‘RRR​’ ನೋಡಲು ಬಂದರು, ಪುನೀತ್​ಗೆ ಜೈಕಾರ ಹಾಕಿದರು; ಅಪ್ಪು ಮೇಲಿನ ಅಭಿಮಾನ ನಿರಂತರ

‘ಆರ್​ಆರ್​ಆರ್’ ಚಿತ್ರವನ್ನು ನೋಡಲು ಬಂದ ಅಭಿಮಾನಿಗಳು ಪುನೀತ್​ ರಾಜ್​ಕುಮಾರ್​ ಅವರ ಫೋಟೋವನ್ನು ಹಿಡಿದು ಸಂಭ್ರಮಿಸಿದ್ದಾರೆ. ಅನೇಕ ಚಿತ್ರಮಂದಿರಗಳ ಎದುರು ಪುನೀತ್​ಗೆ​ ಜೈಕಾರ ಹಾಕಲಾಗಿದೆ.

‘RRR​’ ನೋಡಲು ಬಂದರು, ಪುನೀತ್​ಗೆ ಜೈಕಾರ ಹಾಕಿದರು; ಅಪ್ಪು ಮೇಲಿನ ಅಭಿಮಾನ ನಿರಂತರ
| Updated By: ಮದನ್​ ಕುಮಾರ್​

Updated on: Mar 25, 2022 | 10:07 AM

ಸಿನಿಮಾ ಎಂದರೆ ಪುನೀತ್​ ರಾಜ್​ಕುಮಾರ್​, ಪುನೀತ್​ ರಾಜ್​ಕುಮಾರ್ ಎಂದರೆ ಸಿನಿಮಾ ಎಂಬಷ್ಟರಮಟ್ಟಿಗೆ ಅಪ್ಪು ಹೆಸರು ‘ಪವರ್​ ಸ್ಟಾರ್​’ ಅಭಿಮಾನಿಗಳ (Puneeth Rajkumar Fans) ಎದೆಯಲ್ಲಿ ಅಚ್ಚೊತ್ತಿದೆ. ಯಾವುದೇ ಸಂದರ್ಭದಲ್ಲೂ ಪುನೀತ್​ ಅವರನ್ನು ಫ್ಯಾನ್ಸ್​ ನೆನಪಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅನೇಕ ಜಾತ್ರೆ, ಉತ್ಸವ, ಹಬ್ಬ-ಹರಿದಿನಗಳಲ್ಲಿ ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರ ಫೋಟೋಗಳು ರಾರಾಜಿಸಿದ್ದು ಕಂಡುಬಂದಿತ್ತು. ಈಗ ‘ಆರ್​ಆರ್​ಆರ್​’ ಸಿನಿಮಾದ ಬಿಡುಗಡೆ ಸಮಯದಲ್ಲಿ ಅದು ಮುಂದುವರಿದಿದೆ. ‘ಆರ್​ಆರ್​ಆರ್’ ಸಿನಿಮಾ (RRR Movie) ನೋಡಲು ಬಂದ ಅಭಿಮಾನಿಗಳು ಅಪ್ಪು ಫೋಟೋವನ್ನು ಹಿಡಿದು ಸಂಭ್ರಮಿಸಿದ್ದಾರೆ. ಅನೇಕ ಚಿತ್ರಮಂದಿರಗಳ ಎದುರು ಪುನೀತ್​ ರಾಜ್​ಕುಮಾರ್​ ಅವರಿಗೆ ಜೈಕಾರ ಹಾಕಲಾಗಿದೆ. ಬೆಂಗಳೂರಿನ ಅಂಜನ್​ ಚಿತ್ರಮಂದಿರದಲ್ಲಿ ‘ಆರ್​ಆರ್​ಆರ್​’ ಸಿನಿಮಾ ನೋಡಲು ಬಂದ ಪ್ರೇಕ್ಷಕರು ಪುನೀತ್​ ಅವರ ಪೋಸ್ಟರ್​ಗಳನ್ನು ಪ್ರದರ್ಶಿಸಿದ್ದಾರೆ. ರಾಮ್​ ಚರಣ್​, ಜ್ಯೂ, ಎನ್​ಟಿಆರ್​ ಅವರ ಪೋಸ್ಟರ್​ಗಳ ಪಕ್ಕದಲ್ಲಿ ಅಪ್ಪು ಫೋಟೋಗಳು ರಾರಾಜಿಸಿವೆ. ಇದನ್ನೆಲ್ಲ ನೋಡುತ್ತಿದ್ದರೆ ಪುನೀತ್​ ರಾಜ್​ಕುಮಾರ್​ ಅವರ ಮೇಲೆ ಜನರಿಗೆ ಇರುವ ಅಭಿಮಾನಿ ನಿರಂತರ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತದೆ. ‘ಆರ್​ಆರ್​ಆರ್​’ ಚಿತ್ರದ ಪ್ರೀ-ರಿಲೀಸ್​ ಕಾರ್ಯಕ್ರಮಕ್ಕೆ ಬಂದಿದ್ದ ಕೆಲವು ಅಭಿಮಾನಿಗಳು ಕೂಡ ಪುನೀತ್​ ಫೋಟೋವನ್ನು ಹಿಡಿದು ಬಂದಿದ್ದರು.

ಇದನ್ನೂ ಓದಿ:

3 ದಿನ ಸಾರಿ ಕೇಳಿದ್ರು ಪುನೀತ್​; ಅದಕ್ಕೆ ಕಾರಣ ಆಗಿದ್ದ ಆ ಘಟನೆ ಬಗ್ಗೆ ವಿವರಿಸಿದ ‘ಜೇಮ್ಸ್​’ ವಿಲನ್​

ಈಗ ಜನರು ಯಾರಲ್ಲಿ ಪುನೀತ್​ ಅವರನ್ನು ಕಾಣ್ತಾರೆ? ಉತ್ತರ ನೀಡಿದ ಯುವ ರಾಜ್​ಕುಮಾರ್​

Follow us