‘ಮೊದಲ ಮೆಸೇಜ್​ನಲ್ಲೇ ಮದ್ವೆ ಆಗ್ತೀನಿ ಎಂದಿದ್ದೆ’; ಬೆಸ್ಟ್​​ ಫ್ರೆಂಡ್​ನೇ ಮದುವೆ ಆದ ಕಥೆ ಹೇಳಿದ ನಟ ರಕ್ಷ್

ಲಾ ಕಾಲೇಜ್​ನಲ್ಲಿರುವಾಗ ಅನುಷಾ ಅವರ ಬಳಿ ಗೇರ್​ಲೆಸ್​ ಬೈಕ್ ಇತ್ತು. ಇದು ಅನುಷಾ ಹಾಗೂ ರಕ್ಷ್​ ಅವರ ಬದುಕಿನ ಭಾಗವೇ ಆಗಿತ್ತು. ಈ ಬೈಕ್​ ಬಗ್ಗೆ ಏನೆಲ್ಲ ಫೀಲಿಂಗ್ಸ್ ಇದೆ ಎಂಬ ಬಗ್ಗೆ ಇಬ್ಬರೂ ಹೇಳಿಕೊಂಡಿದ್ದಾರೆ.

‘ಮೊದಲ ಮೆಸೇಜ್​ನಲ್ಲೇ ಮದ್ವೆ ಆಗ್ತೀನಿ ಎಂದಿದ್ದೆ’; ಬೆಸ್ಟ್​​ ಫ್ರೆಂಡ್​ನೇ ಮದುವೆ ಆದ ಕಥೆ ಹೇಳಿದ ನಟ ರಕ್ಷ್
ಅನುಷಾ-ರಕ್ಷ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Mar 28, 2022 | 6:42 PM

ನಟ ರಕ್ಷ್ (Actor Raksh) ಅವರು ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ‘ಗಟ್ಟಿಮೇಳ’ ಧಾರಾವಾಹಿಯಲ್ಲಿ (Gattimela Serial) ಅವರು ನಿರ್ವಹಿಸುತ್ತಿರುವ ಪಾತ್ರ ಎಲ್ಲರಿಗೂ ಇಷ್ಟವಾಗಿದೆ. ಅವರು ಕಳೆದ ವಾರದ ‘ಗೋಲ್ಡನ್​ ಗ್ಯಾಂಗ್​’ ಶೋಗೆ (Golden Gang Show) ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಅವರ ಪತ್ನಿ ಅನುಷಾ ಬಗ್ಗೆ ಹೇಳಿಕೊಂಡಿದ್ದಾರೆ. ಅನುಷಾ ಹಾಗೂ ರಕ್ಷ್ ಅವರ ನಡುವೆ ಒಳ್ಳೆಯ ಫ್ರೆಂಡ್​ಶಿಪ್​ ಇತ್ತು. ರಕ್ಷ್ ಅವರು ಅನುಷಾಗೆ ನೇರವಾಗಿ ಮದುವೆ ಪ್ರಪೋಸಲ್​ ಇಟ್ಟಿದ್ದರು. ಇಬ್ಬರ ನಡುವಿನ ಪರಿಚಯ ಸುಮಾರು 15 ವರ್ಷ ಹಳೆಯದ್ದು. ಇಬ್ಬರೂ ಮದುವೆ ಆಗಿ ಸುಖ ಸಂಸಾರ ನಡೆಸುತ್ತಿದ್ದಾರೆ. ಈ ಬಗ್ಗೆ ‘ಗೋಲ್ಡನ್​ ಗ್ಯಾಂಗ್​’ನಲ್ಲಿ ಅನುಷಾ ಮಾತನಾಡಿದ್ದಾರೆ.

‘15 ವರ್ಷದ ಲವ್ ಮಾಡಿ ಮದ್ವೆ ಆದ್ರಲ್ಲ, ಅದು ಹೇಗೆ?’ ಎಂದು ಶೋನ ನಿರೂಪಕ ಗಣೇಶ್ ಪ್ರಶ್ನೆ ಮಾಡಿದರು​. ಇದಕ್ಕೆ ಅನುಷಾ ಉತ್ತರಿಸಿದರು. ‘ನಮ್ಮದು ಲವ್ ಅಂತ ಹೇಳೋಕೆ ಆಗಲ್ಲ. ನಮ್ಮ ನಡುವೆ ಇದ್ದಿದ್ದು ಫ್ರೆಂಡ್​ಶಿಪ್​. ನನ್ನ ಬೆಸ್ಟ್​ ಫ್ರೆಂಡ್ಅನ್ನೇ ಮದುವೆ ಆಗಿದೀನಿ ಅನ್ನೋದು ನನ್ನ ಭಾವನೆ. ಎಸ್​ಎಸ್​ಎಲ್​ಸಿಯಲ್ಲಿ ನನ್ನ ಬೆಸ್ಟ್​ ಫ್ರೆಂಡ್ ಹಾಗೂ ರಕ್ಷ್​ ಕ್ಲಾಸ್​ಮೇಟ್ಸ್ ಆಗಿದ್ದರು​. ಪಿಯುಸಿಯಲ್ಲಿ ನನ್ನ ಫ್ರೆಂಡ್​, ರಕ್ಷ್​ಗೆ ಮೊದಲ ಬಾರಿ ಪರಿಚಯ ಮಾಡಿಸಿದಳು. ಆ ಬಳಿಕ ಇಬ್ಬರ ನಡುವೆ ಕಾಂಟ್ಯಾಕ್ಟ್​​ ಇರಲಿಲ್ಲ. ನಂತರ ಲಾ ಓದೋಕೆ ಹೋದಾಗ ಇಬ್ಬರೂ ಮತ್ತೆ ಭೇಟಿ ಆದ್ವಿ’ ಎಂದರು ಅನುಷಾ.

