ಅಜ್ಜಿಗೆ ನಿಂತ ಜಾಗದಲ್ಲೇ 32 ಲಕ್ಷ ರೂ. ನೀಡಿದ ಹರ್ಷ; ಭುವಿಗೆ ಹೀರೋನ ಬಿಟ್ಟುಕೊಟ್ಟ ವರುಧಿನಿ

ಸದ್ಯ, ‘ಕನ್ನಡತಿ’ ಧಾರಾವಾಹಿಯ ಕಥೆ ಹಸಿರುಪೇಟೆಯಲ್ಲಿ ನಡೆಯುತ್ತಿದೆ. ಹರ್ಷ, ಅವನ ತಾಯಿ ರತ್ನಮಾಲಾ, ಭುವಿ, ಅವಳ ತಂಗಿ ಬಿಂದು, ವರುಧಿನಿ ಎಲ್ಲರೂ ಹಸಿರುಪೇಟೆಯಲ್ಲಿದ್ದಾರೆ.

ಅಜ್ಜಿಗೆ ನಿಂತ ಜಾಗದಲ್ಲೇ 32 ಲಕ್ಷ ರೂ. ನೀಡಿದ ಹರ್ಷ; ಭುವಿಗೆ ಹೀರೋನ ಬಿಟ್ಟುಕೊಟ್ಟ ವರುಧಿನಿ
TV9kannada Web Team

| Edited By: Rajesh Duggumane

Mar 30, 2022 | 2:43 PM

ಹಲವು ತಿರುವುಗಳನ್ನು ತೆಗೆದುಕೊಂಡು ಸಾಗುತ್ತಿದ್ದ ‘ಕನ್ನಡತಿ’ ಧಾರಾವಾಹಿ ಪ್ರಮುಖ ಘಟ್ಟ ತಲುಪಿದೆ. ಹಸಿರುಪೇಟೆಯಲ್ಲಿ ಸಾಗಿದ ಕಥೆ ಹಲವು ಅಚ್ಚರಿಗಳಿಗೆ ಕಾರಣವಾಗಿದೆ. ಹರ್ಷ ಹಾಗೂ ಭುವಿ ಎಂಗೇಜ್​ಮೆಂಟ್​ ನಡೆಯೋಕೆ ಇದ್ದ ಅಡೆತಡೆಗಳು ಸಂಪೂರ್ಣವಾಗಿ ಶಮನವಾಗುವ ಸೂಚನೆ ಸಿಕ್ಕಿದೆ. ಭುವಿ ಮದುವೆಗೆ ಅಡ್ಡಿಯಾಗಿ ನಿಂತಿದ್ದ ಮಂಗಳಮ್ಮನ ಬಾಯನ್ನು ಹರ್ಷ ಮುಚ್ಚಿಸಿದ್ದಾನೆ! ವಿಶೇಷ ಎಂದರೆ ಭುವಿಗೆ ಹೀರೋನ (ಹರ್ಷ) ಬಿಟ್ಟುಕೊಡುವ ನಿರ್ಧಾರಕ್ಕೆ ಬಂದಿದ್ದಾಳೆ ವರು. ಬುಧವಾರದ (ಮಾರ್ಚ್​ 30) ಎಪಿಸೋಡ್ ಈ ರೀತಿಯ ಹಲವು ಅಚ್ಚರಿಗೆ ಕಾರಣವಾಗಿದೆ.

ಸದ್ಯ, ‘ಕನ್ನಡತಿ’ ಧಾರಾವಾಹಿಯ ಕಥೆ ಹಸಿರುಪೇಟೆಯಲ್ಲಿ ನಡೆಯುತ್ತಿದೆ. ಹರ್ಷ, ಅವನ ತಾಯಿ ರತ್ನಮಾಲಾ, ಭುವಿ, ಅವಳ ತಂಗಿ ಬಿಂದು, ವರುಧಿನಿ ಎಲ್ಲರೂ ಹಸಿರುಪೇಟೆಯಲ್ಲಿದ್ದಾರೆ. ಭುವಿಯನ್ನು ನೋಡೋಕೆ ಅದೇ ಊರಿನ ಸಾಹುಕಾರನ ಮಗ ಬಂದಿದ್ದ. ಅವನ ಬಳಿ ನಾಲ್ಕು ಗುಂಟೆ ಜಮೀನನ್ನು ಅಡ ಇಟ್ಟು 5 ಲಕ್ಷ ಪಡೆದಿದ್ದಳು ಭುವಿಯ ಅಜ್ಜಿ ಮಂಗಳಮ್ಮ. ಸಾಲದಿಂದಾಗಿ ಬೇರೆಯವರ ಕೈಯಲ್ಲಿರುವ ಭುವಿಯ ತಂದೆ ಮನೆಯನ್ನು ಮರಳಿ ಪಡೆಯುವ ಆಲೋಚನೆ ಮಂಗಳಮ್ಮನದ್ದು. ಆದರೆ, ಹಣವನ್ನು ಭುವಿ ಮರಳಿ ಅವನಿಗೆ ನೀಡಿದ್ದಾಳೆ. ಇದರಿಂದ ಸಿಟ್ಟಾದ ಸಾಹುಕಾರರ ಕುಟುಂಬ ಮರಳಿ ನಡೆದಿದೆ. ದುಡ್ಡು ಹೋಯಿತಲ್ಲ ಎಂದು ಮಂಗಳಮ್ಮ ರಂಪಾಟ ಮಾಡಿದ್ದಾಳೆ.

