‘ನಮ್ಮ ಕುಟುಂಬದಿಂದ ಮತ್ತೊಬ್ಬರು ಚಿತ್ರರಂಗಕ್ಕೆ ಬರುತ್ತಿದ್ದಾರೆ’; ಸುಮಲತಾ ಅಂಬರೀಷ್
ರಮ್ಯಾ ಶ್ರೀನಿವಾಸ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ನವ್ಯಾ ಪೂಜಾರಿ ನಾಯಕಿ. ಈ ಕಾರ್ಯಕ್ರಮದಲ್ಲಿ ‘ನಮ್ಮ ಕುಟುಂಬದಿಂದ ಮತ್ತೊಂದು ಅಭಿ ಬರುತ್ತಿದ್ದಾನೆ’ ಎಂದು ಹೆಮ್ಮೆಯಿಂದ ಹೇಳಿಕೊಂಡರು ಸುಮಲತಾ.
ಅಂಬರೀಷ್ ಅವರು (Ambareesh) ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದರು. ಅಂಬರೀಷ್ ಬಳಿಕ ಅವರ ಮಗ ಅಭಿಷೇಕ್ ಅವರು (Abhishek) ಚಿತ್ರರಂಗಕ್ಕೆ ಕಾಲಿಟ್ಟರು. ಈಗ ಅಂಬರೀಷ್ ಕುಟುಂಬದ ಮತ್ತೊಬ್ಬರು ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಅವರ ಹೆಸರು ಅಭಿಷೇಕ್ ಅನ್ನೋದು ವಿಶೇಷ. ಅಂಬರೀಷ್ ಅವರ ತಂಗಿ ಮಗ ಅಭಿಷೇಕ್ ಅವರು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಅವರ ಮೊದಲ ಸಿನಿಮಾ ಹೆಸರು ‘ನಿರ್ಮುಕ್ತ’ (Nirmuktha). ಈ ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಸುಮಲತಾ ಆಗಮಿಸಿದ್ದರು. ರಮ್ಯಾ ಶ್ರೀನಿವಾಸ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ನವ್ಯಾ ಪೂಜಾರಿ ನಾಯಕಿ. ಈ ಕಾರ್ಯಕ್ರಮದಲ್ಲಿ ‘ನಮ್ಮ ಕುಟುಂಬದಿಂದ ಮತ್ತೊಂದು ಅಭಿ ಬರುತ್ತಿದ್ದಾನೆ’ ಎಂದು ಹೆಮ್ಮೆಯಿಂದ ಹೇಳಿಕೊಂಡರು ಸುಮಲತಾ.
ಇದನ್ನೂ ಓದಿ: ಪಕ್ಷೇತರ ಸಂಸದೆ ಸುಮಲತಾ ಅಂಬರೀಷ್ ಬಿಜೆಪಿಗೆ ಸೇರಲು ಪ್ಲಾನ್; ಮಗನ ರಾಜಕೀಯ ಭವಿಷ್ಯಕ್ಕಾಗಿ ಬಿಜೆಪಿ ಬಾಗಿಲು ತಟ್ಟಿದ್ರಾ?
‘ಇಲ್ಲಿಗೆ ಬರಲು ನಂಗೆ ಧೈರ್ಯ ಸಾಕಾಗಲ್ಲ’: ಕಲಾವಿದರ ಭವನದಲ್ಲಿ ಅಂಬರೀಷ್ ನೆನೆದು ರಾಕ್ಲೈನ್ ಭಾವುಕ