2ನೇ ಹಂತಕ್ಕೆ ಯುದ್ಧ: ರಷ್ಯಾದಿಂದ ಮತ್ತೆ ತೀವ್ರ ದಾಳಿ, ಉಕ್ರೇನ್ ಪರ ದೃಢವಾಗಿ ನಿಂತ ಅಮೆರಿಕ, ಐರೋಪ್ಯ ಒಕ್ಕೂಟ

ದಾಳಿಗಾಗಿ ಹೊಸದಾಗಿ ಸಿಬ್ಬಂದಿಯನ್ನು ನಿಯೋಜಿಸಿರುವ ರಷ್ಯಾ ಅಗತ್ಯ ಶಸ್ತ್ರಾಸ್ತ್ರಗಳೊಂದಿಗೆ ಸಜ್ಜಿತವಾಗಿ ಉಕ್ರೇನ್ ಮೇಲೆ ಹೊಸದಾಗಿ ದೊಡ್ಡಮಟ್ಟದ ಆಕ್ರಮಣ ನಡೆಸಿದೆ.

2ನೇ ಹಂತಕ್ಕೆ ಯುದ್ಧ: ರಷ್ಯಾದಿಂದ ಮತ್ತೆ ತೀವ್ರ ದಾಳಿ, ಉಕ್ರೇನ್ ಪರ ದೃಢವಾಗಿ ನಿಂತ ಅಮೆರಿಕ, ಐರೋಪ್ಯ ಒಕ್ಕೂಟ
ರಷ್ಯಾ ಟ್ಯಾಂಕ್​ಗೆ ಗುರಿಯಿಟ್ಟ ಉಕ್ರೇನ್ ಯೋಧ (ಸಂಗ್ರಹ ಚಿತ್ರ)
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 19, 2022 | 12:31 PM

ಉಕ್ರೇನ್ ರಾಜಧಾನಿ ಕೀವ್ ನಗರ ವಶಪಡಿಸಿಕೊಳ್ಳುವಲ್ಲಿ ವಿಫಲವಾದ ರಷ್ಯಾದ ಸೇನೆಯು ಉಕ್ರೇನ್​ನ ಹಲವು ಪ್ರದೇಶಗಳಿಂದ ಹಿಂದೆ ಸರಿದಿತ್ತು. ದಾಳಿಗಾಗಿ ಹೊಸದಾಗಿ ಸಿಬ್ಬಂದಿಯನ್ನು ನಿಯೋಜಿಸಿರುವ ರಷ್ಯಾ ಅಗತ್ಯ ಶಸ್ತ್ರಾಸ್ತ್ರಗಳೊಂದಿಗೆ ಸಜ್ಜಿತವಾಗಿ ಉಕ್ರೇನ್ ಮೇಲೆ ಹೊಸದಾಗಿ ದೊಡ್ಡಮಟ್ಟದ ಆಕ್ರಮಣ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಅಮೆರಿಕ ಮತ್ತು ಉಕ್ರೇನ್ ಗುಪ್ತಚರ ಇಲಾಖೆಗಳು ಹೇಳುತ್ತಲೇ ಇದ್ದವು. ಈ ನಡುವೆ ತನ್ನ ನೌಕಾಪಡೆಯ ಪ್ರಮುಖ ಯುದ್ಧನೌಕೆ ಮೊಸ್​ಕೊವ್ ಕಳೆದುಕೊಂಡಿದ್ದ ಸಹ ರಷ್ಯಾ ಸಿಟ್ಟು ಪ್ರಜ್ವಲಿಸುವಂತೆ ಮಾಡಿದೆ. ಉಕ್ರೇನ್ ಸೇನಾ ಶಕ್ತಿಯನ್ನು ನಿರ್ನಾಮ ಮಾಡುವ ಮಟ್ಟಕ್ಕೆ ಪೂರ್ವ ಸಿದ್ಧತೆ ಮಾಡಿಕೊಂಡಿರುವ ರಷ್ಯಾ ಇದೀಗ ಉಕ್ರೇನ್​ ಮೇಲೆ ದೊಡ್ಡಮಟ್ಟದ ದಾಳಿ ಆರಂಭಿಸಿದೆ. ಮರಿಯುಪೋಲ್ ಸೇರಿದಂತೆ ಹಲವು ನಗರಗಳಲ್ಲಿ ಬಾಂಬ್ ಸ್ಫೋಟ ಅವ್ಯಾಹತ ನಡೆಯುತ್ತಿದೆ. ಉಕ್ರೇನ್​ನಲ್ಲಿ ಸಾವುನೋವಿನ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಅಮೆರಿಕ ಮತ್ತು ಐರೋಪ್ಯ ಒಕ್ಕೂಟಗಳು ಬಹಿರಂಗವಾಗಿಯೇ ಉಕ್ರೇನ್ ಪರ ನಿಲ್ಲುವ ಭರವಸೆ ನೀಡಿದ್ದು, ಯುದ್ಧ ಮತ್ತೊಂದು ಮಜಲಿಗೆ ಮುಟ್ಟಿದೆ. ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ನೀವು ತಿಳಿಯಬೇಕಾದ 10 ಪ್ರಮುಖ ಅಂಶಗಳಿವು.

