AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಗ್ಗೇಶ್​ ಜನ್ಮದಿನ: ಪುನೀತ್​ ವಿಶ್​ ಮಾಡಿದ್ದ ಆ ವಿಡಿಯೋ ಮತ್ತೆ ವೈರಲ್​; ಭಾವುಕರಾದ ‘ನವರಸ ನಾಯಕ’

Jaggesh Birthday: ಪುನೀತ್​ ರಾಜ್​ಕುಮಾರ್​ ಅವರ ಹಳೇ ವಿಡಿಯೋ ಮತ್ತೆ ವೈರಲ್​ ಆಗಿರುವುದು ಕಂಡು ಜಗ್ಗೇಶ್​ ಭಾವುಕರಾಗಿದ್ದಾರೆ. ಅಳುವ ಎಮೋಜಿಗಳ ಮೂಲಕ ಅವರು ಪ್ರತಿಕ್ರಿಯಿಸಿದ್ದಾರೆ.

ಜಗ್ಗೇಶ್​ ಜನ್ಮದಿನ: ಪುನೀತ್​ ವಿಶ್​ ಮಾಡಿದ್ದ ಆ ವಿಡಿಯೋ ಮತ್ತೆ ವೈರಲ್​; ಭಾವುಕರಾದ ‘ನವರಸ ನಾಯಕ’
ಪುನೀತ್​ ರಾಜ್​ಕುಮಾರ್​, ಜಗ್ಗೇಶ್
TV9 Web
| Edited By: |

Updated on: Mar 17, 2022 | 1:53 PM

Share

ಇಂದು (ಮಾ.17) ಪುನೀತ್​ ರಾಜ್​ಕುಮಾರ್ (Puneeth Rajkumar)​ ಇಲ್ಲದೇ ಮೊದಲ ಬಾರಿಗೆ ಅವರ ಹುಟ್ಟುಹಬ್ಬ ಆಚರಣೆ ಮಾಡುವ ಪರಿಸ್ಥಿತಿ ಬಂದಿದೆ. ಕಳೆದ ವರ್ಷ ಅ.29ರಂದು ಹೃದಯಾಘಾತದಿಂದ ನಿಧನರಾದ ಅಪ್ಪು ಅವರನ್ನು ಎಲ್ಲರೂ ಮಿಸ್​ ಮಾಡಿಕೊಳ್ಳುತ್ತಿದ್ದಾರೆ. ‘ಪವರ್​ ಸ್ಟಾರ್​’ ಇಲ್ಲ ಎಂಬ ನೋವಿನ ನಡುವೆಯೂ ಅಭಿಮಾನಿಗಳು ಅವರ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಮಾ.17 ಎಂದರೆ ಜಗ್ಗೇಶ್​ ಅಭಿಮಾನಿಗಳಿಗೂ ವಿಶೇಷ. ಯಾಕೆಂದರೆ, ಇಂದು ಜಗ್ಗೇಶ್​ ಜನ್ಮದಿನ (Jaggesh Birthday) ಕೂಡ ಹೌದು. ಅಪ್ಪು ಬದುಕಿದ್ದಾಗ ‘ನವರಸ ನಾಯಕ’ನಿಗೆ ವಿಶ್​ ಮಾಡುತ್ತಿದ್ದರು. ‘ನಾನು ಜಗ್ಗೇಶ್​ ಅವರ ಅಭಿಮಾನಿ’ ಎಂದು ಹಲವು ಬಾರಿ ಪುನೀತ್​ ಹೇಳಿದ್ದರು. ಆದರೆ ಇಂದು ಆ ಮಾತನ್ನು ಹೇಳಲು ಭೌತಿಕವಾಗಿ ಅವರು ನಮ್ಮೊಂದಿಗೆ ಇಲ್ಲ. ಪುನೀತ್​ ರಾಜ್​ಕುಮಾರ್​ ಅವರ ಬಗೆಗಿನ ನೆನಪುಗಳು ಎಂದಿಗೂ ಶಾಶ್ವತವಾಗಿ ಇರುತ್ತವೆ. ಅದರಲ್ಲೂ ಕೆಲವು ಹಳೇ ವಿಡಿಯೋಗಳು ವೈರಲ್​ ಆದಾಗ ಅಪ್ಪು ನೆನಪು ಇನ್ನಷ್ಟು ಕಾಡುತ್ತದೆ. ಇಂದು ಜಗ್ಗೇಶ್​ (Navarasa Nayaka Jaggesh) ಜನ್ಮದಿನದ ಪ್ರಯುಕ್ತ ಶುಭ ಕೋರಿರುವ ಅಭಿಮಾನಿಗಳು ಅಂಥ ಕೆಲವು ಹಳೇ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಅದನ್ನು ನೋಡಿ ಜಗ್ಗೇಶ್​ ಭಾವುಕರಾಗಿದ್ದಾರೆ.

