‘ಗಾಳಿಪಟ 2’ ಹುಡುಗರ ಎಲ್ಲ ಸಬ್ಜೆಕ್ಟ್​ ಫೇಲ್​; ಬಾಯಿ ಬಡಿದುಕೊಂಡ ಗಣೇಶ್​, ದಿಗಂತ್​, ಪವನ್​

Gaalipata 2 Exam Song Teaser: ‘ಗಾಳಿಪಟ 2’ ಸಿನಿಮಾಗೆ ಅರ್ಜುನ್​ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ಯೋಗರಾಜ್​ ಭಟ್​ ಬರೆದಿರುವ ‘ಎಕ್ಸಾಂ ಸಾಂಗ್​..’ ಏ.21ರಂದು ಬಿಡುಗಡೆ ಆಗಲಿದೆ.

‘ಗಾಳಿಪಟ 2’ ಹುಡುಗರ ಎಲ್ಲ ಸಬ್ಜೆಕ್ಟ್​ ಫೇಲ್​; ಬಾಯಿ ಬಡಿದುಕೊಂಡ ಗಣೇಶ್​, ದಿಗಂತ್​, ಪವನ್​
ದಿಗಂತ್​, ಪವನ್ ಕುಮಾರ್​. ಗಣೇಶ್​, ಬುಲೆಟ್​ ಪ್ರಕಾಶ್​
Follow us
TV9 Web
| Updated By: ಮದನ್​ ಕುಮಾರ್​

Updated on: Apr 19, 2022 | 7:58 AM

ನಿರ್ದೇಶಕ ಯೋಗರಾಜ್​ ಭಟ್​ ಮತ್ತು ನಟ ಗಣೇಶ್​ (Golden Star Ganesh) ಕಾಂಬಿನೇಷನ್​ ಎಂದರೆ ಸಿನಿಪ್ರಿಯರಿಗೆ ಏನೋ ಒಂದು ಥರ ಕುತೂಹಲ. ‘ಮುಂಗಾರು ಮಳೆ’ ಸಿನಿಮಾದಲ್ಲಿ ಈ ಜೋಡಿ ಮಾಡಿದ ಮೋಡಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಕನ್ನಡ ಚಿತ್ರರಂಗದಲ್ಲಿ ಆ ಸಿನಿಮಾ ಟ್ರೆಂಡ್​ ಸೆಟರ್​ ಚಿತ್ರವಾಗಿ ಹೊರಹೊಮ್ಮಿತ್ತು. ನಂತರ ‘ಗಾಳಿಪಟ’ ಸಿನಿಮಾದಲ್ಲಿಯೂ ಅವರಿಬ್ಬರು ಕಮಾಲ್​ ಮಾಡಿದ್ದರು. ಆ ಚಿತ್ರದಲ್ಲಿ ನಟ ದಿಗಂತ್​ ಕೂಡ ಕೈ ಜೋಡಿಸಿದ್ದರು. ಈಗ ‘ಗಾಳಿಪಟ 2’ (Gaalipata 2) ಸಿನಿಮಾ ಬಗ್ಗೆ ಎಲ್ಲಿಲ್ಲದ ನಿರೀಕ್ಷೆ ಸೃಷ್ಟಿ ಆಗಿದೆ. ಈ ಬಾರಿ ಗಣೇಶ್​ ಮತ್ತು ದಿಗಂತ್​ ಜೊತೆ ಪವನ್​ ಕುಮಾರ್​ ಕೂಡ ಸೇರಿಕೊಂಡಿರುವುದು ಗೊತ್ತೇ ಇದೆ. ಈಗ ‘ಗಾಳಿಪಟ 2’ ಚಿತ್ರದ ಮೊದಲ ಸಾಂಗ್​ ರಿಲೀಸ್​ಗೆ ದಿನಾಂಕ ಫಿಕ್ಸ್​ ಆಗಿದೆ. ಎಂದಿನಂತೆ ಮೋಡಿ ಮಾಡಲು ಯೋಗರಾಜ್​ ಭಟ್ (Yogaraj Bhat)​ ಸಿದ್ಧರಾಗಿದ್ದಾರೆ. ಏ.21ರಂದು ‘ಎಕ್ಸಾಂ ಸಾಂಗ್​’ ಬಿಡುಗಡೆ ಆಗಲಿದ್ದು, ಅದು ಹೇಗಿರಲಿದೆ ಎಂಬುದರ ಝಲಕ್​ ತೋರಿಸಲು ಈಗ ಟೀಸರ್​ ಬಿಡಲಾಗಿದೆ. ಅದರಲ್ಲಿ ಗಣೇಶ್​, ದಿಗಂತ್​, ಪವನ್​ ಕುಮಾರ್​ ಮತ್ತು ಬುಲೆಟ್​ ಪ್ರಕಾಶ್​ ಬಾಯಿ ಬಡಿದುಕೊಂಡಿದ್ದಾರೆ!

