‘ಜೇಮ್ಸ್​’ ಸಿನಿಮಾ ನೋಡಿ ಕಣ್ಣೀರು ಹಾಕಿದ ಗೀತಾ ಶಿವರಾಜ್​ಕುಮಾರ್​; ಇಲ್ಲಿದೆ ವಿಡಿಯೋ..

Geetha Shivarajkumar: ಗೀತಾ ಶಿವರಾಜ್​ಕುಮಾರ್​ ಅವರು ಚಿತ್ರಮಂದಿರಕ್ಕೆ ಬಂದು ‘ಜೇಮ್ಸ್​’ ಸಿನಿಮಾ ನೋಡಿದರು. ಪುನೀತ್​ ರಾಜ್​ಕುಮಾರ್​ ಅವರನ್ನು ನೆನೆದು ಅವರು ಕಣ್ಣೀರು ಹಾಕಿದರು.

TV9kannada Web Team

| Edited By: Madan Kumar

Mar 27, 2022 | 9:53 AM

ಪುನೀತ್​ ರಾಜ್​ಕುಮಾರ್​ ( Puneeth Rajkumar) ಅವರ ನಿಧನದಿಂದ ಡಾ. ರಾಜ್​ಕುಮಾರ್​ ಕುಟುಂಬಕ್ಕೆ ಆದ ನೋವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಆ ನೋವಿನ ನಡುವೆಯೂ ಬದುಕು ಮುಂದೆ ಸಾಗಬೇಕಾದ ಅನಿವಾರ್ಯತೆ ಇದೆ. ಅಪ್ಪು ನಟನೆಯ ‘ಜೇಮ್ಸ್​’ ಸಿನಿಮಾ (James movie) ಮಾ.17ರಂದು ತೆರೆಕಂಡಿತು. ಸಿನಿಮಾ ನೋಡಬೇಕು ಎಂದು ಶಿವರಾಜ್​ಕುಮಾರ್ ಪತ್ನಿ ಗೀತಾ ಅವರು ಬಯಸಿದರು. ಶನಿವಾರ (ಮಾ.26) ಅವರು ಚಿತ್ರಮಂದಿರಕ್ಕೆ ಬಂದು ‘ಜೇಮ್ಸ್​’ ಸಿನಿಮಾ ನೋಡಿದರು. ಈ ವೇಳೆ ಶಿವರಾಜ್​ಕುಮಾರ್​, ಉಪೇಂದ್ರ, ಕೆ.ಪಿ. ಶ್ರೀಕಾಂತ್​ ಮುಂತಾದವರು ಜೊತೆಗಿದ್ದರು. ಸಿನಿಮಾ ಬಗ್ಗೆ ಗೀತಾ ಶಿವರಾಜ್​ಕುಮಾರ್​ (Geetha Shivarajkumar) ಅವರು ತಮ್ಮ ಅನಿಸಿಕೆ ಹಂಚಿಕೊಳ್ಳುವಾಗ ಸಖತ್​ ಎಮೋಷನಲ್​ ಆದರು. ಮುಂದೇನು ಮಾತನಾಡಬೇಕು ಎಂದು ತೋಚದೇ ಕಣ್ಣೀರು ಹಾಕಿದರು. ಅಪ್ಪು ನೆನಪು ಪ್ರತಿ ದಿನವೂ ಕಾಡುತ್ತಿದೆ. ಅವರು ಇಲ್ಲ ಎಂಬುದನ್ನು ಒಪ್ಪಿಕೊಳ್ಳಲು ಅಭಿಮಾನಿಗಳಿಗೆ ಮತ್ತು ಕುಟುಂಬದವರಿಗೆ ಸಾಧ್ಯವಾಗುತ್ತಲೇ ಇಲ್ಲ.

ಇದನ್ನೂ ಓದಿ:

ಶಾಲೆಯ ಪರೀಕ್ಷೆಯಲ್ಲಿ ಪುನೀತ್​ ಬಗ್ಗೆ ಪ್ರಶ್ನೆ; ಸಖತ್​ ವೈರಲ್​ ಆಗಿದೆ ಪ್ರಶ್ನೆಪತ್ರಿಕೆಯ ಫೋಟೋ

‘RRR​’ ನೋಡಲು ಬಂದರು, ಪುನೀತ್​ಗೆ ಜೈಕಾರ ಹಾಕಿದರು; ಅಪ್ಪು ಮೇಲಿನ ಅಭಿಮಾನ ನಿರಂತರ

Follow us on

Click on your DTH Provider to Add TV9 Kannada