ಜಗ್ಗೇಶ್​ ಮೇಲೆ ತಮಗೆ ಯಾವ ರೀತಿಯ ಅಭಿಮಾನ ಇದೆ ಎಂಬುದನ್ನು ಪುನೀತ್​ ರಾಜ್​ಕುಮಾರ್​ ಅವರು ಅನೇಕ ಬಾರಿ ಹೇಳಿದ್ದರು. ‘ತರ್ಲೆ ನನ್​ ಮಗ’ ಸಿನಿಮಾವನ್ನು ಅವರು ನೂರಾರು ಸಲ ನೋಡಿದ್ದರು. ಜಗ್ಗೇಶ್​ ಕಾಮಿಡಿಗೆ ಅಪ್ಪು ಫಿದಾ ಆಗಿದ್ದರು. ಪ್ರತಿ ವರ್ಷ ಹುಟ್ಟುಹಬ್ಬಕ್ಕೆ ಪುನೀತ್​ ಕಡೆಯಿಂದ ಜಗ್ಗೇಶ್​ ಅವರಿಗೆ ಶುಭಾಶಯ ತಿಳಿಸಲಾಗುತ್ತಿತ್ತು. ‘ಜಗ್ಗೇಶ್​ ಅವರಿಗೆ ಒಬ್ಬ ಅಭಿಮಾನಿಯಾಗಿ ನನ್ನ ಕಡೆಯಿಂದ ಶುಭಾಶಯಗಳು. ಹ್ಯಾಪಿ ಬರ್ತ್​ಡೇ ಜಗ್ಗೇಶ್​ ಸರ್​. ಯಾಕೆಂದರೆ ನಾನು ಅವರ ದೊಡ್ಡ ಫ್ಯಾನ್​’ ಎಂದು ಪುನೀತ್​ ಹೇಳಿದ್ದ ವಿಡಿಯೋವನ್ನು ಅಭಿಮಾನಿಗಳು ಟ್ವಿಟರ್​ನಲ್ಲಿ ಈಗ ಶೇರ್​ ಮಾಡಿಕೊಂಡಿದ್ದಾರೆ.

ಈ ವಿಡಿಯೋ ಮತ್ತೆ ವೈರಲ್​ ಆಗಿರುವುದು ಕಂಡು ಜಗ್ಗೇಶ್​ ಭಾವುಕರಾಗಿದ್ದಾರೆ. ಅಳುವ ಎಮೋಜಿಗಳ ಮೂಲಕ ಅವರು ಪ್ರತಿಕ್ರಿಯಿಸಿದ್ದಾರೆ. ಜಗ್ಗೇಶ್​ ಮತ್ತು ಪುನೀತ್​ ರಾಜ್​ಕುಮಾರ್​ ನಡುವೆ ಒಳ್ಳೆಯ ಬಾಂಧವ್ಯ ಇತ್ತು. ಅದನ್ನು ಅನೇಕ ವೇದಿಕೆಗಳಲ್ಲಿ ಅವರು ಹೇಳಿದ್ದುಂಟು. ಆದರೆ ಅಪ್ಪು ಈಗ ನೆನಪು ಮಾತ್ರ ಎಂಬುದನ್ನು ತಿಳಿದಾಗ ಅಭಿಮಾನಿಗಳಿಗೆ ಸಖತ್ ದುಃಖ ಆಗುತ್ತದೆ. ಪುನೀತ್​ ಅವರನ್ನು ಕಳೆದುಕೊಂಡ ನೋವು ಇನ್ನೂ  ಹಸಿಯಾಗಿ ಇರುವುದರಿಂದ ಈ ಬಾರಿ ಜಗ್ಗೇಶ್​ ಅವರು ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿಲ್ಲ. ಆದರೂ ಅವರಿಗೆ ಅನೇಕರು ಶುಭಾಶಯ ಕೋರುತ್ತಿದ್ದಾರೆ.

