ಯಶ್ ಹೊಸ ಸಿನಿಮಾ ಸೆಟ್ಟೇರೋದು ಯಾವಾಗ, ಅದು ಯಾವ ಹಂತದಲ್ಲಿದೆ?; ರಾಕಿಂಗ್ ಸ್ಟಾರ್ ಕೊಟ್ರು ಉತ್ತರ
ಯಶ್ ಮುಂದಿನ ಸಿನಿಮಾ ಯಾವಾಗ? ಅದನ್ನು ನಿರ್ದೇಶನ ಮಾಡೋದು ಯಾರು ಎಂಬಿತ್ಯಾದಿ ಪ್ರಶ್ನೆಗಳು ಅಭಿಮಾನಿಗಳ ಮನದಲ್ಲಿ ಇದೆ. ಇದಕ್ಕೆ ಯಶ್ ಉತ್ತರ ನೀಡಿದ್ದಾರೆ.
‘ಕೆಜಿಎಫ್’ ಸಿನಿಮಾ (KGF Movie) ಒಪ್ಪಿಕೊಂಡ ಬಳಿಕ ಯಶ್ ಮತ್ತಾವುದೇ ಚಿತ್ರವನ್ನೂ ಒಪ್ಪಿಕೊಂಡಿಲ್ಲ. ಐದು ವರ್ಷಗಳಿಗೂ ಹೆಚ್ಚು ಕಾಲ ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ಗಾಗಿ ಸಮಯ ಮೀಸಲಿಟ್ಟರು. ‘ಕೆಜಿಎಫ್ 2’ ತೆರೆಗೆ ಬರೋಕೆ ರೆಡಿ ಆಗಿದೆ. ಈಗ ಯಶ್ (Yash) ಮುಂದಿನ ಸಿನಿಮಾ ಯಾವಾಗ? ಅದನ್ನು ನಿರ್ದೇಶನ ಮಾಡೋದು ಯಾರು ಎಂಬಿತ್ಯಾದಿ ಪ್ರಶ್ನೆಗಳು ಅಭಿಮಾನಿಗಳ ಮನದಲ್ಲಿ ಇದೆ. ಇದಕ್ಕೆ ಯಶ್ ಉತ್ತರ ನೀಡಿದ್ದಾರೆ. ‘ನಾನು ಅಭಿಮಾನಿಗಳಿಗೋಸ್ಕರ, ಜನರಿಗೋಸ್ಕರ ಸಿನಿಮಾ ಮಾಡೋದು. ಅವರಿಗೆ ಖುಷಿ ಆಗಬೇಕು ಎಂದರೆ ಮೊದಲು ನನಗೆ ಖುಷಿ ಆಗಬೇಕು. ಎಲ್ಲಿಯವರೆಗೆ ಖುಷಿ ಇರುತ್ತೋ ಅಲ್ಲಿಯವರೆಗೆ ಕೆಲಸ ಮಾಡುತ್ತೇನೆ. ಇನ್ನೊಂದು ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ. 100 ಪರ್ಸೆಂಟ್ ಎನಿಸಿದಾಗ ಕೆಲಸ ಶುರುಮಾಡುತ್ತೇವೆ’ ಎಂದಿದ್ದಾರೆ ಯಶ್.
ಇದನ್ನೂ ಓದಿ: ‘ರಕ್ತದಿಂದ ಬರೆದ ಕಥೆ ಇದು’; ‘ಕೆಜಿಎಫ್ ಚಾಪ್ಟರ್ 2’ ಟ್ರೇಲರ್ನಲ್ಲಿ ಅಬ್ಬರಿಸಿ, ಬೊಬ್ಬಿರಿದ ಯಶ್
‘ಕೆಜಿಎಫ್ ಚಾಪ್ಟರ್ 2’ ಟ್ರೇಲರ್ಗೆ ಕೋಟಿಕೋಟಿ ವೀಕ್ಷಣೆ; ಯಶ್ ಅವರನ್ನು ತಡೆಯುವವರೇ ಇಲ್ಲ
Published on: Mar 28, 2022 04:56 PM
ಕ್ಯಾನ್ಸರ್, ಅದರ ತಡೆಗಟ್ಟುವಿಕೆ, ಮುಂಚಿತವಾಗಿ ಪತ್ತೆಹಚ್ಚುವಿಕೆ, ಚಿಕಿತ್ಸೆ
ಮೈತ್ರಿ ಕುಸ್ತಿ? ರೇವಣ್ಣಗೆ ಮಾತಾಡೋ ಅಧಿಕಾರವಿಲ್ಲ: ಅಶೋಕ್ ತಿರುಗೇಟು
ಪತ್ನಿ ಸಮೇತ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಸಿಎಂ ಡಿ.ಕೆ. ಶಿವಕುಮಾರ್
ದಲಿತರ ಮೇಲೆ ದಬ್ಬಾಳಿಕೆ ಆರೋಪ: ಗ್ರಾಮದ ರಸ್ತೆ ಬಂದ್ ಮಾಡಿ ಪ್ರತಿಭಟನೆ

