ಪುನೀತ್​ ರಾಜ್​ಕುಮಾರ್​ ಬ್ಯಾನರ್​ ಸಲುವಾಗಿ ಫ್ಯಾನ್ಸ್​ ಮತ್ತು ಗ್ರಾಮಸ್ಥರ ನಡುವೆ ಮಾರಾಮಾರಿ; ಏನಿದು ಕಿರಿಕ್​?

ಪುನೀತ್​ ರಾಜ್​ಕುಮಾರ್​ ಅವರ ಬ್ಯಾನರ್​ ತೆಗೆಯಲು ಸಾಧ್ಯವಿಲ್ಲ ಎಂದು ಅಪ್ಪು ಫ್ಯಾನ್ಸ್​ ಪಟ್ಟು ಹಿಡಿದಿದ್ದಾರೆ. ಇದೇ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.

ಪುನೀತ್​ ರಾಜ್​ಕುಮಾರ್​ ಬ್ಯಾನರ್​ ಸಲುವಾಗಿ ಫ್ಯಾನ್ಸ್​ ಮತ್ತು ಗ್ರಾಮಸ್ಥರ ನಡುವೆ ಮಾರಾಮಾರಿ; ಏನಿದು ಕಿರಿಕ್​?
ಪುನೀತ್​ ರಾಜ್​ಕುಮಾರ್
Follow us
| Updated By: ಮದನ್​ ಕುಮಾರ್​

Updated on: Apr 18, 2022 | 8:12 AM

ನಟ ಪುನೀತ್​ ರಾಜ್​ಕುಮಾರ್​ (Puneeth Rajkumar) ನಿಧನದ ನಂತರ ಅವರ ಅಭಿಮಾನಿಗಳಿಗೆ ಎಷ್ಟು ನೋವಾಯಿತು ಎಂಬುದನ್ನು ವಿವರಿಸಲು ಸಾಧ್ಯವಿಲ್ಲ. ತಮ್ಮ ನೆಚ್ಚಿನ ನಟ ಇನ್ನಿಲ್ಲ ಎಂಬುದನ್ನು ಒಪ್ಪಿಕೊಳ್ಳಲು ಫ್ಯಾನ್ಸ್ ಮನಸ್ಸು ಸಿದ್ಧವಿಲ್ಲ. ಅಪ್ಪು ಹೆಸರನ್ನು ಅಮರವಾಗಿಸಲು ಅನೇಕ ಕೆಲಸಗಳು ನಡೆಯುತ್ತಿವೆ. ಅದರ ನಡುವೆ ಕೆಲವು ಅಚಾತುರ್ಯ ನಡೆದಿರುವುದು ಬೇಸರದ ಸಂಗತಿ. ಪುನೀತ್​ ರಾಜ್​ಕುಮಾರ್​ ಅವರ ಬ್ಯಾನರ್​ ಹಾಕುವ ಸಲುವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ ಆಗಿದೆ. ಯಲಹಂಕದ (Yelahanka) ಅರಕೆರೆ ಗ್ರಾಮ ಪಂಚಾಯಿತಿಯ ಭೈರಾಪುರದಲ್ಲಿ ಈ ಘಟನೆ ನಡೆದಿದೆ. ಪುನೀತ್​ ರಾಜ್​ಕುಮಾರ್​ ಅಭಿಮಾನಿಗಳು (Puneeth Rajkumar Fans) ಮತ್ತು ಗ್ರಾಮಸ್ಥರ ನಡುವೆ ಶುರುವಾದ ಜಗಳ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಅಷ್ಟಕ್ಕೂ ಪುನೀತ್​ ರಾಜ್​ಕುಮಾರ್​ ಅವರ ಬ್ಯಾನರ್​ಗೆ ಗ್ರಾಮಸ್ಥರ ವಿರೋಧ ಯಾಕೆ? ಏನಿದು ಘಟನೆ? ಇಲ್ಲಿದೆ ಪೂರ್ತಿ ವಿವರ..

