AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಭಿಷೇಕ್​ ಬಚ್ಚನ್​ಗೆ ಶಸ್ತ್ರಚಿಕಿತ್ಸೆ: ಫೋಟೋ ಹಂಚಿಕೊಂಡು ಘಟನೆ ವಿವರಿಸಿದ ನಟ…

ಚೆನ್ನೈನಲ್ಲಿ ಶೂಟಿಂಗ್​ ಮಾಡುವಾಗ ಅಭಿಷೇಕ್​ ಬಚ್ಚನ್​ಗೆ ಪೆಟ್ಟಾಗಿದ್ದು, ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಆಪರೇಷನ್​ ಆದ ಬಳಿಕ ಅವರು ತಮ್ಮ ಆರೋಗ್ಯದ ಬಗ್ಗೆ ಅಪ್​ಡೇಟ್​ ನೀಡಿದ್ದಾರೆ.

ಅಭಿಷೇಕ್​ ಬಚ್ಚನ್​ಗೆ ಶಸ್ತ್ರಚಿಕಿತ್ಸೆ: ಫೋಟೋ ಹಂಚಿಕೊಂಡು ಘಟನೆ ವಿವರಿಸಿದ ನಟ...
ಅಭಿಷೇಕ್​ ಬಚ್ಚನ್
TV9 Web
| Edited By: |

Updated on:Aug 26, 2021 | 12:02 PM

Share

ನಟ ಅಭಿಷೇಕ್​ ಬಚ್ಚನ್​ ಅವರು ಹಲವು ಪ್ರಾಜೆಕ್ಟ್​ಗಳಲ್ಲಿ ಬ್ಯುಸಿ ಆಗಿದ್ದಾರೆ. ಅಪ್ಪ ಅಮಿತಾಭ್​ ಬಚ್ಚನ್​ ಸೂಪರ್​ ಸ್ಟಾರ್​ ಆಗಿದ್ದರೂ ಕೂಡ ಅಭಿಷೇಕ್​ ಅವರು ಚಿತ್ರರಂಗದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಪರಿಶ್ರಮ ಪಡುತ್ತಲೇ ಇದ್ದಾರೆ. ಇತ್ತೀಚೆಗೆ ಅವರ ಬಗ್ಗೆ ಒಂದು ಆಘಾತಕಾರಿ ಸುದ್ದಿ ಕೇಳಿಬಂದಿತ್ತು. ಶೂಟಿಂಗ್​ ವೇಳೆ ಪೆಟ್ಟು ಮಾಡಿಕೊಂಡಿರುವ ಅವರಿಗೆ ತೀವ್ರ ಗಾಯಗಳಾಗಿವೆ ಎನ್ನಲಾಗಿತ್ತು. ಈ ಸುದ್ದಿ ಅವರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು. ಆದರೆ ಈಗ ಈ ಬಗ್ಗೆ ಸ್ವತಃ ಅಭಿಷೇಕ್​ ಬಚ್ಚನ್​ ಅವರೇ ಸ್ಪಷ್ಟನೆ ನೀಡಿದ್ದಾರೆ. ಫೋಟೋ ಸಮೇತ ಎಲ್ಲವನ್ನೂ ವಿವರಿಸಿದ್ದಾರೆ.

ಶೂಟಿಂಗ್​ ಮಾಡುವಾಗ ಅಭಿಷೇಕ್​ ಬಚ್ಚನ್​ ಅವರಿಗೆ ಪೆಟ್ಟಾಗಿದ್ದು ನಿಜ. ಈಗ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಮುಂಬೈನ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನೆರವೇರಿದ ಬಳಿಕ ಅವರು ಸೋಶಿಯಲ್​ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅವರಿಗೆ ಹೆಚ್ಚೇನೂ ತೊಂದರೆ ಆಗಿಲ್ಲ ಎಂಬುದು ಗೊತ್ತಾದ ಬಳಿಕ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಆದಷ್ಟು ಬೇಗ ಅಭಿಷೇಕ್​ ಬಚ್ಚನ್ ಗುಣಮುಖರಾಗಲಿ ಎಂದು ಸ್ನೇಹಿತರು, ಕುಟುಂಬದವರು, ಅಭಿಮಾನಿಗಳು ಹಾರೈಸುತ್ತಿದ್ದಾರೆ.

