AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡದ ‘ಪ್ರೀತ್ಸು’ ಚಿತ್ರಕ್ಕೆ ಇಳಯರಾಜಾ ಸಂಗೀತ ನಿರ್ದೇಶನ;​ ಆಡಿಯೋ ರಿಲೀಸ್ ಮಾಡಿಕೊಂಡ​ ಖುಷಿಯಲ್ಲಿ ಚಿತ್ರತಂಡ

Preethsu Kannada movie: ‘ಪ್ರೀತ್ಸು’ ಸಿನಿಮಾದಲ್ಲಿ ನಾಯಕನಾಗಿ ಸುಭಾಷ್​ ನಟಿಸಿದ್ದಾರೆ. ಅವರಿಗೆ ಜೋಡಿಯಾಗಿ ನೇಹಾ ಅಭಿನಯಿಸಿದ್ದಾರೆ. ಕೆ. ಗಣೇಶನ್​ ನಿರ್ದೇಶನ ಮಾಡಿದ್ದಾರೆ.

ಕನ್ನಡದ ‘ಪ್ರೀತ್ಸು’ ಚಿತ್ರಕ್ಕೆ ಇಳಯರಾಜಾ ಸಂಗೀತ ನಿರ್ದೇಶನ;​ ಆಡಿಯೋ ರಿಲೀಸ್ ಮಾಡಿಕೊಂಡ​ ಖುಷಿಯಲ್ಲಿ ಚಿತ್ರತಂಡ
‘ಪ್ರೀತ್ಸು’​ ಆಡಿಯೋ ರಿಲೀಸ್
Follow us
TV9 Web
| Updated By: ಮದನ್​ ಕುಮಾರ್​

Updated on:Apr 07, 2022 | 1:54 PM

ಸಂಗೀತ ನಿರ್ದೇಶಕ ಇಳಯರಾಜಾ (Ilaiyaraaja) ಅವರು ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಸುಮಧುರವಾದ ಹಾಡುಗಳ ಮೂಲಕ ಅವರು ಮೋಡಿ ಮಾಡಿದ್ದಾರೆ. ಇಳಯರಾಜಾ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಹಾಡುಗಳಿಗೆ (Ilayaraja Songs) ಎಲ್ಲ ವಯೋಮಾನದ ಕೇಳುಗರು ಕೂಡ ತಲೆದೂಗುತ್ತಾರೆ. ಎಂದೆಂದಿಗೂ ಎವರ್​ಗ್ರೀನ್​ ಆಗಿ ಉಳಿಯುವಂತಹ ಗೀತೆಗಳನ್ನು ನೀಡಿದ ಖ್ಯಾತಿ ಇಳಯರಾಜಾ ಅವರಿಗೆ ಸಲ್ಲುತ್ತದೆ. ಅಂತಹ ಮಹಾನ್​ ಸಂಗೀತ ಮಾಂತ್ರಿಕನಿಂದ ತಮ್ಮ ಸಿನಿಮಾದ ಹಾಡುಗಳಿಗೆ ಸಂಗೀತ ನಿರ್ದೇಶನ ಮಾಡಿಸಿದರೆ ಆ ಚಿತ್ರತಂಡಕ್ಕೆ ಎಲ್ಲಿಲ್ಲದಷ್ಟು ಖುಷಿ ಆಗುವುದು ಸಹಜ. ಈಗ ಕನ್ನಡದ ‘ಪ್ರೀತ್ಸು’ ಸಿನಿಮಾ (Preethsu Kannada movie) ತಂಡಕ್ಕೆ ಆ ಖುಷಿ ಸಿಕ್ಕಿದೆ. ಹೌದು, ಸ್ಯಾಂಡಲ್​ವುಡ್​ನಲ್ಲಿ ತಯಾರಾಗಿರುವ ಈ ಚಿತ್ರಕ್ಕೆ ಇಳಯರಾಜಾ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಹಾಡುಗಳು ಈಗ ಬಿಡುಗಡೆ ಆಗಿವೆ. ‘ಪ್ರೀತ್ಸು’ ಸಿನಿಮಾಗೆ ಕೆ. ಗಣೇಶನ್​ ನಿರ್ದೇಶನ ಮಾಡಿದ್ದಾರೆ.

