ರಿಯಾಲಿಟಿ ಶೋನಲ್ಲಿ ಗಳಗಳನೆ ಅತ್ತ ಪರಿಣೀತಿ ಚೋಪ್ರಾ; ಇದು ಫೇಕ್​ ಎಂದವರಿಗೆ ನಟಿಯ ತಿರುಗೇಟು

ಕಲರ್ಸ್​ ‘ಹುನರ್ಬಾಜ್’ ರಿಯಾಲಿಟಿ ಶೋಗೆ ಪರಿಣೀತಿ ಜಡ್ಜ್​ ಆಗಿದ್ದಾರೆ. ಟ್ಯಾಲೆಂಟ್​ಗಳನ್ನು ಗುರುತಿಸುವ ಶೋ ಇದಾಗಿದೆ. ಹಿರಿತೆರೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ಅವರು ಈ ಶೋ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದಾರೆ.

ರಿಯಾಲಿಟಿ ಶೋನಲ್ಲಿ ಗಳಗಳನೆ ಅತ್ತ ಪರಿಣೀತಿ ಚೋಪ್ರಾ; ಇದು ಫೇಕ್​ ಎಂದವರಿಗೆ ನಟಿಯ ತಿರುಗೇಟು
ಪರಿಣೀತಿ ಚೋಪ್ರಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jan 23, 2022 | 7:44 PM

ರಿಯಾಲಿಟಿ ಶೋಗಳ (Reality show) ಬಗ್ಗೆ, ಅಲ್ಲಿ ಬರುವ ಜಡ್ಜ್​ಗಳ ಬಗ್ಗೆ, ಅವರು ಕಣ್ಣೀರು ಹಾಕುವ ಬಗ್ಗೆ ಅನೇಕರಿಗೆ ನಂಬಿಕೆ ಇಲ್ಲ. ಇದೆಲ್ಲವೂ ಸ್ಕ್ರಿಪ್ಟೆಡ್​ ಎಂದು ದೂರುವ ಅನೇಕ ವೀಕ್ಷಕರಿದ್ದಾರೆ. ಈ ರೀತಿಯ ರಿಯಾಲಿಟಿ ಶೋಗೆ ಕಷ್ಟದಲ್ಲಿ ಜೀವನ ನಡೆಸುತ್ತಿರುವ ಕೆಲವರನ್ನು ಕರೆತಂದು ಟಿಆರ್​ಪಿ ಹೆಚ್ಚಿಸಿಕೊಳ್ಳಲು ನಾಟಕ ಮಾಡಲಾಗುತ್ತದೆ ಎಂದು ಕೆಲವರು ದೂರಿದ ಉದಾಹರಣೆ ಇದೆ. ಆದರೆ, ಇದನ್ನು ವಾಹಿನಿಯವರು ಒಪ್ಪುವುದಿಲ್ಲ. ಇತ್ತೀಚೆಗೆ ಪರಿಣೀತಿ ಚೋಪ್ರಾ (Parineeti Chopra) ಅವರು ರಿಯಾಲಿಟಿ ಶೋ ಒಂದರಲ್ಲಿ ಗಳಗಳನೆ ಅತ್ತಿದ್ದರು. ಸ್ಪರ್ಧಿಯ ಕಷ್ಟ ಕೇಳಿ ಬೇಸರಗೊಂಡಿದ್ದರು. ಈ ವಿಡಿಯೋ ವೈರಲ್​ ಆಗುತ್ತಿದೆ. ಇದನ್ನು ನೋಡಿದ ಅನೇಕರು ಟೀಕೆ ಮಾಡಿದ್ದರು. ಇದು ನಾಟಕ ಎಂದು ಟೀಕಿಸಿದ್ದರು. ಇದಕ್ಕೆ ಪರಿಣೀತಿ ಚೋಪ್ರಾ ತಿರುಗೇಟು ನೀಡಿದ್ದಾರೆ.

