Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಾರಾವಾಹಿ ಮುಗಿದು ಮೂರು ವರ್ಷವಾದರೂ ಬಂದಿಲ್ಲ ಸಂಭಾವನೆ; ಕಿರುತೆರೆ ನಟಿಯ ಅಸಮಾಧಾನ

2018ರಲ್ಲಿ ಪ್ರಸಾರವಾದ ‘ದಾಸ್ತಾನ್-ಎ-ಮೊಹಬತ್: ಸಲೀಂ ಅನಾರ್ಕಲಿ’ ಹೆಸರಿನ ಧಾರಾವಾಹಿಯಲ್ಲಿ ಸೋನಾರಿಕಾ ನಟಿಸಿದ್ದರು. ಒಟ್ಟು 69 ಎಪಿಸೋಡ್​ಗಳು ಪ್ರಸಾರವಾಗಿದ್ದವು.

ಧಾರಾವಾಹಿ ಮುಗಿದು ಮೂರು ವರ್ಷವಾದರೂ ಬಂದಿಲ್ಲ ಸಂಭಾವನೆ; ಕಿರುತೆರೆ ನಟಿಯ ಅಸಮಾಧಾನ
ಸೋನಾರಿಕಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Feb 27, 2022 | 6:17 PM

ಬಣ್ಣದ ಲೋಕ ಹೊರಗಿನಿಂದ ನೋಡೋಕೆ ತುಂಬಾನೇ ಸುಂದರವಾಗಿ ಕಾಣುತ್ತದೆ. ನಟ-ನಟಿಯರು ಐಷಾರಾಮಿ ಜೀವನ ನಡೆಸುವುದು ಮಾತ್ರ ಕಣ್ಣು ಕುಕ್ಕುತ್ತದೆ. ಆದರೆ, ಎಲ್ಲಾ ಸೆಲೆಬ್ರಿಟಿಗಳ ಜೀವನ ಒಂದೇ ರೀತಿ ಇರುವುದಿಲ್ಲ. ಕೆಲವರ ಬದುಕು ತುಂಬಾನೇ ಕಷ್ಟಕರವಾಗಿರುತ್ತದೆ. ಅದೇರೀತಿ ಹಿಂದಿ ಕಿರುತೆರೆ ನಟಿ ಸೋನಾರಿಕಾ ಭಡೋರಿಯಾ (Sonarika Bhadoria) ಜೀವನವೂ ಕಷ್ಟಕರವಾಗಿದೆ. ಅವರಿಗೆ ಬರಬೇಕಾಗಿರುವ 70 ಲಕ್ಷ ರೂಪಾಯಿ ಸಂಭಾವನೆ ಧಾರಾವಾಹಿ (Serials)ಕಡೆಯವರಿಂದ ಬಂದಿಲ್ಲ. ಇದರಿಂದ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

2018ರಲ್ಲಿ ಪ್ರಸಾರವಾದ ‘ದಾಸ್ತಾನ್-ಎ-ಮೊಹಬತ್: ಸಲೀಂ ಅನಾರ್ಕಲಿ’ ಹೆಸರಿನ ಧಾರಾವಾಹಿಯಲ್ಲಿ ಸೋನಾರಿಕಾ ನಟಿಸಿದ್ದರು. ಒಟ್ಟು 69 ಎಪಿಸೋಡ್​ಗಳು ಪ್ರಸಾರವಾಗಿದ್ದವು. ಅಚ್ಚರಿ ಎಂದರೆ, ಅವರಿಗೆ ಧಾರಾವಾಹಿ ನಿರ್ಮಾಣ ಸಂಸ್ಥೆಯವರು 70 ಲಕ್ಷ ರೂಪಾಯಿ ಹಣವನ್ನು ಸಂಭಾವನೆ ರೂಪದಲ್ಲಿ ಕೊಡುವುದು ಬಾಕಿ ಇದೆ. ನಿತ್ಯ ಒಂದೊಂದು ಕಥೆ ಹೇಳಿ ಹಣವನ್ನು ಕೊಡುವುದನ್ನು ಮುಂದೂಡುತ್ತಲೇ ಬರುತ್ತಿದ್ದಾರೆ. ಈ ಬಗ್ಗೆ ಅವರು ಅಸಮಾಧಾನ ಹೊರಹಾಕಿದ್ದಾರೆ.

