Sign In

By signing in or creating an account, you agree with Associated Broadcasting Company's Terms & Conditions and Privacy Policy.

KGF 2 Collection: ಸೋಮವಾರದ ಪರೀಕ್ಷೆಯಲ್ಲಿ ‘ಕೆಜಿಎಫ್​ 2’ ಪಾಸ್; ಹಿಂದಿ ಮಾರುಕಟ್ಟೆಯಲ್ಲಿ 5 ದಿನಕ್ಕೆ 219.56 ಕೋಟಿ ರೂ. ಕಲೆಕ್ಷನ್​

KGF Chapter 2 Hindi Box Office Collection: ಬಾಲಿವುಡ್​ ಬಾಕ್ಸ್​ ಆಫೀಸ್​ನಲ್ಲಿ ‘ಕೆಜಿಎಫ್​: ಚಾಪ್ಟರ್​ 2’ ಚಿತ್ರ ಭದ್ರವಾಗಿ ಕುಳಿತುಬಿಟ್ಟಿದೆ. 5ನೇ ದಿನವೂ ಹಣದ ಹೊಳೆ ಹರಿದಿದೆ.

KGF 2 Collection: ಸೋಮವಾರದ ಪರೀಕ್ಷೆಯಲ್ಲಿ ‘ಕೆಜಿಎಫ್​ 2’ ಪಾಸ್; ಹಿಂದಿ ಮಾರುಕಟ್ಟೆಯಲ್ಲಿ 5 ದಿನಕ್ಕೆ 219.56 ಕೋಟಿ ರೂ. ಕಲೆಕ್ಷನ್​
ಯಶ್
Follow us
TV9 Web
| Updated By: ಮದನ್​ ಕುಮಾರ್​

Updated on: Apr 19, 2022 | 1:07 PM

ಕನ್ನಡ ಚಿತ್ರರಂಗಕ್ಕೆ ಹೆಮ್ಮೆ ತಂದ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಬಿಡುಗಡೆ ಆಗಿ 6ನೇ ದಿನಕ್ಕೆ ಕಾಲಿಟ್ಟಿದೆ. 5 ದಿನ ಕಲೆಕ್ಷನ್​ ರಿಪೋರ್ಟ್​ ಬಹಿರಂಗ ಆಗಿದೆ. ಹಿಂದಿ ಮಾರುಕಟ್ಟೆಯಲ್ಲಿ ಈ ಸಿನಿಮಾ ಅತ್ಯುತ್ತಮವಾಗಿ ಪರ್ಫಾರ್ಮ್​ ಮಾಡುತ್ತಿದೆ. ಹಿಂದಿ ಚಿತ್ರರಂಗದ ಘಟಾನುಘಟಿ ಸ್ಟಾರ್​ ಕಲಾವಿದರ ಸಿನಿಮಾಗಳನ್ನೂ ಹಿಂದಿಕ್ಕಿ ‘ಕೆಜಿಎಫ್​ 2’ ಕಲೆಕ್ಷನ್​ ಮಾಡುತ್ತಿದೆ. ಯಾವುದೇ ಸಿನಿಮಾ ವೀಕೆಂಡ್​ನಲ್ಲಿ ಚೆನ್ನಾಗಿ ಕಮಾಯಿ ಮಾಡಬಹುದು. ಆದರೆ ಆ ಚಿತ್ರದ ಮುಂದಿನ ಭವಿಷ್ಯ ನಿರ್ಧಾರ ಆಗುವುದು ಸೋಮವಾರದ ಗಳಿಕೆ ಆಧಾರದ ಮೇಲೆ. ಹಾಗಾಗಿ ಸೋಮವಾರದ ಪರೀಕ್ಷೆಯಲ್ಲಿ ಬಹುತೇಕ ಸಿನಿಮಾಗಳು ಫೇಲ್​ ಆಗಿಬಿಡುತ್ತವೆ. ಆದರೆ ಯಶ್​ ನಟನೆಯ ‘ಕೆಜಿಎಫ್​: ಚಾಪ್ಟರ್​ 2’ ಚಿತ್ರ ಫೇಲ್​ ಆಗುವ ಮಾತೇ ಇಲ್ಲ. ಸೋಮವಾರದ ಪರೀಕ್ಷೆಯಲ್ಲಿ ಈ ಚಿತ್ರ ಯಶಸ್ವಿಯಾಗಿ ಪಾಸ್​ ಆಗಿದೆ. ನಿನ್ನೆ (ಏ.18) ವರ್ಕಿಂಗ್​ ಡೇ ಆಗಿದ್ದರೂ ಕೂಡ ಜನರು ಭಾರಿ ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿದ್ದಾರೆ. ಪರಿಣಾಮವಾಗಿ ಸೋಮವಾರ ಬರೋಬ್ಬರಿ 25.57 ಕೋಟಿ ರೂಪಾಯಿ ಕಲೆಕ್ಷನ್​ ಆಗಿದೆ. ಎಷ್ಟೋ ಸಿನಿಮಾಗಳು ಓಪನಿಂಗ್​ ಡೇ ಕೂಡ ಇಷ್ಟು ಹಣ ಗಳಿಸಲು ಸಾಧ್ಯವಾಗುವುದಿಲ್ಲ. ಅಂಥದ್ದರಲ್ಲಿ ‘ಕೆಜಿಎಫ್​ 2’ ಚಿತ್ರ 5ನೇ ದಿನ ಈ ಪರಿ ಕಲೆಕ್ಷನ್​ ಮಾಡಿರುವುದು ಸಾಧನೆಯೇ ಸರಿ.