‘ನನ್ನ ಹೊಸ ಸಿನಿಮಾದ ಶೂಟಿಂಗ್​ ವೇಳೆ ಚೆನ್ನೈನಲ್ಲಿ ಬುಧವಾರ (ಆ.18) ಅವಘಡ ಸಂಭವಿಸಿತು. ಬಲಗೈಗೆ ಪೆಟ್ಟಾಯಿತು. ಸರ್ಜರಿ ಮಾಡುವುದು ಅನಿವಾರ್ಯ ಆಗಿತ್ತು. ಕೂಡಲೇ ಮುಂಬೈಗೆ ಹೊರಟುಬಂದೆ. ಸರ್ಜರಿ ಆಗಿದೆ. ಎಲ್ಲವೂ ಸರಿ ಆಗಿದೆ. ಶೂಟಿಂಗ್​ ಮುಂದುವರಿಸಲು ಈಗ ಮತ್ತೆ ಚೆನ್ನೈಗೆ ಮರಳಿದ್ದೇನೆ. ಶೋ ಮಸ್ಟ್​ ಗೋ ಆನ್​. ನನ್ನ ತಂದೆ ಹೇಳಿದಂತೆ, ಗಂಡಸರಿಗೆ ನೋವಾಗುವುದಿಲ್ಲ. ಓಕೆ ಓಕೆ ಸ್ವಲ್ಪ ನೋವಾಗುತ್ತದೆ. ನಿಮ್ಮೆಲ್ಲರ ಹಾರೈಕೆ ಮತ್ತು ಕಾಳಜಿಯ ಸಂದೇಶಕ್ಕಾಗಿ ಧನ್ಯವಾದಗಳು’ ಎಂದು ಅಭಿಷೇಕ್​ ಬಚ್ಚನ್​ ಪೋಸ್ಟ್​ ಮಾಡಿದ್ದಾರೆ.

ಈ ಪೋಸ್ಟ್​ಗೆ ಅಭಿಷೇಕ್​ ಸಹೋದರಿ ಶ್ವೇತಾ ನಂದಾ ಬಚ್ಚನ್​ ಅವರು ‘ಅತ್ಯುತ್ತಮ ರೋಗಿ’ ಎಂದು ಕಮೆಂಟ್​ ಮಾಡಿದ್ದಾರೆ. ‘ಆದಷ್ಟು ಬೇಗ ನೀವು ಚೇತರಿಸಿಕೊಳ್ಳುತ್ತೀರಿ ಎಂಬ ಭರವಸೆ ಇದೆ’ ಎಂದು ಬಾಬಿ ಡಿಯೋಲ್​ ಕಮೆಂಟ್​ ಮಾಡಿದ್ದಾರೆ. ಕಳೆದ ವರ್ಷ ಕೂಡ ಅಭಿಷೇಕ್​ ಬಚ್ಚನ್​ ಅವರಿಗೆ ಆರೋಗ್ಯ ಕೈಕೊಟ್ಟಿತ್ತು. ಅವರ ಇಡೀ ಕುಟುಂಬಕ್ಕೆ ಕೊರೊನಾ ವೈರಸ್​ ತಗುಲಿತ್ತು. ತಿಂಗಳಿಗೂ ಹೆಚ್ಚು ಸಮಯ ಅವರು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಇರಬೇಕಾಗಿತ್ತು. ಬಳಿಕ ಅವರು ಗುಣಮುಖರಾಗಿ ಮನೆಗೆ ಮರಳಿದ್ದರು.

ಸದ್ಯ ಅಭಿಷೇಕ್​ ಬಚ್ಚನ್​ ‘ದಸ್ವಿ’ ಮತ್ತು ‘ಬಾಬ್​ ಬಿಸ್ವಾಸ್​’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ವೆಬ್​ ಸಿರೀಸ್​ಗಳಲ್ಲೂ ಅವರಿಗೆ ಸಖತ್ ಬೇಡಿಕೆ ಇದೆ. ಆ ಮೂಲಕ ಓಟಿಟಿ ವೇದಿಕೆಯಲ್ಲೂ ಅವರು ಮಿಂಚುತ್ತಿದ್ದಾರೆ.

ಇದನ್ನೂ ಓದಿ:

ಅಭಿಷೇಕ್​ ಬಚ್ಚನ್​ ಖಾತೆಗೆ ಬಿತ್ತು 45.75 ಕೋಟಿ ರೂಪಾಯಿ; ಆದರೆ ಸಿನಿಮಾದಿಂದಲ್ಲ, ಅಚ್ಚರಿಗೊಂಡ ಫ್ಯಾನ್ಸ್​

ಕೊವಿಡ್​ನಿಂದ ಬೇಗ ಗುಣಮುಖರಾಗೋದು ಹೇಗೆ?; ತಾವು ಉಪಯೋಗಿಸಿದ ತಂತ್ರ ಹೇಳಿದ ಅಭಿಷೇಕ್​ ಬಚ್ಚನ್​

Published On - 11:45 am, Thu, 26 August 21

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?