‘ಧಾರಾವಾಹಿ ಮುಗಿದು ಮೂರು ವರ್ಷಗಳು ಕಳೆದಿವೆ. ಆದಾಗ್ಯೂ ಇನ್ನೂ ನನ್ನ ಬಾಕಿ ಪಾವತಿಸಿಲ್ಲ. ನಾನು ಮಾತ್ರವಲ್ಲ, ಇದೇ ಧಾರಾವಾಹಿಯ ಹಲವಾರು ನಟರು ಮತ್ತು ತಂತ್ರಜ್ಞರಿಗೆ ನೀಡಬೇಕಿರುವ ಸಂಭಾವನೆಯೂ ಬಾಕಿ ಉಳಿಸಿಕೊಳ್ಳಲಾಗಿದೆ. ಕೊವಿಡ್​ ಮೊದಲ ಅಲೆ ಕಾಣಿಸಿಕೊಂಡಾಗ ನಾನು ಸಂಕಷ್ಟಕ್ಕೆ ಸಿಲುಕಿದೆ. ನಟರಾದ ನಮಗೆ ದಿನನಿತ್ಯ ನೀರು ಕುಡಿಯಲು ಬಾವಿ ತೋಡುವ ಪರಿಸ್ಥಿತಿ ಬಂದಿದೆ. ಈ ಬಾಕಿ ಹಣ ಶೀಘ್ರವೇ ಹಿಂದಿರುಗಬಹುದು ಎಂದು ಭಾವಿಸಿದ್ದೇನೆ. ನನ್ನ ಕಡೆಯಿಂದ ಎಲ್ಲಾ ಕಾನೂನು ಕ್ರಮಗಳನ್ನು ಕೈಗೊಂಡಿದ್ದೇನೆ’ ಎಂದು ಇಟೈಮ್ಸ್​ಗೆ ನೀಡಿದ ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ ಸೋನಾರಿಕಾ.

‘ಕೊರೊನಾ ವೈರಸ್​ ಕಾಣಿಸಿಕೊಳ್ಳುವುದಕ್ಕೂ ಮೊದಲು ನಾನು ಸಿನಿಮಾ ಚಿತ್ರೀಕರಣ ಮಾಡಿದ್ದೆ. ಆ ಸಿನಿಮಾಗಳು ಥಿಯೇಟರ್​ನಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಈ ಸಾಂಕ್ರಾಮಿಕದಿಂದ ಸಿನಿಮಾದ ಬಿಡುಗಡೆ ಮುಂದೂಡಲ್ಪಡುತ್ತಲೇ ಇದೆ. ಕೊವಿಡ್​ ಮೊದಲ ಮತ್ತು ಎರಡನೇ ಅಲೆಯ ಸಮಯದಲ್ಲಿ ಥಿಯೇಟರ್​​ಗಳನ್ನು ಮುಚ್ಚಲಾಯಿತು. ಮೂರನೇ ಅಲೆಯ ಸಂದರ್ಭದಲ್ಲಿ ಹೌಸ್​ಫುಲ್​ಗೆ ಅವಕಾಶವಿರಲಿಲ್ಲ. ಇದು ನಮ್ಮ ಸಿನಿಮಾ ಮೇಲೆ ಪ್ರಭಾವ ಬೀರಿದೆ’ ಎಂದಿದ್ದಾರೆ ಅವರು.

ಸೋನಾರಿಕಾ ಅವರು ಕಿರುತೆರೆಯಿಂದ ಬಣ್ಣದ ಲೋಕಕ್ಕೆ ಕಾಲಿಟ್ಟವರು. 2011-12ರಲ್ಲಿ ಪ್ರಸಾರವಾದ ‘ತುಮ್​ ದೇನಾ ಸಾತ್​ ಮೇರಾ’ ಸೋನಾರಿಕಾ ಅವರ ಮೊದಲ ಧಾರಾವಾಹಿ. ನಂತರ ಕೆಲವು ಧಾರಾವಾಹಿಗಳಲ್ಲಿ ಅವರು ನಟಿಸಿದರು. ಚಿತ್ರರಂಗದಿಂದಲೂ ಅವರಿಗೆ ಆಫರ್​ ಬರೋಕೆ ಶುರುವಾದವು. ತೆಲುಗು, ಹಿಂದಿ ಚಿತ್ರಗಳಲ್ಲಿ ಸೋನಾರಿಕಾ ನಟಿಸಿದ್ದಾರೆ.

ಇದನ್ನೂ ಓದಿ: 20ನೇ ವಯಸ್ಸಿಗೆ ಕೋಟಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ಕಿರುತೆರೆ ನಟಿ

ಸಮಂತಾ ತೊಟ್ಟ ಈ ಸೀರೆಯ ಬೆಲೆ ಎಷ್ಟು ಲಕ್ಷ ಎಂದು ಗೆಸ್ ಮಾಡಿ; ಅಬ್ಬಬ್ಬಾ ಇಷ್ಟೊಂದಾ?

Published On - 5:10 pm, Sun, 27 February 22

ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..