‘ಕೆಜಿಎಫ್​ 2’ ಸಿನಿಮಾಗೆ ಹಿಂದಿ ಪ್ರೇಕ್ಷಕರು ಮನಸೋತಿದ್ದಾರೆ. ಹಾಗಾಗಿ ಈ ಚಿತ್ರಕ್ಕೆ ಬಾಲಿವುಡ್​ ಬಾಕ್ಸ್​ ಆಫೀಸ್​ನಲ್ಲಿ ಬಿಸ್ನೆಸ್​ ಗಟ್ಟಿ ಆಗಿದೆ. ಈ ಕುರಿತು ಟ್ರೇಡ್​ ಅನಲಿಸ್ಟ್​ ತರಣ್​ ಆದರ್ಶ್​ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಹಿಂದಿ ಗಲ್ಲಾ ಪೆಟ್ಟಿಗೆಯಲ್ಲಿ ಮೊದಲ ದಿನ 53.95 ಕೋಟಿ ರೂಪಾಯಿ, ಎರಡನೇ ದಿನ 46.79 ಕೋಟಿ ರೂಪಾಯಿ, ಮೂರನೇ ದಿನ 42.90 ಕೋಟಿ ರೂಪಾಯಿ, ನಾಲ್ಕನೇ ದಿನ 50.35 ಕೋಟಿ ರೂಪಾಯಿ ಹಾಗೂ ಐದನೇ ದಿನ 25.57 ಕೋಟಿ ರೂಪಾಯಿ ಹರಿದು ಬಂದಿರುವ ಬಗ್ಗೆ ತರಣ್​ ಆದರ್ಶ್ ಟ್ವೀಟ್​ ಮಾಡಿದ್ದಾರೆ.