‘ನಾನು ಅವಳ ನಂಬರ್​ಅನ್ನು ಫ್ರೆಂಡ್​ ಬಳಿಯಿಂದ ಪಡೆದೆ. ನಾನು ನಿನ್ನನ್ನು ಮದುವೆ ಆಗ್ತೀನಿ ಅಂತ ಮೊದಲು ಮೆಸೇಜ್​ ಹಾಕಿದೆ. ಎಲ್ಲರೂ ಹಾಯ್​ ಅಂತ ಮೊದಲು ಕಳಿಸ್ತಾರೆ. ಆದರೆ, ನಾನು ನೇರವಾಗಿ ಮದುವೆ ಪ್ರಪೋಸಲ್​ ಇಟ್ಟಿದ್ದೆ. ಆ ಬಳಿಕ ಅವಳು ಫ್ರೆಂಡ್ ಆಗಿರ್ತೀನಿ ಎಂದಳು’ ಎಂದು ತಮ್ಮ ಕಥೆ ತೆರೆದಿಟ್ಟಿದ್ದಾರೆ ರಕ್ಷ್.

View this post on Instagram

A post shared by Zee Kannada (@zeekannada)

‘ಕಾಲೇಜ್​ ಮುಗಿದಮೇಲೆ ಏನೋ ಮಿಸ್​ ಆಗ್ತಿದೆ, ಮಿಸ್​ ಮಾಡಿಕೊಳ್ತಾ ಇದೀನಿ ಅನಿಸ್ತಾ ಇತ್ತು. ಆಗ ನಾನು ಮನೆಯಲ್ಲಿ ಹೇಳಿದೆ’ ಎಂದು ಅನುಷಾ ಹೇಳಿಕೊಂಡಿದ್ದಾರೆ. ‘ನಾನು ನಟನೆ ಮಾಡ್ತಾ ಇದ್ದೆ. ಅವರ ಮನೆಯಲ್ಲಿ ನಾನು ಆ್ಯಕ್ಟ್​ ಮಾಡೋದು ಇಷ್ಟ ಇರಲಿಲ್ಲ. ನಾನು ನಟನೆ ಬಿಟ್ಟು ಏರ್​​ಫೋರ್ಸ್​ಗೆ ಸೇರೋಣ ಅಂದುಕೊಂಡೆ. ಪರೀಕ್ಷೆ ಕೂಡ ಬರೆದೆ. ಮುಂದೊಂದು ದಿನ ಜೀವನದಲ್ಲಿ ಎಲ್ಲವೂ ಇದ್ದು, ಇವಳು ಇಲ್ಲ ಅಂದ್ರೆ ಏನು ಪ್ರಯೋಜ್ನ ಅನ್ನಿಸ್ತು. ಕೊನೆಗೂ ಅವರ ಮನೆಯಲ್ಲಿ ಒಪ್ಪಿಸಿ ಮದ್ವೆ ಆದ್ವಿ ಎಂದಿದ್ದಾರೆ.

View this post on Instagram

A post shared by Zee Kannada (@zeekannada)

ಲಾ ಕಾಲೇಜ್​ನಲ್ಲಿರುವಾಗ ಅನುಷಾ ಅವರ ಬಳಿ ಗೇರ್​ಲೆಸ್​ ಬೈಕ್ ಇತ್ತು. ಇದು ಅನುಷಾ ಹಾಗೂ ರಕ್ಷ್​ ಅವರ ಬದುಕಿನ ಭಾಗವೇ ಆಗಿತ್ತು. ಈ ಬೈಕ್​ ಬಗ್ಗೆ ಏನೆಲ್ಲ ಫೀಲಿಂಗ್ಸ್ ಇದೆ ಎಂಬ ಬಗ್ಗೆ ಇಬ್ಬರೂ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಯಶ್ ಹೊಸ ಸಿನಿಮಾ ಸೆಟ್ಟೇರೋದು ಯಾವಾಗ, ಅದು ಯಾವ ಹಂತದಲ್ಲಿದೆ?; ರಾಕಿಂಗ್​ ಸ್ಟಾರ್ ಕೊಟ್ರು ಉತ್ತರ

ರಕ್ಷ್​​​ಗೆ ಕಾಟ ಕೊಟ್ಟ ಇಬ್ಬರು ಹೆಂಡತಿಯರು; ಅವರ ಒದ್ದಾಟವನ್ನು ನೀವೇ ನೋಡಿ

Published On - 6:37 pm, Mon, 28 March 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