‘ಪ್ರೀತ್ಸು’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ಬೆಂಗಳೂರಿನ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ನಡೆಯಿತು. ಭಾ.ಮ. ಹರೀಶ್, ಟೇ.ಶಿ. ವೆಂಕಟೇಶ್ ಹಾಗೂ ರವಿ ವಿಠಲ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ತಮ್ಮ ಸಿನಿಮಾಗೆ ಇಳಯರಾಜಾ ಅವರು ಸಂಗೀತ ನೀಡಿದಕ್ಕೆ ನಿರ್ದೇಶಕ ಕೆ. ಗಣೇಶನ್​ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ‘ನಾನು ಕಳೆದ ಹಲವು ವರ್ಷಗಳಿಂದ ಕನ್ನಡ ಚಿತ್ರರಂಗಲ್ಲಿ ಇದ್ದೇನೆ. ‘ನವಭಾರತ’ ಸೇರಿದಂತೆ ಕನ್ನಡದಲ್ಲಿ ಸಾಕಷ್ಟು ಚಿತ್ರಗಳನ್ನು ನಿರ್ದೇಶನ ಮಾಡಿದ್ದೇನೆ. ಈಗ ‘ಪ್ರೀತ್ಸು’ ಸಿನಿಮಾವನ್ನು ನಿರ್ದೇಶಿಸಿದ್ದೇನೆ. ಈ ಸಿನಿಮಾದಲ್ಲಿ ವಿಭಿನ್ನ ಕಥೆ ಇದೆ. ಖ್ಯಾತ ಸಂಗೀತ ನಿರ್ದೇಶಕ ಇಳಯರಾಜಾ ಅವರು ಈ ಚಿತ್ರಕ್ಕೆ ಸಂಗೀತ ನೀಡಿರುವುದು ನಿಜಕ್ಕೂ ಸಂತಸ ತಂದಿದೆ. ನನಗೆ ಇಳಯರಾಜಾ ಅವರು ಬಹುದಿನಗಳ ಪರಿಚಯ’ ಎಂದು ಕೆ. ಗಣೇಶನ್​ ಹೇಳಿದ್ದಾರೆ.

ಈ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಸ್ವತಃ ಇಳಯರಾಜಾ ಅವರು ಬರಬೇಕಾಗಿತ್ತು. ಆದರೆ ಅನಾರೋಗ್ಯದ ಕಾರಣದಿಂದ ಅವರು ಹಾಜರಾಗಿಲ್ಲ. ‘ವೈದ್ಯರ ಸಲಹೆ ಮೇರೆಗೆ ಕೊನೆ ಕ್ಷಣದಲ್ಲಿ ಇಳಯರಾಜಾ ಅವರು ಈ ಸಮಾರಂಭಕ್ಕೆ ಬರುವುದು ರದ್ದಾಯಿತು. ವಿಡಿಯೋ ಮೂಲಕ ಅವರು ಸಂದೇಶ ಕಳುಹಿಸಿದ್ದಾರೆ’ ಎಂದು ನಿರ್ದೇಶಕರು ಮಾಹಿತಿ ನೀಡಿದ್ದಾರೆ.

‘ಪ್ರೀತ್ಸು’ ಚಿತ್ರದ ನಿರ್ಮಾಣದಲ್ಲಿ ಮಲೇಷಿಯಾದ ಗಾನ ವಿನೋದನ್ ಅವರು ಸಾಥ್ ನೀಡಿದ್ದಾರೆ. ‘ಮಲೇಷಿಯಾಗೆ ಬಂದಾಗ ಕೆ. ಗಣೇಶನ್ ಅವರು ನನಗೆ ಈ ಕಥೆ ಹೇಳಿದ್ದರು. ಕಥೆ ತುಂಬ ಇಷ್ಟವಾಯಿತು. ಹಾಗಾಗಿ ನಿರ್ಮಾಣಕ್ಕೆ ಮುಂದಾದೆವು’ ಎಂದು ಹೇಳಿರುವ ನಿರ್ಮಾಪಕ ಗಾನ ವಿನೋದನ್ ಅವರು ಸಿನಿಪ್ರಿಯರ ಪ್ರೋತ್ಸಾಹ ಕೋರಿದ್ದಾರೆ.

ಈ ಸಿನಿಮಾದಲ್ಲಿ ನಾಯಕನಾಗಿ ಸುಭಾಷ್​ ನಟಿಸಿದ್ದಾರೆ. ಅವರಿಗೆ ಜೋಡಿಯಾಗಿ ನೇಹಾ ಅಭಿನಯಿಸಿದ್ದಾರೆ. ಗಣೇಶನ್, ಮನೋಬಲ, ಸ್ವಾಮಿನಾಥ, ಮನೋಹರ್ ಮುಂತಾದವರು ಕೂಡ ‘ಪ್ರೀತ್ಸು’ ಸಿನಿಮಾದಲ್ಲಿ ನಟಿಸಿದ್ದಾರೆ. ಎ.ಸಿ. ಮಹೇಂದ್ರನ್ ಛಾಯಾಗ್ರಹಣ, ಸಂಜೀವ ಸಂಕಲನ ಮತ್ತು ಜಾನ್ ಪೀಟರ್ ಅವರು ಕಲಾ ನಿರ್ದೇಶನ ಮಾಡಿದ್ದಾರೆ. ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಂದಿದ್ದ ಭಾ.ಮ. ಹರೀಶ್, ಟೇ.ಶಿ. ವೆಂಕಟೇಶ್ ಹಾಗೂ ರವಿ ವಿಠಲ್ ಅವರು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಬಹುಭಾಷೆಯ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡುವ ಮೂಲಕ ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಇಳಯರಾಜಾ ಅವರು ಕನ್ನಡದ ಹಲವು ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಬಹುದಿನಗಳ ಬಳಿಕ ಅವರು ‘ಪ್ರೀತ್ಸು’ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಮರಳಿದ್ದಾರೆ. ಈ ಕಾರಣದಿಂದ ‘ಪ್ರೀತ್ಸು’ ಸಿನಿಮಾ ನಿರೀಕ್ಷೆ ಮೂಡಿಸಿದೆ.

