‘ಹರ್ಷ ಮತ್ತು ಭುವಿ ಪಾತ್ರಗಳನ್ನು ನಿಜ ಜೀವನಕ್ಕೆ ಕನೆಕ್ಟ್​ ಮಾಡಬೇಡಿ’; ಕಿರಣ್ ರಾಜ್ ವಿಶೇಷ ಮನವಿ

ಕಿರಣ್ ರಾಜ್​ ಹಾಗೂ ರಂಜನಿ ರಾಘವನ್ ಮಾಡುತ್ತಿರುವುದು ಪಾತ್ರಗಳು ಮಾತ್ರ. ಆದರೆ ಈ ಪಾತ್ರಗಳನ್ನು ಮಾಡುತ್ತಿರುವವರು ನಿಜ ಜೀವನದಲ್ಲೂ ಒಂದಾಗಬೇಕು ಎಂದು ಕೆಲವರು ಬಯಸುತ್ತಿದ್ದಾರೆ.

 ‘ಹರ್ಷ ಮತ್ತು ಭುವಿ ಪಾತ್ರಗಳನ್ನು ನಿಜ ಜೀವನಕ್ಕೆ ಕನೆಕ್ಟ್​ ಮಾಡಬೇಡಿ’; ಕಿರಣ್ ರಾಜ್ ವಿಶೇಷ ಮನವಿ
ಕಿರಣ್​ ರಾಜ್​-ರಂಜನಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Apr 07, 2022 | 1:34 PM

ಧಾರಾವಾಹಿ ಹಾಗೂ ಸಿನಿಮಾಗಳನ್ನು ನೋಡುವವರ ಪೈಕಿ ಕೆಲವರು ಅಲ್ಲಿ ಬರುವ ಪಾತ್ರಗಳನ್ನು ತುಂಬಾನೇ ಗಂಭೀರವಾಗಿ ಸ್ವೀಕರಿಸುತ್ತಾರೆ. ತೆರೆಮೇಲೆ ನಡೆಯುವುದು ಹಾಗೂ ನಿಜ ಜೀವನ ಎರಡೂ ಒಂದೇ ಎಂದು ಭಾವಿಸುತ್ತಾರೆ. ತೆರೆಮೇಲೆ ಕಾಣಿಸಿಕೊಳ್ಳುವವರು ನಿಜ ಜೀವನದಲ್ಲೂ ಹಾಗೆಯೇ ಇರುತ್ತಾರೆ ಎಂದು ಭಾವಿಸುತ್ತಾರೆ. ನಟ ಕಿರಣ್ ರಾಜ್ (Kiran Raj)​ ಅವರಿಗೂ ಕೆಲವರಿಂದ ಇದೇ ರೀತಿಯ ಅನುಭವ ಆಗಿದೆ. ‘ಕನ್ನಡತಿ’ ಧಾರಾವಾಹಿ (Kannadathi Serial) ಮಹತ್ವದ ಘಟ್ಟ ತಲುಪಿರುವ ಈ ಸಂದರ್ಭದಲ್ಲಿ ಕಿರಣ್​ ರಾಜ್​ಗೆ ಈ ರೀತಿಯ ವಿಚಾರಗಳು ಗಮನಕ್ಕೆ ಬಂದಿವೆ. ಈ ಬಗ್ಗೆ ಅವರು ಅಭಿಮಾನಿಗಳ ಬಳಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಅವರು ವಿಶೇಷ ಮನವಿ ಮಾಡಿಕೊಳ್ಳಲು ಕಾರಣ ಏನು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಕಿರಣ್ ರಾಜ್​ ಅವರು ‘ಕನ್ನಡತಿ’ ಧಾರಾವಾಹಿಯಲ್ಲಿ ಹರ್ಷ ಆಗಿ ಕಾಣಿಸಿಕೊಂಡಿದ್ದಾರೆ. ಭುವಿ ಪಾತ್ರದಲ್ಲಿ ರಂಜನಿ ರಾಘವನ್ ನಟಿಸಿದ್ದಾರೆ. ಈ ಧಾರಾವಾಹಿ ಮಹತ್ವದ ಘಟ್ಟ ತಲುಪಿದೆ. ಹರ್ಷ ಹಾಗೂ ಭುವಿಯ ಎಂಗೇಜ್​ಮೆಂಟ್​ ನಡೆಯುತ್ತಿದೆ. ಇದಕ್ಕೆ ಈಗಾಗಲೇ ಸಕಲ ಸಿದ್ಧತೆ ನಡೆದಿದೆ. ಕಿರಣ್​ ಹಾಗೂ ರಂಜನಿ ಅವರು ನಿಜ ಜೀವನದಲ್ಲೂ ಮದುವೆ ಆಗಬೇಕು ಎಂದು ಕೆಲ ಅಭಿಮಾನಿಗಳು ಬಯಸಿದ್ದಾರೆ. ತೆರೆಮೇಲಿನ ಈ ಎರಡು ಪಾತ್ರಗಳು ನಿಜಜೀವನದಲ್ಲೂ ಒಂದಾಗಬೇಕು ಎಂಬುದು ಹಲವರ ಆಸೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಬರೆದುಕೊಳ್ಳುತ್ತಿದ್ದಾರೆ. ಇನ್ನು, ಕೆಲವರು ಈ ಬಗ್ಗೆ ನಕಲಿ ಸುದ್ದಿ ಹಬ್ಬಿಸುತ್ತಿದ್ದಾರೆ. ಈ ವಿಚಾರದಲ್ಲಿ ಕಿರಣ್ ರಾಜ್​ ವಿಶೇಷ ಮನವಿ ಮಾಡಿಕೊಂಡಿದ್ದಾರೆ.