  1. ಉಕ್ರೇನ್​ನ ಡೊನ್​ಬಾಸ್ ಪ್ರದೇಶದಲ್ಲಿ ರಷ್ಯಾ ಪಡೆಗಳು ಭಾರಿ ಆಕ್ರಮಣ ನಡೆಸಿವೆ. ಈ ಬಾರಿಯ ಆಕ್ರಮಣಕ್ಕಾಗಿ ರಷ್ಯಾ ದೊಡ್ಡಮಟ್ಟದಲ್ಲಿ ಸೇನೆಯನ್ನು ನಿಯೋಜಿಸಿದೆ.
  2. ರಷ್ಯಾ ಅದೆಷ್ಟು ಸೈನಿಕರನ್ನು ಕಳಿಸುತ್ತದೆಯೋ ಕಳಿಸಲಿ. ನಾವು ಕೊನೆಯವರೆಗೂ ದೇಶವನ್ನು ರಕ್ಷಿಸಿಕೊಳ್ಳಲು ಹೋರಾಡುತ್ತೇವೆ ಎಂದು ಘೋಷಿಸಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ತಾವೂ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಸಂಘರ್ಷ ದೀರ್ಘ ಕಾಲ ಮುಂದುವರಿಯಲಿದೆ ಎನ್ನುವ ಸೂಚನೆ ನೀಡಿದ್ದಾರೆ.
  3. ಉಕ್ರೇನ್​ನ ಪಶ್ಚಿಮ ಗಡಿಯಲ್ಲಿರುವ ಲಿವ್ ನಗರದ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸುತ್ತಿದೆ. ಈವರೆಗೆ ಲಿವ್ ನಗರಕ್ಕೆ ರಷ್ಯಾ ಆಕ್ರಮಣದಿಂದ ಸಮಸ್ಯೆಯಿಲ್ಲ ಎಂದೇ ಭಾವಿಸಲಾಗಿತ್ತು. ‘ಉಕ್ರೇನ್​ನಲ್ಲಿ ರಷ್ಯಾದ ಬಾಂಬ್ ಸ್ಫೋಟಿಸದ ಸ್ಥಳವೇ ಇಲ್ಲ’ ಎಂದು ಅಲ್ಲಿನ ಅಧಿಕಾರಿಗಳು ಹೇಳುತ್ತಿದ್ದಾರೆ.
  4. ಯುದ್ಧದ ಪರಿಸ್ಥಿತಿ ಕುರಿತು ಚರ್ಚಿಸಲು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಇಂದು ನ್ಯಾಟೊ ಸದಸ್ಯ ದೇಶಗಳ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಲಿದ್ದಾರೆ.
  5. ಖಾರ್ಕಿವ್, ಝಪೊರಿಷಿಯಾ, ಡೊನೆಸ್ಕ್ ಮತ್ತು ಡ್ನಿಪ್ರೊಪೆಟ್ರೊವ್​ಸ್ಕ್​ ಪ್ರದೇಶಗಳಲ್ಲಿ ದೊಡ್ಡಮಟ್ಟದ ಸಂಘಟಿತ ದಾಳಿ ನಡೆಸಲಾಗಿದೆ ಎಂದು ರಷ್ಯಾದ ರಕ್ಷಣಾ ಇಲಾಖೆ ಹೇಳಿದೆ.
  6. ನಾವು ನಮ್ಮ ಯಾವುದೇ ಪ್ರದೇಶವನ್ನು ರಷ್ಯಾಕ್ಕೆ ಒಪ್ಪಿಸುವುದಿಲ್ಲ. ಡೊನೆಸ್ಕ್​, ಲುಹಂಸ್ಕ್ ಮತ್ತು ಖಾರ್ಕಿವ್ ಪ್ರದೇಶಗಳಲ್ಲಿ ರಷ್ಯಾ ಒಮ್ಮೆಲೆ ದಾಳಿ ಆರಂಭಿಸಿತು. ರಕ್ಷಣೆಗೆ ನಾವು ಮಾಡಿಕೊಂಡಿದ್ದ ವ್ಯವಸ್ಥೆ ಭೇದಿಸಲು ಅವರು ಯತ್ನಿಸಿದರು. ಆದರೆ ಕೆಲ ಸಣ್ಣ ಪಟ್ಟಣಗಳನ್ನು ಹೊರತುಪಡಿಸಿದರೆ ಇತರೆಡೆ ರಷ್ಯಾಕ್ಕೆ ಅಂಥ ಮಹತ್ವದ ಮುನ್ನಡೆ ಸಾಧ್ಯವಾಗಿಲ್ಲ ಎಂದು ಉಕ್ರೇನ್​ನ ಭದ್ರತಾ ಮಂಡಳಿ ಕಾರ್ಯದರ್ಶಿ ಒಲೆಕ್ಸಿ ಡನಿಲೊವ್ ಹೇಳಿದರು.
