ಅಭಿಷೇಕ್​ ಬಚ್ಚನ್​ ಖಾತೆಗೆ ಬಿತ್ತು 45.75 ಕೋಟಿ ರೂಪಾಯಿ; ಆದರೆ ಸಿನಿಮಾದಿಂದಲ್ಲ, ಅಚ್ಚರಿಗೊಂಡ ಫ್ಯಾನ್ಸ್​

ಅಭಿಷೇಕ್​ ಮತ್ತು ಐಶ್ವರ್ಯಾ ರೈ 2007ರಲ್ಲಿ ಮದುವೆ ಆದರು. 2011ರಲ್ಲಿ ಆರಾಧ್ಯಾ ಜನಿಸಿದರು. ಇದಾದ ಮೂರು ವರ್ಷಗಳ ಬಳಿಕ ಈ ಮನೆಯನ್ನು ಖರೀದಿ ಮಾಡಿದ್ದರು ಅಭಿಷೇಕ್​.

ಅಭಿಷೇಕ್​ ಬಚ್ಚನ್​ ಖಾತೆಗೆ ಬಿತ್ತು 45.75 ಕೋಟಿ ರೂಪಾಯಿ; ಆದರೆ ಸಿನಿಮಾದಿಂದಲ್ಲ, ಅಚ್ಚರಿಗೊಂಡ ಫ್ಯಾನ್ಸ್​
ಅಭಿಷೇಕ್ ಬಚ್ಚನ್- ಐಶ್ವರ್ಯಾ ರೈ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 12, 2021 | 10:00 PM

ಅಭಿಷೇಕ್​ ಬಚ್ಚನ್​ ಇಡೀ ಕುಟುಂಬ ಚಿತ್ರರಂಗದಲ್ಲಿ ಆ್ಯಕ್ಟಿವ್​ ಆಗಿದೆ. ಅಭಿಷೇಕ್​ ಬಚ್ಚನ್​, ಐಶ್ವರ್ಯಾ ರೈ ಹಾಗೂ ಅಮಿತಾಭ್ ಬಚ್ಚನ್​ ಚಿತ್ರರಂಗದಲ್ಲಿ ತುಂಬಾನೇ ಬೇಡಿಕೆ ಇಟ್ಟುಕೊಂಡಿದ್ದಾರೆ. ಪ್ರತಿ ಚಿತ್ರಕ್ಕೆ ಅವರು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಾರೆ. ಈಗ ಅಭಿಷೇಕ್​ ಬಚ್ಚನ್​ ಖಾತೆಗೆ ಬರೋಬ್ಬರಿ 45.75 ಕೋಟಿ ರೂಪಾಯಿ ಬಂದು ಬಿದ್ದಿದೆ. ಹಾಗಂತ, ಇದು ಸಿನಿಮಾ ವಿಚಾರಕ್ಕಲ್ಲ.

ಮುಂಬೈನ ವೊರ್ಲಿ ಭಾಗದಲ್ಲಿರುವ ಅಪಾರ್ಟ್​ಮೆಂಟ್​ನ 37ನೇ ಅಂತಸ್ತಿನಲ್ಲಿ ಅಭಿಷೇಕ್​ ಬಚ್ಚನ್​ 2014ರಲ್ಲಿ 41 ಕೋಟಿ ರೂಪಾಯಿಗೆ ಮನೆ ಖರೀದಿ ಮಾಡಿದ್ದರು. ಶಾಹಿದ್​ ಕಪೂರ್​ ಹಾಗೂ ಅಕ್ಷಯ್​ ಕುಮಾರ್ ಕೂಡ ಇದೇ ಅಪಾರ್ಟ್​ಮೆಂಟ್​ನಲ್ಲಿ ವಾಸವಾಗಿದ್ದಾರೆ. ಶಾಹಿದ್​ ಅವರು 56 ಕೋಟಿ ರೂಪಾಯಿಗೆ ಹಾಗೂ ಅಕ್ಷಯ್​ ಕುಮಾರ್​ ಅವರು 52.5 ಕೋಟಿ ರೂಪಾಯಿಗೆ  ಮನೆ ಖರೀದಿ ಮಾಡಿದ್ದರು ಎನ್ನಲಾಗಿದೆ. ಒಂದೊಮ್ಮೆ ಇದೇ ಮನೆಯಲ್ಲಿ ಉಳಿದುಕೊಂಡಿದ್ದರೆ, ಅಕ್ಷಯ್​ ಕುಮಾರ್​ ಹಾಗೂ ಶಾಹಿದ್​ ಅವರು ಅಭಿಷೇಕ್​ಗೆ ನೆರೆಹೊರೆಯವರಾಗಿರುತ್ತಿದ್ದರು.

ಅಭಿಷೇಕ್​ ಮತ್ತು ಐಶ್ವರ್ಯಾ ರೈ 2007ರಲ್ಲಿ ಮದುವೆ ಆದರು. 2011ರಲ್ಲಿ ಆರಾಧ್ಯಾ ಜನಿಸಿದರು. ಇದಾದ ಮೂರು ವರ್ಷಗಳ ಬಳಿಕ ಈ ಮನೆಯನ್ನು ಖರೀದಿ ಮಾಡಿದ್ದರು ಅಭಿಷೇಕ್​.

ಅಭಿಷೇಕ್​ ಬಚ್ಚನ್​ ಕೊನೆಯದಾಗಿ ಕಾಣಿಸಿಕೊಂಡಿದ್ದು, ‘ಬಿಗ್​ ಬುಲ್​’ ಸಿನಿಮಾದಲ್ಲಿ. ಹರ್ಷದ್​ ಮೆಹ್ತಾ ಜೀವನ ಆಧರಿಸಿ ಈ ಸಿನಿಮಾ ಸಿದ್ಧಗೊಂಡಿದೆ. ಈ ಚಿತ್ರಕ್ಕೆ ನೆಗೆಟಿವ್​ ವಿಮರ್ಶೆ ಬಂದಿತ್ತು. ಸದ್ಯ, ಅಭಿಷೇಕ್​ ‘ದಾಸ್ವಿ’ ಮತ್ತು ‘ಬಾಬ್​ ಬಿಸ್ವಾಸ್’​ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕೊವಿಡ್​ ಕಾರಣದಿಂದ ಈ ಸಿನಿಮಾ ಕೆಲಸಗಳು ವಿಳಂಬವಾಗಿವೆ.  ಐಶ್ವರ್ಯಾ ರೈ ಸದ್ಯ, ಮಣಿರತ್ನಮ್ ಅವರ ಪ್ರಾಜೆಕ್ಟ್​ನಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಎರಡು ಪಾರ್ಟ್​ಗಳಲ್ಲಿ ತೆರೆಗೆ ಬರಲಿದೆ ಎನ್ನಲಾಗುತ್ತಿದೆ.

ಇತ್ತೀಚೆಗೆ ಅಮಿತಾಭ್​ ಬಚ್ಚನ್​, ಅರ್ಜುನ್​ ಕಪೂರ್​ ಹಾಗೂ ಅಜಯ್​ ದೇವಗನ್​-ಕಾಜೊಲ್​ ಮುಂಬೈನಲ್ಲಿ ಹೊಸ ಮನೆ ಖರೀದಿ ಮಾಡಿ ಸುದ್ದಿಯಾಗಿದ್ದರು. ಇತ್ತೀಚೆಗೆ ರಾಣಿ ಮುಖರ್ಜಿ ಕೂಡ ಈ ಸಾಲಿಗೆ ಸೇರ್ಪಡೆ ಆಗಿದ್ದರು.

ಇದನ್ನೂ ಓದಿ: ಅಮಿತಾಭ್​ ಬಚ್ಚನ್​ ಮನೆ ಹಾಗೂ ಮುಂಬೈನ 3 ರೈಲ್ವೇ ನಿಲ್ದಾಣಗಳಲ್ಲಿ ಬಾಂಬ್​ ಇರಿಸಿರುವುದಾಗಿ ಪೊಲೀಸರಿಗೆ ಕರೆ ಮಾಡಿದ ಅನಾಮಿಕ

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