ಕಲರ್ಸ್​ ‘ಹುನರ್ಬಾಜ್’ ರಿಯಾಲಿಟಿ ಶೋಗೆ ಪರಿಣೀತಿ ಜಡ್ಜ್​ ಆಗಿದ್ದಾರೆ. ಟ್ಯಾಲೆಂಟ್​ಗಳನ್ನು ಗುರುತಿಸುವ ಶೋ ಇದಾಗಿದೆ. ಹಿರಿತೆರೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ಅವರು ಈ ಶೋ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದಾರೆ. ಅವರನ್ನು ಕಿರುತೆರೆಯಲ್ಲಿ ನೋಡುತ್ತಿರುವುದಕ್ಕೆ ಅಭಿಮಾನಿಗಳಿಗೆ ಖುಷಿ ಇದೆ. ಇತ್ತೀಚೆಗೆ ಕಲರ್ಸ್​ ಕನ್ನಡ ವಾಹಿನಿ ಪ್ರೋಮೋ ಒಂದನ್ನು ಹಂಚಿಕೊಂಡಿತ್ತು. ಈ ಪ್ರೋಮೋದಲ್ಲಿ ಸ್ಪರ್ಧಿಯ ಕಷ್ಟ ಕೇಳಿ ಪರಿಣೀತಿ ಅವರು ಅತ್ತಿದ್ದರು.

ಪಿಂಕ್​ವಿಲ್ಲಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಪರಿಣೀತಿ ಈ ಟೀಕೆಗಳಿಗೆ ಉತ್ತರಿಸಿದ್ದಾರೆ. ‘ನಾನು ಏನು ಬೇಕಾದರೂ ಮಾಡಬಹುದು, ಆದರೆ ನಾಟಕವಾಡಲು ನನ್ನಿಂದ ಸಾಧ್ಯವಿಲ್ಲ. ಅವರು ಪ್ರತಿಭಾವಂತರು. ಆದರೆ, ತಮ್ಮ ಜೀವನೋಪಾಯಕ್ಕಾಗಿ ತುಂಬಾನೇ ಕಷ್ಟಪಡುತ್ತಿದ್ದಾರೆ. ಕೆಲವೊಮ್ಮೆ ಜೀವನವು ಅನ್ಯಾಯವೆಸಗುತ್ತದೆ. ಇದನ್ನು ನೆನೆಪಿಸಿಕೊಂಡಾಗ ತುಂಬಾನೇ ಭಾವುಕರಾಗುತ್ತೇವೆ. ನನಗೆ ಆಗಿದ್ದೂ ಅದೆ. ನಾನು ಶೋನಲ್ಲಿ ನಡೆದುಕೊಂಡಿದ್ದು ನಿಜವಾದದ್ದು’ ಎಂದಿದ್ದಾರೆ ಪರಿಣೀತಿ.

View this post on Instagram

A post shared by Voot (@voot)

‘ಅಂಥವರ ಸ್ಟೋರಿ ಕೇಳಿದಾಗ ತುಂಬಾನೇ ಬೇಸರವಾಗುತ್ತದೆ. ಕಣ್ಣೀರ ಕಟ್ಟೆ ಒಡೆಯುತ್ತದೆ’ ಎಂದು ಪರಿಣೀತಿ ಭಾವುಕರಾದರು. ಈ ಮೂಲಕ ಆ ರಿಯಾಲಿಟಿ ಶೋನಲ್ಲಿ ನಡೆಯುತ್ತಿರುವುದು ಎಲ್ಲವೂ ನಿಜ ಎಂದು ಪರಿಣೀತಿ ಹೇಳಿಕೊಂಡಿದ್ದಾರೆ. ಪರಿಣೀತಿ ಶೋನಲ್ಲಿ ಕಣ್ಣೀರು ಹಾಕಿದ ಬಗ್ಗೆ ಅನೇಕರು ಟೀಕೆ ಮಾಡಿದ್ದರು. ಇದೊಂದು ನಕಲಿ ಕಣ್ಣೀರು ಎಂದು ಹೀಯಾಳಿಸಿದ್ದರು.