ಈ ವರ್ಷ ತಾವು ಬರ್ತ್​ಡೇ ಆಚರಿಸಿಕೊಳ್ಳುವುದಿಲ್ಲ ಎಂಬ ಬಗ್ಗೆ ಇತ್ತೀಚೆಗೆ ಜಗ್ಗೇಶ್​ ಅವರು ಸೋಶಿಯಲ್​ ಮೀಡಿಯಾ ಮೂಲಕ ಮಾಹಿತಿ ತಿಳಿಸಿದ್ದರು. ಪುನೀತ್​ ಜತೆ ಇರುವ ಫೋಟೋ ಹಂಚಿಕೊಂಡಿದ್ದ ಜಗ್ಗೇಶ್, ‘ಈ ಬಾರಿ ನನ್ನ 59ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಆಚರಿಸುವ ಮನಸ್ಸು ಕೂಡ ಇಲ್ಲ. ಕಾರಣ, ಪ್ರತಿ ಮಾರ್ಚ್​ 17ಕ್ಕೆ ತಪ್ಪದೇ ಪುನೀತ್ ಕರೆ ಮಾಡುತ್ತಿದ್ದ. ಅಣ್ಣಾ happy birthday ಎಂದು ಹೇಳುತ್ತಿದ್ದ ಕರೆ ಮತ್ತೆ ಎಂದೂ ಬರದಂತಾಯಿತು. ಪುನೀತ್​ ಜೊತೆ ಕೊನೆಯ ಚಿತ್ರ’ ಎಂದು ಬರೆದುಕೊಂಡಿದ್ದರು.

ಹಲವು ಸಿನಿಮಾಗಳಲ್ಲಿ ಜಗ್ಗೇಶ್​ ಬ್ಯುಸಿ ಆಗಿದ್ದಾರೆ. ‘ತೋತಾಪುರಿ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ‘ರಾಘವೇಂದ್ರ ಸ್ಟೋರ್ಸ್​’ ಚಿತ್ರ ಕೂಡ ನಿರೀಕ್ಷೆ ಸೃಷ್ಟಿಸಿದೆ. ಈ ಎಲ್ಲ ಸಿನಿಮಾತಂಡಗಳಿಂದಲೂ ಜಗ್ಗೇಶ್​ ಬರ್ತ್​ಡೇ ಪ್ರಯುಕ್ತ ಹೊಸ ಪೋಸ್ಟರ್​ಗಳನ್ನು ರಿಲೀಸ್​ ಮಾಡಲಾಗಿದ್ದು, ಆ ಮೂಲಕ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಲಾಗಿದೆ.

ಇದನ್ನೂ ಓದಿ:

ಶಿರಸಿ ಮಾರಿಕಾಂಬೆ ರಥದ ಬಳಿ ತಲುಪಿತು ಅಪ್ಪು ಫೋಟೋ; ಜಾತ್ರೆಯಲ್ಲಿ ಅಭಿಮಾನ ಮೆರೆದ ಪುನೀತ್​ ಫ್ಯಾನ್ಸ್​

‘ಜೇಮ್ಸ್​’ ಚಿತ್ರದ ಆ ಒಂದು ಸೀನ್​ ನೋಡಿ ಬಿಕ್ಕಿ ಬಿಕ್ಕಿ ಅತ್ತ ಅಭಿಮಾನಿ; ಪುನೀತ್​ ಮೇಲಿನ ಅಭಿಮಾನ​ ಶಾಶ್ವತ

ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