‘ಮತ್ತೆ ಅಪ್ಪು ಧ್ವನಿ ಕೇಳಿಸ್ತಿದೆ, ಇದಕ್ಕಿಂತ ಖುಷಿ ಇನ್ನೇನಿದೆ?’; ಜೇಮ್ಸ್ ರಿಲೀಸ್ ಸುದ್ದಿ ಕೇಳಿ ಶಿವಣ್ಣ ಫುಲ್ ಹ್ಯಾಪಿ
ಪುನೀತ್ ರಾಜ್ಕುಮಾರ್ ಅವರ ಧ್ವನಿಯಲ್ಲಿ ‘ಜೇಮ್ಸ್’ ಮರು ಬಿಡುಗಡೆ ಆಗುತ್ತಿರುವ ಸುದ್ದಿ ಕೇಳಿ ಎಲ್ಲರಿಗೂ ಖುಷಿ ಆಗಿದೆ. ಈ ಬಗ್ಗೆ ಶಿವರಾಜ್ಕುಮಾರ್ ಮಾತನಾಡಿದ್ದಾರೆ.
‘ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ (Puneeth Rajkumar) ನಾಯಕನಾಗಿ ಅಭಿನಯಿಸಿದ ಕೊನೇ ಸಿನಿಮಾ ‘ಜೇಮ್ಸ್’ ಚಿತ್ರ ಮಾ.17ರಂದು ಬಿಡುಗಡೆ ಆಗಿತ್ತು. ಆದರೆ ಈಗ ಮರು ಬಿಡುಗಡೆ ಮಾಡಲಾಗುತ್ತಿದೆ. ಈ ಮೊದಲು ‘ಜೇಮ್ಸ್’ (James Movie) ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ಅವರ ಧ್ವನಿ ಇರಲಿಲ್ಲ. ಈಗ ಹೊಸ ತಂತ್ರಜ್ಞಾನ ಬಳಸಿ ಪುನೀತ್ ರಾಜ್ಕುಮಾರ್ ಧ್ವನಿಯನ್ನೇ ಅವರ ಪಾತ್ರಕ್ಕೆ ಅಳವಡಿಸಲಾಗಿದೆ. ಈ ಕುರಿತಾಗಿ ನಟ ಶಿವರಾಜ್ಕುಮಾರ್ (Shivarajkumar) ಮಾತನಾಡಿದ್ದಾರೆ. ‘ಈ ವಿಷಯ ಕೇಳಿ ನನಗೆ ಮೊದಲು ಆಶ್ಚರ್ಯ ಆಯಿತು. ತುಂಬ ಚೆನ್ನಾಗಿ ಬಂದಿದೆ ಅಂತ ಹೇಳ್ತಿದ್ದಾರೆ. ಅದಕ್ಕಿಂತ ಬೇರೇನು ಖುಷಿ ಬೇಕು? ಮರುಬಿಡುಗಡೆ ಮಾಡುತ್ತಿರುವುದು ಸಂತೋಷ ತಂದಿದೆ’ ಎಂದು ಶಿವರಾಜ್ಕುಮಾರ್ ಹೇಳಿದ್ದಾರೆ. ಏ.22ರಂದು ‘ಜೇಮ್ಸ್’ ಚಿತ್ರ ಮರು ಬಿಡುಗಡೆ ಆಗುತ್ತಿದೆ. ಈ ಚಿತ್ರಕ್ಕೆ ಚೇತನ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಕಿಶೋರ್ ಪತ್ತಿಕೊಂಡ ನಿರ್ಮಾಣ ಮಾಡಿದ್ದು, ಪುನೀತ್ಗೆ ಜೋಡಿಯಾಗಿ ಪ್ರಿಯಾ ಆನಂದ್ ಅಭಿನಯಿಸಿದ್ದಾರೆ. ಅಪ್ಪು ಧ್ವನಿಯಲ್ಲೇ ‘ಜೇಮ್ಸ್’ ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ.
ಇದನ್ನೂ ಓದಿ:
ಪುನೀತ್ ರಾಜ್ಕುಮಾರ್ ಬ್ಯಾನರ್ ಸಲುವಾಗಿ ಫ್ಯಾನ್ಸ್ ಮತ್ತು ಗ್ರಾಮಸ್ಥರ ನಡುವೆ ಮಾರಾಮಾರಿ; ಏನಿದು ಕಿರಿಕ್?
ಪುನೀತ್ ಮಾಡಬೇಕಿದ್ದ ಚಿತ್ರದಲ್ಲಿ ಯುವ ರಾಜ್ಕುಮಾರ್? ‘ಹೊಂಬಾಳೆ ಫಿಲ್ಮ್ಸ್’ ಬಗ್ಗೆ ಹಬ್ಬಿದೆ ಗುಸುಗುಸು