ಪರಿಣೀತಿ ಸಹೋದರಿ ಪ್ರಿಯಾಂಕಾ ಚೋಪ್ರಾಗೆ ಮಗು..

ಪರಿಣೀತಿ ಸಹೋದರಿ, ನಟಿ ಪ್ರಿಯಾಂಕಾ ಚೋಪ್ರಾ ಅವರು ತಾಯಿ ಆಗಿರುವ ವಿಚಾರದ ಬಗ್ಗೆ ಹಲವು ಚರ್ಚೆ ನಡೆಯುತ್ತಿದೆ. ಬಾಡಿಗೆ ತಾಯಿ ಮೂಲಕ ಅವರು ಮಗು ಪಡೆದಿರುವುದಕ್ಕೆ ಕೆಲವರು ಟೀಕೆ ವ್ಯಕ್ತಪಡಿಸಿದ್ದಾರೆ. ಜ.21ರಂದು ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೋನಸ್ ದಂಪತಿ ತಮಗೆ ಮೊದಲ ಮಗು ಜನಿಸಿರುವ ಬಗ್ಗೆ ಬ್ರೇಕಿಂಗ್​ ನ್ಯೂಸ್​ ನೀಡಿದರು. ತಾವು ಮಗು ಪಡೆಯುತ್ತಿರುವ ಬಗ್ಗೆ ಕಿಂಚಿತ್ತೂ ಗುಟ್ಟು ಬಿಟ್ಟುಕೊಡದ ಈ ದಂಪತಿ ಏಕಾಏಕಿ ಖುಷಿಯ ಸಮಾಚಾರ ತಿಳಿಸಿದ್ದರಿಂದ ಅಭಿಮಾನಿಗಳಿಗೆ ಅಚ್ಚರಿ ಆಯಿತು. ತಂದೆ-ತಾಯಿ ಆಗಿರುವ ನಿಕ್​ ಜೋನಸ್​-ಪ್ರಿಯಾಂಕಾ ಚೋಪ್ರಾ ಅವರಿಗೆ ಎಲ್ಲರೂ ಶುಭ ಕೋರುತ್ತಿದ್ದಾರೆ. ಈ ನಡುವೆ ಅನೇಕ ಗಾಸಿಪ್​ಗಳು ಹರಿದಾಡುತ್ತಿವೆ. ಮಗುವಿನ  ಜನನದ ಕುರಿತು ಅನೇಕ ವಿವರಗಳನ್ನು ಈ ದಂಪತಿ ಮುಚ್ಚಿಟ್ಟಿದ್ದಾರೆ. ಜನಿಸಿರುವ ಮಗು ಗಂಡು ಅಥವಾ ಹೆಣ್ಣು ಎಂಬುದನ್ನು ಸಹ ತಿಳಿಸಿಲ್ಲ. ಅಲ್ಲದೇ ಮಗುವಿನ ಆರೋಗ್ಯದ ಕುರಿತು ಈಗ ಕೆಲವು ಅನುಮಾನ ಮೂಡತೊಡಗಿದೆ. ಕೆಲವು ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿವೆ. ಅವಧಿಗಿಂತಲೂ ಮುನ್ನವೇ ಈ ಮಗು ಜನಿಸಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಜೋಕ್​ ಮಾಡುತ್ತಲೇ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದಿದ್ದ ಪ್ರಿಯಾಂಕಾ ಚೋಪ್ರಾ; ಈಗ ಅರ್ಥವಾಯ್ತು ಎಂದ ಫ್ಯಾನ್ಸ್​

ಆರೂವರೆ ತಿಂಗಳಿಗೆ ಜನಿಸಿತಾ ಪ್ರಿಯಾಂಕಾ ಚೋಪ್ರಾ ಮಗು? ಹಲವು ಸತ್ಯಗಳನ್ನು ಮುಚ್ಚಿಟ್ಟ ನಟಿ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