಯೋ ಮಾಡುತ್ತಿರುವಾಗ ಸುಪಾರಿ ಕಿಲ್ಲರ್​ ಹಾಗೂ ಸಾನಿಯಾ ಮಾತನಾಡುತ್ತಿರುವುದು ಕಂಡಿದೆ. ಇದನ್ನು ವಿಡಿಯೋದಲ್ಲಿ ರೆಕಾರ್ಡ್​ ಮಾಡಿದ್ದಾಳೆ ಸುಚಿ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:  ‘ಹರ್ಷ ಮತ್ತು ಭುವಿ ಪಾತ್ರಗಳನ್ನು ನಿಜ ಜೀವನಕ್ಕೆ ಕನೆಕ್ಟ್​ ಮಾಡಬೇಡಿ’; ಕಿರಣ್ ರಾಜ್ ವಿಶೇಷ ಮನವಿ

ಮಂಗಳಮ್ಮನ ವಿರುದ್ಧ ತಿರುಗಿಬಿದ್ದ ಭುವಿ; ‘ಕನ್ನಡತಿ’ ಧಾರಾವಾಹಿಯಲ್ಲಿ ಹೊಸ ಟ್ವಿಸ್ಟ್​

Follow us on

Related Stories

Most Read Stories

Click on your DTH Provider to Add TV9 Kannada