‘ಅವಕಾಶ ಇದ್ದಿದ್ರೆ ನಾನು ಒಂದು ಝೂ ಮಾಡ್ತಿದ್ದೆ’; ‘ಕನ್ನಡತಿ’ ನಟ ಕಿರಣ್​ ರಾಜ್​

ಪ್ರಾಣಿ-ಪಕ್ಷಿಗಳ ಮೇಲೆ ಕಿರಣ್​ ರಾಜ್​ ಅವರಿಗೆ ವಿಶೇಷ ಪ್ರೀತಿ ಇದೆ. ಇದನ್ನು ಅವರು ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. ಅವರ ಮನೆಯಲ್ಲಿ ನಾನಾ ರೀತಿಯ-ಪ್ರಾಣಿ ಪಕ್ಷಿಗಳಿವೆ. ಈ ಬಗ್ಗೆ ಕಿರಣ್​ ರಾಜ್​ ಅವರು ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದಾರೆ.

TV9kannada Web Team

| Edited By: Rajesh Duggumane

Jan 31, 2022 | 3:05 PM

ನಟ ಕಿರಣ್​ ರಾಜ್ (Kiran Raj)​ ಅವರಿಗೆ ಕಿರುತೆರೆಯಲ್ಲಿ ಸಾಕಷ್ಟು ಬೇಡಿಕೆ ಇದೆ. ಚಿತ್ರರಂಗದಲ್ಲೂ ಅವರು ಆ್ಯಕ್ಟೀವ್​ ಆಗಿದ್ದಾರೆ. ‘ಕನ್ನಡತಿ’ ಧಾರಾವಾಹಿ (Kannadathi Serial) ಮೂಲಕ ಅವರ ಖ್ಯಾತಿ ದುಪ್ಪಟಾಗಿದೆ. ಕಿರಣ್​ ರಾಜ್​ ಅವರು ಸಾಕಷ್ಟು ಸಾಮಾಜಿಕ ಕೆಲಸಗಳನ್ನೂ ಮಾಡುತ್ತಿದ್ದಾರೆ. ಪ್ರಾಣಿ-ಪಕ್ಷಿಗಳ ಮೇಲೆ ಕಿರಣ್​ ರಾಜ್​ ಅವರಿಗೆ ವಿಶೇಷ ಪ್ರೀತಿ ಇದೆ. ಇದನ್ನು ಅವರು ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. ಅವರ ಮನೆಯಲ್ಲಿ ನಾನಾ ರೀತಿಯ-ಪ್ರಾಣಿ ಪಕ್ಷಿಗಳಿವೆ. ಈ ಬಗ್ಗೆ ಕಿರಣ್​ ರಾಜ್​ ಅವರು ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದಾರೆ. ‘ನನಗೆ ಅವಕಾಶ ಇದ್ದಿದ್ದರೆ ನಾನು ಒಂದು ಝೂ ಆರಂಭಿಸುತ್ತಿದ್ದೆ. ಅವು ತೋರಿಸುವ ಪ್ರೀತಿ ಎಂದಿಗೂ ಬದಲಾಗುವುದಿಲ್ಲ. ಅದು ಹಾಗೆಯೇ ಇರುತ್ತದೆ’ ಎಂದಿದ್ದಾರೆ ಕಿರಣ್​ ರಾಜ್​.

ಇದನ್ನೂ ಓದಿ: ‘ಕನ್ನಡತಿ’ ನಟಿ ರಂಜನಿ ರಾಘವನ್​ ಬಳಿ ಎಷ್ಟು ದುಡ್ಡಿದೆ? ಅಚ್ಚರಿಯ ವಿಚಾರ ಬಾಯ್ಬಿಟ್ಟ ಭುವಿ 

‘ಕನ್ನಡತಿ’ ಧಾರಾವಾಹಿಗಿಂತಲೂ ಮುಂಚೆ ನಟ ಕಿರಣ್​ ರಾಜ್​ ಈ ಸಿನಿಮಾ ಒಪ್ಪಿಕೊಂಡಿದ್ದು ಯಾಕೆ?

 

Follow us on

Click on your DTH Provider to Add TV9 Kannada