ಖ್ಯಾತ ನಿರ್ಮಾಪಕನ ಜತೆ ಸಂಬಂಧ ಕಡಿದುಕೊಂಡ ಅಭಿಷೇಕ್​ ಬಚ್ಚನ್​; ಕೈ ತಪ್ಪಿತು ಹಲವು ಆಫರ್​

‘ಬಂಟಿ ಔರ್​ ಬಬ್ಲಿ’ ಸಿನಿಮಾದಲ್ಲಿ ಅಭಿಷೇಕ್​ ಬಚ್ಚನ್​ ಹಾಗೂ ರಾಣಿ ಮುಖರ್ಜಿ ನಟಿಸಿದ್ದರು. ಈ ಸಿನಿಮಾದ ಪಾರ್ಟ್​ 2 ಬರುತ್ತಿದೆ. ಮೊದಲ ಸಿನಿಮಾದಲ್ಲಿ ಅಭಿಷೇಕ್​ ಮಾಡಿದ್ದ ಪಾತ್ರವನ್ನು ‘ಬಂಟಿ ಔರ್​ ಬಬ್ಲಿ 2’ನಲ್ಲಿ ಸೈಫ್​ ಅಲಿ ಖಾನ್​ಗೆ ನೀಡಲಾಗಿದೆ.

ಖ್ಯಾತ ನಿರ್ಮಾಪಕನ ಜತೆ ಸಂಬಂಧ ಕಡಿದುಕೊಂಡ ಅಭಿಷೇಕ್​ ಬಚ್ಚನ್​; ಕೈ ತಪ್ಪಿತು ಹಲವು ಆಫರ್​
ಅಭಿಷೇಕ್​ ಬಚ್ಚನ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Nov 15, 2021 | 10:08 PM

ಅಭಿಷೇಕ್​ ಬಚ್ಚನ್​ (Abhishek Bachchan) ಅವರಿಗೆ ಇತ್ತೀಚಿನ ವರ್ಷಗಳಲ್ಲಿ ಯಾವ ಸಿನಿಮಾಗಳೂ ಕೈ ಹಿಡಿದಿಲ್ಲ. ಅವರಿಗೆ ಯಾವ ಸಿನಿಮಾಗಳೂ ಇತ್ತೀಚೆಗೆ ಅಷ್ಟು ದೊಡ್ಡ ಮಟ್ಟದಲ್ಲಿ ಹಿಟ್​ ತಂದುಕೊಟ್ಟಿಲ್ಲ. ಇದು ಅವರಿಗೆ ಬೇಸರ ತರಿಸಿದೆ. ಸ್ಟಾರ್​ ನಟನ ಮಗನಾದರೂ ಹೇಳಿಕೊಳ್ಳುವಂಥ ಆಫರ್​ಗಳು ಬರುತ್ತಿಲ್ಲ. ಈ ಎಲ್ಲಾ ವಿಚಾರದ ಬಗ್ಗೆ ಅಭಿಷೇಕ್​ಗೆ ಬೇಸರವಿದೆ. ಈ ಮಧ್ಯೆ ಅಭಿಷೇಕ್​ ಬಚ್ಚನ್​ ಖ್ಯಾತ ನಿರ್ಮಾಪಕನ ಜತೆ ಸಂಬಂಧ ಕಡಿದುಕೊಂಡಿದ್ದಾರೆ. ಇನ್ನೆಂದಿಗೂ ಅವರ ಜತೆ ಸಿನಿಮಾ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ ಎನ್ನುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಈಗ ಬಾಲಿವುಡ್​ ಅಂಗಳದಲ್ಲಿ ಗುಸುಗುಸು ಒಂದು ಹರಿದಾಡುತ್ತಿದೆ.

‘ಬಂಟಿ ಔರ್​ ಬಬ್ಲಿ’ ಸಿನಿಮಾದಲ್ಲಿ ಅಭಿಷೇಕ್​ ಬಚ್ಚನ್​ ಹಾಗೂ ರಾಣಿ ಮುಖರ್ಜಿ ನಟಿಸಿದ್ದರು. ಈ ಸಿನಿಮಾದ ಪಾರ್ಟ್​ 2 ಬರುತ್ತಿದೆ. ಮೊದಲ ಸಿನಿಮಾದಲ್ಲಿ ಅಭಿಷೇಕ್​ ಮಾಡಿದ್ದ ಪಾತ್ರವನ್ನು ‘ಬಂಟಿ ಔರ್​ ಬಬ್ಲಿ 2’ನಲ್ಲಿ ಸೈಫ್​ ಅಲಿ ಖಾನ್​ಗೆ ನೀಡಲಾಗಿದೆ. ಹೀಗೆಕೆ ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. ಇದಕ್ಕೆ ಈಗ ಉತ್ತರ ಸಿಕ್ಕಿದೆ. ಸಿನಿಮಾದ ನಿರ್ಮಾಪಕ ಆದಿತ್ಯ ಚೋಪ್ರಾ ಹಾಗೂ ಅಭಿಷೇಕ್​ ನಡುವೆ ಯಾವುದೂ ಸರಿ ಇಲ್ಲ ಎನ್ನುತ್ತಿವೆ ಮೂಲಗಳು.