ಇದನ್ನು ಓದಿ:

‘ತ್ರಿಕೋನ’ದಲ್ಲಿದೆ ಎಲ್ಲಾ ವಯೋಮಾನದವರು ಮಿಸ್ ಮಾಡದೇ ನೋಡಲೇಬೇಕಾದ ಸಬ್ಜೆಕ್ಟ್; ಚಿತ್ರದ ಕಹಾನಿ ಏನು?

ಪುನೀತ್​ ಮಾಡಬೇಕಿದ್ದ ಚಿತ್ರದಲ್ಲಿ ಯುವ ರಾಜ್​ಕುಮಾರ್​? ‘ಹೊಂಬಾಳೆ ಫಿಲ್ಮ್ಸ್​’ ಬಗ್ಗೆ ಹಬ್ಬಿದೆ ಗುಸುಗುಸು

Published On - 1:53 pm, Thu, 7 April 22

ಭಾರತ-ಪಾಕ್​ ಗಡಿಯಿಂದ Tv9 ಗ್ರೌಂಡ್​ ರಿಪೋರ್ಟ್​: ಸನ್ನದ್ಧವಾಗಿರುವ BSF ಯೋಧ
ಭಾರತ-ಪಾಕ್​ ಗಡಿಯಿಂದ Tv9 ಗ್ರೌಂಡ್​ ರಿಪೋರ್ಟ್​: ಸನ್ನದ್ಧವಾಗಿರುವ BSF ಯೋಧ
ಐಪಿಎಲ್​ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಸೂರ್ಯ
ಐಪಿಎಲ್​ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಸೂರ್ಯ
ಡಾ.ರಾಜ್ ಕುಟುಂಬದ ಜೊತೆ ನಾವು ಸದಾ ಇರುತ್ತೇವೆ: ಡಿಕೆ ಶಿವಕುಮಾರ್
ಡಾ.ರಾಜ್ ಕುಟುಂಬದ ಜೊತೆ ನಾವು ಸದಾ ಇರುತ್ತೇವೆ: ಡಿಕೆ ಶಿವಕುಮಾರ್
ನಮ್ಮ ರಕ್ತ ಕುದಿಯುತ್ತಿದೆ: ಪಹಲ್ಗಾಮ್​ ದಾಳಿಗೆ ಶ್ರೀಮುರಳಿ ಪ್ರತಿಕ್ರಿಯೆ
ನಮ್ಮ ರಕ್ತ ಕುದಿಯುತ್ತಿದೆ: ಪಹಲ್ಗಾಮ್​ ದಾಳಿಗೆ ಶ್ರೀಮುರಳಿ ಪ್ರತಿಕ್ರಿಯೆ
ಕರ್ನಾಟಕದಲ್ಲಿ ನೆಲೆಸಿರುವ ಪಾಕ್​ ಪ್ರಜೆಗಳನ್ನು ಹೊರಗೆ ಹಾಕಲು ದಿಟ್ಟ ಹೆಜ್ಜೆ
ಕರ್ನಾಟಕದಲ್ಲಿ ನೆಲೆಸಿರುವ ಪಾಕ್​ ಪ್ರಜೆಗಳನ್ನು ಹೊರಗೆ ಹಾಕಲು ದಿಟ್ಟ ಹೆಜ್ಜೆ
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಪಾಕಿಸ್ತಾನದ ಮೇಲೆ ಯುದ್ಧ: ವರಸೆ ಬದಲಿಸಿದ ಸಿದ್ದರಾಮಯ್ಯ
ಪಾಕಿಸ್ತಾನದ ಮೇಲೆ ಯುದ್ಧ: ವರಸೆ ಬದಲಿಸಿದ ಸಿದ್ದರಾಮಯ್ಯ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
ಕೆಲವರು ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ: ಮತ್ತೆ ಗುಡುಗಿದ ಡಿಕೆಶಿ
ಕೆಲವರು ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ: ಮತ್ತೆ ಗುಡುಗಿದ ಡಿಕೆಶಿ
VIDEO: ರನೌಟ್​ ಮಾಡುವ ಮುನ್ನ ಆಟಗಾರರ ಭರ್ಜರಿ ಡ್ಯಾನ್ಸ್
VIDEO: ರನೌಟ್​ ಮಾಡುವ ಮುನ್ನ ಆಟಗಾರರ ಭರ್ಜರಿ ಡ್ಯಾನ್ಸ್