ಕಿರಣ್ ರಾಜ್​ ಹಾಗೂ ರಂಜನಿ ರಾಘವನ್ ಮಾಡುತ್ತಿರುವುದು ಪಾತ್ರಗಳು ಮಾತ್ರ. ಆದರೆ ಈ ಪಾತ್ರಗಳನ್ನು ಮಾಡುತ್ತಿರುವವರು ನಿಜ ಜೀವನದಲ್ಲೂ ಒಂದಾಗಬೇಕು ಎಂದು ಕೆಲವರು ಬಯಸುತ್ತಿದ್ದಾರೆ. ಇವರ ಬಗ್ಗೆ ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇದು ಕಿರಣ್​ ರಾಜ್​ ಅಸಮಾಧಾನಕ್ಕೆ ಕಾರಣವಾಗಿದೆ.

‘ಹರ್ಷ ಮತ್ತು ಭುವಿ ಪಾತ್ರವನ್ನು ಧಾರಾವಾಹಿ ಪಾತ್ರಗಳನ್ನಾಗಿ ಮಾತ್ರ ನೋಡಿ. ಅದನ್ನು ನಿಜ ಜೀವನದಲ್ಲಿ ಕನೆಕ್ಟ್​ ಮಾಡಬೇಡಿ. ವೀವ್ಸ್​ಗಾಗಿ ಸೋಶಿಯಲ್​ ಮೀಡಿಯಾದಲ್ಲಿ ಫೇಕ್​ ನ್ಯೂಸ್ ಹಬ್ಬಿಸುವವರು ನಿಮ್ಮ ಜೀವನವನ್ನು ನೀವು ನೋಡಿಕೊಳ್ಳಿ’ ಎಂದಿದ್ದಾರೆ ಕಿರಣ್​ ರಾಜ್.

‘ಕನ್ನಡತಿ’ ಧಾರಾವಾಹಿಯಲ್ಲಿ ಹರ್ಷ ಮತ್ತು ಭುವಿ ನಿಶ್ಚಿತಾರ್ಥದ ದಿನ ಹತ್ತಿರವಾಗಿದೆ. ಇವರ ಮದುವೆಗೆ ಮಂಗಳಮ್ಮ ಒಪ್ಪಿಗೆ ಕೊಟ್ಟಿದ್ದಾರೆ. ಆದರೆ, ಇದಕ್ಕೆ ಕೆಲವರು ಅಡ್ಡಗಾಲು ಹಾಕಲು ಪ್ರಯತ್ನಿಸುತ್ತಿದ್ದಾರೆ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಅಜ್ಜಿಗೆ ನಿಂತ ಜಾಗದಲ್ಲೇ 32 ಲಕ್ಷ ರೂ. ನೀಡಿದ ಹರ್ಷ; ಭುವಿಗೆ ಹೀರೋನ ಬಿಟ್ಟುಕೊಟ್ಟ ವರುಧಿನಿ

ಮಂಗಳಮ್ಮನ ವಿರುದ್ಧ ತಿರುಗಿಬಿದ್ದ ಭುವಿ; ‘ಕನ್ನಡತಿ’ ಧಾರಾವಾಹಿಯಲ್ಲಿ ಹೊಸ ಟ್ವಿಸ್ಟ್​

Published On - 1:33 pm, Thu, 7 April 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