ಪುನೀತ್​ ರಾಜ್​ಕುಮಾರ್​ ನಿಧನರಾಗಿ 6 ತಿಂಗಳಾಗುತ್ತಾ ಬಂತು. ಎಷ್ಟೇ ಸಮಯ ಕಳೆದರೂ ಅವರಿಲ್ಲ ಎಂಬ ನೋವು ಮರೆಯಾಗುವಂಥದ್ದಲ್ಲ. ನಟನೆ ಮಾತ್ರವಲ್ಲದೇ ಅನೇಕ ಸಮಾಜಮುಖಿ ಕಾರ್ಯಗಳ ಮೂಲಕ ಪುನೀತ್​ ಜನಮನ ಗೆದ್ದಿದ್ದರು. ಆ ಕಾರಣಕ್ಕಾಗಿ ಅವರನ್ನು ಜನರು ದೇವರಂತೆ ಪೂಜಿಸುತ್ತಾರೆ. ಅವರಿಗೆ ಸೂಕ್ತ ಗೌರವ, ನಮನ ಸಲ್ಲಿಸುವ ಸಲುವಾಗಿ ಅನೇಕ ಕಡೆಗಳಲ್ಲಿ ಪೋಸ್ಟರ್​ಗಳನ್ನು ಹಾಕಲಾಗಿದೆ. ಅದೇ ರೀತಿ ಯಲಹಂಕದ ಅರಕೆರೆ ಗ್ರಾಮ ಪಂಚಾಯಿತಿಯ ಭೈರಾಪುರದಲ್ಲಿ ಕೂಡ ಪುನೀತ್​ ರಾಜ್​ಕುಮಾರ್​ ಅವರ ಭಾವಚಿತ್ರ ಇರುವ ಪೋಸ್ಟರ್​ ಹಾಕಲಾಗಿತ್ತು. ಆದರೆ ಅದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.

ಪುನೀತ್​ ರಾಜ್​ಕುಮಾರ್​ ಅವರ ಬ್ಯಾನರ್ ಹಾಕಿರುವ ಕಾರಣ ಜನರಿಗೆ ಓಡಾಡಲು ತೊಂದರೆ ಆಗುತ್ತಿದೆ ಎಂದು ಗ್ರಾಮದ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಬ್ಯಾನರ್​ ತೆಗೆಯಲು ಸಾಧ್ಯವಿಲ್ಲ ಎಂದು ಪುನೀತ್​ ರಾಜ್​ಕುಮಾರ್​ ಅಭಿಮಾನಿಗಳು ಪಟ್ಟು ಹಿಡಿದಿದ್ದರು. ಇದೇ ವಿಚಾರವಾಗಿ ಒಂದೇ ಊರಿನ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಭಾನುವಾರ (ಏ.17) ಏಕಾಏಕಿ ರಾಡ್​ಗಳನ್ನು ಹಿಡಿದು ಕೈ ಕೈ ಮಿಲಾಯಿಸಿದ್ದಾರೆ. ಈ ಗಲಾಟೆ ತಾರಕಕ್ಕೇರಿದೆ. ಬಳಿಕ ಪೊಲೀಸರು ಸ್ಥಳಕ್ಕೆ ಬಂದು ಪುನೀತ್​ ರಾಜ್​ಕುಮಾರ್​ ಬ್ಯಾನರ್​ ತೆರವುಗೊಳಿಸಿದ್ದಾರೆ. ಅಪ್ಪು ಬ್ಯಾನರ್​ ಮತ್ತು ಪ್ರತಿಮೆ ಬೇಕು ಎಂದು ‘ಪವರ್​ ಸ್ಟಾರ್​’ ಫ್ಯಾನ್ಸ್​ ಪಟ್ಟು ಹಿಡಿದ್ದಾರೆ.

ಅಪ್ಪು ಧ್ವನಿಯಲ್ಲಿ ಬರಲಿದೆ ‘ಜೇಮ್ಸ್​’ ಸಿನಿಮಾ:

ಸಿನಿಮಾ ವಿಚಾರಕ್ಕೆ ಬರುವುದಾದರೆ ಅಪ್ಪು ಅಭಿಮಾನಿಗಳಿಗೆ ಇಲ್ಲೊಂದು ಗುಡ್​ ನ್ಯೂಸ್​ ಇದೆ. ‘ಜೇಮ್ಸ್​’ ಸಿನಿಮಾ ಮತ್ತೆ ರಿಲೀಸ್​ ಆಗುತ್ತಿದೆ. ಈ ಬಾರಿ ಸಿನಿಮಾದಲ್ಲಿ ಪುನೀತ್​ ರಾಜ್​ಕುಮಾರ್​ ಅವರ ಧ್ವನಿ ಇರಲಿದೆ ಎಂಬುದು ವಿಶೇಷ. ‘ಜೇಮ್ಸ್’ ಚಿತ್ರ 25 ದಿನ ಪೂರೈಸಿದ ಹಿನ್ನೆಲೆಯಲ್ಲಿ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ಈ ಮಾಹಿತಿ ಹಂಚಿಕೊಂಡಿದೆ. ಹೊಸ ತಂತ್ರಜ್ಞಾನ ಬಳಸಿ ಈ ಪ್ರಯತ್ನ ಮಾಡಲಾಗಿದೆ. ಏ.22ರಂದು ‘ಜೇಮ್ಸ್​’ ಮರುಬಿಡುಗಡೆ ಆಗಲಿದೆ. ಪುನೀತ್​ ರಾಜ್​ಕುಮಾರ್​ ಧ್ವನಿಯಲ್ಲೇ ಸಿನಿಮಾ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಗುತ್ತಿದೆ. ಈ ಹಿಂದೆ ಅಪ್ಪು ಪಾತ್ರಕ್ಕೆ ಶಿವರಾಜ್​ಕುಮಾರ್​ ಅವರು ಧ್ವನಿ ನೀಡಿದ್ದರು. ಆದರೆ ಈಗ ಚಿತ್ರತಂಡ ವಿಭಿನ್ನ ಪ್ರಯತ್ನ ನಡೆಸಿ, ಅಭಿಮಾನಿಗಳಿಗಾಗಿ ಹೊಸ ರೂಪದಲ್ಲಿ ‘ಜೇಮ್ಸ್​’ ಸಿನಿಮಾವನ್ನು ಮರು ಬಿಡುಗಡೆ ಮಾಡುತ್ತಿದೆ.

ಇದನ್ನೂ ಓದಿ:

ಪುನೀತ್​ ಮಾಡಬೇಕಿದ್ದ ಚಿತ್ರದಲ್ಲಿ ಯುವ ರಾಜ್​ಕುಮಾರ್​? ‘ಹೊಂಬಾಳೆ ಫಿಲ್ಮ್ಸ್​’ ಬಗ್ಗೆ ಹಬ್ಬಿದೆ ಗುಸುಗುಸು

ಶಾಲೆಯ ಪರೀಕ್ಷೆಯಲ್ಲಿ ಪುನೀತ್​ ಬಗ್ಗೆ ಪ್ರಶ್ನೆ; ಸಖತ್​ ವೈರಲ್​ ಆಗಿದೆ ಪ್ರಶ್ನೆಪತ್ರಿಕೆಯ ಫೋಟೋ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಬರೋಬ್ಬರಿ 124 ಮೀಟರ್ ಸಿಕ್ಸ್ ಸಿಡಿಸಿದ ಶಕ್ಕೆರೆ ಪ್ಯಾರಿಸ್
ಬರೋಬ್ಬರಿ 124 ಮೀಟರ್ ಸಿಕ್ಸ್ ಸಿಡಿಸಿದ ಶಕ್ಕೆರೆ ಪ್ಯಾರಿಸ್