AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳಮ್ಮನ ವಿರುದ್ಧ ತಿರುಗಿಬಿದ್ದ ಭುವಿ; ‘ಕನ್ನಡತಿ’ ಧಾರಾವಾಹಿಯಲ್ಲಿ ಹೊಸ ಟ್ವಿಸ್ಟ್​

ಹರ್ಷ ಹಾಗೂ ರತ್ನಮಾಲಾ ಹೆಣ್ಣು ಕೇಳೋಕೆ ಮಂಗಳಮ್ಮನ ಮನೆಗೆ ಬಂದಿದ್ದಾರೆ. ಮಂಗಳಮ್ಮ ಸತ್ಕಾರ ಮಾಡುವ ಬದಲು ಅವಮಾನ ಮಾಡಿದ್ದಾಳೆ. ಇದರಿಂದ ಹರ್ಷ ಹಾಗೂ ರತ್ನಮಾಲಾ ಇಬ್ಬರೂ ಅವಮಾನ ಎದುರಿಸಿದ್ದಾರೆ.

ಮಂಗಳಮ್ಮನ ವಿರುದ್ಧ ತಿರುಗಿಬಿದ್ದ ಭುವಿ; ‘ಕನ್ನಡತಿ’ ಧಾರಾವಾಹಿಯಲ್ಲಿ ಹೊಸ ಟ್ವಿಸ್ಟ್​
ಮಂಗಳಮ್ಮ-ಭುವಿ
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Mar 29, 2022 | 2:42 PM

Share

‘ಕನ್ನಡತಿ’ ಧಾರಾವಾಹಿಯ (Kannadathi Serial) ಕಥೆ ನಾನಾ ರೀತಿಯ ತಿರುವು ಪಡೆದುಕೊಂಡು ಸಾಗುತ್ತಿದೆ. ಈ ಧಾರಾವಾಹಿಯ ಕಥೆ ಈಗ ಮಹತ್ವದ ಘಟ್ಟ ತಲುಪಿದೆ. ಸಂಪೂರ್ಣ ಕಥೆ ಭುವಿಯ ಹುಟ್ಟೂರಾದ ಹಸಿರುಪೇಟೆ ಕಡೆ ತಿರುಗಿದೆ. ಇದಕ್ಕೆ ಕಾರಣವೂ ಇದೆ. ಭುವಿ ಸಹೋದರಿ ಬಿಂದುಗೆ ಗಂಡು ನೋಡುವ ಕಾರ್ಯಕ್ರಮ ಇತ್ತು. ಈ ಕಾರಣಕ್ಕೆ ಬಿಂದು ಹಾಗೂ ಭುವಿ ಹಸಿರುಪೇಟೆಗೆ (Hasirupete) ಬಂದಿದ್ದಾರೆ. ಭುವಿಯನ್ನು ಹುಡುಕಿಕೊಂಡು ವರುಧಿನಿ ಕೂಡ ಹಸಿರು ಪೇಟೆಗೆ ಬಂದಿದ್ದಾಳೆ. ಹೆಣ್ಣು ಕೇಳೋಕೆ ಹರ್ಷ, ರತ್ನಮಾಲಾ ಹಾಗೂ ಹರ್ಷನ ತಂಗಿ ಸುಚಿ ಕೂಡ ಹಸಿರುಪೇಟೆಗೆ ಬಂದಿದ್ದಾರೆ. ಈ ಮಧ್ಯೆ ಇದೇ ಮೊದಲ ಬಾರಿಗೆ ಭುವಿ ಆಕೆಯ ಅಜ್ಜಿ ಮಂಗಳಮ್ಮನ ವಿರುದ್ಧ ತಿರುಗಿಬೀಳುವ ಸೂಚನೆ ನೀಡಿದ್ದಾಳೆ.

ಹರ್ಷ ಹಾಗೂ ರತ್ನಮಾಲಾ ಹೆಣ್ಣು ಕೇಳೋಕೆ ಮಂಗಳಮ್ಮನ ಮನೆಗೆ ಬಂದಿದ್ದಾರೆ. ಮಂಗಳಮ್ಮ ಸತ್ಕಾರ ಮಾಡುವ ಬದಲು ಅವಮಾನ ಮಾಡಿದ್ದಾಳೆ. ಇದರಿಂದ ಹರ್ಷ ಹಾಗೂ ರತ್ನಮಾಲಾ ಇಬ್ಬರೂ ಅವಮಾನ ಎದುರಿಸಿದ್ದಾರೆ. ಆ ಬಳಿಕ ಅವರು ಮನೆಯಿಂದ ಹೊರ ನಡೆದಿದ್ದಾರೆ. ಈ ಮಧ್ಯೆ ಭುವಿಯನ್ನು ನೋಡೋಕೆ ಅದೇ ಊರಿನ ಅಕ್ಕಿಮಂಡಿ ಸಾಹುಕಾರನ ಮಗ ಕುಟುಂಬ ಸಮೇತ ಬಂದಿದ್ದ. ಇವರನ್ನು ಮಂಗಳಮ್ಮ ಸ್ವಾಗತಿಸಿದ್ದಾಳೆ.