6ನೇ ದಿನವಾದ ಮಂಗಳವಾರ (ಏ.19) ‘ಕೆಜಿಎಫ್​: ಚಾಪ್ಟರ್​ 2’ ಚಿತ್ರ ಅನೇಕ ಕಡೆಗಳಲ್ಲಿ ಯಶಸ್ವಿ ಪ್ರದರ್ಶನ ಮಾಡುತ್ತಿದೆ. ಪ್ರತಿ ದಿನ, ಪ್ರತಿ ರಾಜ್ಯದಿಂದ ಕೋಟ್ಯಂತರ ರೂಪಾಯಿ ಕಲೆಕ್ಷನ್​ ಆಗುತ್ತಿದೆ. ಈಗಾಗಲೇ ಈ ಸಿನಿಮಾ 29ಕ್ಕೂ ಹೆಚ್ಚು ರೆಕಾರ್ಡ್​ಗಳನ್ನು ಮಾಡಿದೆ. ಅನೇಕ ಸ್ಟಾರ್​ ನಟರ ಸಿನಿಮಾಗಳ ದಾಖಲೆಗಳನ್ನು ಮುರಿದು ಹಾಕಿದೆ. ಅಂತಿಮವಾಗಿ ‘ಕೆಜಿಎಫ್​ 2’ ಮಾಡಬಹುದಾದ ಲೈಫ್​ ಟೈಮ್​ ಬಿಸ್ನೆಸ್​ ಎಷ್ಟು ಎಂಬುದನ್ನು ತಿಳಿಯುವ ಕುತೂಹಲ ಎಲ್ಲರಲ್ಲೂ ಮೂಡಿದೆ.

ಫ್ಯಾಮಿಲಿ ಪ್ರೇಕ್ಷಕರು​ ಸಹ ಈ ಚಿತ್ರಕ್ಕೆ ಮನಸೋತಿದ್ದಾರೆ. ರಿಪೀಟ್​ ಆಡಿಯನ್ಸ್ ಕೂಡ ಹೆಚ್ಚಿದ್ದಾರೆ. ಸಿನಿಮಾದ ಹಲವು ಅಂಶಗಳು ಜನರಿಗೆ ಇಷ್ಟ ಆಗಿವೆ. ಅದ್ದೂರಿ ಮೇಕಿಂಗ್​, ಮೈನವಿರೇಳಿಸುವ ಆ್ಯಕ್ಷನ್ ಸೀನ್​ಗಳು, ತಾಯಿ ಸೆಂಟಿಮೆಂಟ್​ ದೃಶ್ಯ, ಮಾಸ್ ಡೈಲಾಗ್​, ಯಶ್​ ಅವರ ನಟನೆ, ಹಿನ್ನೆಲೆ ಸಂಗೀತ, ರೋಚಕ ಟ್ವಿಸ್ಟ್​ಗಳು ಸೇರಿದಂತೆ ಅನೇಕ ಅಂಶಗಳು ಪ್ರೇಕ್ಷಕರಿಗೆ ಇಷ್ಟ ಆಗಿವೆ.

‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆಯ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಚಿತ್ರದ 4 ದಿನದ ವರ್ಲ್ಡ್​ ವೈಡ್​ ಕಲೆಕ್ಷನ್​ ಬಗ್ಗೆ ಮಾಹಿತಿ ನೀಡಲಾಗಿದೆ. ಅದರ ಪ್ರಕಾರ, 4 ದಿನಕ್ಕೆ 546 ಕೋಟಿ ರೂಪಾಯಿ ಕಮಾಯಿ ಆಗಿದೆ.

ಇದನ್ನೂ ಓದಿ:

ಸೌತ್​ ಚಿತ್ರಗಳ ಎದುರು ಬಾಲಿವುಡ್​ ಎಡವಿದ್ದು ಎಲ್ಲಿ? ಉತ್ತರ ಹುಡುಕಿದ ‘ಕೆಜಿಎಫ್​ 2’ ಅಧೀರ ಸಂಜಯ್​ ದತ್​

‘ಕೆಜಿಎಫ್​ 2’ ಹಿಟ್​ ಆಗಿದ್ದಕ್ಕೆ ಕಬ್ಬಿನ ಹಾಲು ಟ್ರೀಟ್​ ಕೇಳಿದ ‘ಗೂಗ್ಲಿ’ ನಟಿ ಕೃತಿ ಕರಬಂಧ: ಯಶ್​ ಏನಂದ್ರು?