‘ಇಲ್ಲಿಗೆ ಬರಲು ನಂಗೆ ಧೈರ್ಯ ಸಾಕಾಗಲ್ಲ’: ಕಲಾವಿದರ ಭವನದಲ್ಲಿ ಅಂಬರೀಷ್​ ನೆನೆದು ರಾಕ್​ಲೈನ್​ ಭಾವುಕ

‘ನಿರ್ಮುಕ್ತ’ ಸಿನಿಮಾದ ಆಡಿಯೋ ರಿಲೀಸ್​ ಕಾರ್ಯಕ್ರಮ ಕಲಾವಿದರ ಸಂಘದ ಕಟ್ಟಡದಲ್ಲಿ ನಡೆಯಿತು. ವೇಳೆ ರಾಕ್​ಲೈನ್​ ವೆಂಕಟೇಶ್​ ಮಾತನಾಡಿದರು.

TV9kannada Web Team

| Edited By: Madan Kumar

Apr 30, 2022 | 2:27 PM

ಕನ್ನಡ ಚಿತ್ರರಂಗಕ್ಕೆ ನಟ ಅಂಬರೀಷ್​ (Ambareesh) ನೀಡಿದ ಕೊಡುಗೆ ದೊಡ್ಡದು. ಅದೇ ರೀತಿ ಕಲಾವಿದರ ಸಂಘದ ಕಟ್ಟಡ ನಿರ್ಮಾಣಕ್ಕಾಗಿ ಅವರು ಸಾಕಷ್ಟು ಶ್ರಮಿಸಿದ್ದರು. ಅದನ್ನು ಅವರ ಆಪ್ತ ಸ್ನೇಹಿತ ರಾಕ್​ಲೈನ್​ ವೆಂಕಟೇಶ್​ (Rockline Venkatesh) ಅವರು ಮತ್ತೆ ಸ್ಮರಿಸಿದ್ದಾರೆ. ಇತ್ತೀಚೆಗೆ ಸಿನಿಮಾ ಕಾರ್ಯಕ್ರಮದ ಸಲುವಾಗಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಇರುವ ಕಲಾವಿದರ ಸಂಘದ (Kalavidara Sangha) ಕಟ್ಟಡಕ್ಕೆ ರಾಕ್​ಲೈನ್​ ವೆಂಕಟೇಶ್​ ಬಂದಿದ್ದರು. ಆ ವೇಳೆ ವೇದಿಕೆಯಲ್ಲಿ ಅಂಬರೀಷ್​ ಕುರಿತು ಮಾತನಾಡುತ್ತ ಅವರು ಭಾವುಕರಾದರು. ‘ಈ ರೀತಿ ಭವ್ಯವಾದ ಕಲಾವಿದರ ಭವನ ಬೇರೆಲ್ಲೂ ಇಲ್ಲ. ಇದನ್ನು ಅಂಬರೀಷ್​ ನಮಗಾಗಿ ಕಟ್ಟಿಕೊಟ್ಟರು. ಈ ಕಟ್ಟಡದ ಒಂದೊಂದು ಇಟ್ಟಿಗೆಯಲ್ಲೂ ಅವರು ಇದ್ದಾರೆ. ಹಾಗಾಗಿ ಈ ವೇದಿಕೆಗೆ ಬರುವಾಗ ನನಗೆ ಧೈರ್ಯ ಸಾಕಾಗಲ್ಲ’ ಎಂದು ರಾಕ್​ಲೈನ್​ ವೆಂಕಟೇಶ್​ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

Follow us on

Click on your DTH Provider to Add TV9 Kannada