ರಕ್ಷ್​​​ಗೆ ಕಾಟ ಕೊಟ್ಟ ಇಬ್ಬರು ಹೆಂಡತಿಯರು; ಅವರ ಒದ್ದಾಟವನ್ನು ನೀವೇ ನೋಡಿ

ಈ ಬಾರಿ ಕಿರುತೆರೆ ನಿರ್ದೇಶಕ ರಾಮ್​ಜಿ, ಅನುಪಮಾ ಗೌಡ, ನಮೃತಾ ಗೌಡ ಹಾಗೂ ರಕ್ಷ್​ ಆಗಮಿಸಿದ್ದಾರೆ. ಈ ವೇಳೆ ಗಣೇಶ್​ ನೀಡಿದ ಒಂದು ಟಾಸ್ಕ್​ ಸಖತ್ ಮಜಾ ನೀಡಿದೆ.

ರಕ್ಷ್​​​ಗೆ ಕಾಟ ಕೊಟ್ಟ ಇಬ್ಬರು ಹೆಂಡತಿಯರು; ಅವರ ಒದ್ದಾಟವನ್ನು ನೀವೇ ನೋಡಿ
ಗೋಲ್ಡನ್​ ಗ್ಯಾಂಗ್ ಶೋ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Mar 27, 2022 | 2:20 PM

ರಕ್ಷ್​ (Raksh) ಅವರು ‘ಪುಟ್ಟಗೌರಿ ಮದುವೆ’ ಧಾರಾವಾಹಿ ಮೂಲಕ ಖ್ಯಾತಿ ಹೆಚ್ಚಿಸಿಕೊಂಡರು. ಈಗ ಅವರು ‘ಗಟ್ಟಿಮೇಳ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿಯಿಂದ ಅವರ ಖ್ಯಾತಿ ಮತ್ತಷ್ಟು ಹೆಚ್ಚಿದೆ. ಈಗ ಅವರು ಗೋಲ್ಡನ್​ ಸ್ಟಾರ್​ ಗಣೇಶ್ (Golden Star Ganesh) ನಡೆಸಿಕೊಡುವ ‘ಗೋಲ್ಡನ್​ ಗ್ಯಾಂಗ್​’ ಶೋಗೆ ಬಂದಿದ್ದಾರೆ. ಅವರ ಜತೆಗೆ ಅನುಪಮಾ ಗೌಡ (Anupama Gowda) ಹಾಗೂ ನಮೃತಾ ಗೌಡ ಕೂಡ ಆಗಮಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ನಡೆದ ಒಂದು ಸಣ್ಣ ಡ್ರಾಮಾ ಪ್ರೇಕ್ಷಕರಿಗೆ ಸಖತ್ ಮಜಾ ನೀಡಿದೆ. ಈ ಪ್ರೋಮೋವನ್ನು ಜೀ ಕನ್ನಡ ವಾಹಿನಿ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸಖತ್​ ವೈರಲ್ ಆಗುತ್ತಿದೆ.

‘ಗೋಲ್ಡನ್​ ಗ್ಯಾಂಗ್​’ ಕಾರ್ಯಕ್ರಮ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. ಅನೇಕ ಸೆಲೆಬ್ರಿಟಿಗಳು ತಮ್ಮ ಫ್ರೆಂಡ್ಸ್​ ಗ್ಯಾಂಗ್​ ಜತೆ ಈ ಶೋಗೆ ಬರುತ್ತಾರೆ. ಅಲ್ಲಿ ನಾನಾ ರೀತಿಯ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಈ ಬಾರಿ ಕಿರುತೆರೆ ನಿರ್ದೇಶಕ ರಾಮ್​ಜಿ, ಅನುಪಮಾ ಗೌಡ, ನಮೃತಾ ಗೌಡ ಹಾಗೂ ರಕ್ಷ್​ ಆಗಮಿಸಿದ್ದಾರೆ. ಈ ವೇಳೆ ಗಣೇಶ್​ ನೀಡಿದ ಒಂದು ಟಾಸ್ಕ್​ ಸಖತ್ ಮಜಾ ನೀಡಿದೆ.

‘ವ್ಯಕ್ತಿಯೊಬ್ಬರಿಗೆ ಇಬ್ಬರು ಹೆಂಡತಿಯರು. ಅವರಿಬ್ಬರೂ ಒಂದೇ ಮನೆಯಲ್ಲಿ ಇದ್ದಾರೆ. ಒಬ್ಬರು ವೆಜ್​ ಹಾಗೂ ಮತ್ತೊಬ್ಬರು ನಾನ್​ವೆಜ್ ಅಡುಗೆ ಮಾಡಿದ್ದಾರೆ. ಆದರೆ, ನೀವು ಬೇರೆ ಕಡೆ ಊಟ ಮಾಡಿ ಬಂದಿರುತ್ತೀರಿ. ಇಬ್ಬರನ್ನೂ ಹೇಗೆ ಮ್ಯಾನೇಜ್​ ಮಾಡ್ತೀರಾ ಅನ್ನೋದು ನಿಮಗೆ ಬಿಟ್ಟಿದ್ದು’ ಎಂದು ರಕ್ಷ್​ಗೆ ಟಾಸ್ಕ್​ ನೀಡಿದರು ಗಣೇಶ್​. ಅನುಪಮಾ ಗೌಡ ವೆಜ್​ ಅಡುಗೆ ಮಾಡಿಕೊಂಡು ಬಂದರೆ, ನಮೃತಾ ಗೌಡ ನಾನ್​ವೆಜ್​ ಅಡುಗೆ ಹಿಡಿದು ಬಂದಿದ್ದಾರೆ.

View this post on Instagram

A post shared by Zee Kannada (@zeekannada)

ನಮೃತಾ ಹಾಗೂ ಅನುಪಮಾ ಗೌಡ ಇಬ್ಬರೂ ರಕ್ಷ್​ಗೆ ಸಖತ್​ ಟಾರ್ಚರ್​ ನೀಡಿದ್ದಾರೆ. ನಾನು ಬೇರೆಕಡೆ ಊಟ ಮಾಡಿ ಬಂದಿದ್ದೇನೆ ಎಂದು ರಕ್ಷ್​ ಹೇಳಿದರೂ ಅದನ್ನು ಕೇಳದೇ ಊಟ ತಿನ್ನಿಸಿದ್ದಾರೆ. ಈ ವಿಡಿಯೋ ಸಖತ್​ ಮಜಾ ನೀಡಿದೆ. ಇದಕ್ಕೆ ಅಭಿಮಾನಿಗಳು ನಾನಾ ರೀತಿಯಲ್ಲಿ ಕಮೆಂಟ್ ಹಾಕುತ್ತಿದ್ದಾರೆ. ಕೆಲವರು ಈ ಶೋಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ. ಶನಿವಾರ ಹಾಗೂ ಭಾನುವಾರ ಈ ಶೋ ಪ್ರಸಾರ ಆಗಿದೆ.

ಇದನ್ನೂ ಓದಿ: ಧಾರಾವಾಹಿ ಮುಗಿದು ಮೂರು ವರ್ಷವಾದರೂ ಬಂದಿಲ್ಲ ಸಂಭಾವನೆ; ಕಿರುತೆರೆ ನಟಿಯ ಅಸಮಾಧಾನ

ಉಕ್ರೇನ್​ನಲ್ಲಿ ಸಿಲುಕಿದ್ದಾರೆ ಕಿರುತೆರೆ ನಟಿ?; ಸ್ಪಷ್ಟನೆ ನೀಡಿದ ಪ್ರಿಯಾ ಮೋಹನ್  

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