ಈ ಘಟನೆ ನಂತರದಲ್ಲಿ ಅಜ್ಜಿಯ ಬಾಯಿ ಮುಚ್ಚಿಸಿದ್ದಾನೆ ಹರ್ಷ. ನೇರವಾಗಿ ಕಾರಿನ ಬಳಿ ನಡೆದ ಹರ್ಷ ಅಲ್ಲಿಂದ ಚೆಕ್​ಬುಕ್​ ತಂದಿದ್ದಾನೆ. ಭುವಿಯ ತಂದೆಯ ಮನೆಯನ್ನು ಬಿಡಿಸಿಕೊಳ್ಳಲು 32 ಲಕ್ಷ ರೂಪಾಯಿ ಚೆಕ್​ಅನ್ನು ಮಂಗಳಮ್ಮನಿಗೆ ನೀಡಿದ್ದಾನೆ. ಇದನ್ನು ನೋಡಿ ಮಂಗಳಮ್ಮ ಅಚ್ಚರಿಗೊಂಡಿದ್ದಾಳೆ. ಇಷ್ಟುದಿನ ಹರ್ಷ ಬಾಡಿಗೆ ಕಾರಿನ ಡ್ರೈವರ್​ ಎಂದುಕೊಂಡಿದ್ದಳು. ಆದರೆ, ಅದು ಸುಳ್ಳು ಅನ್ನೋದು ಆಕೆಗೆ ಗೊತ್ತಾಗಿದೆ. ಇದರಿಂದ ಹರ್ಷ-ಭುವಿ ಮದುವೆಗೆ ಇದ್ದ ಒಂದು ಅಡ್ಡಿ ಶಮನವಾಗಿದೆ.

ಇನ್ನು, ಹರ್ಷನ ಬಳಿ ವರು ಮಾತನಾಡಿದ್ದಾಳೆ. ‘ಏನೇ ಮಾಡಿದರೂ ನಾನು ಭುವಿಯನ್ನು ಬಿಟ್ಟುಕೊಡುವುದಿಲ್ಲ, ನಿನ್ನ ಮೇಲೆ ಪ್ರೀತಿ ಹುಟ್ಟುವುದಿಲ್ಲ’ ಎನ್ನುವ ಮಾತನ್ನು ಹೇಳಿದ್ದಾನೆ. ಇದರಿಂದ ಹರ್ಷನನ್ನು ಭುವಿಗೆ ಬಿಟ್ಟುಕೊಡುವ ನಿರ್ಧಾರಕ್ಕೆ ಬಂದಿದ್ದಾಳೆ ವರುಧಿನಿ. ಇದರಿಂದ, ಧಾರಾವಾಹಿಗೆ ದೊಡ್ಡ ಟ್ವಿಸ್ಟ್ ಸಿಕ್ಕಂತೆ ಆಗಿದೆ.

ಇದನ್ನೂ ಓದಿ:ಮಂಗಳಮ್ಮನ ವಿರುದ್ಧ ತಿರುಗಿಬಿದ್ದ ಭುವಿ; ‘ಕನ್ನಡತಿ’ ಧಾರಾವಾಹಿಯಲ್ಲಿ ಹೊಸ ಟ್ವಿಸ್ಟ್​ 

ಕನ್ನಡತಿ ಅಪ್​ಡೇಟ್​: ಹಸಿರುಪೇಟೆಗೆ ಬಂದು ಹೆಣ್ಣು ಕೇಳಿದ ಹರ್ಷ; ಮಂಗಳಮ್ಮನ ಉತ್ತರ ಏನು?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada