‘ಇವರು ಅಂಬರೀಷ್ ತಂಗಿ ರಂಜನಿ..’: ವೇದಿಕೆಯಲ್ಲಿ ಪರಿಚಯ ಮಾಡಿಸಿದ ಸುಮಲತಾ ಅಂಬರೀಷ್
ಅಂಬರೀಶ್ ತಂಗಿ ರಂಜನಿ ಅವರ ಪುತ್ರ ಈಗ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಆ ಕುರಿತು ಸುಮಲತಾ ಅಂಬರೀಷ್ ಮಾತನಾಡಿದ್ದಾರೆ.
‘ರೆಬೆಲ್ ಸ್ಟಾರ್’ ಅಂಬರೀಷ್ ಅವರ ಪುತ್ರ ಅಭಿಷೇಕ್ ಅಂಬರೀಷ್ ಅವರು ಈಗಾಗಲೇ ಕನ್ನಡದ ಪ್ರೇಕ್ಷಕರಿಗೆ ಪರಿಚಯ ಆಗಿದ್ದಾರೆ. ಈಗ ಅಂಬರೀಷ್ ಸಹೋದರಿ ರಂಜನಿ ಅವರ ಪುತ್ರ ಕೂಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅವರ ಹೆಸರು ಕೂಡ ಅಭಿಷೇಕ್. ಅವರು ನಟಿಸಿರುವ ಸಿನಿಮಾದ ಶೀರ್ಷಿಕೆ ‘ನಿರ್ಮುಕ್ತ’. ಇತ್ತೀಚೆಗೆ ಈ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ ನಡೆಯಿತು. ಅದಕ್ಕೆ ಅತಿಥಿಗಳಾಗಿ ಸುಮಲತಾ ಅಂಬರೀಷ್ ಹಾಗೂ ಅಭಿಷೇಕ್ ಅಂಬರೀಷ್ ಆಗಮಿಸಿದ್ದರು. ವೇದಿಕೆ ಮೇಲೆ ರಂಜನಿ ಅವರ ಬಗ್ಗೆ ಸುಮಲತಾ ಮಾತನಾಡಿದರು. ‘ಇವ್ರು ಅಂಬರೀಷ್ ತಂಗಿ. ನನಗೆ ಇವರು ಜಾಸ್ತಿ ಮಾತನಾಡಲು ಬಿಡುತ್ತಿಲ್ಲ. ನಮ್ಮ ಕುಟುಂಬದಲ್ಲಿ ಇವರನ್ನು ಫೀಮೇಲ್ ವರ್ಷನ್ ಆಫ್ ಅಂಬರೀಷ್ ಅಂತ ಕರೀತೀವಿ’ ಎಂದರು ಸುಮಲತಾ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ:
‘ನಮ್ಮ ಕುಟುಂಬದಿಂದ ಮತ್ತೊಬ್ಬರು ಚಿತ್ರರಂಗಕ್ಕೆ ಬರುತ್ತಿದ್ದಾರೆ’; ಸುಮಲತಾ ಅಂಬರೀಷ್
‘ಇಲ್ಲಿಗೆ ಬರಲು ನಂಗೆ ಧೈರ್ಯ ಸಾಕಾಗಲ್ಲ’: ಕಲಾವಿದರ ಭವನದಲ್ಲಿ ಅಂಬರೀಷ್ ನೆನೆದು ರಾಕ್ಲೈನ್ ಭಾವುಕ