ಸಂಪೂರ್ಣವಾಗಿ ಬದಲಾಯ್ತು ಅಭಿಷೇಕ್​ ಬಚ್ಚನ್​ ಚಹರೆ; ಇವರು ಅಮಿತಾಭ್​ ಮಗನಾ ಎಂದು ಪ್ರಶ್ನಿಸಿದ ಫ್ಯಾನ್ಸ್​

‘ಬಾಬ್​ ಬಿಸ್ವಾಸ್​’ ಚಿತ್ರದಲ್ಲಿ ಮುಖ್ಯ ಪಾತ್ರ ಬಾಬ್​ ಬಿಸ್ವಾಸ್​ಅನ್ನು ಅಭಿಷೇಕ್​ ನಿರ್ವಹಿಸಿದ್ದಾರೆ. ಅಭಿಷೇಕ್​ ಎರಡು ಶೇಡ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಾಂಗಧಾ ಸಿಂಗ್​ ಚಿತ್ರದ ನಾಯಕಿ.

ಸಂಪೂರ್ಣವಾಗಿ ಬದಲಾಯ್ತು ಅಭಿಷೇಕ್​ ಬಚ್ಚನ್​ ಚಹರೆ; ಇವರು ಅಮಿತಾಭ್​ ಮಗನಾ ಎಂದು ಪ್ರಶ್ನಿಸಿದ ಫ್ಯಾನ್ಸ್​
ಅಭಿಷೇಕ್​ ಬಚ್ಚನ್​


ಅಭಿಷೇಕ್​ ಬಚ್ಚನ್​ (Abhishek Bachchan) ಇತ್ತೀಚಿನ ದಿನಗಳಲ್ಲಿ ನಟನೆಗೆ ಪ್ರಾಮುಖ್ಯತೆ ಇರುವ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅವರು ಚಿತ್ರದ ಆಯ್ಕೆಯಲ್ಲಿ ತುಂಬಾನೇ ಚ್ಯೂಸಿ ಆಗಿದ್ದಾರೆ ಕೂಡ. ಈ ಕಾರಣಕ್ಕೆ ಮೊದಲಿನಷ್ಟು ಸಿನಿಮಾಗಳು ಈಗ ತೆರೆಗೆ ಬರುತ್ತಿಲ್ಲ. ಈಗ ಅವರು ‘ಬಾಬ್​ ಬಿಸ್ವಾಸ್​’ ಚಿತ್ರಕ್ಕಾಗಿ  (Bob Biswas Official Trailer) ಭಿನ್ನ ಅವತಾರ ತಾಳಿದ್ದಾರೆ. ಇದು ನಿಜಕ್ಕೂ ಅಭಿಷೇಕ್​ ಬಚ್ಚನ್​ ಅವರೇನಾ ಎಂದು ಪ್ರಶ್ನೆ ಮೂಡುವಷ್ಟು ಅವರು ಬದಲಾಗಿದ್ದಾರೆ. ಈ ಸಿನಿಮಾದ ಟ್ರೇಲರ್​ ನೋಡಿ ಅಭಿಮಾನಿಗಳು ಸಖತ್​ ಥ್ರಿಲ್​ ಆಗಿದ್ದಾರೆ.

‘ಬಾಬ್​ ಬಿಸ್ವಾಸ್​’ ಚಿತ್ರದಲ್ಲಿ ಮುಖ್ಯ ಪಾತ್ರ ಬಾಬ್​ ಬಿಸ್ವಾಸ್​ಅನ್ನು ಅಭಿಷೇಕ್​ ನಿರ್ವಹಿಸಿದ್ದಾರೆ. ಅಭಿಷೇಕ್​ ಎರಡು ಶೇಡ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಾಂಗಧಾ ಸಿಂಗ್​ ಚಿತ್ರದ ನಾಯಕಿ. ಈ ಸಿನಿಮಾದ ಟ್ರೇಲರ್​ ಸಖತ್​ ಥ್ರಿಲ್ಲಿಂಗ್​ ಆಗಿದ್ದು, ಚಿತ್ರದ ಬಗ್ಗೆ ನಿರೀಕ್ಷೆ ಮೂಡಿದೆ. ಇದೊಂದು ಕ್ರೈಮ್​ ಥ್ರಿಲ್ಲರ್​ ಸಿನಿಮಾ. ಆ ಕಾರಣಕ್ಕೆ ಸಿನಿಮಾದಲ್ಲಿ ಸಾಕಷ್ಟು ಸಸ್ಪೆನ್ಸ್​ ಇರಲಿದೆ ಎಂಬುದಕ್ಕೆ ಟ್ರೇಲರ್​ ಸಾಕ್ಷ್ಯ ನೀಡಿದೆ.

