‘ಕೆಜಿಎಫ್​ 2’ ಚಿತ್ರವನ್ನು ಪುನೀತ್​ಗೆ ಅರ್ಪಿಸಿದ ಪ್ರಶಾಂತ್ ನೀಲ್​

ಚಿತ್ರದ ನಿರ್ದೇಶಕ ಪ್ರಶಾಂತ್​ ನೀಲ್​ ಅವರು ಅಪ್ಪು ಅವರನ್ನು ನೆನಪಿಸಿಕೊಂಡಿದ್ದಾರೆ. ಅಲ್ಲದೆ, ‘ಕೆಜಿಎಫ್​ 2’ ಸಿನಿಮಾವನ್ನು ಪುನೀತ್​​ಗೆ ಅರ್ಪಿಸುತ್ತಿರುವುದಾಗಿ ಪ್ರಶಾಂತ್ ನೀಲ್ ಹೇಳಿದ್ದಾರೆ.

‘ಕೆಜಿಎಫ್​ 2’ ಚಿತ್ರವನ್ನು ಪುನೀತ್​ಗೆ ಅರ್ಪಿಸಿದ ಪ್ರಶಾಂತ್ ನೀಲ್​
| Updated By: ರಾಜೇಶ್ ದುಗ್ಗುಮನೆ

Updated on:Mar 27, 2022 | 9:15 PM

ಪುನೀತ್​ ರಾಜ್​ಕುಮಾರ್ (Puneeth Rajkumar) ಅವರನ್ನು ನಾವು ಕಳೆದುಕೊಂಡಿದ್ದೇವೆ ಅನ್ನೋದನ್ನು ನಂಬಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಅವರು ನಮ್ಮ ಜತೆಗೆ ಇಲ್ಲ ಎಂಬ ವಿಚಾರ ಕೋಟ್ಯಂತರ ಅಭಿಮಾನಿಗಳಿಗೆ ನೋವು ತಂದಿದೆ. ಪುನೀತ್​ ರಾಜ್​ಕುಮಾರ್ ಅವರಿಗೂ ಹೊಂಬಾಳೆ ಫಿಲ್ಮ್ಸ್​ಗೂ ಒಳ್ಳೆಯ ನಂಟಿತ್ತು. ಹೊಂಬಾಳೆ ಫಿಲ್ಮ್ಸ್​​ನ ಮೊದಲ ಸಿನಿಮಾ ಪುನೀತ್ ಜತೆಗೆ ಅನ್ನೋದು ವಿಶೇಷ. ಈಗ ಇದೇ ಬ್ಯಾನರ್​ನಿಂದ ಸಿದ್ಧಗೊಂಡಿರುವ ‘ಕೆಜಿಎಫ್​ 2’ ಸಿನಿಮಾ (KGF Chapter 2) ನೋಡೋಕೆ ಅವರಿಲ್ಲ ಅನ್ನೋದು ದುಃಖದ ವಿಚಾರ. ಇಂದು (ಮಾರ್ಚ್​ 27) ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಈ ವೇಳೆ ಚಿತ್ರದ ನಿರ್ದೇಶಕ ಪ್ರಶಾಂತ್​ ನೀಲ್​ ಅವರು ಅಪ್ಪು ಅವರನ್ನು ನೆನಪಿಸಿಕೊಂಡಿದ್ದಾರೆ. ಅಲ್ಲದೆ, ‘ಕೆಜಿಎಫ್​ 2’ ಸಿನಿಮಾವನ್ನು ಪುನೀತ್​​ಗೆ ಅರ್ಪಿಸುತ್ತಿರುವುದಾಗಿ ಪ್ರಶಾಂತ್ ನೀಲ್ ಹೇಳಿದ್ದಾರೆ.

ಇದನ್ನೂ ಓದಿ:KGF chapter 2 Trailer: ರಾಕಿ vs ಅಧೀರ; ಇಲ್ಲಿದೆ ‘ಕೆಜಿಎಫ್​ ಚಾಪ್ಟರ್ 2’ ಸ್ಟಿಲ್​​ಗಳು 

‘ರಕ್ತದಿಂದ ಬರೆದ ಕಥೆ ಇದು’; ‘ಕೆಜಿಎಫ್​ ಚಾಪ್ಟರ್​ 2’ ಟ್ರೇಲರ್​ನಲ್ಲಿ ಅಬ್ಬರಿಸಿ, ಬೊಬ್ಬಿರಿದ ಯಶ್​

Published On - 8:32 pm, Sun, 27 March 22

Follow us