AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡು ರಿಯಾಲಿಟಿ ಶೋಗಳಿಗೆ ಆಡಿಷನ್​ ಕರೆದ ಜೀ ಕನ್ನಡ; ಇದರಲ್ಲಿ ಪಾಲ್ಗೊಳ್ಳೋದು ಹೇಗೆ?

ಕರ್ನಾಟಕದ 31 ಜಿಲ್ಲೆಗಳಲ್ಲಿ ಆಡಿಷನ್​ ನಡೆಯುತ್ತಿದೆ. ಆಸಕ್ತರು ಆಡಿಷನಲ್ಲಿ ಪಾಲ್ಗೊಳ್ಳಬಹುದು. ‘ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​’ ಈಗಾಗಲೇ ಐದು ಸೀಸನ್​ ಪೂರ್ಣಗೊಳಿಸಿದ್ದು, ‘ಕಾಮಿಡಿ ಕಾಲಾಡಿಗಳು’ ಮೂರು ಸೀಸನ್​ ಪೂರ್ಣಗೊಳಿಸಿದೆ.

ಎರಡು ರಿಯಾಲಿಟಿ ಶೋಗಳಿಗೆ ಆಡಿಷನ್​ ಕರೆದ ಜೀ ಕನ್ನಡ; ಇದರಲ್ಲಿ ಪಾಲ್ಗೊಳ್ಳೋದು ಹೇಗೆ?
ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​-ಕಾಮಿಡಿ ಕಿಲಾಡಿಗಳು
TV9 Web
| Edited By: |

Updated on: Feb 28, 2022 | 1:17 PM

Share

ಕನ್ನಡ ಕಿರುತೆರೆಯಲ್ಲಿ  ಈಗ ರಿಯಾಲಿಟಿ ಶೋಗಳು (Reality Show) ಸಾಕಷ್ಟು ಹೈಲೈಟ್​ ಆಗುತ್ತಿವೆ. ಎಲ್ಲಾ ವಾಹಿನಿಗಳ ಮಧ್ಯೆ ಇದಕ್ಕಾಗಿ ದೊಡ್ಡ ಮಟ್ಟದ ಕಾಂಪಿಟೇಷನ್​ ಇದೆ. ಹೀಗಾಗಿ ಒಂದಕ್ಕಿಂತ ಒಂದು ಶೋಅನ್ನು ಅದ್ದೂರಿಯಾಗಿ ವೀಕ್ಷಕರ ಮುಂದೆ ಇಡುವ ಪ್ರಯತ್ನ ನಡೆಯುತ್ತಿದೆ. ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುವ ‘ಡಾನ್ಸ್​ ಕರ್ನಾಟಕ ಡಾನ್ಸ್​, ‘ಕಾಮಿಡಿ ಕಿಲಾಡಿಗಳು’ ಈಗಾಗಲೇ ಸಾಕಷ್ಟು ಖ್ಯಾತಿ ಪಡೆದುಕೊಂಡಿವೆ. ಈ ಎರಡೂ ಶೋಗಳು ಹಲವು ಪ್ರತಿಭೆಗಳಿಗೆ ವೇದಿಕೆ ಆಗಿದೆ. ‘ಡಾನ್ಸ್​ ಕರ್ನಾಟಕ ಡಾನ್ಸ್’ (Dance Karnataka Dance) ಮೂಲಕ ಸಾಕಷ್ಟು ಡ್ಯಾನ್ಸರ್​ಗಳು ರಾಜ್ಯಕ್ಕೆ ಪರಿಚಯವಾದರೆ, ‘ಕಾಮಿಡಿ ಕಿಲಾಡಿಗಳು’ ಮೂಲಕ ಹಲವು ಕಲಾವಿದರು ಗುರುತಿಸಿಕೊಂಡಿದ್ದಾರೆ. ಈಗ ಇವೆರಡೂ ಕಾರ್ಯಕ್ರಮದ ಹೊಸ ಸೀಸನ್​ ಆರಂಭವಾಗುತ್ತಿದೆ. ಇದಕ್ಕೆ ಆಡಿಷನ್ ಕರೆಯಲಾಗಿದೆ.

ಕರ್ನಾಟಕದ 31 ಜಿಲ್ಲೆಗಳಲ್ಲಿ ಆಡಿಷನ್​ ನಡೆಯುತ್ತಿದೆ. ಆಸಕ್ತರು ಆಡಿಷನಲ್ಲಿ ಪಾಲ್ಗೊಳ್ಳಬಹುದು. ‘ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​’ ಈಗಾಗಲೇ ಐದು ಸೀಸನ್​ ಪೂರ್ಣಗೊಳಿಸಿದ್ದು, ‘ಕಾಮಿಡಿ ಕಾಲಾಡಿಗಳು’ ಮೂರು ಸೀಸನ್​ ಪೂರ್ಣಗೊಳಿಸಿದೆ. ಈ ಬಗ್ಗೆ ಪ್ರೋಮೋ ಹಂಚಿಕೊಂಡಿರುವ ಜೀ ಕನ್ನಡ ವಾಹಿನಿ ‘ಕರ್ನಾಟಕದ 31 ಜಿಲ್ಲೆಗಳಲ್ಲಿ ಕಾಮಿಡಿ ಮತ್ತು ಡ್ಯಾನ್ಸ್ ಪ್ರತಿಭೆಗಳಿಗಾಗಿ ನಡೆಯುತ್ತಿದೆ ‘DKD-6’ ಮತ್ತು ಕಾಮಿಡಿ ಕಿಲಾಡಿಗಳು-4ರ ಮಹಾ ಆಡಿಷನ್. ನಿಮ್ಮ ಟ್ಯಾಲೆಂಟ್​ಗೆ ಇಲ್ಲಿದೆ ಅವಕಾಶದ ಹೆಬ್ಬಾಗಿಲು’ ಎಂದು ಬರೆದುಕೊಂಡಿದೆ.