2019ರಲ್ಲಿ ಶಾರುಖ್​ ಖಾನ್​ ಅವರು ತಮ್ಮ ನಿರ್ಮಾಣ ಸಂಸ್ಥೆ ‘ರೆಡ್​ ಚಿಲ್ಲೀಸ್​’ ಅಡಿಯಲ್ಲಿ ‘ಬಾಬ್​ ಬಿಸ್ವಾಸ್​’ ಸಿನಿಮಾ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದರು. ಅಭಿಷೇಕ್​ ಬಚ್ಚನ್​ ಸಿನಿಮಾದಲ್ಲಿ ಲೀಡ್​ ರೋಲ್​ ನಿರ್ವಹಿಸಿದ್ದಾರೆ. 2020ರಲ್ಲೇ ಸಿನಿಮಾ ಶೂಟಿಂಗ್​ ಪೂರ್ಣಗೊಂಡಿತ್ತು. ಆದರೆ, ಕೊವಿಡ್​ ಕಾರಣದಿಂದ ಸಿನಿಮಾ ರಿಲೀಸ್​ ಮಾಡೋಕೆ ಸಾಧ್ಯವಾಗಿರಲಿಲ್ಲ. ಈಗ ಎಲ್ಲ ಕಡೆಗಳಲ್ಲೂ ಚಿತ್ರಮಂದಿರ ತೆರೆದಿದೆ. ಆದರೆ, ಸಾಲುಸಾಲು ಸಿನಿಮಾಗಳು ರಿಲೀಸ್​ಗೆ ರೆಡಿ ಇವೆ. ಈ ಕಾರಣಕ್ಕೆ ಶಾರುಖ್​ ಒಟಿಟಿ ಮೊರೆ ಹೋಗಿದ್ದಾರೆ. ಜೀ5ನಲ್ಲಿ ಸಿನಿಮಾ ಡಿಸೆಂಬರ್​ 3ರಂದು ತೆರೆಗೆ ಬರಲಿದೆ.

ವಿದ್ಯಾ ಬಾಲನ್​ ನಟನೆಯ ‘ಕಹಾನಿ’ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ಈ ಚಿತ್ರದಲ್ಲಿ ಬರುವ ಬಾಬ್​ ಬಿಸ್ವಾಸ್ ಹೆಸರಿನ ಪಾತ್ರವನ್ನು ಶಾಶ್ವತ್​ ಚಟರ್ಜಿ ನಿರ್ವಹಿಸಿದ್ದರು. ಇದೇ ಪಾತ್ರ ಆಧರಿಸಿ ‘ಬಾಬ್​ ಬಿಸ್ವಾಸ್’ ಸಿದ್ಧಗೊಂಡಿದೆ. ರೆಡ್​ ಚಿಲ್ಲೀಸ್​ ಬ್ಯಾನರ್​ ಅಡಿಯಲ್ಲಿ ಸಿದ್ಧವಾಗಿರುವ ಈ ಸಿನಿಮಾಗೆ ಶಾರುಖ್​ ಪತ್ನಿ ಗೌರಿ ಖಾನ್​, ಸುಜಯ್ ಘೋಷ್​ ಮತ್ತು ಗೌರವ್​ ವರ್ಮಾ ಬಂಡವಾಳ ಹೂಡಿದ್ದಾರೆ. ದಿಯಾ ಘೋಷ್​ ಅವರು ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ: ಖ್ಯಾತ ನಿರ್ಮಾಪಕನ ಜತೆ ಸಂಬಂಧ ಕಡಿದುಕೊಂಡ ಅಭಿಷೇಕ್​ ಬಚ್ಚನ್​; ಕೈ ತಪ್ಪಿತು ಹಲವು ಆಫರ್​

Click on your DTH Provider to Add TV9 Kannada