ಯೋಗರಾಜ್​ ಭಟ್​ ಅವರ ಸಿನಿಮಾ ಯಾವಾಗಲೂ ಡಿಫರೆಂಟ್​ ಆಗಿರುತ್ತವೆ. ಅವರ ಸಾಹಿತ್ಯವಂತೂ ಇನ್ನೂ ಡಿಫರೆಂಟ್​. ಜನಸಾಮಾನ್ಯರ ನಡುವಿನ ಸಾಮಾನ್ಯ ಸಂಗತಿಯೇ ಅವರ ಸಾಹಿತ್ಯದ ಮುಖ್ಯವಸ್ತು. ಅದನ್ನು ತುಂಬ ಚೆನ್ನಾಗಿ ಪ್ರಸ್ತುತಪಡಿಸುವ ಕಲೆ ಅವರಿಗೆ ಒಲಿದಿದೆ. ಈ ಬಾರಿ ಕೂಡ ಅವರು ಅಂಥದ್ದೇ ವಿಷಯವನ್ನು ಆಯ್ಕೆ ಮಾಡಿಕೊಂಡಂತಿದೆ. ಸದ್ಯಕ್ಕಂತೂ ಇದು ಎಕ್ಸಾಂ ಬರೆಯುವ ಮತ್ತು ಎಕ್ಸಾಂ ರಿಸಲ್ಟ್​ಗಾಗಿ ಕಾಯುವ ಸಮಯ. ಈ ಸಂದರ್ಭಕ್ಕೆ ಸರಿಯಾಗಿ ‘ಗಾಳಿಪಟ 2’ ಚಿತ್ರತಂಡದಿಂದ ‘ಎಕ್ಸಾಂ ಸಾಂಗ್​..’ ರಿಲೀಸ್​ ಆಗುತ್ತಿದೆ. ವಿದ್ಯಾರ್ಥಿಗಳ ಪಾತ್ರದಲ್ಲಿ ಗಣೇಶ್​, ಪವನ್​ ಕುಮಾರ್​, ದಿಗಂತ್​ ಕಾಣಿಸಿಕೊಳ್ಳುತ್ತಿದ್ದಾರೆ.

ಸದ್ಯಕ್ಕೆ ರಿಲೀಸ್​ ಆಗಿರುವ ಸಾಂಗ್​ ಟೀಸರ್​ನಲ್ಲಿ ಎಲ್ಲ ಸಬ್ಜೆಕ್ಟ್​​ನಲ್ಲಿ ಫೇಲ್​ ಆದ ಹುಡುಗರ ಕಥೆಯನ್ನು ಯೋಗರಾಜ್​ ಭಟ್​ ಅವರು ಹೇಳಿದ್ದಾರೆ. ಅದು ಕೂಡ ಎಂದಿನ ಅವರ ಫನ್ನಿ ಶೈಲಿಯಲ್ಲಿ. ಟೀಸರ್​ನಲ್ಲಿ ಬರುವ ಡೈಲಾಗ್​ ಈ ರೀತಿ ಇದೆ..

ಏ.. ನಿಂದು ಎಷ್ಟು ಸಬ್ಜೆಕ್ಟ್​ ಹೋಯ್ತು?

ಮ್ಯಾತ್ಸ್​ ಹೋದ್ವು, ಸೈನ್ಸ್​ ಹೋದ್ವು, ಕನ್ನಡ-ಹಿಂದಿ ಹೋದ್ವು, ಸೋಶಿಯಲ್ಸ್​ ಹೋದ್ವು. ಇಂಗ್ಲಿಷ್​ ಹೋಗಾಕಾ ಬೇಕು ಹೋತು.

ಎಲ್ಲವೂ ಹೊಂಟೋಯ್ತಲ್ಲೋ.. ಅದನ್ನ್ಯಾಕೆ ಸಪರೇಟ್​ ಸಪರೇಟ್​ ಹೇಳ್ತಾ ಇದೀಯಾ?

ಸಪರೇಟ್​ ಸಪರೇಟ್​ ಹೇಳಿದ್ರೆ ಯಾವುದಾದರೂ ಒಂದು ಪಾಸ್ ಆಗೈತಿ ಅಂದುಕೊಳ್ತಾರಲೇ.. ಹೊಯ್ಕಾ ಸುಮ್ನಾ.

ಈ ಸಿನಿಮಾಗೆ ಅರ್ಜುನ್​ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ಉಮಾ ಎಂ. ರಮೇಶ್​ ರೆಡ್ಡಿ ನಿರ್ಮಾಣ ಮಾಡಿದ್ದಾರೆ. ಸಂತೋಷ್​ ರೈ ಪಾತಾಜೆ ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸಿದ್ದಾರೆ. ‘ಗಾಳಿಪಟ’ ಚಿತ್ರ ಹಿಟ್ ಆಗಿತ್ತು. ಆ ಕಾರಣದಿಂದ ‘ಗಾಳಿಪಟ 2’ ಸಿನಿಮಾ ಮೇಲೆ ಹೆಚ್ಚಿನ ನಿರೀಕ್ಷೆ ಮೂಡಿದೆ. ಈ ಬಾರಿ ಯೋಗರಾಜ್​ ಭಟ್​ ಅವರು ಯಾವ ಕಥೆಯನ್ನು ಜನರ ಮುಂದಿರಿಸುತ್ತಿದ್ದಾರೆ ಎಂಬ ಕೌತುಕ ಮೂಡಿದೆ. ಬುಲೆಟ್​ ಪ್ರಕಾಶ್​, ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಅನಂತ್ ನಾಗ್​ ಮುಂತಾದವರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ:

ಗಣೇಶ್​ ಪುತ್ರಿ ಚಾರಿತ್ರ್ಯ ಬರ್ತ್​ಡೇ ಪಾರ್ಟಿ ಫೋಟೋಗಳು; ಮುದ್ದು ಮಗಳಿಗೆ ‘ಗೋಲ್ಡನ್​ ಸ್ಟಾರ್​’ ವಿಶ್​

ದಿಗಂತ್​ ಖಾತೆಯಿಂದ ಮಾಯವಾಯ್ತು ಹಣ; ಕೋರ್ಟ್​​ಗೆ​ ಅಲೆಯೋಕೆ ಶುರು ಹಚ್ಚಿಕೊಂಡ ನಟ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