‘ಕೆಜಿಎಫ್​: ಚಾಪ್ಟರ್​ 2’ ಟ್ರೇಲರ್​ ಬಿಡುಗಡೆಗೂ ಮುನ್ನ ಶುಭ ಸೂಚನೆ ನೀಡಿದ ಕೆಂಗಲ್​ ಆಂಜನೇಯ ಸ್ವಾಮಿ

‘ಕೆಜಿಎಫ್​: ಚಾಪ್ಟರ್​ 2’ ಟ್ರೇಲರ್​ ಬಿಡುಗಡೆಗೂ ಮುನ್ನ ಶುಭ ಸೂಚನೆ ನೀಡಿದ ಕೆಂಗಲ್​ ಆಂಜನೇಯ ಸ್ವಾಮಿ

TV9 Web
| Updated By: ಮದನ್​ ಕುಮಾರ್​

Updated on: Mar 27, 2022 | 3:26 PM

KGF 2 Trailer: ಯಶ್​ ಅಭಿಮಾನಿಗಳು ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಯಶಸ್ಸಿಗಾಗಿ ಪೂಜೆ ಸಲ್ಲಿಸುತ್ತಿದ್ದಾರೆ. ಟ್ರೇಲರ್​ ಬಿಡುಗಡೆಗೆ ಕ್ಷಣಗಣನೆ ಆರಂಭ ಆಗಿರುವಾಗ ವಿವಿಧ ದೇವಾಲಯಗಳಲ್ಲಿ ಪೂಜೆ ನೆರವೇರಿಸಲಾಗಿದೆ.

ಸಿನಿಪ್ರಿಯರ ವಲಯದಲ್ಲಿ ‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಸಿನಿಮಾ ಬಗ್ಗೆ ದೊಡ್ಡ ಮಟ್ಟದ ಕ್ರೇಜ್​ ಸೃಷ್ಟಿ ಆಗಿದೆ. ಯಶ್ (Yash)​ ಅಭಿಮಾನಿಗಳು ಈ ಸಿನಿಮಾಗಾಗಿ ಕಾಯುತ್ತಿದ್ದಾರೆ. ಈಗಾಗಲೇ ಪ್ರಚಾರ ಕಾರ್ಯ ಆರಂಭ ಆಗಿದ್ದು, ಇಂದು (ಮಾ.27) ಟ್ರೇಲರ್​ ಬಿಡುಗಡೆ ಮಾಡಲಾಗುತ್ತಿದೆ. ‘ಕೆಜಿಎಫ್​: ಚಾಪ್ಟರ್​ 2’​ ಸಿನಿಮಾದ ಟ್ರೇಲರ್​ (KGF Chapter 2 Trailer) ಸೂಪರ್​ ಹಿಟ್​ ಆಗಲಿ ಎಂದು ಅಭಿಮಾನಿಗಳು ಅನೇಕ ಕಡೆಗಳಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ. ವಿವಿಧ ದೇವಾಲಯಗಳಲ್ಲಿ ಫ್ಯಾನ್ಸ್​ ಪ್ರಾರ್ಥನೆ ಸಲ್ಲಿಸಿದ್ದಾರೆ. ಕೆಂಗಲ್​ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ಮಾಡುವಾಗ ಬಲಗಡೆಯಿಂದ ಹೂವು ಪ್ರಸಾದವಾಗಿ ಸಿಕ್ಕಿದೆ. ಈ ಶುಭ ಸೂಚನೆಯಿಂದ ಯಶ್​ ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ. ಬೆಂಗಳೂರಿನಲ್ಲಿ ಟ್ರೇಲರ್​ ರಿಲೀಸ್​ ಆಗುತ್ತಿದ್ದು, ‘ಹ್ಯಾಟ್ರಿಕ್​ ಹೀರೋ’ ಶಿವರಾಜ್​ಕುಮಾರ್​ ಅವರು ಮುಖ್ಯ ಅತಿಥಿಯಾಗಿ ಆಗಮಿಸುತ್ತಿದ್ದಾರೆ. ವಿವಿಧ ಭಾಷೆಯ ಸ್ಟಾರ್​ ನಟರು ಸೋಶಿಯಲ್​ ಮೀಡಿಯಾ ಮೂಲಕ ಆಯಾ ಭಾಷೆಯ ಟ್ರೇಲರ್​ ಲಾಂಚ್​ ಮಾಡಲಿದ್ದಾರೆ. ಪ್ರಶಾಂತ್​ ನೀಲ್​ ನಿರ್ದೇಶನದ ಈ ಸಿನಿಮಾದಲ್ಲಿ ಶ್ರೀನಿಧಿ ಶೆಟ್ಟಿ, ಸಂಜಯ್​ ದತ್​, ಪ್ರಕಾಶ್​ ರೈ, ರವೀನಾ ಟಂಡನ್​ ಮುಂತಾದವರು ನಟಿಸಿದ್ದಾರೆ.

ಇದನ್ನೂ ಓದಿ:

Karan Johar: ‘ಕೆಜಿಎಫ್​ 2’ ಟ್ರೇಲರ್​ ರಿಲೀಸ್​ಗೆ ಬರ್ತಿದ್ದಾರೆ ಸ್ಟಾರ್​ ನಿರೂಪಕ ಕರಣ್​ ಜೋಹರ್​; ಏನು ಇವರ ವಿಶೇಷ?

‘ತೂಫಾನ್’ ಅವತಾರದಲ್ಲಿ ಬಂದ ಯಶ್​; ‘ಕೆಜಿಎಫ್​ 2’ ಮೇಲಿನ ಕಾತರಕ್ಕೆ ಕಿಚ್ಚು ಹೊತ್ತಿಸಿವೆ ಈ ಲುಕ್​ಗಳು