ರತ್ನಮಾಲಾ ಅವಮಾನ ಎದುರಿಸಿದ  ವಿಚಾರ ಭುವಿಗೆ ಗೊತ್ತಾಗಿದೆ. ಆಕೆ ಅಸಮಾಧಾನಗೊಂಡಿದ್ದಾಳೆ. ಅಷ್ಟೇ ಅಲ್ಲ, ಹೊರಗೆ ಕಳುಹಿಸಿದ್ದ ರತ್ನಮಾಲಾ ಹಾಗೂ ಹರ್ಷನನ್ನು ಕರೆದು ತಂದಿದ್ದಾಳೆ. ಅವರಿಗೆ ಮನೆ ಒಳಗೆ ಕೂರುವಂತೆ ಹೇಳಿದ್ದಾಳೆ. ಇತ್ತ ಅಕ್ಕಿಮಂಡಿ ಸಾಹುಕಾರನಿಂದ ಬರೋಬ್ಬರಿ 5 ಲಕ್ಷ ರೂಪಾಯಿ ಪಡೆದುಕೊಂಡಿದ್ದಾಳೆ ಮಂಗಳಮ್ಮ. ಈ ಹಣ ಪಡೆಯಲು ತನ್ನ ನಾಲ್ಕು ಗುಂಟೆ ಜಮೀನನ್ನು ಆಕೆ ಅಡ ಇಟ್ಟಿದ್ದಾಳೆ. ಈ ವಿಚಾರ ಕೇಳಿ ಭುವಿ ನಿಜಕ್ಕೂ ಸಿಟ್ಟಾಗಿದ್ದಾಳೆ.

ಇದೇ ಮೊದಲ ಬಾರಿಗೆ ಅಜ್ಜಿ ವಿರುದ್ಧವಾಗಿ ನಡೆದುಕೊಂಡಿದ್ದಾಳೆ ಭುವಿ. ಅಜ್ಜಿ ಪಡೆದ ಹಣವನ್ನು ಆಕೆ ಮರಳಿ ಅಕ್ಕಿಮಂಡಿ ಸಾಹುಕಾರನಿಗೆ ನೀಡಿದ್ದಾಳೆ. ಭುವಿಯ ಈ ನಿರ್ಧಾರದಿಂದ ಮಂಗಳಮ್ಮ ನಿಜಕ್ಕೂ ಶಾಕ್​ ಆಗಿದ್ದಾಳೆ.

ಈ ಮಧ್ಯೆ ಮತ್ತೊಂದು ಅಚ್ಚರಿಯ ಘಟನೆ ನಡೆದಿದೆ. ಅಕ್ಕಿಮಂಡಿ ಸಾಹುಕಾರನ ಮಗನಿಗೆ ವರುಧಿನಿ ಒಂದಷ್ಟು ಪ್ರಶ್ನೆ ಕೇಳಿದ್ದಾಳೆ. ‘ಮದುವೆ ಆದ ಬಳಿಕ ಭುವಿ ಕೆಲಸ ಮಾಡಬಹುದೋ ಅಥವಾ ಬೇಡವೋ’ ಎಂದು ಪ್ರಶ್ನೆ ಮಾಡಿದ್ದಾಳೆ. ಇದಕ್ಕೆ ಅಕ್ಕಿಮಂಡಿ ಸಾಹುಕಾರನ ಮಗ ‘ಇಲ್ಲ’ ಎನ್ನುವ ಉತ್ತರ ನೀಡಿದ್ದಾನೆ. ಹಾಗಾದರೆ, ನಾನು ನನ್ನ ಗೆಳೆತಿಯನ್ನು ಇಂತಹ ವ್ಯಕ್ತಿಗೆ ಕೊಡುವುದಿಲ್ಲ ಎಂದು ಹೇಳಿದ್ದಾಳೆ. ವರುಧಿನಿಯ ಈ ನಡೆ ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ: ‘ಕನ್ನಡತಿ’ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್​; ಭುವಿ ಎಂಗೇಜ್​ಮೆಂಟ್​​ಗೆ ಬಂತು ಹೊಸ ಕಂಟಕ

ಕನ್ನಡತಿ ಅಪ್​ಡೇಟ್​: ಹಸಿರುಪೇಟೆಗೆ ಬಂದು ಹೆಣ್ಣು ಕೇಳಿದ ಹರ್ಷ; ಮಂಗಳಮ್ಮನ ಉತ್ತರ ಏನು?

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