‘ಧೂಮ್​ 3’ ಸಿನಿಮಾವನ್ನು ಆದಿತ್ಯ ಚೋಪ್ರಾ ನಿರ್ಮಾಣ ಮಾಡಿದ್ದರು. ಈ ಸಿನಿಮಾದಲ್ಲಿ ಆಮಿರ್​ ಖಾನ್​ ಹಾಗೂ ಅಭಿಷೇಕ್​ ನಟಿಸಿದ್ದರು. ಧೂಮ್​ ಸರಣಿಯಲ್ಲಿ ಅಭಿಷೇಕ್​ ಈ ಮೊದಲಿನಿಂದಲೂ ನಟಿಸುತ್ತಿದ್ದಾರೆ. ಆಮಿರ್​ ಖಾನ್​ ‘ಧೂಮ್​ 3’ನಲ್ಲಿ ಮಾತ್ರ ಕಾಣಿಸಿಕೊಂಡಿದ್ದರು. ಆಮಿರ್​ ಹೇಳಿದರು ಎಂಬ ಕಾರಣಕ್ಕೆ ಶೂಟಿಂಗ್​ ಸಮಯದಲ್ಲಿ ‘ಧೂಮ್​ 3’ ಕತೆಯಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿ ಅಭಿಷೇಕ್​ ಹಾಗೂ ಆದಿತ್ಯಾ ನಡುವೆ ಜಗಳ ಏರ್ಪಟ್ಟಿತ್ತು. ಇದನ್ನು ಅಭಿಷೇಕ್​ ಸಹಿಸಿಕೊಂಡಿದ್ದರು. ಆದರೆ, ಅವರಿಗೆ ಬೇಸರ ಆಗುವ ದೊಡ್ಡ ಘಟನೆ ನಡೆದಿತ್ತು.

‘ಧೂಮ್​ 3’ ಸಿನಿಮಾದ ಕ್ಲೈಮ್ಯಾಕ್ಸ್​ ಶೂಟಿಂಗ್​ ಸೆಟ್​ಗೆ ಅಭಿಷೇಕ್​ ಬರೋದು ತಡವಾಗಿತ್ತು. ಅದಕ್ಕೂ ಮೊದಲೇ ಆಮಿರ್​ ಹಾಗೂ ಆದಿತ್ಯ ಕೂತು ಸಿನಿಮಾದ ಕ್ಲೈಮ್ಯಾಕ್ಸ್​ ಬದಲಾಯಿಸಿದ್ದರು. ಈ ವಿಚಾರ ಅಭಿಷೇಕ್​ಗೆ ಸಾಕಷ್ಟು ಬೇಸರ ಮೂಡಿಸಿತ್ತು. ಅಲ್ಲದೆ, ಇನ್ನುಮುಂದೆ ‘ಧೂಮ್​’ ಸರಣಿಯ ಯಾವುದೇ ಸಿನಿಮಾಗಳಲ್ಲೂ ಅವರು ನಟಿಸುವುದಿಲ್ಲ ಎಂದು ಶಪಥ ಮಾಡಿದ್ದರು.

ಆದಿತ್ಯ ಚೋಪ್ರಾ ‘ಬಂಟಿ ಔರ್​ ಬಬ್ಲಿ 2’ ಆಫರ್​ಅನ್ನು ಅಭಿಷೇಕ್​ಗೆ ನೀಡಿದ್ದರು. ಆದರೆ, ಅವರು ನಟಿಸುವುದಿಲ್ಲ ಎಂದು ನೇರವಾಗಿ ಹೇಳಿದ್ದರು. ಇದಾದ ನಂತರದಲ್ಲಿ ಸೈಫ್​ ಅಲಿ ಖಾನ್​ಗೆ ಈ ಆಫರ್​ ನೀಡಲಾಗಿತ್ತು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಅಭಿಷೇಕ್​ ಬಚ್ಚನ್​ಗೆ ಶಸ್ತ್ರಚಿಕಿತ್ಸೆ: ಫೋಟೋ ಹಂಚಿಕೊಂಡು ಘಟನೆ ವಿವರಿಸಿದ ನಟ…

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು