ಅಪ್ಪು ಹುಟ್ಟುಹಬ್ಬ ಮಾಡುವಾಗ ಕುಸಿದು ಬಿದ್ದಿದ್ದ ಅಭಿಮಾನಿ ಹೃದಯಾಘಾತದಿಂದ ಸಾವು; ಅಯ್ಯೋ ವಿಧಿಯೇ..
ಪುನೀತ್ ರಾಜ್ಕುಮಾರ್ ಬರ್ತ್ಡೇ ವೇಳೆ ಆಕಾಶ್ ಎಂಬ ಅಭಿಮಾನಿ ಹೃದಯಾಘಾತದಿಂದ ಕುಸಿದು ಬಿದ್ದಿದ್ದ. ಇಂದು (ಮಾ.18) ಆತ ನಿಧನ ಹೊಂದಿರುವುದು ನೋವಿನ ಸಂಗತಿ.
ಪುನೀತ್ ರಾಜ್ಕುಮಾರ್ (Puneeth Rajkumar) ಅವರನ್ನು ಕಳೆದುಕೊಂಡ ನೋವು ಇನ್ನೂ ಮಾಸಿಲ್ಲ. ಆ ನೋವಿನ ನಡುವೆಯೇ ಅಪ್ಪು ಅಭಿಮಾನಿಗಳು (Puneeth Rajkumar Fans) ತಮ್ಮ ನೆಚ್ಚಿನ ನಟನ ಜನ್ಮದಿನವನ್ನು ನಿನ್ನೆ (ಮಾ.17) ಆಚರಿಸಿದರು. ಈ ವೇಳೆ ಕುಸಿದು ಬಿದ್ದಿದ್ದ ಅಭಿಮಾನಿಯೊಬ್ಬ ಹೃದಯಾಘಾತದಿಂದಲೇ (Heart Attack) ಸಾಯುವಂತಾಗಿದೆ ಎಂದರೆ ವಿಧಿಯನ್ನು ದೂರದೇ ಬೇರೆ ಗತಿಯಿಲ್ಲ. ನಂಜನಗೂಡು ತಾಲೂಕಿನ ಹೆಡಿಯಾಲ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅದ್ದೂರಿಯಾಗಿ ಪುನೀತ್ ರಾಜ್ಕುಮಾರ್ ಅವರ ಬರ್ತ್ಡೇ ಮತ್ತು ‘ಜೇಮ್ಸ್’ ಬಿಡುಗಡೆಯ ಸಂಭ್ರಮಾಚರಣೆ ಮಾಡಲಾಗುತ್ತಿತ್ತು. ಗ್ರಾಮದ ಬಸ್ ನಿಲ್ದಾಣದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಳ್ಳಲಾಗಿತ್ತು. ಈ ಎಲ್ಲ ಕಾರ್ಯಗಳಲ್ಲಿ 22 ವರ್ಷದ ಯುವಕ ಆಕಾಶ್ ಕೂಡ ಭಾಗವಹಿಸಿದ್ದ. ಸಂಭ್ರಮಾಚರಣೆ ವೇಳೆ ಆತ ಕುಸಿದು ಬಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿ ಆಗದೇ ಇಂದು (ಮಾ.18) ಆಕಾಶ್ ನಿಧನರಾಗಿರುವುದು ತೀವ್ರ ನೋವಿನ ಸಂಗತಿ. ಅಪ್ಪು ಅಭಿಮಾನಿಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.
ಇದನ್ನೂ ಓದಿ:
‘ಕನ್ನಡದ ಕೋಟ್ಯಧಿಪತಿ’ಯಿಂದ ಪುನೀತ್ಗೆ ಸಿಕ್ಕ ಸಂಭಾವನೆ ಎಷ್ಟು ಕೋಟಿ? ಆ ದುಡ್ಡಲ್ಲಿ ಆಗ್ತಿದೆ ಪುಣ್ಯದ ಕೆಲಸ
ಜಗ್ಗೇಶ್ ಜನ್ಮದಿನ: ಪುನೀತ್ ವಿಶ್ ಮಾಡಿದ್ದ ಆ ವಿಡಿಯೋ ಮತ್ತೆ ವೈರಲ್; ಭಾವುಕರಾದ ‘ನವರಸ ನಾಯಕ’

ಸ್ಕೂಟಿಗೆ ಡಿಕ್ಕಿ ಹೊಡೆದ ಹಂದಿಗಳ ಹಿಂಡು; ಮಹಿಳೆಯ ಹೆಲ್ಮೆಟ್ ಛಿದ್ರ!

ರಾಜಣ್ಣ ರಾಜೀನಾಮೆ: ನಿಜವಾಯ್ತಾ ಕೋಡಿಶ್ರೀಗಳ 2 ತಿಂಗಳ ಹಿಂದಿನ ಭವಿಷ್ಯ?

ಕೆಪಿಸಿಸಿ ಅಧ್ಯಕ್ಷನ ಜೊತೆಗಿನ ತಿಕ್ಕಾಟವೇ ರಾಜಣ್ಣನಿಗೆ ಮುಳುವಾಯಿತೇ?

ವಿಷ್ಣು ಸಮಾಧಿ ಧ್ವಂಸ: ಸಾ.ರಾ. ಗೋವಿಂದು ಎದುರು ನೋವು ತೋಡಿಕೊಂಡ ಫ್ಯಾನ್ಸ್
