ಶಕ್ತಿಧಾಮದ ಜತೆಗಿನ ನಂಟು ಹೆಚ್ಚಿದ್ದು ಹೇಗೆ?; ಶಿವಣ್ಣ ಬಿಚ್ಚಿಟ್ರು ಮಾಹಿತಿ

ಶಕ್ತಿಧಾಮದ ಜತೆಗಿನ ನಂಟು ಹೆಚ್ಚಿದ್ದು ಹೇಗೆ?; ಶಿವಣ್ಣ ಬಿಚ್ಚಿಟ್ರು ಮಾಹಿತಿ

TV9 Web
| Updated By: ಮದನ್​ ಕುಮಾರ್​

Updated on:Apr 19, 2022 | 7:17 AM

ದೇಶಿಯ ಆಟಗಳು, ಜಾನಪದ ಕಲಾತಂಡದವರಿಂದ ಬೇಸಿಗೆ ಶಿಬಿರ ಆಯೋಜನೆ ಗೊಂಡಿದೆ. ಶಕ್ತಿಧಾಮದಲ್ಲಿರುವ ನೂರಾರು ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ.

ಬೇಸಿಗೆ ಬಂದರೆ ಅನೇಕ ಕಡೆಗಳಲ್ಲಿ ಮಕ್ಕಳಿಗೆ ಸಮ್ಮರ್ ಕ್ಯಾಂಪ್ (Summer Camp) ಮಾಡಲಾಗುತ್ತದೆ. ಈಗ ಮೈಸೂರಿನ ಶಕ್ತಿಧಾಮದಲ್ಲಿ ಮಕ್ಕಳಿಗಾಗಿ ಏಪ್ರಿಲ್​ 18ರಿಂದ ಏಪ್ರಿಲ್ 24ರವರೆಗೆ ಬೇಸಿಗೆ ಶಿಬಿರ ನಡೆಯುತ್ತಿದೆ. ಈ ಕಾರ್ಯಕ್ರಮವನ್ನು ನಟ ಶಿವರಾಜ್ ಕುಮಾರ್ (Shivarajkumar) ಹಾಗೂ ಅವರ ಪತ್ನಿ ಗೀತಾ ಶಿವರಾಜ್​ಕುಮಾರ್ ಉದ್ಘಾಟನೆ ಮಾಡಿದ್ದಾರೆ. ಶಕ್ತಿಧಾಮ ಆವರಣದ ಸಭಾಂಗಣದಲ್ಲಿ ಉದ್ಘಾಟನಾ ಕಾರ್ಯಕ್ರಮ ಆಯೋಜನೆಗೊಂಡಿತ್ತು. ದೇಶಿಯ ಆಟಗಳು, ಜಾನಪದ ಕಲಾತಂಡದವರಿಂದ ಬೇಸಿಗೆ ಶಿಬಿರ ಆಯೋಜನೆ ಗೊಂಡಿದೆ. ಶಕ್ತಿಧಾಮದಲ್ಲಿರುವ (Shaktidhama) ನೂರಾರು ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಈ ಕಾರ್ಯಕ್ರಮದ ಬಗ್ಗೆ ಶಿವಣ್ಣ ಮಾತನಾಡಿದ್ದಾರೆ. ಅಲ್ಲದೆ, ಮರಳಿ ಮರಳಿ ತಾವು ಇಲ್ಲಿಗೆ ಬರುತ್ತಿರುವುದೇಕೆ ಎನ್ನುವ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:  ಶಕ್ತಿಧಾಮದಲ್ಲಿ ಆಶ್ರಯ ಪಡೆಯಲಿದ್ದಾರೆ ಇನ್ನಷ್ಟು ಮಕ್ಕಳು; ಮಾಹಿತಿ ಹಂಚಿಕೊಂಡ ಶಿವಣ್ಣ

ಅಪ್ಪು ಆಸೆಯಂತೆ ಶಕ್ತಿಧಾಮದಲ್ಲಿ ವಿದ್ಯಾಶಾಲೆಗೆ ಶಂಕುಸ್ಥಾಪನೆ; ನನ್ನ ಉಸಿರಿರುವವರೆಗೂ ಈ ಮಕ್ಕಳ ಜೊತೆ ಇರುತ್ತೇನೆ ಎಂದ ಶಿವಣ್ಣ

Published on: Apr 19, 2022 07:00 AM