ಇನ್ನು, ಈ ಕಾರ್ಯಕ್ರಮಕ್ಕೆ ವಯಸ್ಸಿನ ಮಿತಿ ಕೂಡ ಇದೆ. ‘ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​’ಗೆ ಆಡಿಷನ್​ ಕೊಡಬೇಕು ಎಂದರೆ ನಿಮ್ಮ ವಯಸ್ಸಿನ ಮಿತಿ ಇದೆ. ಡಿಕೆಡಿಗೆ ವಯಸ್ಸಿನ ಮಿತಿ 6-60 ವರ್ಷ ಹಾಗೂ ‘ಕಾಮಿಡಿ ಕಾಲಾಡಿಗಳು’ ಶೋಗೆ ಭಾಗವಹಿಸುವ ಸ್ಪರ್ಧಿಯ ವಯಸ್ಸಿನ ಮಿತಿ 16-60 ವರ್ಷ ಇದೆ. ಪಾಸ್​ಪೋರ್ಟ್​ ಸೈಜ್​ನ ಫೋಟೋ ಹಾಗೂ ಅಡ್ರೆಸ್ ಪ್ರೂಫ್​​ ಪ್ರತಿಯೊಂದಿಗೆ ಆಡಿಷನ್​ಗೆ ಬರಬೇಕು ಎಂದು ವಾಹಿನಿ ತಿಳಿಸಿದೆ.

View this post on Instagram

A post shared by Zee Kannada (@zeekannada)

ಇಂದು (ಫೆಬ್ರವರಿ 28) ಚಿತ್ರದುರ್ಗ ಹಾಗೂ ಶಿರಸಿಯಲ್ಲಿ ಆಡಿಷನ್​ ನಡೆಯುತ್ತಿದೆ. ಮಂಗಳವಾರ (ಮಾರ್ಚ್​ 1) ಹಾವೇರಿ, ಬುಧವಾರ (ಮಾರ್ಚ್​ 2) ಚಿಕ್ಕಮಗಳೂರು ಹಾಗೂ ಗದಗದಲ್ಲಿ ಆಡಿಷನ್​ ನಡೆಯುತ್ತಿದೆ. ಮುಂದಿನ ಆಡಿಷನ್​ ಬಗ್ಗೆ ವಾಹಿನಿ ಕಡೆಯಿಂದ ಶೀಘ್ರವೇ ಅಪ್​ಡೇಟ್​ ಸಿಗಲಿದೆ. ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಆಡಿಷನ್​ ನಡೆಯುತ್ತಿರುವುದು ವಿಶೇಷ.

ಇದನ್ನೂ ಓದಿ: ರಿಯಾಲಿಟಿ ಶೋನಲ್ಲಿ ಗಳಗಳನೆ ಅತ್ತ ಪರಿಣೀತಿ ಚೋಪ್ರಾ; ಇದು ಫೇಕ್​ ಎಂದವರಿಗೆ ನಟಿಯ ತಿರುಗೇಟು

ಜನಪ್ರಿಯ ರಿಯಾಲಿಟಿ ಶೋನ ನಿರೂಪಣೆ ಜವಾಬ್ದಾರಿ ಹೊತ್ತ ಸೋನು ಸೂದ್​​; ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದೆ ಶೂಟ್​

ಕಾರು ಅಪಘಾತಕ್ಕೆ 1 ವರ್ಷ: ಅಂದಿನ ಕಹಿ ಘಟನೆಯನ್ನು ಮೆಲುಕು ಹಾಕಿದ ಸಚಿವೆ
ಕಾರು ಅಪಘಾತಕ್ಕೆ 1 ವರ್ಷ: ಅಂದಿನ ಕಹಿ ಘಟನೆಯನ್ನು ಮೆಲುಕು ಹಾಕಿದ ಸಚಿವೆ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ
ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?
ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?
ಹೊರಗೆ ಗಿಲ್ಲಿ ಫ್ಯಾನ್​ ಬೇಸ್ ನೋಡಿ ಶಾಕ್ ಆದ ರಾಶಿಕಾ ಶೆಟ್ಟಿ
ಹೊರಗೆ ಗಿಲ್ಲಿ ಫ್ಯಾನ್​ ಬೇಸ್ ನೋಡಿ ಶಾಕ್ ಆದ ರಾಶಿಕಾ ಶೆಟ್ಟಿ
ಗಂಟೆಗಟ್ಟಲೆ ಟೈಂ ವೇಸ್ಟ್​ ಮಾಡಿಸಿ ಹೊರಟ ಮಹಿಳೆಯ ಕಾಲಿಗೆ ಬಿದ್ದ ವ್ಯಾಪಾರಿ
ಗಂಟೆಗಟ್ಟಲೆ ಟೈಂ ವೇಸ್ಟ್​ ಮಾಡಿಸಿ ಹೊರಟ ಮಹಿಳೆಯ ಕಾಲಿಗೆ ಬಿದ್ದ ವ್ಯಾಪಾರಿ