  7. ರಷ್ಯಾ ಸೇನೆಯ ಬಹುದೊಡ್ಡ ಭಾಗವನ್ನು ಈ ಬಾರಿ ದಾಳಿಗೆ ನಿಯೋಜಿಸಲಾಗಿದೆ. ಉಕ್ರೇನ್​ ವಿರುದ್ಧದ ಹಿನ್ನೆಡೆಯನ್ನು ರಷ್ಯಾ ಸೇನೆ ಪ್ರತಿಷ್ಠೆಯ ಪ್ರಶ್ನೆಯಾಗಿಸಿಕೊಂಡಿದ್ದು, ಈ ಬಾರಿಯ ಹೋರಾಟ ತೀವ್ರಗೊಳ್ಳುವ ಎಲ್ಲ ಲಕ್ಷಣಗಳಿವೆ.
  8. ಮರಿಯುಪೋಲ್ ನಗರವನ್ನು ಸಾಧ್ಯವಾದಷ್ಟೂ ಬೇಗ ವಶಪಡಿಸಿಕೊಳ್ಳಬೇಕು ಎನ್ನುವುದು ರಷ್ಯಾದ ಉದ್ದೇಶ. ಒಮ್ಮೆ ಮರಿಯುಪೋಲ್ ವಶಪಡಿಸಿಕೊಂಡರೆ ನಂತರ ಪೂರ್ವ ಉಕ್ರೇನ್​ನ ಮುಂಚೂಣಿ ರಕ್ಷಣಾ ವ್ಯವಸ್ಥೆಯನ್ನು ಮುರಿಯುವುದು ರಷ್ಯಾಕ್ಕೆ ಸುಲಭವಾಗುತ್ತದೆ.
  9. ಕಳೆದ ಫೆಬ್ರುವರಿ 24ರಂದು ಆರಂಭವಾದ ರಷ್ಯಾ-ಉಕ್ರೇನ್ ಯುದ್ಧದಲ್ಲಿ ಈವರೆಗೆ ಎರಡೂ ದೇಶಗಳ ಸಾವಿರಾರು ಸೈನಿಕರು ಮೃತಪಟ್ಟಿದ್ದಾರೆ. ಸುಮಾರು 40 ಲಕ್ಷ ಜನರು ನಿರಾಶ್ರಿತರಾಗಿದ್ದಾರೆ.
  10. ಉಕ್ರೇನ್ ರಾಜಧಾನಿ ಕೀವ್​ಗೆ ಅಮೆರಿಕ ಅಧ್ಯಕ್ಷರು ಭೇಟಿ ನೀಡುವುದಿಲ್ಲ ಎಂದು ಶ್ವೇತಭವನ ಸ್ಪಷ್ಟಪಡಿಸಿದೆ. ಆದರೆ ಉಕ್ರೇನ್ ಸೇನೆಗೆ ಅತ್ಯಾಧುನಿಕ ಶಸ್ತ್ರಾಸ್ತ್ರ ಒದಗಿಸುವ ಜೊತೆಗೆ ತರಬೇತಿಯನ್ನೂ ನೀಡಲು ಅಮೆರಿಕ ಮುಂದಾಗಿದೆ.

ಇದನ್ನೂ ಓದಿ: Russia Ukraine War: ಅಣ್ವಸ್ತ್ರ ದಾಳಿ ಭೀತಿಯಲ್ಲಿ ಜಗತ್ತು, ಉಕ್ರೇನ್​ ಬೆಂಬಲಕ್ಕೆ ಸಬ್​ಮರೀನ್ ಕಳುಹಿಸಿದ ಬ್ರಿಟನ್, ಕೆರಳಿದ ರಷ್ಯಾ

ಇದನ್ನೂ ಓದಿ: ರಷ್ಯಾ ಸುಪರ್ದಿಯಲ್ಲಿದ್ದ ಉಕ್ರೇನ್​ ನಗರಗಳಲ್ಲಿ ನರಮೇಧದ ಸಾಕ್ಷ್ಯ ಪತ್ತೆ: ಸೇಡು ತೀರಿಸುತ್ತೇನೆಂದು ಶಪಥ ಮಾಡಿದ ಝೆಲೆನ್​ಸ್ಕಿ

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್