‘ಆ್ಯಂಕರ್ಗಳಿಗೆ ಬೈಯ್ಯುತ್ತಿದ್ದೆ, ಆದ್ರೆ ಈಗ ನಾನೇ ಆ್ಯಂಕರ್’: ಹೊಸ ಜರ್ನಿ ಆರಂಭಿಸಿದ ಬಿಗ್ ಬಾಸ್ ಮಂಜು
Gichchi Giligili: ಕಲರ್ಸ್ ಕನ್ನಡ ವಾಹಿನಿಯ ‘ಗಿಚ್ಚಿ ಗಿಲಿಗಿಲಿ’ ಕಾರ್ಯಕ್ರಮಕ್ಕೆ ಮಂಜು ಪಾವಗಡ ನಿರೂಪಕ ಆಗಿದ್ದಾರೆ. ಈ ಹೊಸ ಜವಾಬ್ದಾರಿ ಬಗ್ಗೆ ಅವರು ಮಾತನಾಡಿದ್ದಾರೆ.
ನಟ ಮಂಜು ಪಾವಗಡ (Manju Pavagada) ಅವರಿಗೆ ‘ಬಿಗ್ ಬಾಸ್’ ರಿಯಾಲಿಟಿ ಶೋನಿಂದ ಸಖತ್ ಜನಪ್ರಿಯತೆ ಸಿಕ್ಕಿತು. ಟ್ರೋಫಿ ಗೆದ್ದ ಬೆನ್ನಲ್ಲೇ ಅವರಿಗೆ ಹಲವು ಅವಕಾಶಗಳು ಹರಿದುಬಂದವು. ಅನೇಕ ಸಿನಿಮಾಗಳಲ್ಲಿ ಮಂಜು ನಟಿಸುತ್ತಿದ್ದಾರೆ. ಈ ನಡುವೆ ಒಂದು ಹೊಸ ಜವಾಬ್ದಾರಿಯನ್ನು ಅವರು ಹೊತ್ತುಕೊಂಡಿದ್ದಾರೆ. ಕಲರ್ಸ್ ಕನ್ನಡ (Colors Kannada) ವಾಹಿನಿಯ ‘ಗಿಚ್ಚಿ ಗಿಲಿಗಿಲಿ’ (Gichchi Giligili) ಕಾರ್ಯಕ್ರಮಕ್ಕೆ ಮಂಜು ಪಾವಗಡ ನಿರೂಪಕ ಆಗಿದ್ದಾರೆ. ಒಂದು ಕಾಲದಲ್ಲಿ ಆ್ಯಂಕರ್ಗಳ ಬಗ್ಗೆ ಅವರಿಗೆ ಬೇರೆ ಭಾವನೆ ಇತ್ತು. ಆದರೆ ಈಗ ಅವರೇ ಆ್ಯಂಕರ್ ಆಗಿ ಕೆಲಸ ಶುರು ಮಾಡಿದ್ದಾರೆ. ಈ ಬಗ್ಗೆ ಅವರು ಮಾತನಾಡಿದ್ದಾರೆ. ಇಷ್ಟು ದಿನ ನಟನೆ ಮಾಡುತ್ತಿದ್ದ ಅವರನ್ನು ಈಗ ಜನರು ನಿರೂಪಕನಾಗಿಯೂ ನೋಡಬಹುದು. ಹೊಸ ಜರ್ನಿ ಆರಂಭಿಸಿರುವ ಅವರು ಹೆಚ್ಚು ಎಗ್ಸೈಟ್ ಆಗಿದ್ದಾರೆ. ಸೃಜನ್ ಲೋಕೇಶ್ ಮತ್ತು ಹಿರಿಯ ನಟಿ ಶ್ರುತಿ ಬಗ್ಗೆಯೂ ಮಂಜು ಪಾವಗಡ ಮಾತನಾಡಿದ್ದಾರೆ.
ಇದನ್ನೂ ಓದಿ:
ಶುಭಾ ಪೂಂಜಾ ಮದುವೆ ವಿಡಿಯೋ ರಿಲೀಸ್; ಮಿಂಚಿದ ಮಂಜು ಪಾವಗಡ
ವಿಚಿತ್ರ ಹೆಸರಲ್ಲಿ ಅವಾರ್ಡ್ ಕೊಡೋಕೆ ಮುಂದಾದ ಮಂಜು ಪಾವಗಡ; ಬಿಗ್ ಬಾಸ್ ವಿನ್ನರ್ಗೆ ಏನಾಯ್ತು?